ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚೆ : ಲಿಂಗಾಯತರ ಮತ ಯಾವ ಪಕ್ಷಕ್ಕೆ ಬೀಳಲಿವೆ?

By Prasad
|
Google Oneindia Kannada News

ಲಿಂಗಾಯತ ಪಂಗಡಕ್ಕೆ ಪ್ರತ್ಯೇಕ ಧರ್ಮದ ಅಸ್ವಿತ್ವ ನೀಡಬೇಕೆಂದು ರಾಜ್ಯ ಸರಕಾರ ಶಿಫಾರಸು ಮಾಡಿದಂದಿನಿಂದ ಕರ್ನಾಟಕದ ಚುನಾವಣಾ ಕಣದಲ್ಲಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಅದನ್ನು ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು.

ಅದೇನೆಂದರೆ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಬೇಕೆಂದ ಮಾತ್ರಕ್ಕೆ ಲಿಂಗಾಯತರು ಕಾಂಗ್ರೆಸ್ಸಿಗೆ ಮತ ಹಾಕಬೇಕಾ ಅಥವಾ ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿರುವ ಬಿಜೆಪಿಗೆ ಹಾಕಬೇಕಾ ಅಥವಾ ಪಕ್ಷನಿಷ್ಠೆಗಿಂತ ವ್ಯಕ್ತಿನಿಷ್ಠೆಯನ್ನು ನೋಡಿ ಮತ ಹಾಕಬೇಕಾ ಎನ್ನುವುದು.

ಡಿಬೇಟ್ : ಲಿಂಗಾಯತ ಧರ್ಮದ ವಿಚಾರದಲ್ಲಿ ಲಾಭ ಯಾರಿಗೆ?ಡಿಬೇಟ್ : ಲಿಂಗಾಯತ ಧರ್ಮದ ವಿಚಾರದಲ್ಲಿ ಲಾಭ ಯಾರಿಗೆ?

ಮತ ಹಾಕುವುದು ಅತ್ಲಾಗಿರಲಿ, ತಮಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗಬೇಕಾ, ಅಲ್ಪಸಂಖ್ಯಾತರಾಗಿ ಮೀಸಲಾತಿಯ ಹಂಗಿಗೆ ಬೀಳಬೇಕಾ, ರಾಜಕಾರಣಿಗಳ ಹುಚ್ಚಾಟಕ್ಕೆ ನಾವು ಬಲಿಯಾಗಬೇಕಾ, ವೀರಶೈವರನ್ನು ಹೊರಗಿಡಬೇಕಾ ಎಂಬಿತ್ಯಾದಿ ಗೊಂದಲಗಳು ಲಿಂಗಾಯತರಲ್ಲಿಯೂ ಸಾಕಷ್ಟಿವೆ.

Who should Lingayats vote in assembly election

ಲಿಂಗಾಯತರಿಗೆ ಪ್ರತ್ಯೇಕ ಅಸ್ವಿತ್ವ ದೊರಕಿಸಿಕೊಟ್ಟಿದ್ದೇವೆ, ಹೇಗಿದ್ದರೂ ಲಿಂಗಾಯತ ಮತಗಳು ತಮಗೇ ಬೀಳುತ್ತವೆ ಎಂಬ ಅಹಮ್ಮಿಕೆಯಲ್ಲಿ ಕಾಂಗ್ರೆಸ್ಸಿನ ಹಲವಾರು ನಾಯಕರು ಈಗಾಗಲೆ ಮನದಲ್ಲಿಯೇ ಮಂಡಿಗೆ ತಿನ್ನುತ್ತಿದ್ದಾರೆ. ಅವರಲ್ಲಿ ಕೆಲವರು ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಕುಳಿತಂತೆಯೂ ಕನಸು ಕಾಣಲು ಆರಂಭಿಸಿದ್ದಾರೆ. ಅವರು ಯಾರೆಂದು ಇಲ್ಲಿ ಹೆಸರಿಸುವುದು ಬೇಡ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವಂಥ ಮನುಷ್ಯ ಅಮಿತ್ ಶಾ ಅಲ್ಲವೇ ಅಲ್ಲ. ಉತ್ತರ ಕರ್ನಾಟಕದ ಲಿಂಗಾಯತ ಮತಗಳನ್ನು ಉಳಿಸಿಕೊಳ್ಳುವುದು ಹೇಗೆ, ಹಿಂದೆ ತಾವು ನೆಚ್ಚಿಕೊಂಡಿದ್ದ ಲಿಂಗಾಯತ ಮತಗಳು ಯಡಿಯೂರಪ್ಪನವರ ಮಡಿಲಿಗೆ ಹಾಕುವುದು ಹೇಗೆ ಎಂದು ತಲೆಕೆಡಿಸಿಕೊಂಡು ಕುಳಿತಿರುತ್ತಾರೆ, ಸಮಸ್ಯೆಗೆ ಪರಿಹಾರವನ್ನೂ ಹುಡುಕಿರುತ್ತಾರೆ.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ, ಸಿಗುವುದು ಅನುಮಾನ!ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ, ಸಿಗುವುದು ಅನುಮಾನ!

ಅಂದ ಹಾಗೆ, ಸೋಮವಾರ ಮತ್ತು ಮಂಗಳವಾರ, ಮಾರ್ಚ್ 26 ಮತ್ತು 27ರಂದು ಅವರು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿರುವ ಲಿಂಗಾಯತ ಮಠಗಳಿಗೆ ಭೇಟಿ ನೀಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಯಾರ ಕೈ ಮೇಲಾಗಲಿದೆ? ಸಿದ್ದರಾಮಯ್ಯನವರದಾ, ಅಮಿತ್ ಶಾ ಅವರದಾ?

English summary
Karnataka election debates : Who should Lingayats vote in assembly elections 2018? Will they vote to Congress for giving them separate religion status? Or BJP who they have believed for so many years? What is the strategy of Amit Shah to attract lingayat votes?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X