ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಹೋಟೆಲ್‌ಗಳಿಗೆ ಚೀನಾ ಪ್ರವಾಸಿಗರ ಪ್ರವೇಶ ನಿಷೇಧ

|
Google Oneindia Kannada News

ನವದೆಹಲಿ, ಜೂನ್ 25: ಚೀನಾ ಪ್ರವಾಸಿಗರಿಗೆ ಇನ್ನು ದೆಹಲಿಯ ಯಾವ ಹೋಟೆಲ್, ರೆಸ್ಟೋರೆಂಟ್‌ಗಳಲ್ಲೂ ಆತಿಥ್ಯ ನೀಡಬಾರದು ಎಂದು ದೆಹಲಿಯ ಹೋಟೆಲ್‌ ಮತ್ತು ರೆಸ್ಟೋರೆಂಟ್ ಮಾಲಿಕರ ಸಂಘ ನಿರ್ಧರಿಸಿದೆ.

Recommended Video

ಪ್ರಪಂಚದ ಮುಂದೆ ಮತ್ತೆ ಪಾಕಿಸ್ತಾನಕ್ಕೆ ಮುಖಭಂಗ | Oneindia Kannada

ಗುರುವಾರ ಬೆಳಗ್ಗೆ ಈ ಕುರಿತು ಸಭೆ ನಡೆಸಿದ ಅವರು ಇನ್ನುಮುಂದೆ ದೆಹಲಿಯಲ್ಲಿರುವ ಸುಮಾರು 3 ಸಾವಿರ ಹೋಟೆಲ್‌ಗಳಲ್ಲಿ ಚೀನಾದವರಿಗೆ ಉಳಿಯಲು ಅನುಮತಿ ಇಲ್ಲ, ಬುಕಿಂಗ್‌ಗೆ ಅವಕಾಶವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಘರ್ಷಣೆಯಲ್ಲಿ ಚೀನಾ ಸೈನಿಕರು ಭಾರತೀಯ ಸೈನಿಕರ ಹತ್ಯೆ ಮಾಡಿದ್ದರು. ಈ ಬೆಳವಣಿಗೆಯನ್ನು ಗಮನಿಸಿರುವ ಹೋಟೆಲ್‌ ಮಾಲಿಕರ ಸಂಘವು ಚೀನಾದವರಿಗೆ ಹೋಟೆಲ್‌ನಲ್ಲಿ ತಂಗಲು ಅವಕಾಶವನ್ನು ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.

Delhi Hotel Association Halts Bookings For Chinese Guests

ಚೀನಾವು ವಿಶ್ವವಲ್ಲ, ಚೀನಾದ ಸಹಾಯವಿಲ್ಲದೆಯೇ ನಾವು ಬದುಕಬಲ್ಲೆವು, ನಾವ್ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ. ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಕೂಡ ಚೀನಾದವರಿಗೆ ಅನುಮತಿ ಇಲ್ಲ. ಬಹುತೇಕ ಹೋಟೆಲ್‌ಗಳು ಒಪ್ಪಿಕೊಂಡಿವೆ. ನಾವು ಯಾವುದೇ ರೀತಿಯ ಒತ್ತಡವನ್ನು ಹಾಕಿಲ್ಲ ಅಸೋಸಿಯೇಷನ್ ಅಧ್ಯಕ್ಷ ಸಂದೀಪ್ ತಿಳಿಸಿದ್ದಾರೆ.

ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಹೋಟೆಲ್ ಉದ್ಯಮ ಅವನತಿಯಲ್ಲಿದೆ. ಕಟ್ಟಡದ ಬಾಡಿಗೆ, ಲೋನ್‌ಗಳನ್ನು ಕಟ್ಟಲು ಕೂಡ ಅವರ ಬಳಿ ಹಣವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

English summary
The Delhi Hotel and Restaurant Owners Association on Thursday announced that Chinese nationals would no longer be provided accommodation in over 3,000 hotels and guest houses across the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X