ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟಾಳ್ ಹೊಸ ಸಾಹಸ, ಅಸೆಂಬ್ಲಿ ಕನ್ನಡ ದನಿಯಾಗಬೇಕೆ?

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 19: ಚಾಮರಾಜನಗರದಿಂದ ಐದು ಬಾರಿ ಶಾಸಕರಾಗಿ ಅಸೆಂಬ್ಲಿಯಲ್ಲಿ ಕನ್ನಡ ಪರ ದನಿಯಾಗಿದ್ದ ವಾಟಾಳ್ ನಾಗರಾಜ್ ಅವರು ಈಗ ಹೊಸ ರಾಜಕೀಯ ವೇದಿಕೆ ರಚನೆಯಲ್ಲಿ ತೊಡಗಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಚುನಾವಣೆ ಸಂದರ್ಭದಲ್ಲಿ ಕನ್ನಡ, ರೈತ, ದಲಿತ ಮುಂತಾದ ಟ್ರೆಂಡಿಂಗ್ ವಿಷಯಕ್ಕೆ ತಕ್ಕಂತೆ ವಾಟಾಳ್ ಅವರು ತಮ್ಮ ಹೆಜ್ಜೆ ಇಟ್ಟಿದ್ದಾರೆ. ವಾಟಾಳ್ ಅವರಿಗೆ ಯಶ ಸಿಗುವುದೇ? ಮತ್ತೊಮ್ಮೆ ಅಸೆಂಬ್ಲಿಯಲ್ಲಿ ಕನ್ನಡ ಪರ ಅವರು ದನಿ ಎತ್ತಲು ಸಾಧ್ಯವೇ? ಎಂಬುದು ಇಂದಿನ ಚರ್ಚೆಯ ವಿಷಯ.

ರೈತ-ಕನ್ನಡ-ದಲಿತ ಸಂಘಟನೆಗಳ ಒಗ್ಗೂಡಿಸಿ ವಾಟಾಳ್ ರಿಂದ ಹೊಸ ಪಕ್ಷರೈತ-ಕನ್ನಡ-ದಲಿತ ಸಂಘಟನೆಗಳ ಒಗ್ಗೂಡಿಸಿ ವಾಟಾಳ್ ರಿಂದ ಹೊಸ ಪಕ್ಷ

ಹೊಸ ನಾಡಧ್ವಜ ರೂಪಿಸಿ ಅನಾವರಣಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದ ಅವರು, ನಮಗೆ ಸರ್ಕಾರಿ ಧ್ವಜ ಅಗತ್ಯವಿಲ್ಲ. ಕಳೆದ 50 ವರ್ಷಗಳಿಂದಲೂ ಕನ್ನಡಿಗರು ಬಳಸುತ್ತಾ ಬಂದ, ಎತ್ತಿ ಹಿಡಿದ ಹಳದಿ-ಕೆಂಪು ಬಣ್ಣದ ಧ್ವಜವೇ ನಮ್ಮ ನಾಡಧ್ವಜ ಎಂದು ವಾಟಾಳ್ ವಾದಿಸಿದ್ದಾರೆ.

Elections 2018 Debate: Vatal Nagaraj Karnataka Praja Samyukta Ranga Kannada pride

ಕನ್ನಡ ಸಂಘಟನೆಗಳು, ಪ್ರಾದೇಶಿಕ, ದಲಿತ ಹಾಗೂ ರೈತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಪಕ್ಷ ಸ್ಥಾಪಿಸಲು ವಾಟಾಳ್ ನಾಗರಾಜ್ ಮುಂದಾಗಿದ್ದಾರೆ. ಪಕ್ಷದ ಹೆಸರು ಕರ್ನಾಟಕ ಪ್ರಜಾ ಸಂಯುಕ್ತ ರಂಗ. ಈಗಾಗಲೇ ಕರ್ನಾಟಕ ರಾಜ್ಯ ರೈತ ಸಂಘ, ಸ್ವರಾಜ್ ಇಂಡಿಯಾ, ಸರ್ವೋದಯ ಕರ್ನಾಟಕ ಹೀಗೆ ರೈತ ಪರ ಪಕ್ಷಗಳಿವೆ.

ಚರ್ಚೆ: ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?ಚರ್ಚೆ: ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?

ಅದೇ ರೀತಿ ದಲಿತರ ಪರ ನಿಲ್ಲಲು ಸಂಘಟನೆಗಳಿವೆ, ರಾಷ್ಟ್ರೀಯ ಪಕ್ಷಗಳಿವೆ ಆದರೆ, ಪ್ರಾದೇಶಿಕತೆ, ಕನ್ನಡ ಅಸ್ಮಿತೆ ವಿಷಯವನ್ನು ಸದ್ಯಕ್ಕೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಮಾತ್ರ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುತ್ತಿದೆ. ಇದು ಪೂರಕವಾಗುವುದೋ, ಮಾರಕವಾಗುವುದೋ ಕಾದು ನೋಡಬೇಕಿದೆ. ಸದ್ಯಕ್ಕೆ ವಾಟಾಳ್ ಅವರು ಅಸೆಂಬ್ಲಿ ಪ್ರವೇಶ ಬಯಸಿ ಮಾಡುತ್ತಿರುವ ಚಟುವಟಿಕೆಗಳು, ಕನ್ನಡ ಪರ ಹೋರಾಟದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಇಮೇಲ್ : [[email protected]], ಕಾಮೆಂಟ್ ಬಾಕ್ಸಿನಲ್ಲೂ ನಿಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಿ.

English summary
Kannada Chaluvali Vatal Paksha leader Vatal Nagaraj has announced that pro-Kannada organisations along with regional Dalit and farmers’ organisations would form Karnataka Praja Samyukta Ranga ahead of assembly elections in the state. Is assembly need Vatal kind of pro Kannada MLAs needed?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X