ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ದೇಶ, ಒಂದು ಚುನಾವಣೆ: ಮಾರಕವೇ? ಪೂರಕವೇ?

|
Google Oneindia Kannada News

Recommended Video

ಒಂದು ದೇಶ ಒಂದು ಚುನಾವಣೆ : ಇದು ದೇಶಕ್ಕೆ ಮಾರಕವೋ ಪೂರಕವೋ? | Oneindia Kannada

'ಒಂದು ದೇಶ, ಒಂದು ಚುನಾವಣೆ' ಬಗ್ಗೆ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಒಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಅದಾದ ನಂತರ ಈ ವಿಷಯ ಸಾಕಷ್ಟು ಬಾರಿ ಚರ್ಚೆಗೂ ಬಂತು.

ಒಂದು ದೇಶ, ಒಂದು ಚುನಾವಣೆ ಭಾರತದಂಥ ದೇಶಗಳಿಗೆ ಹೇಳಿಮಾಡಿಸಿದ್ದಲ್ಲ ಎಂದು ಕೆಲವರು ಮೂಗು ಮುರಿದರು. ಆದರೆ ಬಿಜೆಪಿಯನ್ನು ವಿರೋಧಿಸುವ ಸಮಾಜವಾದಿ ಪಕ್ಷದ ನಾಯಕರೇ ಈ ಪದ್ಧತಿಯನ್ನು ಬೆಂಬಲಿಸುವುದಾಗಿ ಹೇಳಿದರು. ಈ ಮೂಲಕ ಒಂದು ದೇಶ, ಒಂದು ಚುನಾವಣೆಯ ಪರಿಕಲ್ಪನೆಯನ್ನು ಜಾರಿಗೊಳಿಸಬೇಕೇ, ಬೇಡವೇ ಎಂಬ ಚರ್ಚೆ ಮತ್ತಷ್ಟು ಸುದ್ದಿಯಾಯಿತು.

ಲೋಕಸಭಾ ಚುನಾವಣೆ ಯಾವಾಗ? ಸುಳಿವು ನೀಡಿದ ಅಮಿತ್ ಶಾ ಲೋಕಸಭಾ ಚುನಾವಣೆ ಯಾವಾಗ? ಸುಳಿವು ನೀಡಿದ ಅಮಿತ್ ಶಾ

ಏನಿದು ಒಂದು ದೇಶ, ಒಂದು ಚುನಾವಣೆ?

ಲೋಕಸಭಾ ಚುನಾವಣೆಯ ಜೊತೆ ಜೊತೆಗೇ ರಾಜ್ಯಗಳ ವಿಧಾನಸಭೆಗೂ ಏಕಕಾಲಕ್ಕೆ ಚುನಾವಣೆ ಮಾಡುವ ಪದ್ಧತಿಯೇ 'ಒಂದು ದೇಶ, ಒಂದು ಚುನಾವಣೆ.' ಈ ಪದ್ಧತಿಯನ್ನು ಕೇಂದ್ರ ಚುನಾವಣಾ ಆಯೋಗವೂ ಬೆಂಬಲಿಸಿದೆ.

ದೇಶದಲ್ಲಿ ಪ್ರತಿವರ್ಷ ಒಂದಿಲ್ಲೊಂದು ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಲೋಕಸಭಾ ಚುನಾವಣೆಯ ನಂತರ, ದೇಶದಲ್ಲಿರುವ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಜಾರಿಯಾಗುವ 'ಚುನಾವಣಾ ನೀತಿ ಸಂಹಿತೆ'ಯಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದೂ ಅಲ್ಲದೆ ಸರ್ಕಾರದ ಅಧಿಕಾರಿಗಳಿಗೆ ಸದಾ ಚುನಾವಣೆಯ ಕೆಲಸ ಮಾಡುವುದರಲ್ಲೇ ಸಮಯ ಹೋಗುತ್ತದೆ! ಇದರಿಂದಾಗಿ ದೇಶದ ಪ್ರಗತಿ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಒಂದು ದೇಶ, ಒಂದು ಚುನಾವಣೆ ಪದ್ಧತಿ ಜಾರಿಗೆ ಬಂದರೆ ಚುನಾವಣಾ ವೆಚ್ಚವೂ ಕಡಿಮೆಯಾಗಲಿದೆ.

One nation One Election: Good or Bad for India?

ಎಲ್ಲೆಡೆಯೂ ಒಂದೇ ಬಾರಿ ಚುನಾವಣೆಯಾದರೆ ಅಕ್ರಮವಾಗುವ ಸಾಧ್ಯತೆ ಹೆಚ್ಚಿರಬಹದು, ಸಿಬ್ಬಂದಿಗಳ ಕೊರತೆಯಾಗಬಹುದು. ಪಾರದರ್ಶಕತೆ ಸಾಧ್ಯವಾಗದಿರಬಹುದು, ಸಾಂವಿಧಾನಿಕ ತಿದ್ದುಪಡಿಯೂ ಅಷ್ಟು ಸುಲಭದ್ದಲ್ಲ... ಹೀಗೇ ಈ ಪದ್ಧತಿಯ ಕುರಿತು ಕೆಲವು ದೂರುಗಳೂ ಇವೆ.

ಒಂದು ದೇಶ, ಒಂದು ಚುನಾವಣೆ ಸಿದ್ಧಾಂತಕ್ಕೆ ಕಾಂಗ್ರೆಸ್‌ ತೀವ್ರ ವಿರೋಧಒಂದು ದೇಶ, ಒಂದು ಚುನಾವಣೆ ಸಿದ್ಧಾಂತಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ

ಪ್ರತಿಯೊಂದು ಹೊಸ ಪದ್ಧತಿಗೂ ಗುಣ ಮತ್ತು ದೋಷ ಎರಡೂ ಇದ್ದೇ ಇರುತ್ತವೆ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇಂಥ ಪದ್ಧತಿಗಳು ಎಷ್ಟು ಪೂರಕ ಎಂಬುದು ಈಗಿರುವ ಪ್ರಶ್ನೆ. ಒನ್ ಇಂಡಿಯಾ ಓದುಗರ ಪ್ರಕಾರ ಈ ಪದ್ಧತಿ ದೇಶಕ್ಕೆ ಮಾರಕವೋ, ಪೂರಕವೋ. ನಿಮ್ಮ ಅಭಿಪ್ರಾಯ ತಿಳಿಸಿ, ಈ ಚರ್ಚೆಯಲ್ಲಿ ಪಾಲ್ಗೊಳ್ಳಿ.

English summary
Prime minister Narendra Modi, a year ago, tells about One Nation One Election in one of his speechs. This is the topic of debate now. According to readers what are the merits and demerits of this concept,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X