ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?

|
Google Oneindia Kannada News

ಆಧುನಿಕ ಯುಗದಲ್ಲಿ ಜನರ ನಡುವಣ ಸಂಪರ್ಕದ ಸುಲಭ ಕೊಂಡಿಯಾಗಿರುವ ವಾಟ್ಸಾಪ್, ಸದುಪಯೋಗಕ್ಕಿಂತಲೂ ಅದರ ದುರ್ಬಳಕೆಯೇ ಹೆಚ್ಚುತ್ತಿದೆ.

ಹರಟಲು, ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಆರೋಗ್ಯಕರ ಚರ್ಚೆ ನಡೆಸಲು, ಮಾಹಿತಿ ವಿನಿಮಯ ಮಾಡಲು, ಸಂಬಂಧಗಳನ್ನು ಬೆಸೆಯಲು ವಾಟ್ಸಾಪ್ ನೆರವಾದದ್ದಿದೆ. ಆದರೆ, ಅದರಿಂದ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಹಾನಿಯೇ ಹೆಚ್ಚು.

ವಾಟ್ಸಾಪ್‌ನಿಂದ ಸುದೀರ್ಘಕಾಲದ ಬಾಂಧವ್ಯಗಳು ಹದಗೆಟ್ಟಿದ್ದಿದೆ, ಕೌಟುಂಬಿಕ ಕಲಹಗಳು ನಡೆದ ಉದಾಹರಣೆಗಳಿವೆ. ವಾಟ್ಸಾಪ್ ಸಂದೇಶಗಳಿಂದ ಅನುಮಾನಗೊಂಡು ಎಷ್ಟೋ ದಂಪತಿಗಳು ದೂರವಾಗಿದ್ದಾರೆ.

ವದಂತಿಯ ಹರಿವಿಗೆ ಕಡಿವಾಣ: ವಾಟ್ಸಾಪ್‌ಗೆ ಕೇಂದ್ರ ಸರ್ಕಾರ ಸೂಚನೆವದಂತಿಯ ಹರಿವಿಗೆ ಕಡಿವಾಣ: ವಾಟ್ಸಾಪ್‌ಗೆ ಕೇಂದ್ರ ಸರ್ಕಾರ ಸೂಚನೆ

ಮಾತ್ರವಲ್ಲ, ಒಂದೇ ಮನೆಯಲ್ಲಿ ಅಕ್ಕಪಕ್ಕ ಕುಳಿತವರೂ ವಾಟ್ಸಾಪ್‌ನಲ್ಲಿಯೇ ಮಾತನಾಡುವ ಸ್ಥಿತಿ ಬಂದಿದೆ. ವಿದ್ಯಾರ್ಥಿಗಳು ಪುಸ್ತಕಗಳಿಗಿಂತ ವಾಟ್ಸಾಪ್‌ನಲ್ಲಿಯೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ.

should whatsapp be banned in india?

ಸಣ್ಣಪುಟ್ಟ ಕಲಹಗಳಾಗಿದ್ದರೆ ಅದರ ಹೊಣೆಗಾರಿಕೆಯನ್ನು ವಾಟ್ಸಾಪ್ ಮೇಲೆ ಹೊರಿಸದೆ ಇರಬಹುದಾಗಿತ್ತು. ಆದರೆ, ಈ ಸಾಮಾಜಿಕ ಮಾಧ್ಯಮದಿಂದಾಗುವ ಅನಾಹುತಗಳು ಒಂದೆರಡಲ್ಲ. ಸಾಮಾಜಿಕ ಕಲಹಗಳು, ಕೋಮು ಗಲಭೆ, ಆತಂಕ ಸೃಷ್ಟಿಸುವ ಅನೇಕ ಸುಳ್ಳು ಸಂದೇಶಗಳು ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ.

ಎಷ್ಟೋ ಅವಮಾನ, ಆತ್ಮಹತ್ಯೆ, ಕೊಲೆಗಳಂತಹ ಘಟನೆಗಳಿಗೆ ವಾಟ್ಸಾಪ್ ಸಂದೇಶಗಳು ಕಾರಣವಾಗುತ್ತಿವೆ. ತಮ್ಮ ವೈಯಕ್ತಿಕ ಅಥವಾ ಗ್ರೂಪ್‌ಗೆ ಬರುವ ಸಂದೇಶಗಳನ್ನು ಓದುವ ಅನೇಕರು ಅದರ ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಗೋಜಿಗೆ ಹೋಗದೆ ಇತರರಿಗೂ ಕಳುಹಿಸುತ್ತಾರೆ.

