keyboard_backspace

ಡೆಲ್ಟಾ ವಿರುದ್ದ ಚೀನಾ ಸಮರ: 1 ತಿಂಗಳಲ್ಲೇ ಝೀರೋ ಕೋವಿಡ್‌ ಪ್ರಕರಣ

Google Oneindia Kannada News

ಬೇಜಿಂಗ್‌, ಆಗಸ್ಟ್‌ 23: ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರವು ಇಡೀ ವಿಶ್ವಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ವಿಶ್ವದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಚೀನಾದಲ್ಲೂ ಡೆಲ್ಟಾ ರೂಪಾಂತರದಿಂದಾಗಿ ನಿಯಂತ್ರಣದಲ್ಲಿದ್ದ ಕೋವಿಡ್‌ ಪ್ರಕರಣಗಳು ಒಮ್ಮೆಲೇ ತೀವ್ರ ಏರಿಕೆ ಕಾಣಿಸಿಕೊಂಡಿತು. ಆದರೆ ಇದಾದ ಒಂದು ತಿಂಗಳಿನಲ್ಲೇ ಡೆಲ್ಟಾ ವಿರುದ್ದ ಹೋರಾಡಿದ ಚೀನಾವು ಈಗ ಶೂನ್ಯ (ಝೀರೋ) ಪ್ರಕರಣಗಳನ್ನು ವರದಿ ಮಾಡಿದೆ.

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕಿನ 30 ಪ್ರಕರಣಗಳು ವರದಿಯಾಗುತ್ತಿದ್ದಂತೆ ಕೂಡಲೇ ಎಚ್ಚೆತ್ತು ಕೊಂಡ ಆಡಳಿತ ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಂಡಿತು. ಕೊರೊನಾ ಸೋಂಕು ಹಿನ್ನೆಲೆ ಮತ್ತೆ ಹಲವಾರು ಪ್ರದೇಶಗಳಲ್ಲಿ ಲಾಕ್‌ಡೌನ್‌ ಮಾಡಲಾಗಿತ್ತು. ಹಾಗೆಯೇ ಒಂದು ಕೋವಿಡ್‌ ಪ್ರಕರಣ ದಾಖಲಾದರೂ ಆ ಪ್ರದೇಶದ ಎಲ್ಲಾ ಜನರ ಕೋವಿಡ್‌ ಪರೀಕ್ಷೆ ನಡೆಸುತ್ತಿತ್ತು ಚೀನಾ. ಈ ಬೆನ್ನಲ್ಲೇ ಡೆಲ್ಟಾ ರೂಪಾಂತರವು ಚೀನಾಕ್ಕೆ ದೊಡ್ಡ ಸವಲಾಗಿ ಪರಿಣಮಿಸಿತು. ಕೊರೊನಾ ಸೋಂಕು ವೈರಸ್‌ ವಿರುದ್ದದ ಲಸಿಕೆಯನ್ನು ಶೀಘ್ರಗೊಳಿಸುವ ಮೂಲಕ ಹಾಗೂ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಚೀನಾ ಈಗ ಕೊರೊನಾ ವೈರಸ್‌ ಸೋಂಕನ್ನು ನಿಯಂತ್ರಣಕ್ಕೆ ತಂದಿದೆ.

ಡೆಲ್ಟಾ ಉಲ್ಬಣ: ಚೀನಾ ಸೇರಿ ವಿದೇಶಗಳಲ್ಲಿ ಹೇಗಿದೆ ಕೋವಿಡ್‌ ಪರಿಸ್ಥಿತಿ?ಡೆಲ್ಟಾ ಉಲ್ಬಣ: ಚೀನಾ ಸೇರಿ ವಿದೇಶಗಳಲ್ಲಿ ಹೇಗಿದೆ ಕೋವಿಡ್‌ ಪರಿಸ್ಥಿತಿ?

