keyboard_backspace

ಕೋವಿಡ್-19 ರೋಗಿಗಳ ಚೇತರಿಕೆಗೆ ಬಂದಿದೆ ಹೊಸ ಚಿಕಿತ್ಸಾ ವಿಧಾನ

Google Oneindia Kannada News

ಕೋವಿಡ್-19 ರೋಗಿಗಳ ಚೇತರಿಕೆಗೆ ಥೈಮೋಸಿನ್ ಅಲ್ಫಾ 1 ಬಳಕೆ ನೆರವಾಗಲಿದೆ. ಈ ಹೊಸ ಚಿಕಿತ್ಸಾ ವಿಧಾನ ರೋಗಿಗಳು ಸಹಜ ಬದುಕಿಗೆ ನೆರವಾಗುವ ಮೂಲಕ ಮರಣ ದರ ಸುಧಾರಣೆಗೆ ನೆರವಾಗಲಿದೆ ಎಂದು ತೀವ್ರ ನಿಗಾ ತಜ್ಞರ ಶಿಫಾರಸ್ಸು ಮಾಡಿದ್ದಾರೆ.

"ಇಮ್ಯುನೋಸಿನ್ ಆಲ್ಫಾ 1, ಸೈಟೊಕಿನ್ ಹೊಡೆತವನ್ನು ಕಡಿಮೆ ಮಾಡುತ್ತದೆ ಹಾಗೂ ತೀವ್ರತರ ಕೋವಿಡ್-19 ರೋಗಿಗಳಲ್ಲಿ ಲಿಂಫೋಸೈಟೋಪೆನಿಯಾ ಪುನಶ್ಚೇತನ ಮತ್ತು ಬಳಲಿದ ಟಿ ಕೋಶಗಳ ಪುನಶ್ಚೇತನ ಮೂಲಕ ಮರಣ ಪ್ರಮಾಣವನ್ನು ಸಹಜವಾಗಿಯೇ ಕಡಿಮೆ ಮಾಡುತ್ತದೆ" ಎಂದು ಸಾಗರ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಐಸಿಯು ಹಾಗೂ ತೀವ್ರತರ ಆರೈಕೆ ವಿಭಾಗದ ಮುಖ್ಯಸ್ಥ, ಸಲಹಾ ತಜ್ಞ ಡಾ.ಆರ್.ರವಿ ಕುಮಾರ್ ಹೇಳಿದ್ದಾರೆ.

ಕೊವಿಡ್-19 ಲಸಿಕೆ ಪೈಪೋಟಿ: ಕೊವಿಡ್-19 ಲಸಿಕೆ ಪೈಪೋಟಿ: "Cheap And Best" ಬೆಲೆಗೆ ಸ್ಪುಟಿಕ್-ವಿ

ವಿಶ್ವ ಇಂದು ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೋನಾ ವೈರಸ್ 2 (ಸಾರ್ಸ್ ಕೋವ್-2) ಸಾಂಕ್ರಾಮಿಕವನ್ನು ಎದುರಿಸುತ್ತಿದ್ದು, ಇದಕ್ಕೆ ಪೂರಕ ಚಿಕಿತ್ಸೆಗಳನ್ನು ಹೊರತುಪಡಿಸಿದರೆ, ರೋಗ ಗುಣಪಡಿಸಲು ನಿರೂಪಿತವಾದ ಯಾವುದೇ ನಿರ್ದಿಷ್ಟ ಚಿಕಿತ್ಸಾ ವಿಧಾನಗಳಿಲ್ಲ.

ನಿರ್ದಿಷ್ಟ ದರ ಮಾದರಿ ಇಲ್ಲದಿರುವುದೇ ಕೋವಿಡ್ ಸಾವಿನ ಹೆಚ್ಚಳಕ್ಕೆ ಕಾರಣ: ಸಮಿತಿ ಕಿಡಿನಿರ್ದಿಷ್ಟ ದರ ಮಾದರಿ ಇಲ್ಲದಿರುವುದೇ ಕೋವಿಡ್ ಸಾವಿನ ಹೆಚ್ಚಳಕ್ಕೆ ಕಾರಣ: ಸಮಿತಿ ಕಿಡಿ

ಆದರೆ ಇದೀಗ ಥೈಮೋಸಿನ್ ಆಲ್ಫಾ 1 ಎಂಬ ವಿನೂತನ ಚಿಕಿತ್ಸಾ ವಿಧಾನ ಇದೀಗ ಕೋವಿಡ್-19 ರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ ಎಂದು ತಜ್ಞ ಡಾ.ಆರ್.ರವಿ ಕುಮಾರ್ ಹೇಳಿದ್ದಾರೆ.

