keyboard_backspace

ಪಾಕ್‌ ಐಎಸ್‌ಐ ಬೆಂಬಲಿತ ಉಗ್ರರ ಬಂಧನ: ಹಬ್ಬದ ವೇಳೆ ಹೂಡಿದ ಬಾಂಬ್‌ ದಾಳಿ ಸಂಚು ವಿಫಲ

Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 15: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಬೆಂಬಲಿತ ಆರು ಭಯೋತ್ಪಾದಕರನ್ನು ದೆಹಲಿ ಪೊಲೀಸರು ಬಂಧನ ಮಾಡಿದ್ದು, ಈ ಮೂಲಕ ಹಬ್ಬದ ಸಂದರ್ಭದಲ್ಲಿ ನಡೆಯಲಿದ್ದ ಭಾರೀ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದ್ದಾರೆ. ಬಂಧಿತ ಆರು ಮಂದಿ ಉಗ್ರರು ಪಾಕ್‌ನ ಐಎಸ್‌ಐ ಬೆಂಬಲಿತ, ಐಎಸ್‌ಐ ನಿಂದ ತರಬೇತಿ ಪಡೆದವರು ಎಂದು ಮಾಧ್ಯಮದ ವರದಿಗಳು ಹೇಳಿದೆ.

ದೆಹಲಿ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈ ಭಯೋತ್ಪಾದಕರು ಬಾಂಬ್‌ ಸ್ಪೋಟ ನಡೆಸಲು ಸಂಚು ಹೂಡಿದ್ದರು ಎಂದು ಹೇಳಲಾಗಿದೆ. ಅದು ಕೂಡಾ "ಗಣೇಶ ಚತುರ್ಥಿ, ನವರಾತ್ರಿ, ರಾಮ್‌ಲೀಲಾ ಹಬ್ಬದ ಸಂದರ್ಭದಲ್ಲಿ ಅಧಿಕ ಜನರು ಜೊತೆ ಸೇರುವ ಹಿನ್ನೆಲೆ ಈ ಬಾಂಬ್‌ ದಾಳಿ ನಡೆಸಲು ಸಂಚು ರೂಪಿಸಿದ್ದರು," ಪೊಲೀಸರು ತಿಳಿಸಿದ್ದಾರೆ.

ದೆಹಲಿ: ದಾಳಿಗೆ ಸಂಚು ಹೂಡಿದ್ದ 6 ಮಂದಿ ಶಂಕಿತ ಉಗ್ರರ ಬಂಧನದೆಹಲಿ: ದಾಳಿಗೆ ಸಂಚು ಹೂಡಿದ್ದ 6 ಮಂದಿ ಶಂಕಿತ ಉಗ್ರರ ಬಂಧನ

ದಾವೂದ್‌ ಇಬ್ರಾಹಿಂನ ಸಹೋದರನಾದ ಪಾಕಿಸ್ತಾನ ಮೂಲದ ಅನೀಸ್‌ ಇಬ್ರಾಹಿಂ ತನ್ನ ಈ ಭಯೋತ್ಪಾದಕ ದಾಳಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಂಡರ್‌ವರ್ಲ್ಡ್ (ಭೂಗತ) ಜೊತೆ ಸಂಪರ್ಕದಲ್ಲಿದ್ದನು. ನಾವು ಈ ಬಂಧಿತ ಶಂಕಿತ ಭಯೋತ್ಪಾದಕರನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಪಾಕಿಸ್ತಾನದ ಭಯೋತ್ಪಾದಕ ಘಟಕಗಳು ಎರಡು ಘಟಕಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ. ಒಂದು ಭೂಗತ ಮೂಲದಿಂದ ಮತ್ತೊಂದು ಪಾಕ್‌ನ ಐಎಸ್‌ಐನಿಂದ ತರಬೇತಿ ಪಡೆದ ಭಯೋತ್ಪಾದಕ ಘಟಕವಾಗಿದೆ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ.

'ಭಾರತದ ವಿರುದ್ದ ಪಾಕಿಸ್ತಾನವನ್ನು ಚೀನಾ ಬಳಸಬಹುದು''ಭಾರತದ ವಿರುದ್ದ ಪಾಕಿಸ್ತಾನವನ್ನು ಚೀನಾ ಬಳಸಬಹುದು'

 ಬಂಧಿತ ಭಯೋತ್ಪಾದಕರು ಯಾರ್‍ಯಾರು?