ಕೊರೊನಾ ವೈರಸ್‌ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವಕ್ಕೆ ಈಗ ಚೀನಾ ಮಾದರಿ ತೋರಿಸುತ್ತಿದೆ. ಹಾಗೆಯೇ ವಿಶ್ವದ ಇತರೆ ದೇಶಗಳು ಚೀನಾದಂತೆಯೇ ಕೊರೊನಾ ಸೋಂಕು ವೈರಸ್‌ ಅನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಬಹುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಹಾಗೆಯೇ ಚೀನಾದಂತೆ ಕಠಿಣ ಕ್ರಮಗಳನ್ನು ವಿಶ್ವದ ಬೇರೆ ದೇಶಗಳು ಕೈಗೊಳ್ಳಲು ಸಾಧ್ಯವಾದೀತೆ ಎಂಬ ಪ್ರಶ್ನೆಯೂ ಕೂಡಾ ಮೂಡಿದೆ. ಚೀನಾದಲ್ಲಿ ಜುಲೈ 20 ರಂದು ಹೊಸ ಕೊರೊನಾ ವೈರಸ್‌ ಪ್ರಕರಣ ದಾಖಲಾದಾಗ ಏನು ನಡೆಯಿತು ಹಾಗೂ ಹೇಗೆ ಚೀನಾ ಝೀರೋ ಕೋವಿಡ್‌ ಪ್ರಕರಣ ದಾಖಲು ಮಾಡಿದೆ ಎಂಬ ಬಗ್ಗೆ ವಿವರ ಇಲ್ಲಿದೆ. ಮುಂದೆ ಓದಿ...

 ಇಡೀ ಪ್ರದೇಶದ ಜನರಿಗೆ ಸಾಮೂಹಿಕ ಕೋವಿಡ್‌ ಪರೀಕ್ಷೆ

ಇಡೀ ಪ್ರದೇಶದ ಜನರಿಗೆ ಸಾಮೂಹಿಕ ಕೋವಿಡ್‌ ಪರೀಕ್ಷೆ

ಚೀನಾವು ಕೊರೊನಾ ವೈರಸ್‌ ಸೋಂಕು ಪರೀಕ್ಷೆ ನಡೆಸುವಲ್ಲಿ ಸೂಕ್ಷ್ಮವಾಗಿ ನಡೆದಿದೆ. ಒಂದು ಪ್ರದೇಶದಲ್ಲಿ ಒಬ್ಬರಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟರೂ ಇಡೀ ಪ್ರದೇಶದ ಜನರಿಗೆ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು ಚೀನಾ ನಡೆಸಿದೆ. ಆ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯ ಕೋವಿಡ್‌ ಪರೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳುವ ಕಾರ್ಯವನ್ನು ಕೂಡಾ ಚೀನಾ ಮಾಡಿದೆ. ಹಾಗೆಯೇ ಸ್ಥಳೀಯ ಆಡಳಿತವು ಆ ಪ್ರದೇಶದ ಜನಸಂಖ್ಯೆ ಎಷ್ಟಿದೆ ಹಾಗೂ ಎಷ್ಟು ಜನರ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ ಎಂಬ ಬಗ್ಗೆ ಸರಿಯಾಗಿ ಲೆಕ್ಕಾಚಾರ ಮಾಡಿಕೊಂಡಿದೆ. ಆ ಸಮತೋಲನವನ್ನು ಚೀನಾ ಕಾಪಾಡಿಕೊಂಡಿದೆ. ಹಾಗೆಯೇ ಯಾರಿಗಾದರೂ ಕೊರೊನಾ ವೈರಸ್‌ ಸೋಂಕು ಇದೆಯೇ ಎಂದು ತಿಳಿದುಕೊಳ್ಳಲು ಈ ಕಾರ್ಯವನ್ನು ಪ್ರತಿ ಪ್ರದೇಶದಲ್ಲಿ ಸುಮಾರು ಡಜನ್‌ಗಟ್ಟಲೆ ಬಾರಿ ನಡೆಸಿದೆ. ಒಟ್ಟಾಗಿ ಸುಮಾರು 100 ಮಿಲಿಯನ್‌ ಬಾರಿ ಕೋವಿಡ್‌ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ ಯುಗ್‌ಝುವೋ ನಗರದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾಗಲು ಸಾಲಿನಲ್ಲಿ ನಿಂತ ಸಂದರ್ಭದಲ್ಲಿ ಕೋವಿಡ್‌ ಸೋಂಕಿಗೆ ಒಳಗಾದ ಘಟನೆಗಳು ಕೂಡಾ ನಡೆದಿದೆ.

ಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿ

 ಕ್ವಾರಂಟೈನ್‌ ಸೇರಿ ಚೀನಾದಲ್ಲಿ ಕಠಿಣ ನಿರ್ಬಂಧ

ಕ್ವಾರಂಟೈನ್‌ ಸೇರಿ ಚೀನಾದಲ್ಲಿ ಕಠಿಣ ನಿರ್ಬಂಧ

ಚೀನಾದಲ್ಲಿ ಕ್ವಾರಂಟೈನ್‌ ಕೂಡಾ ಪ್ರಮುಖ ಪಾತ್ರವನ್ನು ವಹಿಸಿದೆ. ಒಂದು ಕೋವಿಡ್‌ ಪ್ರಕರಣ ದಾಖಲಾಗುತ್ತಿದ್ದಂತೆ ಚೀನಾದ ರಾಜಧಾನಿ ಬೇಜಿಂಗ್‌ ಅನ್ನು ಸಂಪೂರ್ಣವಾಗಿ ಸೀಲ್‌ ಡೌನ್‌ ಮಾಡಲಾಗಿತ್ತು. ಇಲ್ಲಿಗೆ ಯಾವುದೇ ಪ್ರಾಂತ್ಯದಿಂದ ಯಾರೂ ಕೂಡಾ ಬರುವಂತಿರಲಿಲ್ಲ, ಹೋಗುವಂತಿರಲಿಲ್ಲ. ಕೋವಿಡ್‌ ಹಾಟ್‌ಸ್ಪಾಟ್‌ ಪ್ರದೇಶದಿಂದ ಎಲ್ಲಾ ರೈಲು ಸಂಚಾರವನ್ನು ಕೂಡಾ ಸ್ಥಗಿತಗೊಳಿಸಲಾಗಿತ್ತು. ಈ ಎಲ್ಲಾ ಕಾರ್ಯವನ್ನು ಚೀನಾದಲ್ಲಿ ಹತ್ತು ಕೋವಿಡ್‌ನ ಡೆಲ್ಟಾ ರೂಪಾಂತರ ಪ್ರಕರಣಗಳು ದಾಖಲಾಗುತ್ತಿದ್ದಂತೆ ಮಾಡಲಾಗಿದೆ. ಇನ್ನು ಇತರೆ ಪ್ರದೇಶಗಳಲ್ಲೂ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ. ಜನರಿಗೆ ರಜೆ ನೀಡಿ ಮನೆಯಲ್ಲೇ ಕೂರಿಸಲಾಗಿದೆ. ಹಾಗೆಯೇ ಶಾಲೆ ಹಾಗೂ ಕಚೇರಿಗಳಿಗೆ ಮತ್ತೆ ಆಗಮಿಸುವ ಮುನ್ನ ಹಲವಾರು ಮಂದಿಯನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡಿ ಕೂರಿಸಲಾಗಿದೆ.