ಪ್ರತಿರೋಧ ವ್ಯವಸ್ಥೆಯನ್ನು ಮಾರ್ಪಡಿಸಲು ಶಕ್ತವಾಗಿದೆ

ಪ್ರತಿರೋಧ ವ್ಯವಸ್ಥೆಯನ್ನು ಮಾರ್ಪಡಿಸಲು ಶಕ್ತವಾಗಿದೆ

ಇಮ್ಯುನೋಸಿನ್ ಆಲ್ಫಾ 1 ಎಂಬ ಔಷಧೀಯ ಕಣ ನಮ್ಮ ಪ್ರತಿರೋಧ ವ್ಯವಸ್ಥೆಯನ್ನು ಮಾರ್ಪಡಿಸಲು ಶಕ್ತವಾಗಿದ್ದು, ದೇಶಾದ್ಯಂತ ಹಲವು ರೋಗಿಗಳಿಗೆ ನೆರವಾಗಿದೆ. ಭಾರತದಾದ್ಯಂತ ತೀವ್ರ ನಿಗಾ ಚಿಕಿತ್ಸಾ ತಜ್ಞರು ಈ ಔಷಧೀಯ ಕಣವನ್ನು ತೀವ್ರತರ ಕೋವಿಡ್-19 ರೋಗಿಗಳಿಗೆ ನೀಡಲು ಶಿಫಾರಸ್ಸು ಮಾಡಿದ್ದಾರೆ. ಚಿಕಿತ್ಸೆ ನೀಡುವ ವೈದ್ಯರು, ರೋಗಿಯ ಕೋವಿಡ್-19 ರೋಗಲಕ್ಷಣದ ಪ್ರಮಾಣಕ್ಕೆ ಅನುಸಾರವಾಗಿ ಇಮ್ಯುನೋಸಿನ್ ಆಲ್ಫಾ 1 ಪ್ರಮಾಣವನ್ನು ನಿರ್ಧರಿಸುತ್ತಾರೆ. ಈ ಚಿಕಿತ್ಸೆಯ ಅವಧಿ ಏಳು ದಿನಗಳಾಗಿವೆ. ಈ ಔಷಧಿಯು ಅತ್ಯುತ್ತಮ ಸಹಿಷ್ಣುಗುಣವನ್ನು ಹೊಂದಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಎಂದು ದೃಢ

ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಎಂದು ದೃಢ

ಸಹ ಮಾರಕ ಸ್ಥಿತಿಗಳನ್ನು ಹೊಂದಿರುವ ರೋಗಿಗಳು ಕೋವಿಡ್-19 ಸೋಂಕಿಗೆ ಒಳಗಾಗುವ ಸಾಧ್ಯತೆ ಅತ್ಯಧಿಕ ಎಂದು ಹೇಳಲಾಗಿದೆ. ರೋಗಿಗಳ ಈ ವರ್ಗವನ್ನು ಅತ್ಯಧಿಕ ಅಪಾಯ ಸಾಧ್ಯತೆಯ ಗುಂಪು ಎಂದು ಪರಿಗಣಿಸಲಾಗಿದ್ದು, ವಿಶ್ವಾದ್ಯಂತ ಈ ವರ್ಗದ ಮರಣ ಪ್ರಮಾಣವೂ ಅತ್ಯಧಿಕವಾಗಿದೆ. ಮಧುಮೇಹ, ಹೈಪರ್ ಟೆನ್ಷನ್, ತೀವ್ರತರ ಮೂತ್ರಪಿಂಡ ಕಾಯಿಲೆಯಂಥ ರೋಗ ಹೊಂದಿರುವ ಮತ್ತು ಹಿರಿಯ ವಯಸ್ಸಿನ ರೋಗಿಗಳಿಗೆ ಇಮ್ಯುನೊಸಿನ್ ಆಲ್ಫಾ 1, ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಎಂದು ದೃಢಪಟ್ಟಿದೆ.