ಬಂಧಿತ ಭಯೋತ್ಪಾದಕರು ಯಾರ್‍ಯಾರು?

ಬಂಧಿತರನ್ನು ಜಾನ್‌ ಮೊಹಮ್ಮದ್‌ ಶೇಕ್ (47), ಅಲಿಯಾಸ್‌ ಸಮೀರ್‌ ಒಸಾಮಾ (22), ಮೂಲ್‌ಚಂದ್ (47), ಜೀಶನ್ ಕಮಾರ್ (28), ಮೊಹಮ್ಮದ್‌ ಅಬು ಬಕಾರ್‌ (23) ಹಾಗೂ ಮೊಹಮ್ಮದ್‌ ಅಮೀರ್‌ ಜಾವೇದ್‌ (31) ಎಂದು ಗುರುತಿಸಲಾಗಿದೆ. ಈ ಆರು ಮಂದಿ ಶಂಕಿತ ಭಯೋತ್ಪಾದಕರನ್ನು ಉತ್ತರ ಪ್ರದೇಶ ಹಾಗೂ ನವದೆಹಲಿಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. "ಇನ್ನು ಬಂಧಿತರ ಪೈಕಿ ಒಸಾಮಾ ಹಾಗೂ ಕಮಾರ್‌ ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು, ಪಾಕಿಸ್ತಾನದ ಅಂತರ ಸೇವೆಗಳ ಗುಪ್ತಚರ ಇಲಾಖೆಯ ಸೂಚನೆಯಂತೆ ಇವರಿಬ್ಬರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ನವದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಐಇಡಿ ಬಾಂಬ್‌ಗಳನ್ನು ಇಡಲು ಸರಿಯಾದ ಸ್ಥಳವನ್ನು ನೋಡಿ ಸೂಚಿಸುವ ಕಾರ್ಯವನ್ನು ಈ ಇಬ್ಬರು ಭಯೋತ್ಪಾದಕರಿಗೆ ನೀಡಲಾಗಿತ್ತು," ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿ

 ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು

ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು

ಇನ್ನು ಈ ಬಗ್ಗೆ ಮಾಧ್ಯಮವನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ವಿಶೇಷ ಪೊಲೀಸ್‌ ಆಯುಕ್ತರು ನೀರಜ್‌ ಕುಮಾರ್‌ ಠಾಕೂರ್‌, "ಎರಡು ರಾಜ್ಯಗಳಲ್ಲಿ ಕಾರ್ಯಾಚರಣೆಯನ್ನು ನಡೆಸಿ ನಾವು ಒಟ್ಟು ಆರು ಮಂದಿಯನ್ನು ಬಂಧನ ಮಾಡಿದ್ದೇವೆ. ಈ ಪೈಕಿ ಇಬ್ಬರು ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು ಆಗಿದ್ದಾರೆ. ಅಲಿಯಾಸ್‌ ಸಮೀರ್‌ ಒಸಾಮಾ ಹಾಗೂ ಜೀಶನ್‌ ಕಮಾರ್ ಈ ವರ್ಷದಲ್ಲಿ ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದಿದ್ದಾರೆ. ಆ ಬಳಿಕ ಭಾರತಕ್ಕೆ ಆಗಮಿಸಿದ್ದಾರೆ," ಎಂದು ಮಾಹಿತಿ ನೀಡಿದ್ದಾರೆ. "ಪಾಕ್‌ ಬೆಂಬಲಿತ ಹಾಗೂ ಪಾಕ್‌ ಪ್ರಾಯೋಜಿತ ಗುಂಪು ಭಾರತದಲ್ಲಿ ಸರಣಿ ಐಇಡಿ ಬಾಂಬ್‌ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ನಮಗೆ ಕೇಂದ್ರದ ಏಜೆನ್ಸಿಗಳಿಂದ ಮಾಹಿತಿ ಲಭಿಸಿದೆ," ಎಂದು ಕೂಡಾ ಪೊಲೀಸರು ಹೇಳಿದ್ದಾರೆ.

 ಯಾರ ಬಂಧನ, ಎಲ್ಲಿ ನಡೆದಿದೆ?

ಯಾರ ಬಂಧನ, ಎಲ್ಲಿ ನಡೆದಿದೆ?