 ಕೊರೊನಾ ಏರಿಕೆ ಹಾಗೂ ಇಳಿಕೆ

ಕೊರೊನಾ ಏರಿಕೆ ಹಾಗೂ ಇಳಿಕೆ

ಮೊದಲು ಚೀನಾದ ನಂಜಿಂಗ್ ವಿಮಾನ ನಿಲ್ದಾಣದ ಬಳಿ ಲಕ್ಷಣ ರಹಿತ ಕೋವಿಡ್‌ ಪ್ರಕರಣ ದಾಖಲಾಗಿದೆ. ಅದರ ಮರುದಿನ ಸುಮಾರು ಹನ್ನೆರಡು ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಜುಲೈ ತಿಂಗಳ ಕೊನೆಯ ವಾರದಲ್ಲಿ ಚೀನಾದಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳು ಸುಮಾರು 50 ಕ್ಕೆ ಏರಿಕೆಯಾದವು. ಹಾಗೆಯೇ ಈ ಪ್ರಕರಣಗಳು ಅಧಿಕ ಹರಡುವ ಆತಂಕವು ಕೂಡಾ ಚೀನಾದಲ್ಲಿ ಉಂಟಾಯಿತು. ಇನ್ನು ಒಂದು ವಾರದಲ್ಲೇ ದೈನಂದಿನ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆಯು 100 ಕ್ಕೆ ಏರಿಕೆಯಾಗಿದೆ. ಆದರೆ ಈ ಕೊರೊನಾ ಪ್ರಕರಣಗಳ ಏರಿಕೆಯು ಆರಂಭವಾಗುತ್ತಿದ್ದಂತೆ ಕೊನೆಗೊಳಿಸುವಲ್ಲಿ ಚೀನಾವು ಸಫಲವಾಗಿದೆ. ನಿಯಂತ್ರಣ ಕ್ರಮ ಕೈಗೊಳ್ಳುತ್ತಿದ್ದಂತೆ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಒಂದಕ್ಕೆ ಇಳಿಕೆ ಕಂಡಿದೆ. ಈಗ ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಶೂನ್ಯಕ್ಕೆ ಬಂದು ಇಳಿದಿದೆ. ದೇಶದಾದ್ಯಂತ ಡೆಲ್ಟಾ ರೂಪಾಂತರದ ತೀವ್ರ ಹರಡುವಿಕೆಯು ಚೀನಾದ ಕೋವಿಡ್ ನಿಯಂತ್ರಣ ಮಾದರಿಗೆ ಅತಿದೊಡ್ಡ ಪರೀಕ್ಷೆಯಾಗಿ ಎದುರಾಯಿತು. ಈ ಡೆಲ್ಟಾ ಚೀನಾದ 17 ಪ್ರಾಂತ್ಯಗಳ 50 ನಗರಗಳಲ್ಲಿ ಕಾಣಿಸಿಕೊಂಡಿತು. ಹಾಗೆಯೇ ಮೊದಲ ಕೊರೊನಾ ಪ್ರಕರಣ ದಾಖಲಾದ ವುಹಾನ್‌ನಲ್ಲಿ ಒಂದು ವರ್ಷದ ಬಳಿಕ ಮತ್ತೆ ಕೋವಿಡ್‌ ಕಾಣಿಸಿಕೊಂಡಿತು. ಈ ಮೂಲಕ ಚೀನಾದಲ್ಲಿ 2021 ರ ಆರಂಭದಲ್ಲಿ ದಾಖಲಾದ ಒಂದು ಪ್ರಕರಣ ಸೇರಿದಂತೆ ಒಟ್ಟು 2021 ರಲ್ಲಿ ಎರಡು ಸಾವಿರ ಕೊರೊನಾ ವೈರಸ್‌ ಕೋವಿಡ್‌ ಪ್ರಕರಣಗಳು ದಾಖಲಾದವು. ಆದರೆ ಚೀನಾದಲ್ಲಿ ಯಾವುದೇ ಕೊರೊನಾ ವೈರಸ್‌ ಸೋಂಕಿತರು ಈ ವರ್ಷದಲ್ಲಿ ಸಾವನ್ನಪ್ಪಿಲ್ಲ ಎಂದು ವರದಿಗಳು ಹೇಳುತ್ತದೆ. ಆದರೆ ಕೋವಿಡ್‌ ಉಲ್ಬಣವು ಚೀನಾ ದೇಶದಲ್ಲಿ ಸುಮಾರು ಆರು ತಿಂಗಳ ಬಳಿಕ ಮತ್ತೆ ಕೋವಿಡ್‌ ಸಾವು ಪ್ರಕರಣಗಳು ದಾಖಲಾಗುತ್ತದೆಯೇ ಎಂಬ ಆತಂಕವನ್ನು ಉಂಟು ಮಾಡಿತು. ಆದರೆ ದೇಶದಲ್ಲಿ ಕೋವಿಡ್‌ ಸೋಂಕಿತರೆಲ್ಲರೂ ಗುಣಮುಖರಾಗಿದ್ದು ಈಗ ಚೀನಾದಲ್ಲಿ ಯಾವುದೇ ಸಕ್ರಿಯ ಕೋವಿಡ್‌ ಪ್ರಕರಣಗಳು ಇಲ್ಲ ಎಂದು ಹೇಳಲಾಗಿದೆ.

