ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಎ ರಾಮದಾಸ್ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಎ ರಾಮದಾಸ್ ಸಂದರ್ಶನ | Oneindia Kannada

ಮೈಸೂರು ನಗರದ ಕೃಷ್ಣರಾಜ ಅಸೆಂಬ್ಲಿ ಕ್ಷೇತ್ರದಲ್ಲಿ ಕಳೆದ ನಾಲ್ಕು ಚುನಾವಣೆಯಲ್ಲಿ ಎಸ್ ಎ ರಾಮದಾಸ್ ಮತ್ತು ಎಂ ಕೆ ಸೋಮಶೇಖರ್ ನಡುವೆ ನೇರ ಸ್ಪರ್ಧೆ. ಈ ಬಾರಿಯೂ ಇವರಿಬ್ಬರು, ಜೊತೆಗೆ ಜೆಡಿಎಸ್ ಪಕ್ಷದಿಂದ ಮಲ್ಲೇಶ್ ಕಣದಲ್ಲಿದ್ದಾರೆ.

ಕಳೆದ ಚುನಾವಣೆಯಲ್ಲಿ ನಮ್ಮ ತಪ್ಪಿನಿಂದಲೇ ಸೋಲುವಂತಾಯಿತು ಎಂದು ನಿಯತ್ತವಾಗಿ ಒಪ್ಪಿಕೊಂಡಿರುವ ರಾಮದಾಸ್, ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸದಿಂದ ಕ್ಷೇತ್ರದೆಲ್ಲಡೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಸಂದರ್ಶನ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಗೌಡ ಸಂದರ್ಶನ

2013ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸೋಮಶೇಖರ್ ವಿರುದ್ದ ಆರು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ರಾಮದಾಸ್ ಅವರಿಗೆ, ಈ ಬಾರಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ವಪಕ್ಷೀಯರಿಂದ ಭಿನ್ನಮತ ಎದುರಿಸಬೇಕಾಗಿ ಬಂತು.

ಮೈಸೂರು ಬಿಜೆಪಿಯ ಪ್ರಭಾವಿ ಮುಖಂಡರಾದ ಗೋ. ಮಧುಸೂಧನ್ ಮತ್ತು ರಾಜೀವ್ ಅವರಿಂದ ಎದುರಾದ ಭಿನ್ನಮತ ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದು, ರಾಮದಾಸ್ ಸದ್ಯ ನಿರಾಂತಕವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ: ಸಾ.ರಾ. ಮಹೇಶ್ ಸಂದರ್ಶನ ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ: ಸಾ.ರಾ. ಮಹೇಶ್ ಸಂದರ್ಶನ

ಪಾದಯಾತ್ರೆಯ ಮೂಲಕ ಮತಯಾಚನೆ ಮಾಡುತ್ತಿದ್ದ ರಾಮದಾಸ್, 'ಒನ್ ಇಂಡಿಯಾ' ಗೆ ನೀಡಿದ ಸಂದರ್ಶನದಲ್ಲಿ ಪ್ರಸಕ್ತ ಚುನಾವಣೆ, ಬಿಫಾರಂ ಗೊಂದಲ ಮುಂತಾದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಹೈಲೆಟ್ಸ್, ಮುಂದೆ ಓದಿ..

ಜನ ನಮ್ಮನ್ನು ಸೋಲಿಸಲಿಲ್ಲ, ನಮಗೆ ನಾವೇ ಸೋತಿದ್ದು

ಜನ ನಮ್ಮನ್ನು ಸೋಲಿಸಲಿಲ್ಲ, ನಮಗೆ ನಾವೇ ಸೋತಿದ್ದು

ಪ್ರ: ಕಳೆದ ಚುನಾವಣೆ ಮತ್ತು ಈ ಚುನಾವಣೆ ಯಾವ ರೀತಿ ಭಿನ್ನವಾಗಿದೆ?
ರಾಮದಾಸ್: ಕಳೆದ ಚುನಾವಣೆಯಲ್ಲಿ ಮತದಾರರ ಮನಸ್ಸಿಗೆ ನಾವು ಗಾಯಮಾಡಿದ್ದೆವು. ನಮ್ಮ ಸರಕಾರವಿದ್ದಾಗ ಅಭಿವೃದ್ದಿ ಕೆಲಸಗಳನ್ನು ನಿರಂತರವಾಗಿ ಮಾಡಿದ್ದೆವು. ಆಂತರಿಕವಾಗಿ ನಾವು ಕಿತ್ತಾಡಿಕೊಂಡಿದ್ದಕ್ಕೆ ಜನ ತೀರ್ಪು ನೀಡಿದ್ದ. ಹಾಗಾಗಿ ದುರ್ದೈವದ ಸಂಗತಿಯೆಂದರೆ ಕಳೆದ ಚುನಾವಣೆಯಲ್ಲಿ ಕೇವಲ 43% ವೋಟ್ ಬಂದಿತ್ತು.