ಏಡ್ಸ್ ಮತ್ತು ಸಾರ್ಸ್‍ನಂಥ ಕಾಯಿಲೆಗಳ ಚಿಕಿತ್ಸೆಗೆ ಬಳಕೆ

ಏಡ್ಸ್ ಮತ್ತು ಸಾರ್ಸ್‍ನಂಥ ಕಾಯಿಲೆಗಳ ಚಿಕಿತ್ಸೆಗೆ ಬಳಕೆ

''ಥೈಮೋಸಿನ್ ಆಲ್ಫಾ 1 ಔಷಧವು ಏಡ್ಸ್ ಮತ್ತು ಸಾರ್ಸ್‍ನಂಥ ಪ್ರತಿರೋಧ ಶಕ್ತಿ ನಾಶವಾಗುವ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಇತಿಹಾಸ ಹೊಂದಿದೆ. ಕೋವಿಡ್-19 ರೋಗದಲ್ಲಿ ಪ್ರಮುಖವಾಗಿ ವೈರಾಣುಗಳು ಆ ವ್ಯಕ್ತಿಯ ಪ್ರತಿರೋಧ ಶಕ್ತಿಯ ಮೇಲೆ ದಾಳಿ ಮಾಡುತ್ತವೆ. ಸಂಶೋಧನಾ ಅಧ್ಯಯನಗಳಿಂದ ದೃಢಪಟ್ಟಂತೆ ಥೈಮೋಸಿನ್ ಆಲ್ಫಾ 1 ಔಷಧಿಯು ಕೋವಿಡ್-19 ಚಿಕಿತ್ಸೆಯಲ್ಲಿ ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಿಯಾಗಿದೆ.

ಥೈಮೋಸಿನ್ ಆಲ್ಫಾ ನಮ್ಮ ಪ್ರತಿರೋಧ ಶಕ್ತಿಯನ್ನು ಮಾರ್ಪಡಿಸುವ ಔಷಧಿ, ಇದು ದೇಹದಲ್ಲಿರುವ, ವೈರಸ್‍ಗಳನ್ನು ಸಾಯಿಸಲು ನೆರವಾಗುವ ಟಿ-ಕೋಶಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಪರಿಪೂರ್ಣವಾಗಿ ನಮ್ಮ ಪ್ರತಿರೋಧ ಶಕ್ತಿಯನ್ನು ಮಾರ್ಪಡಿಸುತ್ತದೆ. ಇಮ್ಯುನೋಸಿನ್ ಆಲ್ಫಾ 1, ಸೈಟೊಕಿನ್ ಹೊಡೆತವನ್ನು ಕಡಿಮೆ ಮಾಡುತ್ತದೆ ಹಾಗೂ ತೀವ್ರತರ ಕೋವಿಡ್-19 ರೋಗಿಗಳಲ್ಲಿ ಲಿಂಫೋಸೈಟೋಪೆನಿಯಾ ಪುನಶ್ಚೇತನ ಮತ್ತು ಬಳಲಿದ ಟಿ ಕೋಶಗಳ ಪುನಶ್ಚೇತನ ಮೂಲಕ ಮರಣ ಪ್ರಮಾಣವನ್ನು ಸಹಜವಾಗಿಯೇ ಕಡಿಮೆ ಮಾಡುತ್ತದೆ ಎಂದು ಡಾ.ಆರ್.ರವಿ ಕುಮಾರ್ ಹೇಳಿದ್ದಾರೆ. ಇದುವರೆಗೆ ಈ ಔಷಧ ಕಣವನ್ನು ಸುಮಾರು 200 ರೋಗಿಗಳಿಗೆ ನಾನು ಬಳಸಿದ್ದು, ಇದು ಪ್ರಯೋಜನಕಾರಿಯಾಗಿರುವುದನ್ನು ನಾನು ವೈಯಕ್ತಿಕವಾಗಿ ಗಮನಿಸಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಪೂರಕ ಚಿಕಿತ್ಸಾ ವಿಧಾನವಾಗಿ ಬಳಸಬಹುದಾಗಿದೆ

