• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಲೂರಿನ ಯುವ ಜೆಡಿಎಸ್ ಶಾಸಕ ಮಂಜುನಾಥ ಗೌಡ ಸಂದರ್ಶನ

By ಬಾಲರಾಜ್ ತಂತ್ರಿ
|
   ಮಾಲೂರಿನ ಯುವ ಜೆಡಿಎಸ್ ಶಾಸಕ ಮಂಜುನಾಥ ಗೌಡ ಸಂದರ್ಶನ | Oneindia Kannada

   ಸತತವಾಗಿ ಮಾಲೂರು ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದ ಕೃಷ್ಣಯ್ಯ ಶೆಟ್ಟಿಯವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಕ್ ನೀಡಿದವರು ಜೆಡಿಎಸ್ ಪಕ್ಷದ ಯುವ ಶಾಸಕ ಕೆ ಎಸ್ ಮಂಜುನಾಥ ಗೌಡ.

   ಮೊದಲ ಬಾರಿಗೆ ಸ್ಪರ್ಧಿಸಿದ್ದ ಮಂಜುನಾಥ ಗೌಡ, ಕೃಷ್ಣಯ್ಯ ಶೆಟ್ಟಿಯವರನ್ನು 18,769ಮತಗಳ ಅಂತರದಿಂದ ಸೋಲಿಸುವ ಮೂಲಕ, ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದಿದ್ದರು.

   ಚಿಂತಾಮಣಿಯ ಜನಪ್ರಿಯ ಪಕ್ಷೇತರ ಅಭ್ಯರ್ಥಿ ಡಾ. ಎಂ ಸಿ ಸುಧಾಕರ್ ಸಂದರ್ಶನ

   ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುತ್ತಿರುವ ಮಂಜುನಾಥ ಗೌಡ, ಬಿರುಸಿನ ಪ್ರಚಾರದ ಮಧ್ಯೆ 'ಒನ್ ಇಂಡಿಯಾ'ಗೆ ಕ್ವಿಕ್ ಸಂದರ್ಶನವನ್ನು ನೀಡಿದ್ದಾರೆ. ಮುಂದೆ ಓದಿ...

   ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಪ್ರ: ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದಿದ್ರಿ, ಈ ಬಾರಿ ಇಲ್ಲಿನ ರಾಜಕೀಯ ಯಾವ ರೀತಿಯಿದೆ?

   ಮಂಜುನಾಥ ಗೌಡ: ಮೊದಲಿನ ಸಲ ನನಗೆ ಯಾರೂ ಪರಿಚಯವಿರಲಿಲ್ಲ, ಏನು ಮಾಡಬೇಕು ಎನ್ನುವುದರ ಬಗೆಯೂ ಸ್ಪಷ್ಟತೆಯೂ ಇರಲಿಲ್ಲ. ಹಾಗಾಗಿ ಎಲ್ಲವೂ ಹೊಸದಾಗಿತ್ತು. ಆದರೆ ಈ ಬಾರಿ ಹಾಗಲ್ಲ. ಊರಿಗಳಿಗೆ ಹೋದರೆ ಐದು ವರ್ಷದಲ್ಲಿ ಏನು ಕೆಲಸ ಮಾಡಿದ್ದೇವೋ ಅದನ್ನು ಹೇಳಬಹುದು.

   ಚಿಕ್ಕಬಳ್ಳಾಪುರ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಸಂದರ್ಶನ

   ಹಾಗಾಗಿ ಈ ಬಾರಿಯ ಚುನಾವಣೆ ಅಷ್ಟು ಕಷ್ಟ ಎಂದು ನನಗೆ ಅನಿಸುತ್ತಿಲ್ಲ. ಜನರ ಜೊತೆ ನಮ್ಮ ಕೆನೆಕ್ಟಿವಿಟಿ ಹೇಗಿದೆ ಎನ್ನುವುದು ಗೊತ್ತಾಗುತ್ತೆ. ಊರಿಗೆ ಹೋದಾಗ ಎಷ್ಟೋ ಸರಿ ಸಿಎಂ ಅವರನ್ನೇ ಊರಿನೊಳಗೆ ಬಿಡೋಲ್ಲಾ.. ಅಂತಹ ಉದಾಹರಣೆಗಳೂ ಇವೆ.. ಮಾಲೂರಿನಲ್ಲಿ 360ಊರಿದೆ, ಅಭಿವೃದ್ದಿ ಕೆಲಸವನ್ನು ಮಾಡಿದ್ದೇನೆ. ಮುಂದೆ ಓದಿ.,

