keyboard_backspace

ಯುಎಸ್‌ ನೂತನ ಪ್ರಯಾಣ ಮಾರ್ಗಸೂಚಿ: ಹಲವು ದೇಶಗಳಿಗೆ ತಂದಿದೆ ತಾಪತ್ರಯ!

Google Oneindia Kannada News

ವಾಷಿಂಗ್ಟನ್‌, ಅಕ್ಟೋಬರ್‌ 20: ಯುಎಸ್‌ ಹೊಸ ಕೋವಿಡ್‌19 ಪ್ರಯಾಣ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಕೋವಿಡ್‌ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಬಳಿಕ ಒಂದು ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದವರಿಗೆ ಯುಎಸ್‌ ಪ್ರವೇಶಕ್ಕೆ ಅವಕಾಶವಿಲ್ಲ. ಅಂದರೆ ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಕಳೆದ ತಿಂಗಳು ಯುಎಸ್‌ ಕೊರೊನಾವೈರಸ್‌ ಸೋಂಕಿನ ಬಳಿಕ ಮೊದಲ ಬಾರಿಗೆ ತನ್ನ ದೇಶಕ್ಕೆ ವಿದೇಶಿಗರ ಆಗಮನಕ್ಕೆ ಅವಕಾಶ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಹಾಗೆಯೇ ನವೆಂಬರ್‌ನಿಂದ ನಿರ್ಬಂಧವನ್ನು ಸಡಿಲಿಕೆ ಮಾಡಲಾಗುವುದು ಎಂದು ಹೇಳಿತ್ತು. ತನ್ನ ಗಡಿಯನ್ನು ವಿದೇಶಿಗರಿಗೆ ನವೆಂಬರ್‌ 8 ರಿಂದ ತೆರೆಯಲಾಗುವುದು ಎಂದು ಶುಕ್ರವಾರದಂದು ಯುಎಸ್‌ಎ ಹೇಳಿದೆ.

ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಕೆ ಮಾಡಿದ ಯುಎಸ್‌ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ಸಡಿಲಿಕೆ ಮಾಡಿದ ಯುಎಸ್‌

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, "ಯುಎಸ್‌ಗೆ ನವೆಂಬರ್‌ 8 ರಿಂದ ವಿದೇಶಿಗರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತದೆ. ಆದರೆ ಎರಡೂ ಡೋಸ್‌ ಲಸಿಕೆಯನ್ನು ಪಡೆದಿರಬೇಕು." ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರೂ ಕೂಡಾ ಒಂದೇ ಡೋಸ್‌ ಲಸಿಕೆಯನ್ನು ಪಡೆದವರಿಗೆ ಯುಎಸ್‌ಗೆ ಪ್ರವೇಶಕ್ಕೆ ಅವಕಾಶ ನೀಡಲಾಗದು ಎಂದು ಈ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ. ಯುಎಸ್‌ನ ಈ ನೂತನ ಕೋವಿಡ್ ಪ್ರಯಾಣ ಮಾರ್ಗಸೂಚಿ ಏನು, ಹೇಳುತ್ತದೆ? ಭಾರತ ಸೇರಿದಂತೆ ಬೇರೆ ದೇಶಗಳಿಗೆ ಹೇಗೆ ಪ್ರಭಾವ ಬೀರುತ್ತದೆ ಎಂದು ತಿಳಿಯಲು ಮುಂದೆ ಓದಿ ...

 ಯುಎಸ್‌ ನಾಗರಿಕರು ಒಂದು ಡೋಸ್‌ ಲಸಿಕೆ ಪಡೆದರೂ ಓಕೆ!

ಯುಎಸ್‌ ನಾಗರಿಕರು ಒಂದು ಡೋಸ್‌ ಲಸಿಕೆ ಪಡೆದರೂ ಓಕೆ!