ಪೂರಕ ಚಿಕಿತ್ಸಾ ವಿಧಾನವಾಗಿ ಬಳಸಬಹುದಾಗಿದೆ

ಆರಂಭಿಕ ಹಂತದಲ್ಲೇ ವೈದ್ಯಕೀಯ ನೆರವನ್ನು ಬಯಸಿ ಬರುವ ರೋಗಿಗಳಿಗೆ ಥೈಮೋಸಿನ್ ಆಲ್ಫಾ 1 ಖಚಿತವಾಗಿಯೂ ಪ್ರಯೋಜನಕಾರಿ. ಏಕೆಂದರೆ ಎಚ್‍ಎಫ್‍ಎನ್‍ಸಿ ಮೂಲಕ ನಾವು ಅದನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ. ಅಂಥ ರೋಗಿಗಳಿಗೆ ಇನ್‍ಟ್ಯುಬೇಶನ್ ಮತ್ತು ಮೆಕ್ಯಾನಿಕಲ್ ವೆಂಟಿಲೇಶನ್ ಅಗತ್ಯ ಇಲ್ಲ. ತೀರಾ ಸೌಮ್ಯ ಪ್ರಮಾಣದಿಂದ ಹಿಡಿದು ಸಾಮಾನ್ಯ ತೀವ್ರತೆಯ ಪ್ರಕರಣಗಳಲ್ಲಿ ನಾನು ಇದನ್ನು ಬಳಸಿದ್ದು, ಇದು ರೋಗಿಗಳಿಗೆ ತೀವ್ರತರ ವೆಂಟಿಲೇಶನ್ ತಡೆಯಲು ನೆರವಾಗಿದೆ. ಕೋವಿಡ್-19 ರೋಗಿಗಳಿಗೆ ನೀಡುವ ಮೂಲ ಚಿಕಿತ್ಸೆಯು ಪ್ರತ್ಯೇಕವಾಗಿ ಇದ್ದರೂ, ಥೈಮೋಸಿನ್ ಆಲ್ಫಾ 1 ವಿಧಾನವನ್ನು ಪೂರಕ ಚಿಕಿತ್ಸಾ ವಿಧಾನವಾಗಿ ಬಳಸಬಹುದಾಗಿದೆ. ಜತೆಗೆ ಇದನ್ನು ತೀವ್ರತರ ಆರೈಕೆ ತಜ್ಞರ ಮೇಲ್ವಿಚಾರಣೆಯನ್ನು ನೀಡಬೇಕಾಗುತ್ತದೆ.

ಕೋವಿಡ್-19 ರೋಗಕ್ಕೆ ಸಾರ್ಸ್-ಕೋವ್-2 ವೈರಸ್ ಕಾರಣ

ಕೋವಿಡ್-19 ರೋಗಕ್ಕೆ ಸಾರ್ಸ್-ಕೋವ್-2 ವೈರಸ್ ಕಾರಣ

ಕೊರೋನಾ ವೈರಸ್ ಎನ್ನುವುದು ಒಂದು ಬಗೆಯ ವೈರಾಣುವಾಗಿದ್ದು, ಇದು ನಿಮ್ಮ ಮೂಗು, ಸೈನಸ್ ಅಥವಾ ಗಂಟಲ ಮೇಲ್ಭಾಗದಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಚೀನಾದಲ್ಲಿ 2019ರ ಡಿಸೆಂಬರ್ ನಲ್ಲಿ ಕಾಣಿಸಿಕೊಂಡ ಬಳಿಕ 2020ರ ಆರಂಭದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಸಾರ್ಸ್-ಕೋವ್-2 ವೈರಾಣುವನ್ನು ಹೊಸ ಬಗೆಯ ವೈರಾಣು ಎಂದು ಗುರುತಿಸಿದೆ. ಇದರ ಹರಡುವಿಕೆಯು ವಿಶ್ವಾದ್ಯಂತ ತ್ವರಿತವಾಗಿ ಆಗಿದೆ. ಕೋವಿಡ್-19 ರೋಗಕ್ಕೆ ಸಾರ್ಸ್-ಕೋವ್-2 ವೈರಸ್ ಕಾರಣ.

