ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚೆ: ಅಂದು ಸಹಿ ಹಾಕಿದ್ದಕ್ಕೆ, ಇಂದು ಯಡಿಯೂರಪ್ಪ ಮೌನವೇ?

By Mahesh
|
Google Oneindia Kannada News

ವೀರಶೈವ-ಲಿಂಗಾಯತ, ಪ್ರತ್ಯೇಕ ಧರ್ಮ ಇದು ಹೊಸ ವಿಷಯವೇನಲ್ಲ. ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆದು, ಒಂದು ಹಂತಕ್ಕೆ ಇತ್ಯರ್ಥವಾಗಿತ್ತು.

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೇಡಿಕೆ ಇಟ್ಟಿದ್ದ ಮಠಾಧೀಶರ ಪತ್ರಕ್ಕೆ ಯಡಿಯೂರಪ್ಪ ಅವರು ಸಹಿ ಹಾಕಿದ್ದರು. ಹಾಗಾಗಿ, ಈಗ ಏನು ಮಾತನಾಡುತ್ತಿಲ್ಲ ಎಂಬ ವಾದ ಕೇಳಿ ಬಂದಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಇಲ್ಲಿ ದಾಖಲಿಸಬಹುದು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ವಿ ಶ್ರೀನಿವಾಸ್ ಅವರು ಟ್ವೀಟ್ ಮಾಡಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಸುತ್ತೋಲೆಗೆ ಅಂದೇ ಸಹಿ ಹಾಕಿದ್ದರು ಎಂದು ದಾಖಲೆಗಳನ್ನು ಹಾಕಿದ್ದಾರೆ.

ಡಿಬೇಟ್ : ಲಿಂಗಾಯತ ಧರ್ಮದ ವಿಚಾರದಲ್ಲಿ ಲಾಭ ಯಾರಿಗೆ?ಡಿಬೇಟ್ : ಲಿಂಗಾಯತ ಧರ್ಮದ ವಿಚಾರದಲ್ಲಿ ಲಾಭ ಯಾರಿಗೆ?

ಅಖಿಲ ಭಾರತ ವೀರಶೈವ ಮಹಾಸಭಾದ ಬೇಡಿಕೆಗೆ ತಕ್ಕಂತೆ ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

Separate religion status for Lingayats: Why Yeddyurappas stony silence speaks a lot?

ಈ ಶಿಫಾರಸು ಪತ್ರಕ್ಕೆ ಅಂದಿನ 57 ಶಾಸಕರು ಹಾಗೂ ಸಂಸದರು ಸಹಿ ಹಾಕಿದ್ದರು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಅನೇಕ ಶಾಸಕರು ತಮ್ಮ ಒಪ್ಪಿಗೆ ಸೂಚಿಸಿದ್ದರು. ನಂತರ ಇದನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಳಿಸಲಾಗಿತ್ತು.

ಚರ್ಚೆ: ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?ಚರ್ಚೆ: ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?

ಬಿಜೆಪಿಯಿಯಿಂದ ಬಸವರಾಜ ಬೊಮ್ಮಾಯಿ, ಪ್ರಭಾಕರ್ ಕೋರೆ, ಉಮೇಶ್ ಕತ್ತಿ, ಲಕ್ಷ್ಮಣ್ ಸವರಿ, ಅರವಿಂದ್ ಬೆಲ್ಲದ್, ಜೆಡಿಎಸ್ ನಿಂದ ಬಸವರಾಜ ಹೊರಟ್ಟಿ, ಎಸ್ಎಸ್ ಶಿವಶಂಕರ್ ಹಾಗೂ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಅನೇಕರು ತಮ್ಮ ಒಪ್ಪಿಗೆ ಸೂಚಿಸಿದ್ದರು.

ಈ ಬಗ್ಗೆ ಚರ್ಚೆ ಇನ್ನೂ ಮುಂದುವರೆದಿದೆ. ಹಿಂದೂಗಳನ್ನು ಒಡೆದಿದ್ದು ಕಾಂಗ್ರೆಸ್ ಅಲ್ಲ, ಬಿಜೆಪಿ ಎಂದು ಹೇಳಲಾಗುತ್ತಿದೆ. ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಕೂಡಾ ಮತ ಬ್ಯಾಂಕ್ ರಾಜಕೀಯ ಮೂಲಕ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.


ಒಟ್ಟಾರೆಯಾಗಿ, ಹಿಂದೂಗಳನ್ನು ಒಡೆದಿದ್ದು ಯಾರು? ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಯಡಿಯೂರಪ್ಪ ಮೌನ ಸರಿಯೇ? ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಎಷ್ಟು ಸರಿ? ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಇಮೇಲ್ ಕಳಿಸಿ[[email protected]] ಅಥವಾ ಕಾಮೆಂಟ್ ಬಾಕ್ಸಿನಲ್ಲಿ ನಿಮ್ಮ ಪ್ರತಿಕ್ರಿಯೆ ನೀಡಿ

English summary
A memorandum signed by former CM BS Yeddyurappa has surfaced on social media. Srinivas BV, National General Secretary Indian Youth Congress, tweeted a memorandum submitted by All India Veerashaiva Mahasabha in which Yeddyurappa signed for his support for recognition of Veerashaiva Lingayat community as an 'Independent Religion'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X