"ಮಾನವ ಹಾಗೂ ತಾಂತ್ರಿಕ ಸಹಾಯದಿಂದ ನಮಗೆ ಈ ಭಯೋತ್ಪಾದಕರ ನೆಟ್‌ವರ್ಕ್ ದೇಶದ ಹಲವಾರು ರಾಜ್ಯಗಳಲ್ಲಿ ಇದೆ ಎಂದು ತಿಳಿದು ಬಂದಿದೆ. ನಾವು ಈ ಹಿನ್ನೆಲೆ ಮಂಗಳವಾರ ಒಂದೇ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿದೆವು. ಮೊದಲು ನಾವು ಆರೋಪಿ ಜಾನ್‌ ಮೊಹಮ್ಮದ್‌ ಶೇಕ್‌ನನ್ನು ಬಂಧನ ಮಾಡಿದೆವು. ದೆಹಲಿಗೆ ರೈಲಿನಲ್ಲಿ ಆತ ಬರುತ್ತಿದ್ದ ಸಂದರ್ಭದಲ್ಲಿ ನಾವು ರಾಜಸ್ತಾನದ ಕೋಟದಲ್ಲಿ ಆತನನ್ನು ಬಂಧನ ಮಾಡಿದ್ದೇವೆ. ಬಳಿಕ ದೆಹಲಿಯ ಓಕ್ಲಾದಿಂದ ಅಲಿಯಾಸ್‌ ಸಮೀರ್‌ ಒಸಾಮಾನನ್ನು ಬಂಧನ ಮಾಡಿದೆವು. ಬಳಿಕ ಮೊಹಮ್ಮದ್‌ ಅಬು ಬಕಾರ್‌ನನ್ನು ದೆಹಲಿಯ ಸಾರಾಯ್‌ ಖೇಲೆ ಖಾನ್‌ ಪ್ರದೇಶದಿಂದ ವಶಕ್ಕೆ ಪಡೆದೆವು. ಈ ನಡುವೆ ಜೀಶನ್ ಕಮಾರ್‌ನನ್ನು ಅಲಹಾಬಾದ್‌ನಲ್ಲಿ ಬಂಧನ ಮಾಡಲಾಗಿದೆ, ಮೊಹಮ್ಮದ್‌ ಅಮೀರ್‌ ಜಾವೇದ್‌ ಅನ್ನು ಉತ್ತರ ಪ್ರದೇಶ ಲಕ್ನೋದಲ್ಲಿ ಬಂಧಿಸಲಾಗಿದೆ ಹಾಗೂ ಮೂಲ್‌ಚಂದ್‌ ಅನ್ನು ರಾಯ್‌ ಬರೇಲಿಯಲ್ಲಿ ಬಂಧನ ಮಾಡಲಾಗಿದೆ. ಉತ್ತರ ಪ್ರದೇಶ ಭಯೋತ್ಪಾದಕರ ವಿರೋಧಿ ಪಡೆದ ಸಹಾಯದಿಂದ ಈ ಬಂಧನ ಕಾರ್ಯಾಚರಣೆ ನಡೆಸಲಾಗಿದೆ," ಎಂದು ಮೊಹಮ್ಮದ್‌ ಅಮೀರ್‌ ಜಾವೇದ್‌ ಮಾಹಿತಿ ನೀಡಿದ್ದಾರೆ.

 ಸ್ಪೋಟಕಗಳು ಪೊಲೀಸ್‌ ವಶಕ್ಕೆ

ಸ್ಪೋಟಕಗಳು ಪೊಲೀಸ್‌ ವಶಕ್ಕೆ

"ಈ ಪೈಕಿ ನಾಲ್ವರ ಬಂಧನದಿಂದಾಗಿ ಪಾಕಿಸ್ತಾನದ ಐಎಸ್‌ಐ ಬೆಂಬಲ ಇರುವುದು ಹಾಗೂ ಅದರಿಂದ ತರಬೇತಿ ಪಡೆದಿರುವುದು ತಿಳಿದು ಬಂದಿದೆ. ಭೂಗತ ಮೂಲಗಳ ಸಂಪರ್ಕವೂ ಇತ್ತು ಎಂದು ತಿಳಿದು ಬಂದಿದೆ. ಹಾಗೆಯೇ ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಹಲವು ರಾಜ್ಯಗಳಲ್ಲಿ ಬಾಂಬ್‌ ದಾಳಿ ನಡೆಸಲು ಈ ಭಯೋತ್ಪಾದಕರು ಸಂಚು ಮಾಡಿದ್ದಾರೆ," ಎಂದು ಉಪ ಪೊಲೀಸ್ ಆಯುಕ್ತ ಪ್ರಮೋದ್‌ ಸಿಂಗ್‌ ಕುಶ್ವಾ ತಿಳಿಸಿದ್ದಾರೆ. "ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿದ್ದ ಸ್ಪೋಟಕಗಳನ್ನು ನಾವು ವಶಕ್ಕೆ ಪಡೆದಿದ್ದೇವೆ. ಈ ಎಲ್ಲಾ ಬಂಧಿತರಿಗೂ ಭಯೋತ್ಪಾದಕ ದಾಳಿಗೆ ಬೇರೆ ಬೇರೆ ಜವಾಬ್ದಾರಿಯನ್ನು ಉಗ್ರ ಸಂಘಟನೆಗಳು ಹಂಚಿದ್ದವು," ಎಂದು ಕೂಡಾ ಹೇಳಿದ್ದಾರೆ.