ಇದು ಉಸಿರಾಟ ನಾಳದ ಸೋಂಕಿಗೂ ಕಾರಣವಾಗುತ್ತದೆ ಎನ್ನುವುದು ವೈದ್ಯರ ಅಭಿಮತ. ಇದು ವ್ಯಕ್ತಿಯ ಮೇಲಿನ ಹಂತದ ಶ್ವಾಸನಾಳಕ್ಕೆ ಅಂದರೆ ಸೈನಸ್, ಮೂಗು ಮತ್ತು ಗಂಟಲಿನ ಮೇಲೆ ಪರಿಣಾಮ ಬೀರಬಲ್ಲದು ಅಥವಾ ಕೆಳಭಾಗದ ಶ್ವಾಸನಾಳಕ್ಕೆ ಅಂದರೆ ಗಾಳಿಯ ನಳಿಕೆ ಹಾಗೂ ಶ್ವಾಸಕೋಶಕ್ಕೆ ಧಕ್ಕೆ ಉಂಟು ಮಾಡಬಲ್ಲದು. ಇದು ಇತರ ವೈರಸ್‍ಗಳಂತೆಯೇ ಹರಡುತ್ತದೆ ಹಾಗೂ ಮುಖ್ಯವಾಗಿ ವ್ಯಕ್ತಿ- ವ್ಯಕ್ತಿ ಸಂಪರ್ಕದಿಂದ ಹರಡುತ್ತದೆ, ಈ ಸೋಂಕು ಸೌಮ್ಯಸ್ವರೂಪದಿಂದ ಹಿಡಿದು ಮಾರಕವೂ ಆಗಬಹುದು.

ಪ್ರತಿರೋಧ ಶಕ್ತಿಯ ಮೇಲೆ ದಾಳಿ

ಪ್ರತಿರೋಧ ಶಕ್ತಿಯ ಮೇಲೆ ದಾಳಿ

ಇತರ ಸಾಮಾನ್ಯ ಶೀತಕ್ಕೆ ಕಾರಣವಾಗುವ ಇತರ ಕೊರೋನಾ ವೈರಸ್‍ಗಳು ಆರೋಗ್ಯವಂತ ವ್ಯಕ್ತಿಗಳಿಗೆ ಯಾವುದೇ ಗಂಭೀರ ಅಪಾಯವಲ್ಲ ಎಂದು ಹೇಳಲಾಗಿದೆ. ವೈರಸ್‍ಗಳು ಬದಲಾಗುವುದು, ಪರಿವರ್ತನೆಯಾಗುವುದು ಹಾಗೂ ಜನರಿಗೆ ಸೋಂಕು ಹರಡುವುದು ಸಾಮಾನ್ಯ. ಈ ಸಾಂಕ್ರಾಮಿಕವು ಎಷ್ಟು ಅವಧಿಯ ವರೆಗೆ ಇರುತ್ತದೆ ಎಂದು ಅಂದಾಜಿಸುವುದು ಅಸಾಧ್ಯ. ಇದು ಹಲವು ಅಂಶಗಳನ್ನು ಅವಲಂಬಿಸಿದ್ದು, ಈ ವೈರಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಂಶೋಧಕರು ಪ್ರಯತ್ನ ಮುಂದುವರಿಸಿದ್ದಾರೆ. ಜತೆಗೆ ಇದರ ಚಿಕಿತ್ಸೆ ಹಾಗೂ ಲಸಿಕೆಗೆ ಕೂಡಾ ಸಂಶೋಧನೆ ಮುಂದುವರಿದಿದ್ದು, ರೋಗ ಹರಡುವಿಕೆ ತಡೆಯಲು ಸಾರ್ವಜನಿಕರ ಪ್ರಯತ್ನಗಳು ಕೂಡಾ ಹೆಚ್ಚುತ್ತಿವೆ.