   ಸ್ವಂತ ದುಡ್ಡಿನಿಂದ ನೀರಾವರಿಗೆ ಸಂಬಂಧಪಟ್ಟಂತೆ ಕೆಲಸವನ್ನು ಮಾಡಿದ್ದೆ

   ಸ್ವಂತ ದುಡ್ಡಿನಿಂದ ನೀರಾವರಿಗೆ ಸಂಬಂಧಪಟ್ಟಂತೆ ಕೆಲಸವನ್ನು ಮಾಡಿದ್ದೆ

   ಪ್ರ: ನಿಮ್ಮ ಸ್ವಂತ ದುಡ್ಡಿನಿಂದ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೀರಿ ಎನ್ನುವ ಮಾತಿದೆ?

   ಮಂಜುನಾಥ ಗೌಡ: ಕ್ಷೇತ್ರದಲ್ಲಿ ಬೋರ್ವೆಲ್ ಸಮಸ್ಯೆ ಎದುರಾಗಿತ್ತು. ಸರಕಾರದಿಂದ ಅನುದಾನಬರುವುದು ಲೇಟಾದಾಗ, ಸ್ವಂತ ದುಡ್ಡಿನಿಂದ ನೀರಾವರಿಗೆ ಸಂಬಂಧಪಟ್ಟಂತೆ ಕೆಲಸವನ್ನು ಮಾಡಿದ್ದೆ. ಸರಕಾರದ ಸ್ಪಂದನೆಯೂ ಇದ್ದಿದ್ದರಿಂದ ನಾಲ್ಕು ನೂರಕ್ಕೂ ಹೆಚ್ಚು ಬೋರ್ವೆಲ್ ತೋಡಿಸಿದ್ದೇವೆ.

   ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅನುದಾನಗಳು ಸರಿಯಾಗಿ ಬರುತ್ತಿದೆಯಾ?

   ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅನುದಾನಗಳು ಸರಿಯಾಗಿ ಬರುತ್ತಿದೆಯಾ?

   ಪ್ರ: ಮಾಲೂರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅನುದಾನಗಳು ಸರಿಯಾಗಿ ಬರುತ್ತಿದೆಯಾ?

   ಮಂಜುನಾಥ ಗೌಡ: ಇಲ್ಲ, ಮಾಲೂರು ಮತ್ತು ಬಂಗಾರಪೇಟೆಗೆ ಬರುತ್ತಿದ್ದಂತಹ ಅನುದಾನಗಳನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಬಂಗಾರಪೇಟೆಗೆ ನೂರು ಕೊಟ್ಟರೆ, ನಮಗೆ ಮೂವತ್ತೇ.. ಆ ತಾರತಮ್ಯ ಇದ್ದೇ ಇದೆ. ಆದರೆ ನಮಗಿದ್ದ ಒಂದು ಅನುಕೂಲ ಸಂಗತಿ ಏನಂದರೆ, ಮಾಲೂರಿನಲ್ಲಿ ಕಾರ್ಖಾನೆಗಳು ಜಾಸ್ತಿ ಇವೆ.

   ಸಿಎಸ್ಆರ್ ಫಂಡ್ ಗಳು ಇರುತ್ತವೆ. ಅದನ್ನು ಬಳಸಿಕೊಂಡು ಸ್ಟೇಡಿಯಂ ಮಾಡಿಸಿದ್ದು, ಓಪನ್ ಜಿಮ್ ಮಾಡಿಸಿದೆವು. ಶಾದಿಮಹಲ್, ರಂಗ ಮಂದಿರ, ಗುರುಭವನ..ಹೀಗೆ ತುಂಬಾ ಕೆಲಸಗಳು ನಡೆದಿವೆ. ಇವೆಲ್ಲದ್ದಕ್ಕೂ ಸರಕಾರದ ಅನುದಾನ ಬಂದಿಲ್ಲ. ಸಿಎಸ್ಆರ್ ಫಂಡ್ ಬಳಸಿಕೊಂಡು ಇದನ್ನೆಲ್ಲಾ ಮಾಡಿದ್ದೇನೆ. ಸುತ್ತಮುತ್ತಲಿನ ಸಂಪನ್ಮೂಲಗಳನ್ನು ಬಳಸಿಕೊಂಡರೆ ಹೇಗೆ ಅಭಿವೃದ್ದಿ ಮಾಡಬಹುದು ಎನ್ನುವುದಕ್ಕೆ ಇದೆಲ್ಲಾ ಒಂದು ಉದಾಹರಣೆ.