ಯುಎಸ್‌ನ ಈ ಹೊಸ ಮಾರ್ಗಸೂಚಿಯ ಪ್ರಕಾರ ಎರಡು ಡೋಸ್‌ ಲಸಿಕೆ ಪಡೆದರೆ ಮಾತ್ರ ಯುಎಸ್‌ಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಈ ನಡುವೆ ಕೆಲವು ದೇಶಗಳಿಗೆ ಈ ನಿಯಮ ತಲೆನೋವಾಗಿ ಪರಿಣಮಿಸಿದೆ. ಕೆಲವು ದೇಶಗಳಲ್ಲಿ ಒಂದು ಡೋಸ್‌ ಕೋವಿಡ್‌ ಲಸಿಕೆಯನ್ನು ಸಂಪೂರ್ಣ ಲಸಿಕೆ ಎಂದು ಪರಿಗಣಿಸಲಾಗುತ್ತಿದೆ. ಈ ದೇಶಗಳಲ್ಲಿ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದ ಬಳಿಕ ಸಂಪೂರ್ಣ ಲಸಿಕೆ ಪಡೆದ ಪ್ರಮಾಣ ಪತ್ರ ಲಭ್ಯವಾಗುತ್ತದೆ. ಈ ಪ್ರಮಾಣ ಪತ್ರವನ್ನೇ ಬೇರೆ ಎಲ್ಲಾ ದೇಶಗಳಲ್ಲಿ ಪ್ರಯಾಣದ ಸಂದರ್ಭದಲ್ಲಿ ಸ್ವೀಕರಿಸಲಾಗುತ್ತಿದೆ. ಯುಎಸ್‌ನಲ್ಲಿ ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದರೆ ಅಥವಾ ಜಾನ್ಸ್‌ನ್‌ ಆಂಡ್‌ ಜಾನ್ಸನ್‌ನ ಒಂದು ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದರೆ ಸಂಪೂರ್ಣ ಕೋವಿಡ್‌ ಲಸಿಕೆಯನ್ನು ಪಡೆಯಲಾಗಿದೆ ಎಂದು ಪರಿಗಣಿಸಲಾಗು‌ತ್ತಿದೆ. ಈ ಸಂದರ್ಭದಲ್ಲಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬ ಅಂಶವನ್ನು ಎಲ್ಲಿಯೂ ಪರಿಗಣಿಸಲಾಗುತ್ತಿಲ್ಲ.

 ವಿದೇಶಿಗರು ಎರಡು ಡೋಸ್‌ ಪಡೆದರೆ ಮಾತ್ರ ಸಂಪೂರ್ಣ ಲಸಿಕೆ!

ವಿದೇಶಿಗರು ಎರಡು ಡೋಸ್‌ ಪಡೆದರೆ ಮಾತ್ರ ಸಂಪೂರ್ಣ ಲಸಿಕೆ!

ಆದರೆ ಜೋ ಬೈಡನ್‌ ಸರ್ಕಾರವು ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾದ ಆದರೆ ಎರಡು ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆಯದೆ, ಒಂದು ಡೋಸ್‌ ಕೋವಿಡ್‌ ಲಸಿಕೆಯನ್ನು ಮಾತ್ರ ಪಡೆದಿರುವ ವಿದೇಶಿಗರನ್ನು ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಪಡೆಯದವರು ಎಂದು ಗುರುತಿಸುತ್ತದೆ. ಇನ್ನು ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದರೆ ಸಂಪೂರ್ಣ ಲಸಿಕೆ ಪಡೆದಂತೆ ಎಂದು ಒಂದು ದೇಶದ ಸರ್ಕಾರ ಪರಿಗಣಿಸಿದ್ದರೂ, ಆ ಜನರು ಯುಎಸ್‌ಗೆ ಹೋಗಬೇಕಾದರೆ ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆಯಬೇಕಾಗಿದೆ. ಈ ಹಿನ್ನೆಲೆ ಫ್ರಾನ್ಸ್‌, ಯುರೋಪ್‌ ಜೊತೆಗೆ ವಾಷಿಂಗ್ಟನ್‌ ಸಂಬಂಧದ ನಡುವೆ ಈಗ ಗೊಂದಲ ಸೃಷ್ಟಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಫ್ರೆಂಚ್‌ ಅಧ್ಯಕ್ಷ ಎಮ್ಯಾನುಲ್‌ ಮಾಕ್ರೋನ್‌ ಜೊತೆ ಯುಎಸ್‌ ಅಧ್ಯಕ್ಷ ಜೋ ಬೈಡನ್ ಮಾತುಕತೆ ನಡೆಸಿದ್ದರು ಎಂದು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಪ್ರಜೆಗಳಿಗೆ ವ್ಯಾಕ್ಸಿನ್ ಕಡ್ಡಾಯವಲ್ಲ! ಟೆಕ್ಸಾಸ್ ಗವರ್ನರ್ ವಿಚಿತ್ರ ಆದೇಶ!ಪ್ರಜೆಗಳಿಗೆ ವ್ಯಾಕ್ಸಿನ್ ಕಡ್ಡಾಯವಲ್ಲ! ಟೆಕ್ಸಾಸ್ ಗವರ್ನರ್ ವಿಚಿತ್ರ ಆದೇಶ!

 ಈಗ ತಲೆನೋವಾಗಿರುವುದು ಯಾವೆಲ್ಲಾ ದೇಶಕ್ಕೆ?

ಈಗ ತಲೆನೋವಾಗಿರುವುದು ಯಾವೆಲ್ಲಾ ದೇಶಕ್ಕೆ?