ಮೊನ್ನೆ ಸಾಮಾಜಿಕ ಮಾಧ್ಯಮ ದಿನ! ಇಂದು Whatsapp ಗೆ ಬೇಲಿ! ಮೊನ್ನೆ ಸಾಮಾಜಿಕ ಮಾಧ್ಯಮ ದಿನ! ಇಂದು Whatsapp ಗೆ ಬೇಲಿ!

ಈ ಸಂದೇಶಗಳು ವಾಟ್ಸಾಪ್‌ಗೆ ಮೀಸಲಾಗಿರದೆ ಬಾಯಿಯಿಂದ ಬಾಯಿಗೆ ಹರಡುವ ಮೂಲಕ ಜನರು ಕಾನೂನನ್ನು ಲೆಕ್ಕಿಸದೆ ಅಪರಾಧ ಕೃತ್ಯಗಳಿಗೆ ಮುಂದಾಗುವಂತೆ ಪ್ರಚೋದನೆ ನೀಡುತ್ತಿವೆ.

ಮುಂಬೈನಲ್ಲಿ ಇತ್ತೀಚೆಗೆ ಮಕ್ಕಳ ಕಳ್ಳರೆಂದು ಐವರನ್ನು ಹೊಡೆದು ಸಾಯಿಸಿದ ಅಮಾನುಷ ಘಟನೆ ಇನ್ನೂ ಹಸಿಯಾಗಿದೆ.

ವಾಟ್ಸಾಪ್ ಒಂದು ಗೀಳಾಗಿಯೂ ಬದಲಾಗಿದೆ. ಹೆಚ್ಚಿನ ಸಮಯವನ್ನು ವಾಟ್ಸಾಪ್‌ನಲ್ಲಿಯೇ ಕಳೆಯುವುದರಿಂದ ಅದನ್ನು ಬಿಟ್ಟಿರಲಾರದ ಮಾನಸಿಕ ಸಮಸ್ಯೆಯೂ ಕಾಡುತ್ತಿದೆ. ಹಿತಮಿತವಾಗಿ ಮತ್ತು ಉಪಯೋಗಕಾರಿಯಾಗಬೇಕಿದ್ದ ವಾಟ್ಸಾಪ್ ಬಳಕೆ, ಈಗ ಅತಿಯಾಗಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಸುಳ್ಳು ಸುದ್ದಿಯನ್ನು ಹರಡುವ ಸಾಧನವಾಗಿರುವ ವಾಟ್ಸಾಪ್ ಸಂದೇಶಗಳ ಮೇಲೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ ಕೆಲವೆಡೆ ವ್ಯಕ್ತವಾಗುತ್ತಿದೆ. ಅದನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಕೂಗೂ ಕೇಳಿಸುತ್ತಿದೆ.

ತಂತ್ರಜ್ಞಾನ ಮುಂದುವರಿದಿರುವ ಈ ಕಾಲಘಟ್ಟದಲ್ಲಿ ಅಂತರ್ಜಾಲ ಆಧಾರಿತ ವಾಟ್ಸಾಪ್‌ನಂತಹ ಸಾಮಾಜಿಕ ಸಂಪರ್ಕ ಆಪ್‌ಗಳು ಸಾಕಷ್ಟಿವೆ. ವಾಟ್ಸಾಪ್ ನಿಷೇಧವಾದರೆ ಉಳಿದ ಆಪ್‌ಗಳು ಹೆಚ್ಚು ಸಕ್ರಿಯವಾಗುತ್ತವೆ. ಅವುಗಳೆಲ್ಲದರ ಮೇಲೆಯೂ ನಿಷೇಧ ಹೇರುವುದು ಕೂಡ ಕಷ್ಟ.

ಭಾರತದಲ್ಲಿ ತಿಂಗಳಿಗೆ 200 ಮಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ಅವರೆಲ್ಲರ ಸಂದೇಶಗಳ ಮೇಲೆ ನಿಯಂತ್ರಣ ಹೇರುವುದು ಸುಲಭವಲ್ಲ.

ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ವಾಟ್ಸಾಪ್‌ಅನ್ನು ನಿಷೇಧಿಸಬೇಕೇ, ಅದರ ಸಂದೇಶಗಳ ಮೇಲೆ ನಿಯಂತ್ರಣ ಹೇರುವ ಕ್ರಮ ತೆಗೆದುಕೊಂಡರೆ ಸಾಕೇ ಅಥವಾ ಸುಳ್ಳು ಸುದ್ದಿ ಹರಡುವಿಕೆ ತಡೆಗೆ ಏನು ಮಾಡಬಹುದು ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

English summary
Whatsapp which has to be used for communication between people, is become a platform of fake news. People are spreading news without thinking it real or fake. Should Whatsapp be banned in India or not?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X