ಮತದಾರ ಬೂತಿಗೆ ಬಂದರೆ ಬಿಜೆಪಿಗೆ ವೋಟ್ ಮಾಡಬೇಕಾಗುತ್ತದೆ ಎಂದು ಹೊರಗೆ ಬರಲೇ ಇಲ್ಲ. ಕೆಜಿಪಿ, ಶ್ರೀರಾಮುಲು ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಇದ್ದಿದ್ದರಿಂದ ಬಹಳಷ್ಟು ಕಡೆ ಕಡಿಮೆ ಮತದಿಂದ ಸೋತಿದ್ದೆವು. ಹಾಗಾಗಿ, ಜನ ನಮ್ಮನ್ನು ಸೋಲಿಸಲಿಲ್ಲ, ನಮಗೆ ನಾವೇ ಸೋತಿದ್ದು.

ಈ ಬಾರಿಯ ಚುನಾವಣೆಯಲ್ಲಿ ಜನ ನಮ್ಮ ಪರವಾಗಿ ಇದ್ದಾರೆ. ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಜಾತಿ ಜಾತಿ ನಡುವೆ ಸಂಘರ್ಷ ತಂದು ಹಾಕಿದ್ದೇ ಸರಕಾರದ ಸಾಧನೆ. ಭ್ರಷ್ಟಾಚಾರದ ತುತ್ತತುದಿಯನ್ನು ಸರಕಾರ ಮುಟ್ಟಿದೆ.

ಕಿಕ್ ಬ್ಯಾಕ್ ಪಡೆದದ್ದು ರಹಸ್ಯ ಕ್ಯಾಮೆರಾದಲ್ಲಿ ಪತ್ತೆಯಾಗಿದೆ

ಕಿಕ್ ಬ್ಯಾಕ್ ಪಡೆದದ್ದು ರಹಸ್ಯ ಕ್ಯಾಮೆರಾದಲ್ಲಿ ಪತ್ತೆಯಾಗಿದೆ

ಪ್ರ: ಪಿಎಂ ಆವಾಸ್ ಯೋಜನೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದ್ರಿ?
ರಾಮದಾಸ್: ಶಾಸಕರು ಅವರ ಜೀವನದಲ್ಲಿ ಇದುವರೆಗೆ ಒಂದೇ ಒಂದು ಮನೆಯನ್ನು ಕೊಟ್ಟಿಲ್ಲ. ನಾವು ಕೊಟ್ಟಂತಹ ಮನೆಗಳನ್ನು ರದ್ದು ಮಾಡುವಂತಹ ಕೆಲಸಕ್ಕೂ ಅವರು ಕೈಹಾಕಿದ್ದಾರೆ. ಕಾರ್ಪೋರೇಟರ್, ಅವರ ಹೆಂಡತಿಗೆ ಮನೆಯನ್ನು ನೀಡಿದ್ದಾರೆ. ಅವರೆಲ್ಲಾ ಬಡವರಾ?

26,200 ಫಲಾನುಭವಿಗಳೆಂದು ನಾವೇನು ಪಟ್ಟಿ ಮಾಡಿದ್ದೆವೋ, ಅದರಲ್ಲಿ ಕೆಲವರು ಹೆಸರನ್ನು ತೆಗೆದುಹಾಕಿ ತನಗೆ ಬೇಕಾದವರ ಹೆಸರನ್ನು ಸೇರಿಸುವ ಕೆಲಸವನ್ನು ಶಾಸಕ ಸೋಮಶೇಖರ್ ಮಾಡಿದ್ದಾರೆ. ಒಬ್ಬಬ್ಬೊರ ಬಳಿ ಇಪ್ಪತ್ತು ಸಾವಿರ ರೂಪಾಯಿ ಕಿಕ್ ಬ್ಯಾಕ್ ಪಡೆದದ್ದು ರಹಸ್ಯ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ನವ ಯುವಕನಿದ್ದ. ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು

ನವ ಯುವಕನಿದ್ದ. ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು

ಪ್ರ: ವರುಣಾ ಟಿಕೆಟ್ ಗೊಂದಲ ಬಿಜೆಪಿಗೆ ಮುಳುವಾಗಲಿದೆಯಾ?
ರಾಮದಾಸ್: ಆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ನಾನು ಚಿಕ್ಕವನು. ಏನು ನಡೆಯಿತು ಎನ್ನುವುದರ ಬಗ್ಗೆ ನಮಗೇನೂ ತಿಳಿದಿಲ್ಲ. ಆದರೆ, ಒಬ್ಬ ನವ ಯುವಕನಿದ್ದ. ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಭಾವನೆ ನಮ್ಮಲ್ಲಿದೆ.

