keyboard_backspace

ದೇಶದಲ್ಲಿ ಕೋವಿಡ್‌ ಲಸಿಕೆಯ ಪ್ರಥಮ ಡೋಸ್‌ ನೀಡಿಕೆ ಅಕ್ಟೋಬರ್‌‌ನಲ್ಲಿ ಸಂಪೂರ್ಣ ಸಾಧ್ಯತೆ

Google Oneindia Kannada News

ನವದೆಹಲಿ, ಆಗಸ್ಟ್‌ 30: ಕೇಂದ್ರ ಸರ್ಕಾರವು ಅಕ್ಟೋಬರ್‌ ತಿಂಗಳಿನ ಅಂತ್ಯವಾಗುವಷ್ಟರಲ್ಲಿ ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ವಿರುದ್ದದ ಲಸಿಕೆಯ ಮೊದಲ ಡೋಸ್‌ ನೀಡುವ ಕಾರ್ಯವನ್ನು ಪೂರ್ಣಗೊಳಿಸುವ ನಿರೀಕ್ಷೆಯನ್ನು ಹೊಂದಿದೆ ಹಾಗೂ ಸೆಪ್ಟೆಂಬರ್‍ ಅಂತ್ಯದ ವೇಳೆಗೆ ಹಲವಾರು ರಾಜ್ಯಳು ತಮ್ಮ ಮೊದಲ ಕೋವಿಡ್‌ ಲಸಿಕೆ ಡೋಸ್‌ ನೀಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ನ್ಯೂಸ್‌ 18 ತಿಳಿಸಿರುವುದಾಗಿ ವರದಿಯಾಗಿದೆ.

ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯು ದೇಶವನ್ನು ಅಪ್ಪಳಿಸಲಿದೆ ಎಂಬ ಆತಂಕದ ಬೆನ್ನಲ್ಲೇ ಕೊರೊನಾ ವೈರಸ್‌ ಸೋಂಕು ವಿರುದ್ದದ ಲಸಿಕೆ ನೀಡಿಕೆ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗಿದೆ. ಎಲ್ಲಾ ಹಬ್ಬಗಳು ಮುಗಿಯುವಷ್ಟರಲ್ಲಿ ಅಕ್ಟೋಬರ್‌ ಕೊನೆಯಲ್ಲಿ ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯು ಕಂಡು ಬರಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಎರಡೂ ಕೊರೊನಾ ವೈರಸ್‌ ಸೋಂಕು ವಿರುದ್ದ ಲಸಿಕೆಯನ್ನು ಪಡೆದಿದ್ದರೆ ಮಾತ್ರ ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆ ಪಡೆಯಲು ಸಾಧ್ಯತೆ ಎಂಬುವುದನ್ನು ಕೂಡಾ ತಜ್ಞರು ಹೇಳಿದ್ದಾರೆ.

ಕೊರೊನಾ ಲಸಿಕೆ ಅಭಿಯಾನಕ್ಕೆ ಪುಷ್ಟಿ ನೀಡಲು ಬಂದಿದೆ 'ವ್ಯಾಕ್ಸಿನೇಷನ್ ಆನ್ ವ್ಹೀಲ್ಸ್'ಕೊರೊನಾ ಲಸಿಕೆ ಅಭಿಯಾನಕ್ಕೆ ಪುಷ್ಟಿ ನೀಡಲು ಬಂದಿದೆ 'ವ್ಯಾಕ್ಸಿನೇಷನ್ ಆನ್ ವ್ಹೀಲ್ಸ್'

ಇನ್ನು ದೇಶದಲ್ಲಿ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾಗಿರುವ ಸುಮಾರು 94 ಕೋಟಿ ವಯಸ್ಕ ಕೋವಿಡ್‌ ಲಸಿಕೆ ಫಲಾನುಭವಿಗಳ ಪೈಕಿ ಈವರೆಗೆ ಸುಮಾರು 49 ಕೋಟಿ ಕೋವಿಡ್‌ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಹಾಗೆಯೇ ಈ ವರ್ಷ ಕೊನೆಯಾಗುವುದರೊಳಗೆ ಎಲ್ಲಾ ವಯಸ್ಕರಿಗೆ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.