 ದಾವೂದ್‌ ಸಹೋದರನ ಜೊತೆ ಸಮೀರ್‌ ನಂಟು

ದಾವೂದ್‌ ಸಹೋದರನ ಜೊತೆ ಸಮೀರ್‌ ನಂಟು

ಅಲಿಯಾಸ್‌ ಸಮೀರ್‌ ಒಸಾಮಾ ಭೂಗತ ಸಂಪರ್ಕ ಹೊಂದಿದ್ದು, ದಾವೂದ್‌ ಇಬ್ರಾಹಿಂನ ಸಹೋದರನಾದ ಪಾಕಿಸ್ತಾನ ಮೂಲದ ಅನೀಸ್‌ ಇಬ್ರಾಹಿಂ ಜೊತೆಗೆ ಆಪ್ತ ಸಂಬಂಧವನ್ನು ಹೊಂದಿದ್ದಾನೆ. ಐಇಡಿಯನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ಇರಿಸಲು ಅಲಿಯಾಸ್‌ ಸಮೀರ್‌ ಒಸಾಮಾಗೆ ಪಾಕಿಸ್ತಾನದಲ್ಲೇ ಕುಳಿತು ಅನೀಸ್‌ ಇಬ್ರಾಹಿಂ ಸೂಚನೆ ನೀಡುತ್ತಿದ್ದನು ಎಂದು ಹೇಳಲಾಗಿದೆ. "ಪಾಕಿಸ್ತಾನದ ಐಎಸ್‌ಐ ಆದೇಶದಂತೆ ಅನೀಸ್‌ ಕಾರ್ಯ ನಿರ್ವಹಣೆ ಮಾಡುತ್ತಿದ್ದ. ಭೂಗತ ಘಟಕಕ್ಕೆ ಹವಾಲಾ ಮೂಲಕ ಶಸ್ತ್ರಾಸ್ತ್ರ, ಸ್ಫೋಟಕಗಳು ಕಳುಹಿಸುತ್ತಿದ್ದ, ಭಯೋತ್ಪಾದನ ಕಾರ್ಯಕ್ಕೆ ಬೇಕಾಗುವ ಧನ ಸಹಾಯವನ್ನು ಮಾಡುತ್ತಿದ್ದ," ಎಂದು ಪೊಲೀಸರು ತಿಳಿಸಿದರು.

 ಭಯೋತ್ಪಾದಕರಿಗೆ ಯಾರಿಂದ ತರಬೇತಿ?

ಭಯೋತ್ಪಾದಕರಿಗೆ ಯಾರಿಂದ ತರಬೇತಿ?

