keyboard_backspace

ವಾಟ್ಸಪ್‌ನಲ್ಲಿ ಸ್ಮೈಲಿ ಕಳುಹಿಸಿದ್ರೆ ಬೆಂಗಳೂರಲ್ಲಿ ಎಕ್ಸೆಟಿಸಿ ಡ್ರಗ್ ಡೆಲಿವರಿ ಬರುತ್ತೆ!

Google Oneindia Kannada News

ಬೆಂಗಳೂರು, ಸೆ. 03: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ಸ್ ಮಾದಕ ವಸ್ತು ಮಾರಾಟಕ್ಕೂ ಕೋಡ್ ವರ್ಡ್ ಇಟ್ಟುಕೊಂಡಿದ್ದಾರೆ. ಇನ್ನು ಫುಡ್ ಡೆಲಿವರಿ ಆಪ್ ಮೂಲಕವೇ ಡ್ರಗ್ ಸಪ್ಲೇ ಮಾಡಲಾಗುತ್ತದೆ. ವಾಟ್ಸಪ್‌ನಲ್ಲಿ ಸ್ಮೈಲಿ ಸಿಂಬಲ್ ಕಳಿಸಿದ್ರೆ ಮನೆ ಬಾಗಿಲಿಗೆ ಗಾಂಜಾ ಹಾಗೂ ಎಕ್ಸಟೆಸಿ ಟಾಬ್ಲೆಟ್ ಮನೆ ಬಾಗಿಲಿಗೆ ಬರುತ್ತದೆ.

ಕೋಡ್ ವರ್ಡ್ ಹೆಸರಿನಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ ರೋಚಕ ಸಂಗತಿಯನ್ನು ಪೂರ್ವ ವಿಭಾಗದ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಮಾದಕ ವಸ್ತು ಸೇವನೆ ಹಾಗೂ ಮಾರಾಟದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಕಾಸ್ಮೆಟಿಕ್ ರಾಣಿ ಸೋನಿಯಾ ಅಗರ್ ವಾಲ್ ಇಂತಹ ರೋಚಕ ಸತ್ಯಗಳನ್ನು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ. ಈಕೆ ನೀಡಿದ ಮಾಹಿತಿ ಆಧರಿಸಿ ಕೇರಳ ಮೂಲದ ಡ್ರಗ್ ಪೆಡ್ಲರ್ ಖಾದರ್ ಎಂಬಾತನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಥಾಮಸ್ ಜಾಡು ಹಿಡಿದು ಸೆಲಿಬ್ರಿಟಿ ಲೋಕದ ಮತ್ತೊಂದು ಮಾದಕ ಲೋಕವನ್ನು ಬಯಲಿಗೆ ಎಳೆದಿದ್ದರು. ಉದ್ಯಮಿ ಭರತ್, ಡಿಜೆ ವಚನ್ ಚನ್ನಪ್ಪ, ನಟಿ ಸೋನಿಯಾ ಅಗಲ್ ವಾಲ್ ನಿವಾಸಗಳ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದರು. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಂಧಿಸಿದ್ದರು. ವಿಚಾರಣೆ ವೇಳೆ ಸೋನಿಯಾ ಅಗರ್ ವಾಲ್ ಡ್ರಗ್ ವಿತರಣೆ ಮಾಡುವ ದೊಡ್ಡ ಜಾಲದ ಬಗ್ಗೆ ಇಂಚಿಂಚು ಮಾಹಿತಿಯನ್ನು ಬಾಯಿ ಬಿಟ್ಟಿದ್ದಾಳೆ. ಬೆಂಗಳೂರಿನ ಸೆಲಿಬ್ರಿಟಿಗಳಿಗೆ ಹೇಗೆ ಡ್ರಗ್ ಸಪ್ಲೇ ಆಗುತ್ತಿತ್ತು? ಯಾರು ಡ್ರಗ್ ಸಪ್ಲೇ ಮಾಡುತ್ತಿದ್ದರು ಎಂಬ ಪೂರ್ಣ ವಿವರಗಳನ್ನು ನೀಡಿದ್ದಾಳೆ.