ಸಿಎಂ ಅವರನ್ನು ಹಿಡಿದು ನಿಲ್ಲಿಸುವ ಶಕ್ತಿ ಆತನಲ್ಲಿತ್ತು. ಇನ್ನು ಬಿಎಸ್ವೈ ಅವರನ್ನು ಮುಂದಿನ ಸಿಎಂ ಮತ್ತು ರಾಜ್ಯಾಧ್ಯಕ್ಷರಾಗಿ ಘೋಷಿಸಿರುವುದರಿಂದ, ಲಿಂಗಾಯತ ಸಮುದಾಯ ನಮ್ಮನ್ನು ಬಿಟ್ಟು ಹೋಗುವುದಿಲ್ಲ.

ಟಿಕೆಟ್ ಅನೌನ್ಸ್ ಆಗುವ ಮುನ್ನವೇ ನಾಮಿನೇಶನ್ ಫೈಲ್

ಟಿಕೆಟ್ ಅನೌನ್ಸ್ ಆಗುವ ಮುನ್ನವೇ ನಾಮಿನೇಶನ್ ಫೈಲ್

ಪ್ರ: ಕೃಷ್ಣರಾಜ ಕ್ಷೇತ್ರದಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲವಿತ್ತಲ್ಲವೇ?
ರಾಮದಾಸ್: ನಮ್ಮದು ಬಹುದೊಡ್ಡ ಪಕ್ಷ, ಹಾಗಾಗಿ ಟಿಕೆಟ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಟಿಕೆಟ್ ನನಗೆ ಅನೌನ್ಸ್ ಆದ ಒಂದು ಗಂಟೆಯೊಳಗೆ ನಮ್ಮಲ್ಲಿದ್ದ ಐದು ಟಿಕೆಟ್ ಆಕಾಂಕ್ಷಿಗಳ ಮನೆಗೆ ಹೋಗಿ ಅವರಲ್ಲಿ ಎಲ್ಲರಲ್ಲೂ ಮನವಿ ಮಾಡಿದ್ದೇನೆ. ಹಾಗಾಗಿ, ಇಲ್ಲಿ ರೆಬೆಲ್ ಗಳಿಲ್ಲ.

ಪ್ರ: ಟಿಕೆಟ್ ಅನೌನ್ಸ್ ಆಗುವ ಮುನ್ನವೇ ನಾಮಿನೇಶನ್ ಫೈಲ್ ಮಾಡೋಕೆ ಹೋಗಿದ್ರಿ?
ರಾಮದಾಸ್: ನನಗೆ ಮೊದಲನೇ ಪಟ್ಟಿಯಲ್ಲೇ ಟಿಕೆಟ್ ರೆಡಿಯಾಗಿತ್ತು. ಆದರೆ ಮೈಸೂರು ವಿಭಾಗದಲ್ಲಿ ಕೆಲವೊಂದು ಕಾದುನೋಡುವ ತಂತ್ರ ವರಿಷ್ಠರದ್ದಾಗಿತ್ತು. ಕೊನೆಯ ಪಟ್ಟಿಯಲ್ಲೇ ನನ್ನ ಹೆಸರು ಪ್ರಕಟವಾಗುವುದು ಎಂದು ಪಕ್ಷ ನನಗೆ ಮೊದಲೇ ತಿಳಿಸಿತ್ತು. ನಾಮಪತ್ರ ಸಲ್ಲಿಸಲು ಹೋಗಿದ್ದು ಒಳ್ಳೆಯ ದಿನವಾಗಿತ್ತು.. ಹಾಗಾಗಿ.

ಜಿಲ್ಲೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು?

ಜಿಲ್ಲೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು?