ಫ್ರಾನ್ಸ್‌ ಹಾಗೂ ನಾರ್ವೆ ಕೋವಿಡ್‌ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಬಳಿಕ ಒಂದು ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದರೆ ಸಂಪೂರ್ಣವಾಗಿ ಲಸಿಕೆ ಪಡೆಯಲಾಗಿದೆ ಎಂದು ಪಡೆಯಲಾಗಿದೆ ಎಂದು ಪರಿಗಣಿಸುತ್ತದೆ. ಗ್ರೀಸ್‌ನಲ್ಲಿ ಕೋವಿಡ್‌ ಸೋಂಕಿನಿಂದ ಗುಣಮುಖರಾದ ಆರು ತಿಂಗಳ ಒಳಗಾಗಿ ಕೋವಿಡ್‌ ಲಸಿಕೆಯನ್ನು ಪಡೆದರೆ ಸಂಪೂರ್ಣವಾಗಿ ಕೋವಿಡ್‌ ಲಸಿಕೆಯನ್ನು ಪಡೆಯಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್‌ ಸೋಂಕಿನಿಂದ ಗುಣಮುಖರಾದ ಬಳಿಕ ಒಂದು ಡೋಸ್‌ ಲಸಿಕೆಯನ್ನು ಪಡೆದರೆ, ಆ ಬಳಿಕ ಎರಡನೇ ಡೋಸ್‌ ಲಸಿಕೆಗಾಗಿ ಒಂದು ವರ್ಷ ಕಾಯಬೇಕಾಗುತ್ತದೆ. ಆದರೆ ಅವರನ್ನು ಲಸಿಕೆ ಪಡೆದವರು ಎಂದು ಪರಿಗಣಿಸಲಾಗುತ್ತದೆ.

ಆಡಳಿತವನ್ನು ಅಸ್ಥಿರಗೊಳಿಸದಂತೆ ಯುಎಸ್‌ಗೆ ತಾಲಿಬಾನ್‌ ಎಚ್ಚರಿಕೆಆಡಳಿತವನ್ನು ಅಸ್ಥಿರಗೊಳಿಸದಂತೆ ಯುಎಸ್‌ಗೆ ತಾಲಿಬಾನ್‌ ಎಚ್ಚರಿಕೆ

 ಯುಎಸ್‌ ಅನುಮೋದಿಸದ ಲಸಿಕೆ ಪಡೆದವರ ಕತೆಯೇನು?

ಯುಎಸ್‌ ಅನುಮೋದಿಸದ ಲಸಿಕೆ ಪಡೆದವರ ಕತೆಯೇನು?

ಇಟಲಿಯಲ್ಲಿ ಗ್ರೀನ್‌ ಸರ್ಟಿಫಿಕೇಟ್‌ ನೀಡಲಾಗುತ್ತದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಒಂದು ಡೋಸ್‌ ಲಸಿಕೆಯನ್ನು ಮಾತ್ರ ಪಡೆದಿದ್ದರೆ, ಈ ಗ್ರೀನ್‌ ಸರ್ಟಿಫಿಕೇಟ್‌ ಕೆಲಸ, ಒಳಗಾಂಣದ ಸಮಾರಂಭಕ್ಕೆ ಕಡ್ಡಾಯವಾಗಿದೆ. ಈ ಸರ್ಟಿಫಿಕೇಟ್‌ ಒಂದು ವರ್ಷಕ್ಕೆ ಅನ್ವಯ ಆಗು‌ತ್ತದೆ. ಇನ್ನು ಯುಎಸ್‌ನ ಈ ಪ್ರಯಾಣ ನೀತಿಯನ್ನು ಕೆಲವು ಗೊಂದಲಗಳು ಕೂಡಾ ಇದೆ. ಯುಎಸ್‌ ಕೆಲವು ಲಸಿಕೆಗಳನ್ನು ತನ್ನ ದೇಶದಲ್ಲಿ ಅನುಮೋದನೆ ಮಾಡಿಲ್ಲ. ಆದರೆ ಈ ಲಸಿಕೆಗಳನ್ನು ಪಡೆದವರೂ ಕೂಡಾ ಈಗ ಯುಎಸ್‌ಗೆ ತೆರಳಬಹುದಾಗಿದೆ. ಈ ಲಸಿಕೆಯಲ್ಲಿ ಆಸ್ಟ್ರಾಜೆನೆಕಾದ ಲಸಿಕೆಯು ಕೂಡಾ ಸೇರಿದೆ. ಆಸ್ಟ್ರಾಜೆನೆಕಾದ ಲಸಿಕೆಯನ್ನು ವಿಶ್ವದಾದ್ಯಂತ ಬಳಸಲಾಗುತ್ತಿದೆಯಾದರೂ ಯುಎಸ್‌ ಈ ಲಸಿಕೆಗೆ ಅನುಮೋದನೆ ನೀಡಿಲ್ಲ.

(ಒನ್‌ಇಂಡಿಯಾ ಸುದ್ದಿ)

English summary
Effect of New US Travel Rules on Various Countries, Including India. To know more Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X