ಕೇರಳ ಮೂಲದ ಡ್ರಗ್ ಪೆಡ್ಲರ್ ಸೆರೆ

ಕೇರಳ ಮೂಲದ ಡ್ರಗ್ ಪೆಡ್ಲರ್ ಸೆರೆ

ಫುಡ್ ಡೆಲಿವರಿ ಹೆಸರಿನಲ್ಲಿ ಕೇರಳ ಮೂಲದ ಡ್ರಗ್ ಪೆಡ್ಲರ್ ಸೆಲಿಬ್ರಿಟಿಗಳಿಗೆ ಡ್ರಗ್ ಸಪ್ಲೇ ಮಾಡುತ್ತಿದ್ದ. ಥೇಟ್ ಫುಡ್ ಡೆಲಿವರಿ ಬಾಯ್ ತರನೇ ಪ್ಯಾಂಟು ಶರ್ಟ್, ಜಾಕೆಟ್ ಧರಿಸಿದ್ದ ಅಬ್ದುಲ್ ಖಾದರ್ ತನ್ನ ಪರಿಚಯಸ್ಥ ಸೆಲಿಬ್ರಿಟಿಗಳಿಗೆ ವಾಟ್ಸಪ್ ನಂಬರ್ ನೀಡಿದ್ದ. ಅದರಲ್ಲಿ ಎಲ್ಲೂ ಡ್ರಗ್ ಬಗ್ಗೆ ಚಾಟ್ ಮಾಡುತ್ತಿರಲಿಲ್ಲ. ಪ್ರತಿ ಡ್ರಗ್ ಗೊ ವಾಟ್ಸಪ್ ನ ಸಿಂಬಲ್ ಬಳಸಿ ಸಂಭಾಷಣೆ ನಡೆಯುತ್ತಿತ್ತಂತೆ. ಸೋನಿಯಾ ಅಗರ್ ವಾಲ್ ಹೇಳಿಕೆ ಪ್ರಕಾರ, ಸ್ಮೈಲಿ ಸಿಂಬಲ್ ಕಳಿಸಿದ್ರೆ ಗಾಂಜಾ, ಎರಡು ಸ್ಮೈಲಿ ಸಿಂಬಲ್ ಕಳಿಸಿದ್ರೆ ಎಕ್ಸೆಟಿಸಿ ಫಿಲ್ಸ್ ನ್ನು ಬಂಧಿತ ಅಬ್ದುಲ್ ಖಾದರ್ ರವಾನೆ ಮಾಡುತ್ತಿದ್ದ. ಡ್ರಗ್ ಡಪ್ಲೇ ಮಾಡಲೆಂದು ಅಬ್ದುಲ್ ಖಾದರ್ ಫುಡ್ ಡೆಲಿವರಿ ಬಾಯ್ ತರನೇ ಬಟ್ಟೆ ಧರಿಸುತ್ತಿದ್ದ. ಪ್ಯಾಂಟಿನ ಒಳಗೆ, ಶೂ ಒಳಗೆ ಮತ್ತಿತರ ಜಾಗದಲ್ಲಿ ಡ್ರಗ್ ಇಟ್ಟುಕೊಂಡು ವಾಟ್ಸಪ್ ಸ್ಮೈಲಿ ಕಳಿಹಿಸಿದವರಿಗೆ ರವಾನೆ ಮಾಡುತ್ತಿದ್ದ ಎನ್ನಲಾಗಿದೆ. ಈಕೆ ನೀಡಿದ ಮಾಹಿತಿ ಮೇರೆಗೆ ಎಚ್ಎಸ್ಆರ್ ಲೇಔಟ್‌ನಲ್ಲಿ ನೆಲೆಸಿದ್ದ ಕೇರಳಾ ಮೂಲದ ಆರೋಪಿ ಅಬ್ದುಲ್ ಖಾದರ್ ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

ನಿಕಟವರ್ತಿಗಳಿಗೆ ಕಂಟಕ

ನಿಕಟವರ್ತಿಗಳಿಗೆ ಕಂಟಕ

ಇನ್ನು ಬಂಧಿತ ಅಬ್ದುಲ್ ಖಾದರ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗೋವಿಂದಪುರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆತನ ಸಂಪರ್ಕದಲ್ಲಿರುವರು, ಕೋಡ್‌ ವರ್ಡ್ ನಲ್ಲಿ ಮಾದಕ ವಸ್ತುಗಳನ್ನು ತರಿಸಿಕೊಂಡಿರುವರ ವಿವರಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಸೋನಿಯಾ ಅಗರ್ ವಾಲ್ ಬಂಧನ ಬಳಿಕ ಮೊಬೈಲ್ ಸಂಪರ್ಕ ಸಂಖ್ಯೆ ಹಾಗೂ ವಾಟ್ಸಪ್ ವಿವರಗಳನ್ನು ಡಿಲೀಟ್ ಮಾಡಿದ್ದ ಖಾದರ್‌ನ ಮೊಬೈಲ್ ರೀಟ್ರೈವ್ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಖಾದರ್ ನ ಸಂಪರ್ಕದಲ್ಲಿರುವ ಸೆಲಿಬ್ರಿಟಿಗಳಿಗೆ ಇದೀಗ ಬಂಧನ ಆತಂಕ ಎದುರಾಗಿದೆ.

ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಥಾಮಸ್ ಕೇಸಿಗೆ ಟ್ವಿಸ್ಟ್,

ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಥಾಮಸ್ ಕೇಸಿಗೆ ಟ್ವಿಸ್ಟ್,

ಸ್ಯಾಂಡಲ್ ವುಡ್ ಸೆಲಿಬ್ರಿಟಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಯಾವಾಗ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ಡ್ರಗ್ ರಾಕೆಟ್ ಮೇಲೆ ಮುಗಿ ಬಿದ್ದರೋ ಅದಾಗಲೇ ಥಾಮಸ್ ಚಾಣಾಕ್ಷತೆ ತೋರಿ ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಮಾದಕ ವಸ್ತು ಸೇವನೆ ಮಾಡಿ ಹೆಲ್ಮೆಟ್ ಇಲ್ಲದೇ ವಾಹನ ಓಡಿಸಿ ಕೆ.ಆರ್. ಪುರಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಹೀಗೆ ಪೊಲೀಸರಿಂದಲೇ ಸಣ್ಣ ಕೇಸು ಹಾಕಿಸಿಕೊಂಡು ಜೈಲಿಗೆ ಹೋಗಿದ್ದ. ಹೀಗಾಗಿ ಸ್ಯಾಂಡಲ್ ವುಡ್ ಡ್ರಗ್ ಡೀಲ್ ಕೇಸಿನಲ್ಲಿ ಥಾಮಸ್ ಹೆಸರು ಬಂದರೂ ಸಿಸಿಬಿ ಪೊಲೀಸರು ತಲೆ ಕೆಡಿಸಿಕೊಂಡಿರಲಿಲ್ಲ. ಸಿಸಿಬಿ ಪೊಲೀಸರು ತನಿಖೆ ಮುಗಿಸಿದ ಬಳಿಕ ಜಾಮೀನಿನ ಮೇಲೆ ಹೊರ ಬಂದು ಸೆಲಬ್ರಿಟಿಗಳ ಜತೆ ರಾಜಾರೋಷವಾಗಿ ಮಾದಕ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಆದರೆ ಈತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಗೋವಿಂದಪುರ ಪೊಲೀಸರು ಕೆಲ ದಿನಗಳ ಹಿಂದೆ ಬಂಧಿಸಿದ್ದರು. ಬಂಧನದ ವೇಳೆ ಹಲವು ಮಹತ್ವದ ಮಾಹಿತಿ ನೀಡಿದ್ದ. ಅದರ ಆಧಾರದ ಮೇಲೆ ಸೆಲಿಬ್ರಿಟಿಗಳ ಮನೆಗಳ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

ಸಿಸಿಬಿ ಪೊಲೀಸರ ಮುಂದುವರೆದ ಡ್ರಗ್ ವಿರುದ್ಧ ಸಮರ

ಸಿಸಿಬಿ ಪೊಲೀಸರ ಮುಂದುವರೆದ ಡ್ರಗ್ ವಿರುದ್ಧ ಸಮರ

ಇತ್ತ ಮಾದಕ ಜಾಲದ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಜಾರ್ಖಂಡ್ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 2 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಕಾಸ್ ಸಿಂಗ್ ಹಾಗೂ ಶಿವಂ ಸಿಂಗ್ ಬಂಧಿತ ಆರೋಪಿಗಳು. ಆರೋಪಿಗಳಿಂದ 400 ಗ್ರಾಂ ಚರಸ್ , 180 ಗ್ರಾಂ ಎಲ್ ಎಸ್ ಡಿ ಪೇಪರ್, 2530 ಗ್ರಾಂ ಹ್ಯಾಶಿಶ್ ಆಯಿಲ್, 50 ಗ್ರಾಂ ಹೈಡ್ರೋ ಗಾಂಜಾ, 30 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಡಾರ್ಕ್ ವೆಬ್ ತಾಣದ ನೆರವಿನಿಂದ ಬಿಟ್ ಕಾಯಿನ್ ನಲ್ಲಿ ವಹಿವಾಟು ನಡೆಸಿ ಡ್ರಗ್ ತರಿಸುತ್ತಿದ್ದರು. ವಿದೇಶದಿಂದ ಕಡಿಮೆ ಬೆಲೆಗೆ ತರಿಸುತ್ತಿದ್ದ ಡ್ರಗ್ ಪೆಡ್ಲರ್ ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಪೂರೈಕೆ ಮಾಡುತ್ತಿದ್ದರು.

English summary
Govindapura police have been arrested a drug peddler who delver drug in the name of code word , CCB police busted Drug racket and seized 2 Cr worth drug know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X