• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಣ್ಣಿನ ಬಟ್ಟೆಗಿಂತ ಗಂಡಿನ ಸಹಿಷ್ಣುತೆ ಕಿರಿದಾಯಿತೇ?

|

ಉಡುಪು ಧರಿಸುವುದು ಪ್ರತಿಯೊಬ್ಬರ ಅಭಿರುಚಿಗೆ ಬಿಟ್ಟಿದ್ದು, ಸಮಾಜ ಬೇಕಿದ್ದರೆ ಕಣ್ಣು ಮುಚ್ಚಿಕೊಳ್ಳಲಿ ಎನ್ನುವ ಮನೋಭಾವ ಬೆಳೆಸಿಕೊಂಡ ಯುವಕ, ಯುವತಿಯರೇ ಈ ಸಮಾಜದಲ್ಲಿ ಸಿಗುವುದು.

ಡಿಬೇಟ್ : ವರುಣಾದಿಂದ ಬಿಜೆಪಿ ಅಭ್ಯರ್ಥಿ ಯಾರಾಗಬೇಕು?

ಆದರೂ ಅವರ ಮಧ್ಯೆಯೇ ಭಿನ್ನವಾದ ಮನಸ್ಸುಗಳನ್ನು ಇಂದು ನಾವು ಕಾಣುತ್ತಿದ್ದೇವೆ. ಸಮಾಜದಲ್ಲಿ ಮಹಿಳೆಯರ ಮೇಲಾಗುವ ಕೃತ್ಯಗಳಿಗೆಲ್ಲ ಅವರು ಧರಿಸುವ ಉಡುಪೇ ಕಾರಣ ಎನ್ನುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಮೈತುಂಬ ಬಟ್ಟೆತೊಟ್ಟವರ ಮೇಲೂ ಅತ್ಯಾಚಾರ, ದೌರ್ಜನ್ಯಗಳು ನಡೆದಿದೆ.

ಚುನಾವಣಾ ಆಯೋಗಕ್ಕೆ ಬೇಡ, ಜನರಿಗೂ ಬೇಡ, ರಾಜಕಾರಣಿಗಳಿಗೆ ಮಾತ್ರ ಬೇಕು!

ಹಾಗೆಂದು ಮಾತ್ರಕ್ಕೆ ಬಟ್ಟೆಯದ್ದೇನು ತಪ್ಪೇ ಇಲ್ಲ ಎಂದೆನ್ನಲು ಸಾಧ್ಯವಿಲ್ಲ, ಎಲ್ಲೆಲ್ಲಿ ಯಾವ ರೀತಿ ಉಡುಪನ್ನು ಧರಿಸಬೇಕು ಎನ್ನುವುದರ ಜ್ಞಾನವೂ ಹೆಣ್ಣುಮಕ್ಕಳಿಗಿರಬೇಕು. ಪುರುಷರು ತಾವು ಮಾಡಿದ ತಪ್ಪಿನಿಂದ ನುಣುಚಿಕೊಳ್ಳಲು ಕೊಡುವ ಕಾರಣಗಳಲ್ಲಿ ಇದೂ ಒಂದು.

ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ತೊಡುವ ಉಡುಪಿನ ಬಗ್ಗೆ ಕೀಳಾಗಿ ನೋಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗಿದೆ. ಇದೆಲ್ಲಾ ಗಮನಿಸಿದರೆ ಹೆಣ್ಣಿನ ಬಟ್ಟೆಗಿಂತ ಗಂಡಸಿನ ಸಹನೆ ಕಿರಿದಾಯಿತೇ ಎನ್ನುವ ಸಂಶಯ ಕಾಡುತ್ತದೆ.

ಶತಮಾನಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ಮಾನಸಿಕರಿಗೆ ಈಗಲೂ ಸಾಕ್ಷಿಯಾಗಿದೆ. ಕೆಟ್ಟ ಮನಸ್ಸುಗಳು ಮುಂದುವರೆದುಕೊಂಡು ಬಂದಿವೆ. ಪಾರಂಪರಿಕ ಉಡುಪುಗಳು, ಧರಿಸುವ ಸಂದರ್ಭದಲ್ಲೂ ಪೌರಾಣಿಕ ಕಾಲದಲ್ಲೂ ಇಂತಹ ಘಟನೆಗಳ ಉದಾಹರಣೆಗಳು ಸಿಗುತ್ತವೆ.

ಮಹಾಭಾರತದಲ್ಲಿ ದ್ರೌಪದಿ ವಸ್ತ್ರಾಪಹರಣವಾಗಿದ್ದು, ರಾಮಾಯಣ ಕಾಲದಲ್ಲಿ ಸೀತೆಯನ್ನು ಅಪಹರಿಸಿಕೊಂಡು ಹೋಗಿದ್ದು ಹೀಗೆ, ಅದು ಉಡುಪು ಧರಿಸುವ ಶೈಲಿಗಿಂತಲೂ ಮಹಿಳೆಯರ ಉಡುಪಿನ ಮೇಲೆ ಪುರುಷರಿಗಿರುವ ಪೂರ್ವಾಗ್ರಹವನ್ನು ವ್ಯಕ್ತಪಡಿಸುತ್ತದೆ.