"ಒಸಾಮಾ ಎಪ್ರಿಲ್‌ 22 ರಂದು ಲಕ್ನೋದಿಂದ ವಿಮಾನದ ಮೂಲಕ ಮಸ್ಕತ್‌ಗೆ ಹೋಗಿದ್ದಾರೆ. ಬಳಿಕ ಅಲ್ಲಿ ಜೀಶನ್‌ ಕಮಾರ್‌ನನ್ನು ಭೇಟಿಯಾಗಿದ್ದಾನೆ. ಜೀಶನ್‌ ಕಮಾರ್‌ ಕೂಡಾ ಭಾರತಕ್ಕೆ ತರಬೇತಿಗಾಗಿ ಬಂದಿದ್ದನು. ಮಸ್ಕತ್‌ನಿಂದ ಈ ಇಬ್ಬರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಪಾಕಿಸ್ತಾನದ ತಾಟ್ಟದಲ್ಲಿ ಫಾರ್ಮ್ ಹೌಸ್‌ನಲ್ಲಿ ಇವರಿಬ್ಬರು ನೆಲೆಸಿದ್ದರು. ಮೂವರು ಪಾಕಿಸ್ತಾನಿಗಳ ಜೊತೆ ಅವರು ಆ ಫಾರ್ಮ್ ಹೌಸ್‌ನಲ್ಲಿ ನೆಲೆಸಿದ್ದರು. ಆ ಪೈಕಿ ಇಬ್ಬರು ಜಬ್ಬರ್‌ ಹಾಗೂ ಹಂಝ. ಈ ಇಬ್ಬರು ಪಾಕಿಸ್ತಾನಿಗಳು ಜೀಶನ್‌ ಹಾಗೂ ಒಸಾಮಾಗೆ ತರಬೇತಿ ನೀಡಿದ್ದಾರೆ. ಹಾಗೆಯೇ ತಮ್ಮನ್ನು ತಾವು ಪಾಕಿಸ್ತಾನದ ಮಿಲಿಟರಿ ಪಡೆಯವರು ಎಂದು ಹೇಳಿದ್ದಾರೆ. ಮಿಲಿಟರಿ ಯೂನಿಫಾರ್ಮ್ ಅನ್ನು ಕೂಡಾ ಅವರು ಧರಿಸಿದ್ದರು ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ," ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

"ಇಬ್ಬರಿಗೂ 15 ದಿನಗಳ ಕಾಲ ಬಾಂಬ್‌ ತಯಾರಿ ಮಾಡುವುದು ಹೇಗೆ ಎಂದು ತರಬೇತಿ ನೀಡಲಾಗಿದೆ. ಹಾಗೆಯೇ ಐಇಡಿ ತಯಾರಿ ತರಬೇತಿಯನ್ನು ಕೂಡಾ ನೀಡಲಾಗಿದೆ. ಬಂದೂಕುಗಳನ್ನು ಯಾವ ರೀತಿಯಲ್ಲಿ ಬಳಸಬೇಕು ಎಂದು ಕೂಡಾ ಇಬ್ಬರಿಗೆ ತರಬೇತಿ ನೀಡಲಾಗಿದೆ. ಇನ್ನು ಈ ಇಬ್ಬರು ಮಸ್ಕತ್‌ಗೆ ತಲುಪಿದ ಬಳಿಕ ಬಾಂಗ್ಲಾದೇಶದ ಸುಮಾರು 15-16 ಬೆಂಗಾಳಿ ಮಾತನಾಡುವ ಜನರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ. ಇವರೆಲ್ಲರೂ ಬಳಿಕ ಗುಂಪುಗಳಲ್ಲಿ ವಿಂಗಡನೆಯಾಗಿದ್ದಾರೆ. ಆದರೆ ಒಸಾಮಾ ಹಾಗೂ ಕಮಾರ್‍ ಒಂದೇ ಗುಂಪಿನಲ್ಲಿ ಉಳಿದಿದ್ದಾರೆ," ಎನ್ನಲಾಗಿದೆ. ಇನ್ನು ಶೇಕ್‌ ಹಾಗೂ ಮೂಲ್‌ಚಂದ್‌ಗೆ ದೆಹಲಿಯಲ್ಲಿ, ಮುಂಬನಲ್ಲಿ ಹಾಗೂ ಬೇರೆ ಪ್ರದೇಶದಲ್ಲಿ ಸ್ಪೋಟಕ, ಬಂದೂಕುಗಳನ್ನು ನೀಡಲು ಜವಾಬ್ದಾರಿಯನ್ನು ನೀಡಲಾಗಿತ್ತು ಎಂದು ಹೇಳಲಾಗಿದೆ. ಈ ಭಯೋತ್ಪಾದಕರು ಹಬ್ಬದ ಸಂದರ್ಭದಲ್ಲಿ ಅಧಿಕ ಜನರು ಸೇರುವ ದೊಡ್ಡ ಮೈದಾನಗಳಲ್ಲಿ ಐಇಡಿಗಳನ್ನು ಇರಿಸುವ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ.

(ಒನ್‌ ಇಂಡಿಯಾ ಸುದ್ದಿ)

English summary
In a massive operation, the Delhi Police's Special Cell on Tuesday arrested six of Pak ISI-backed terrors, averted attacks during festivals.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X