• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚರ್ಚೆ: ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?

By Mahesh
|

ಕರ್ನಾಟಕ ವಿಧಾನಸಭೆ ಚುನಾವಣೆ 2018ಯ ಹೊಸ್ತಿಲಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜವನ್ನು ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರವು ಅಂಗೀಕರಿಸಿದೆ. ನಾಡಧ್ವಜ ಮಾನ್ಯತೆಗೆ ಕೋರಿ, ಕೇಂದ್ರ ಗೃಹ ಸಚಿವಾಲಯಕ್ಕೆ ಅನುಮತಿಗಾಗಿ ಕಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಬಿಟ್ಟರೆ ಬೇರೆ ಯಾವ ರಾಜ್ಯಕ್ಕೂ ಪ್ರತ್ಯೇಕ ನಾಡಧ್ವಜ ಹೊಂದುವ ಮಾನ್ಯತೆ ಸಿಕ್ಕಿಲ್ಲ. ಪ್ರತ್ಯೇಕ ನಾಡಧ್ವಜ ಹೊಂದುವುದು ಕನ್ನಡ ಅಸ್ಮಿತೆಯ ವಿಷಯವಾಗಿದೆ. ಆದರೆ, ನಾಲ್ಕು ವರ್ಷಗಳಿಂದ ಸುಮ್ಮನ್ನಿದ್ದು, ಚುನಾವಣೆ ಸಮಯದಲ್ಲಿ ಕನ್ನಡ ಪರ ಸರ್ಕಾರ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ಅವರು ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.

ಡಿಬೇಟ್ : ಉಪೇಂದ್ರ ಹೊಸ ರಾಜಕೀಯ ಪಕ್ಷ ಘೋಷಣೆ ಸರಿಯೇ?

'ನಾವು ಒಂದು ಐತಿಹಾಸಿಕ ನಿರ್ಣಯವನ್ನು ಕೈಗೊಳ್ಳುವ ಮೂಲಕ ಕರ್ನಾಟಕಕ್ಕೆ ಒಂದು ಪ್ರತ್ಯೇಕ ನಾಡಧ್ವಜವನ್ನು ಅಳವಡಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಈ ನಾಡ ಧ್ವಜದ ವಿನ್ಯಾಸಕ್ಕೆ ಸಹಮತವನ್ನು ವ್ಯಕ್ತಪಡಿಸಿರುವ ಎಲ್ಲ ಹಿರಿಯ ಸಾಹಿತಿಗಳಿಗೆ, ಕನ್ನಡಪರ ಸಂಘಟನೆಗಳಿಗೆ ಹಾಗೂ ಎಲ್ಲ ಮುಖಂಡರುಗಳಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇವೆ ಎಂದು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಅರ್ಪಿಸಿ ಫೇಸ್ ಬುಕ್ ಬರೆದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರದಂದು ಪ್ರಾದೇಶಿಕ ಅನನ್ಯತೆ, ಒಕ್ಕೂಟ ವ್ಯವಸ್ಥೆ, ಸವಾಲುಗಳ ಬಗ್ಗೆ ಬರೆದುಕೊಂಡಿದ್ದು ಚರ್ಚೆಗೆ ಇನ್ನಷ್ಟು ಇಂಬು ನೀಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೋದಿ ಸರ್ಕಾರವು ಒಂದು ರಾಷ್ಟ್ರ, ಒಂದು ಧ್ವಜ ಎಂದು ಐಕ್ಯತೆಯ ಮಂತ್ರ ಹಾಡುವಾಗ, ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಹೊಂದಲು ಅನುಮತಿ ನೀಡುವುದೇ? ಎಂಬ ಪ್ರಶ್ನೆ ಎದ್ದಿದೆ.

ಡಿಬೇಟ್ : ಜೆಡಿಎಸ್, ಕಾಂಗ್ರೆಸ್‌ ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯವೇನು

ಭಾರತೀಯ ಸಂವಿಧಾನದಲ್ಲಿ ಪ್ರತ್ಯೇಕ ನಾಡ ಧ್ವಜ ಹೊಂದಲು ಅವಕಾಶ ನೀಡಲಾಗಿದೆ. ಕಾನೂನಿನ ಪ್ರಕಾರ, ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಿದ್ದು, ಒಂದು ವೇಳೆ, ಕೇಂದ್ರ ಸರ್ಕಾರವು ಬೇಡಿಕೆಗೆ ಒಪ್ಪದಿದ್ದರೆ, ಅದನ್ನೇ ಜನರ ಮುಂದಿಟ್ಟು, ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತಿರುವ ಬಿಜೆಪಿ ಎಂದು ಅಸ್ತ್ರವಾಗಿ ಕಾಂಗ್ರೆಸ್ ಬಳಸಬಹುದಾಗಿದೆ. ಈ ಬಗ್ಗೆ ನೀವೆಂನತೀರಾ? ಇಮೇಲ್[kannada@oneindia.co.in] ಮಾಡಿ, ಸಬ್ಜೆಕ್ಟ್ : ಕನ್ನಡ ಬಾವುಟ ಚರ್ಚೆ ಎಂದು ಬರೆಯಿರಿ...

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್ ಬಾಕ್ಸಿನಲ್ಲೂ ಹಾಕಬಹುದು

ನಿಮ್ಮ ಕನಸಿನ ಕರ್ನಾಟಕ ಸಚಿವ ಸಂಪುಟ ರಚಿಸಿ

English summary
Chief Minister Siddaramaiah has raked up the issue of Karnataka flag. The CM unveiled the new flag and has now sent it for approval to the Home Ministry. Siddaramaiah's move is being seen as an attempt to touch upon the sensitive issue of Kannada pride. The issue calls for a debate. India follows the precedent, One Nation One Flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X