'ನಾನು ಮುಖ್ಯಮಂತ್ರಿಯಾದರೆ....' ಒನ್ ಇಂಡಿಯಾ ಓದುಗರ ಪ್ರತಿಕ್ರಿಯೆ

ಡಿಜಿಟಲ್ ಯುಗದಲ್ಲೂ ಕೂಡ ಮಹಿಳೆಯರ ವಸ್ತ್ರ ಉಡುಪಿನ ಬಗೆಗೆ ಹೆಚ್ಚು ಟೀಕಾತ್ಮಕವಾಗಿ ಪುರುಷರು ಮಾತನಾಡುತ್ತಾರೆ. ಸಮಾಜದಲ್ಲಿರುವ ಅಧಿಕಾರಸ್ಥರೇ, ರಾಜಕಾರಣಿಗಳಾಗಿರಬಹುದು, ಅಧಿಕಾರಿಗಳಾಗಿರಬಹುದು, ಇನ್ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಕೂಡ ಉಡುಪಿನ ಬಗ್ಗೆ ವಿವಿಧ ರೀತಿಯ ಟೀಕೆಗಳನ್ನು ಮಾಡಿರುವುದನ್ನು ನಾವು ನೋಡಬಹುದು.

ಹಳ್ಳಿ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯರು ತೊಡುವ ಬಟ್ಟೆಗಳೇ ಬೇರೆ, ನಗರಕ್ಕೆ ಬಂದರೆ ಅಲ್ಲಿಯವರು ತೊಡುವ ಬಟ್ಟೆಗಳೇ ಬೇರೆ, ಆದರೆ ತೊಡುವಾಗ ನಾವು ಎಲ್ಲಿದ್ದೇವೆ, ಎಂತಹವರ ಜೊತೆಯಲ್ಲಿ ವಾಸ ಮಾಡುತ್ತಿದ್ದೇವೆ ಎನ್ನುವುದನ್ನು ಮಹಿಳೆಯರು ಒಮ್ಮೆ ಆಲೋಚಿಸಬೇಕಿದೆ.

ಮಹಿಳೆಯರು ಧರಿಸುವ ಉಡುಪು ಹಾಗೂ ವರ್ತನೆ ಬಗೆಗೆ ಪುರುಷನ ಮೇಲೆ ನಿಯಂತ್ರಣ ಹೇರಲು ಅನೇಕ ಕಾನೂನು ಕಟ್ಟಳೆಗಳಿದ್ದರೂ ಕೂಡ ಅವುಗಳನ್ನುನ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಾರದಿರುವ ಕಾರಣ ಪುರುಷರು ಇದನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ.

ಇದಕ್ಕೆ ಇಂದೋರ್ ನಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ, ಯುವತಿಯೊಬ್ಬಳ ಸ್ಕರ್ಟ್ ಎಳೆದು ದೌರ್ಜನ್ಯ ಎಸಗಿದ್ದಾನೆ. ಆಕೆಯ ಸಹಾಯಕ್ಕ ಬಂದ ಮಹಿಳೆಯೊಬ್ಬಳು ನೀನು ಈ ರೀತಿ ಬಟ್ಟೆ ತೊಟ್ಟಿದ್ದರಿಂದಲೇ ಇಂತಹ ಘಟನೆಗಳು ನಡೆಯುತ್ತದೆ ಎಂದು ಹೇಳಿ ಆಕೆಯ ಮನಸ್ಸಿಗೆ ಇನ್ನಷ್ಟು ನೋವುಂಟಾಗಿದೆ.

ಇಂಥಹ ಘಟನೆಗಳು ನಡೆದಾಗ ಅಂತಹ ನೀಚ ಅಭಿರುಚಿಯ ವ್ಯಕ್ತಿಗಳು ಕಾನೂನು ಲೋಪದಿಂದಾಗಿ ಬಚಾವ್ ಆಗುತ್ತಾರೆ, ಇದು ಸಾಮಾಜಿಕ ಪರಿವರ್ತನೆಯ ಭಾಗವಾಗಿದ್ದು, ಈ ಪುರುಷ ಪ್ರಧಾನ ವ್ಯವಸ್ಥೆಯು ಕ್ರಮೇಣ ಸಮಾನತೆಯತ್ತ ಸಾಗುತ್ತಿರುವಾಗ ಇಂತಹ ಘಟನೆ ನಡೆಯುತ್ತಿರುವುದು ನಾಗರಿಕತೆಯಲ್ಲಿರುವ ಲೋಪವನ್ನು ಎತ್ತಿ ತೋರಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India may be most forward country in the world in various fields like exporting IT professionals to the world and etc. But, here till today women are striving to wear clothes which they wanted to wear and men dominant society had still adamant on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more