ಭಾರತ ಗಡಿ ಸಮೀಪದ ಟಿಬೆಟಿಯನ್ ನಗರಕ್ಕೆ ಅಚ್ಚರಿಯ ಭೇಟಿ ನೀಡಿದ ಚೀನಾ ಅಧ್ಯಕ್ಷಭಾರತ ಗಡಿ ಸಮೀಪದ ಟಿಬೆಟಿಯನ್ ನಗರಕ್ಕೆ ಅಚ್ಚರಿಯ ಭೇಟಿ ನೀಡಿದ ಚೀನಾ ಅಧ್ಯಕ್ಷ

 ಆರ್ಥಿಕ ಹಿನ್ನಡೆಗೆ ಕಾರಣವಾಯ್ತು ಮತ್ತೆ ಆಕ್ರಮಿಸಿದ ಕೋವಿಡ್‌

ಆರ್ಥಿಕ ಹಿನ್ನಡೆಗೆ ಕಾರಣವಾಯ್ತು ಮತ್ತೆ ಆಕ್ರಮಿಸಿದ ಕೋವಿಡ್‌

ಚೀನಾ ವಿಶ್ವದಲ್ಲೇ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಎರಡನೇ ದೇಶವಾಗಿದೆ. ಆದರೆ ಕೊರೊನಾ ವೈರಸ್‌ ಸೋಂಕಿನ ನಿಯಂತ್ರಣಕ್ಕಾಗಿ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಜುಲೈನಲ್ಲಿ ಅನುಭೋಗ (ಬಳಕೆ) ಹಾಗೂ ಉತ್ಪಾದನೆ ಪ್ರಮಾಣವು ಇಳಿಕೆ ಕಂಡಿದೆ. ಹಾಗೆಯೇ ಆಗಸ್ಟ್‌ನಲ್ಲಿಯೂ ಇದೇ ರೀತಿಯಾಗಿ ಅನುಭೋಗ ಹಾಗೂ ಉತ್ಪಾದನೆ ಪ್ರಮಾಣವು ಕಡಿಮೆಯಾಗಿದೆ. ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ನಿಂದ ನೋಮುರಾ ಹೋಲ್ಡಿಂಗ್ಸ್ ಇಂಕ್ ವರೆಗಿನ ಹೂಡಿಕೆ ಬ್ಯಾಂಕುಗಳಲ್ಲಿ ಬೆಳವಣಿಗೆಯ ಪ್ರಮಾಣವು ಕಡಿತವಾಗಿದೆ ಎಂದು ವರದಿ ತಿಳಿಸಿದೆ.

(ಒನ್‌ ಇಂಡಿಯಾ ಸುದ್ದಿ)

English summary
Despite Delta surge, China Records Zero Covid case Within A Month Of Increase. Explained in Kannada Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X