ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಕ್ಷೇತ್ರಗಳಲ್ಲಿ 'ಎರಡೆಲೆ' ಸ್ಪರ್ಧೆ: ತಮಿಳು ಮತಗಳ ಮೇಲೆ ಕಣ್ಣು

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ರಾಜ್ಯದಲ್ಲಿನ ತಮಿಳು ಮತಗಳ ಮೇಲೆ ಕಣ್ಣಿಟ್ಟಿರುವ ಎಐಎಡಿಎಂಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ.

ಹೆಚ್ಚು ತಮಿಳು ಮತಗಳು ಹೆಚ್ಚಿರುವ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಎಐಎಡಿಎಂಕೆ, ಆಯ್ದ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ನಿರ್ಧರಿಸಿದೆ.

ಎರಡನೇ ಪಟ್ಟಿ ಸಿದ್ಧತೆಗೆ ಯಡಿಯೂರಪ್ಪ ಇಂದು ದೆಹಲಿಗೆಎರಡನೇ ಪಟ್ಟಿ ಸಿದ್ಧತೆಗೆ ಯಡಿಯೂರಪ್ಪ ಇಂದು ದೆಹಲಿಗೆ

ಕರ್ನಾಟದ ವಿಧಾನಸಭೆ ಚುನಾವಣೆಗೆ ಸ್ವರ್ಧಿಸುತ್ತಿರುವುದಾಗಿ ಪಕ್ಷದ ರಾಜ್ಯ ಘಟಕದ ವಕ್ತಾರ ಪುಗಳೆಂದಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

AIADMK will contest in 20 constituencies in karnataka election

ಎಲ್ಲೆಲ್ಲಿ ಕಣಕ್ಕಿಳಿಯಲಿದ್ದಾರೆ?
ಪುಲಿಕೇಶಿ ನಗರ, ಸಿವಿ ರಾಮನ್ ನಗರ, ಶಿವಮೊಗ್ಗ, ಗಾಂಧಿನಗರ, ಮೈಸೂರು, ಹನೂರು, ಚಾಮರಾಜನಗರ, ಆನೇಕಲ್ ಪ್ರಮುಖ ಕ್ಷೇತ್ರಗಳಾಗಿವೆ. ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ವರಿಷ್ಠರನ್ನು ಭೇಟಿ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗುವುದಿಲ್ಲ. ಸಂಪೂರ್ಣ ಸ್ವತಂತ್ರವಾಗಿ ಸ್ಪರ್ಧಿಸಲಾಗುವುದು. ಪಕ್ಷಕ್ಕೆ ಪೂರಕ ವಾತಾವರಣ ಇರುವ ಕ್ಷೇತ್ರಗಳನ್ನು ಗುರುತಿಸಿ ಅಲ್ಲಿ ಸ್ಪರ್ಧಿಸಲಾಗುವುದು.

ಸಿದ್ದರಾಮಯ್ಯ ಬಾದಾಮಿಯನ್ನೇ ಆಯ್ದುಕೊಂಡದ್ದೇಕೆ? ಜಾತಿಲೆಕ್ಕಾಚಾರ ಏನು?ಸಿದ್ದರಾಮಯ್ಯ ಬಾದಾಮಿಯನ್ನೇ ಆಯ್ದುಕೊಂಡದ್ದೇಕೆ? ಜಾತಿಲೆಕ್ಕಾಚಾರ ಏನು?

ದೇವೇಗೌಡರ ವಿರುದ್ಧ ಅಸಮಾಧಾನ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಎಐಎಡಿಎಂಕೆ ಸ್ಪಷ್ಟಪಡಿಸಿದೆ.

ಯಡಿಯೂರಪ್ಪ ನಮ್ಮ ಜತೆ ಚೆನ್ನಾಗಿಯೇ ಇದ್ದಾರೆ. ಆದರೆ ಬಿಜೆಪಿ ತೆಗೆದುಕೊಳ್ಳುವ ನಿರ್ಧಾರಗಳು ಸರಿಯಿಲ್ಲ. ದೇಶಕ್ಕೆ ಮಾರಕವಾಗಬಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಪುಗಳೆಂದಿ ಹೇಳಿದರು.

ಜೆಡಿಎಸ್ ವರಿಷ್ಠ ದೇವೇಗೌಡರು ದಿನಕ್ಕೊಂದು ರೀತಿ ಮಾತನಾಡುತ್ತಾರೆ. ಇವತ್ತೊಂದು ಹೇಳಿದರೆ, ನಾಳೆ ಪ್ಲೇಟ್ ಬದಲಿಸಿ ಮಾತನಾಡುತ್ತಾರೆ. ಚಾಮರಾಜಪೇಟೆಯಲ್ಲಿ ಹಿಮದಿನ ಚುನಾವಣೆಯಲ್ಲಿ ಜಮೀರ್ ಅಹಮದ್ ಗೆಲ್ಲಲು ನಾವೇ ಮುಖ್ಯ ಕಾರಣ. ಅದನ್ನು ದೇವೇಗೌಡರು ಮರೆತಿದ್ದಾರೆ.

ತಮಿಳರ ಕಡೆಗಣನೆ
ಸ್ಪರ್ಧೆ ಮಾಡದ ಜಾಗದಲ್ಲಿ ಇತರೆ ಪಕ್ಷಗಳಿಗೆ ಬೆಂಬಲ ನೀಡಲು ಎಐಎಡಿಎಂಕೆ ಉದ್ದೇಶಿಸಿದೆ. ಯಾವ ಪಕ್ಷವನ್ನು ಬೆಂಬಲಿಸುವುದು ಎಂಬುದನ್ನು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು.

ರಾಜಕೀಯ ಪಕ್ಷಗಳು ರಾಜ್ಯದಲ್ಲಿನ ತಮಿಳಿಗರನ್ನ ಕಡೆಗಣಿಸುತ್ತಿವೆ. ಇಡೀ ರಾಜ್ಯದಲ್ಲಿ 50 ಲಕ್ಷ ತಮಿಳರಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಈ ಬಾರಿ ತಮಿಳಿಗರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಬೆಂಗಳೂರಿನಲ್ಲಿ 35 ಲಕ್ಷದಷ್ಟು ಪ್ರಾಬಲ್ಯವಿದೆ. ಹೀಗಾಗಿ ಇಲ್ಲಿ ಕನಿಷ್ಠ 5 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಾಗವುದು ಎಂದು ಪುಗಳೆಂದಿ ಹೇಳಿದರು.

English summary
AIADMK has decided to contest in 20 constituencies in karnataka assembly election. Candidate list for all the 20 seats are ready and declare soon, said party's karnataka spokeperson pugazhendi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X