ಕೋವಿಡ್-19 ವೈರಸ್, ವ್ಯಕ್ತಿಗಳ ಪ್ರತಿರೋಧ ಶಕ್ತಿಯ ಮೇಲೆ ದಾಳಿ ಮಾಡುತ್ತದೆ ಎಂಬ ಅಂಶದ ಆಧಾರದಲ್ಲಿ ಪ್ರತಿರೋಧ ಶಕ್ತಿಯನ್ನು ಮಾರ್ಪಡಿಸುವ ಬಗೆಗಿನ ಚಿಂತನೆ ಹುಟ್ಟುಕೊಂಡಿದೆ. ಕೋವಿಡ್-19 ಸೋಂಕಿನ ಪ್ರಮುಖ ಲಕ್ಷಣಗಳೆಂದರೆ ಜ್ವರ, ಕಫ, ಉಸಿರಾಟ ಸಮಸ್ಯೆ, ಚಳಿ, ಮೈ ಕೈ ನೋವು, ತಲೆ ನೋವು, ಗಂಟಲಲ್ಲಿ ಕಿರಿ ಕಿರಿ, ವಾಸನೆ ಶಕ್ತಿ ಅಥವಾ ರುಚಿ ಇಲ್ಲದಾಗುವುದು.

100ಕ್ಕೂ ಅಧಿಕ ಲಸಿಕೆ ಉಮೇದುವಾರಿಕೆ

100ಕ್ಕೂ ಅಧಿಕ ಲಸಿಕೆ ಉಮೇದುವಾರಿಕೆ

100ಕ್ಕೂ ಅಧಿಕ ಲಸಿಕೆ ಉಮೇದುವಾರಿಕೆಗಳು ಅಭಿವೃದ್ಧಿ ಮತ್ತು ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಂಶೋಧಕರು ಸಾಧ್ಯವಾದಷ್ಟೂ ತ್ವರಿತವಾಗಿ ಇದನ್ನು ನಡೆಸುತ್ತಿದ್ದು, ಕೆಲ ಲಸಿಕೆಗಳು ಅಂತಿಮ ಹಂತದ ಪರೀಕ್ಷೆಯಲ್ಲಿವೆ. ಈ ವರ್ಷದ ಅಂತ್ಯದಲ್ಲಿ ನಾವು ಲಸಿಕೆಯನ್ನು ಹೊಂದಬಹುದು ಎಂದು ಕೆಲವರು ಹೇಳುತ್ತಿದ್ದರೆ, ಈ ಲಸಿಕೆ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಪರಿಣಾಮಕಾರಿಯಾಗಿದೆ ಎನ್ನುವುದು ದೃಢಪಟ್ಟ ಬಳಿಕವಷ್ಟೇ ವ್ಯಾಪಕವಾಗಿ ಹಂಚಲು ಸಾಧ್ಯ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.

ಲಸಿಕೆ ಲಭ್ಯವಾಗುವ ವರೆಗೆ ವೈದ್ಯಕೀಯ ಸಮುದಾಯವು, ಕೋವಿಡ್-19 ಸ್ಥಿತಿಯನ್ನು ನಿಭಾಯಿಸುವ ಹಲವು ಆಯ್ಕೆಗಳನ್ನು ಕಲಿಯುತ್ತಿದೆ. ವೈರಸ್ ನಿರೋಧಕ ಔಷಧಿಗಳು, ಸ್ಟಿರಾಯ್ಡ್ ಗಳು ಮತ್ತು ಪ್ರತಿರೋಧ ಶಕ್ತಿ ಉತ್ತೇಜಕಗಳು ಮತ್ತು ಪ್ರತಿರೋಧ ಶಕ್ತಿಯನ್ನು ಮಾರ್ಪಡಿಸುವ ಇಮ್ಯುನೋಸಿ ಆಲ್ಫಾದಂಥ ವಿಧಾನಗಳನ್ನು ಬಳಸಲಾಗುತ್ತಿದೆ.

English summary
Critical Care Specialists across India are recommending and using Thymosin Alpha 1 - A New Therapy, that’s Helping in Recovery of Covid-19 Patients and Bringing Them Back to Life & Ultimately Helping in reducing Mortality Rate.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X