ಪ್ರ: ಮಿಷನ್ 150 ಸಕ್ಸಸ್ ಆಗುತ್ತಾ?
ರಾಮದಾಸ್: ಮೋದಿ ಸಾಧನೆ, ಕರ್ನಾಟಕದ ಭವಿಷ್ಯವನ್ನು ಮುಂದಿಟ್ಟುಕೊಂದು ಜನರ ಬಳಿಗೆ ಹೋಗುತ್ತಿದ್ದೇವೆ. ಇಲ್ಲಿಯವರೆಗೆ ಕೇಂದ್ರದಲ್ಲಿ ಒಂದು ಸರಕಾರವಿದ್ದರೆ, ರಾಜ್ಯದಲ್ಲಿ ಇನ್ನೊಂದು ಸರಕಾರ ಇರುತ್ತಿತ್ತು. ಯೋಜನೆಗಳನ್ನು ತರುವಂತಹ ಕೆಲಸಕ್ಕೆ ಹಿನ್ನಡೆಯಾಗುತ್ತಿತ್ತು. ಜನರಲ್ಲಿ ಕ್ಲಿಯರ್ ಮ್ಯಾನ್ ಡೇಟ್ ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಬಹುಮತವನ್ನು ಪಡೆಯುತ್ತೇವೆ ಎನ್ನುವ ವಿಶ್ವಾಸ ನಮ್ಮಲಿದೆ.

ಪ್ರ: ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು?
ರಾಮದಾಸ್: ಪ್ರಧಾನಿಗಳು ಬರ್ತಾ ಇದ್ದಾರೆ. ಮೈಸೂರು, ಚಾಮರಾಜನಗರ ವ್ಯಾಪ್ತಿಯ 22ಕ್ಷೇತ್ರಗಳಲ್ಲಿ ಎಂಟರಿಂದ ಒಂಬತ್ತು ಸ್ಥಾನ ಗೆಲ್ಲಬಹುದು ಎನ್ನುವುದು ನಮ್ಮ ಲೆಕ್ಕಾಚಾರ.

ಕೃಷ್ಣರಾಜ ಕ್ಷೇತ್ರದ ಮತದಾರರಲ್ಲಿ ರಾಮದಾಸ್ ಮನವಿ

ಕೃಷ್ಣರಾಜ ಕ್ಷೇತ್ರದ ಮತದಾರರಲ್ಲಿ ರಾಮದಾಸ್ ಮನವಿ

ಪ್ರ: ಕ್ಷೇತ್ರದ ಜನರಲ್ಲಿ ನಿಮ್ಮ ಮನವಿ?
ರಾಮದಾಸ್: ನನ್ನೆಲ್ಲಾ ಮತದಾರರಲ್ಲಿ ನನ್ನ ಪ್ರಾರ್ಥನೆ ಇಷ್ಟೇ.. ನಾನು ಮತಕೊಡಿ ಎಂದು ಕೇಳುತ್ತಿಲ್ಲ, ಅವರ ಆಶೀರ್ವಾದ ಬಯಸುತ್ತಿದ್ದೇನೆ. ಐದು ವರ್ಷಗಳ ಕಾಲ ನನಗೆ ಮತದಾರ ರಜಾ ಕೊಟ್ಟಿದ್ದ. ಅಸಂಘಟಿತ ವಲಯದ ಆರ್ಥಿಕ ಸ್ಥಿತಿಯ ಬಗ್ಗೆ ಅಧ್ಯಯನ ಮಾಡಿ ರಿಪೋರ್ಟ್ ಕೊಟ್ಟಿದ್ದೆ.

ಸಣ್ಣಪುಟ್ಟ ಕೆಲಸ ಮಾಡುತ್ತಿರುವ ಸುಮಾರು ಐವತ್ತು ಕೋಟಿ ಜನರಿಗೆ ಆರೋಗ್ಯದ ಗ್ಯಾರಂಟಿಯನ್ನು ಪ್ರಧಾನಿಯವರು ಕೊಟ್ಟಿದ್ದಾರೆ. ಒಂದು ಕಾರ್ಡಿನಲ್ಲಿ ಐದು ಲಕ್ಷ ಆರೋಗ್ಯ ವಿಮೆ ಇರುತ್ತದೆ. ಕ್ಷೇತ್ರದ ಖುಣ ನನ್ನ ಮೇಲಿದೆ. ಕಾಂಗ್ರೆಸ್ ಮುಕ್ತ ಬೂತ್ ಮಾಡಬೇಕು ಎನ್ನುವುದು ನಮ್ಮ ಕಾರ್ಯಕರ್ತರ ಆಶಯ.

English summary
An exclusive interview with BJP candidate from Krishnaraja (Mysuru City), SA Ramdas. During his interview with Oneindia, Ramdas said, because of our internal clash, we have lost the previous election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X