   ಈ ಬಾರಿಯ ಚುನಾವಣೆ ವಿಭಿನ್ನ ಅನಿಸುತ್ತಾ?

   ಈ ಬಾರಿಯ ಚುನಾವಣೆ ವಿಭಿನ್ನ ಅನಿಸುತ್ತಾ?

   ಪ್ರ: ಕಳೆದ ಬಾರಿಯ ಚುನಾವಣೆಯಲ್ಲಿ ಕೃಷ್ಣಯ್ಯ ಶೆಟ್ಟಿ ಇದ್ದರು, ಈ ಬಾರಿಯ ಚುನಾವಣೆ ವಿಭಿನ್ನ ಅನಿಸುತ್ತಾ?

   ಮಂಜುನಾಥ ಗೌಡ: ವಿಭಿನ್ನ ಅಂತಾ ಅನಿಸುವುದಿಲ್ಲ, ಶೆಟ್ರು ಈ ಸಲ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನನ್ನ ಕೆಲಸವನ್ನು ನಾನು ಮಾಡಬೇಕು, ಶೆಟ್ರು ಎಷ್ಟು ವೋಟು ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕಿಂತ, ಕಳೆದ ಬಾರಿಯ ಚುನಾವಣೆಯಲ್ಲಿ 57ಸಾವಿರ ಮತಗಳು ಬಂದವು. ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಮತ್ತಷ್ಟು ನಮ್ಮ ಶಕ್ತಿ ವೃದ್ದಿಯಾಯಿತು. ಈ ಬಾರಿ ಒಂದು ಲಕ್ಷ ವೋಟು ತೆಗೆದುಕೊಳ್ಳಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡಿದ್ದೇವೆ.

   ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಸಾಲಮನ್ನಾ ಮಾಡ್ತೀವಿ

   ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಸಾಲಮನ್ನಾ ಮಾಡ್ತೀವಿ

   ಪ್ರ: ಅಧಿಕಾರಕ್ಕೆ ಬಂದ 24ಗಂಟೆ ಸಾಲಮನ್ನಾ ಮಾಡ್ತೀವಿ ಎಂದು ಎಚ್ಡಿಕೆ ಹೇಳುತ್ತಾರೆ, ಪ್ರಾಕ್ಟಿಕಲ್ ಆಗಿ ಇದು ಸಾಧ್ಯನಾ?

   ಮಂಜುನಾಥ ಗೌಡ: Deffinately, ಪ್ರಾಕ್ಟಿಕಲ್ ಆಗಿ ಯಾಕೆ ಸಾಧ್ಯವಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತೆ. ಕುಮಾರಣ್ಣ ಪ್ರಮಾಣವಚನ ಮಾಡಿ 24ಗಂಟೆ ಯಾಕೆ, ಬಹುಷ: ಒಂದೇ ಗಂಟೆಯಲ್ಲಿ ಸಾಲಮನ್ನಾ ಘೋಷಣೆ ಮಾಡುತ್ತಾರೆ.

   ಪ್ರ: ಮಾಧ್ಯಮಗಳು ಅತಂತ್ರ ಫಲಿತಾಂಶ ಬರುತ್ತೆ ಎನ್ನುತ್ತಿವೆಯಲ್ಲ?

   ಮಂಜುನಾಥ ಗೌಡ: ಯಾರದ್ದೋ ಸಪೋರ್ಟಿನಿಂದ ಅಧಿಕಾರಕ್ಕೆ ಬರಬೇಕೆಂದು ಯಾರೂ ಬಯಸುವುದಿಲ್ಲ. ರಾಜಕೀಯ ಬದಲಾವಣೆ ಆಗುವುದರಿಂದ ಕಾಲ ನಿರ್ಣಯ ಮಾಡುತ್ತದೆ. ಸೋ, ಈಗ ಅದರ ಬಗ್ಗೆ ಏನೂ ನಿರ್ಣಯ ಮಾಡುವುದಿಲ್ಲ.

   ನಮ್ಮ ಕಾಲಗಟ್ಟದವರು ಯಾರೂ ಜಾತಿ ಲೆಕ್ಕಾಚಾರವನ್ನು ನಂಬುವುದಿಲ್ಲ

   ನಮ್ಮ ಕಾಲಗಟ್ಟದವರು ಯಾರೂ ಜಾತಿ ಲೆಕ್ಕಾಚಾರವನ್ನು ನಂಬುವುದಿಲ್ಲ

   ಪ್ರ: ಮಾಲೂರು ಕ್ಷೇತ್ರದ ಮತದಾರರಲ್ಲಿ ನಿಮ್ಮ ಮನವಿ?

   ಮಂಜುನಾಥ ಗೌಡ: ನಾವು ಐದಾರು ಜನ ಅಭ್ಯರ್ಥಿಗಳು ನಿಲ್ಲುತ್ತೇವೆ. ಯಾರು ಬೆಸ್ಟ್ ಇದಾರೋ ಅವರಿಗೆ ವೋಟ್ ಮಾಡಿ. ನನಗೇ ವೋಟ್ ಮಾಡಿ ಎಂದು ಹೇಳುವುದಿಲ್ಲ. ಪ್ರತಿಯೊಬ್ಬರಿಗೂ ರಾಜಕೀಯ ಹಿನ್ನಲೆ ಇರುತ್ತದೆ. ಅದನ್ನು ಗಮನಿಸಿ, ಮಾಲೂರಿಗೋಸ್ಕರ ಇವರು ಕೆಲಸ ಮಾಡುತ್ತಾರೆ ಎಂದು ನಿಮಗನಿಸಿದರೆ ವೋಟ್ ಮಾಡಿ.

   ಪ್ರ: ಜಾತಿ ಲೆಕ್ಕಾಚಾರದ ರಾಜಕೀಯವನ್ನು ನೀವು ನಂಬುತ್ತೀರೋ?

   ಮಂಜುನಾಥ ಗೌಡ: ನಮ್ಮ ಕಾಲಗಟ್ಟದವರು ಯಾರೂ ಜಾತಿ ಲೆಕ್ಕಾಚಾರವನ್ನು ನಂಬುವುದಿಲ್ಲ. ನಮ್ಮ ತಂದೆ, ನಮ್ಮ ತಾತನ ಕಾಲದ ಜನರೇಶನಿಗೆ ಜಾತಿ ಲೆಕ್ಕಾಚಾರವಿದೆ. ನಾವೆಲ್ಲಾ ಒಟ್ಟಿಗೆ ಇರುತ್ತೇವೆ, ನಾವು ಆ ಜಾತಿಯವರು, ಈ ಜಾತಿಯವರು ಎಂದು ನೋಡುವುದಿಲ್ಲ.

   ಮಾಲೂರು ಕ್ಷೇತ್ರದಲ್ಲಿ ಎಷ್ಟೆಷ್ಟು ವೋಟಿದೆ ಎಂದು ಅನಲೈಸ್ ಮಾಡೋದಕ್ಕೂ ನಾನು ಹೋಗಿಲ್ಲ. ಎಲ್ಲರೂ ಒಗ್ಗಟ್ಟಾಗಿ ಐದು ವರ್ಷದಿಂದ ದುಡಿದಿದ್ದೇವೆ. ಜಾತಿ ಎನ್ನುವ ಭಾವನೆಯೇ ನಮಗೆ ಬಂದಿಲ್ಲ. ಮುಸ್ಲಿಮರ ಮದುವೆಗೆ ಊಟ ಮಾಡಿಕೊಂಡು ಬರುತ್ತೇನೆ.

   English summary
   An exclusive interview of Malur JDS MLA and candidate K S Manjunatha Gowda. Manjunatha Gowda won the 2013 assembly election defeating Krishnaiah Setty from Malur.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more