ಕೇರಳ ಸೇರಿದಂತೆ ಈ ರಾಜ್ಯದಲ್ಲಿ ಸೆ. ನಲ್ಲೇ ಮೊದಲ ಡೋಸ್‌ ನೀಡಿಕೆ ಪೂರ್ಣ

ಕೇರಳ ಸೇರಿದಂತೆ ಈ ರಾಜ್ಯದಲ್ಲಿ ಸೆ. ನಲ್ಲೇ ಮೊದಲ ಡೋಸ್‌ ನೀಡಿಕೆ ಪೂರ್ಣ

ಈ ನಡುವೆ ಕೇರಳ ರಾಜ್ಯ ಹಾಗೂ ಮಧ್ಯಪ್ರದೇಶ ರಾಜ್ಯವು ಫಲಾನುಭವಿಗಳಿಗೆ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಮೊದಲ ಡೋಸ್‌ ನೀಡುವುದನ್ನು ಸೆಪ್ಟೆಂಬರ್‌ ಕೊನೆಯಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಹೇಳಿಕೊಂಡಿದೆ. ಇನ್ನು ಹಿಮಾಚಲ ಪ್ರದೇಶ ಈಗಾಗಲೇ ಎಲ್ಲಾ ಫಲಾನುಭವಿಗಳಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ ಎಂದು ಹೇಳಿದೆ. ಇನ್ನು ಉತ್ತಡಾಖಂಡ, ಗುಜರಾತ್‌, ರಾಜಸ್ಥಾನ, ದೆಹಲಿ, ಕರ್ನಾಟಕ, ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಚಂಡೀಗಢ, ತ್ರಿಪುರ, ಮಿಜೋರಾಂ ಮತ್ತು ಸಿಕ್ಕಿಂ ಕೋವಿಡ್‌ ಲಸಿಕೆ ಫಲಾನುಭವಿಗಳಿಗೆ ಸೆಪ್ಟೆಂಬರ್‍ ಕೊನೆಯಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯನ್ನು ಕೊನೆಗೊಳಿಸುವ ಸಾಧ್ಯತೆ ಇದೆ. ಈವರೆಗೆ ಈ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು ಶೇಕಡ 60 ರಷ್ಟು ಕೋವಿಡ್‌ ಲಸಿಕೆ ಫಲಾನುಭವಿಗಳು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

'ನಿಮ್ಮ ಕಾಳಜಿ ನೀವೇ ವಹಿಸಿ; ಸರ್ಕಾರ ವ್ಯಾಪಾರದಲ್ಲಿ ಬ್ಯುಸಿ ಆಗಿದೆ''ನಿಮ್ಮ ಕಾಳಜಿ ನೀವೇ ವಹಿಸಿ; ಸರ್ಕಾರ ವ್ಯಾಪಾರದಲ್ಲಿ ಬ್ಯುಸಿ ಆಗಿದೆ'

 ಯುಪಿ ಸೇರಿ ಈ ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪೂರ್ಣ ತಡ

ಯುಪಿ ಸೇರಿ ಈ ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪೂರ್ಣ ತಡ

ಇನ್ನು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ ಹಾಗೂ ತಮಿಳುನಾಡು ಇನ್ನು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಲಸಿಕೆಯನ್ನು ನೀಡಿಲ್ಲದ ಕಾರಣ ಈ ರಾಜ್ಯಗಳಲ್ಲಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ನೀಡಿಕೆ ಪೂರ್ಣಗೊಳಿಸುವುದು ಕೊಂಚ ಅಧಿಕ ಸಮಯವನ್ನು ತೆಗೆದುಕೊಳ್ಳಬಹುದು. ಇನ್ನು ಎರಡು ತಿಂಗಳಿನಲ್ಲಿ ದೇಶಕ್ಕೆ ಸುಮಾರು 50 ಕೋಟಿ ಕೋವಿಡ್‌ ಲಸಿಕೆ ಡೋಸ್‌ಗಳು ಲಭಿಸುವ ನಿರೀಕ್ಷೆಯಿದೆ. ಇನ್ನು ಪ್ರಸ್ತುತ ದೈನಂದಿನ ಕೋವಿಡ್‌ ಲಸಿಕೆ ನೀಡಿಕೆಯಲ್ಲಿ ಶೇಕಡ 70 ರಷ್ಟು ಮಂದಿ ಮೊದಲ ಕೋವಿಡ್‌ ಲಸಿಕೆ ಡೋಸ್‌ ಪಡೆಯುತ್ತಿರುವವರು ಆಗಿದ್ದಾರೆ. ಕೋವಿಶೀಲ್ಡ್‌ ಲಸಿಕೆ ಪಡೆದವರು ಸುಮಾರು ಮೂರು ತಿಂಗಳ ನಂತರ ಮತ್ತೆ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆಯಬಹುದಾಗಿದೆ. ಆದ್ದರಿಂದ ನವೆಂಬರ್‍, ಡಿಸೆಂಬರ್‌ ತಿಂಗಳಿನಲ್ಲಿ ಎರಡನೇ ಡೋಸ್‌ ಕೋವಿಡ್‌ ಲಸಿಕೆ ನೀಡಿಕೆಯ ಅಧಿಕವಾಗುವ ಸಾಧ್ಯತೆಯಿದೆ.

 ಮೊದಲ ಡೋಸ್‌ ಲಸಿಕೆ ನೀಡಿಕೆ ಪೂರ್ಣವಾದೀತೆ?

ಮೊದಲ ಡೋಸ್‌ ಲಸಿಕೆ ನೀಡಿಕೆ ಪೂರ್ಣವಾದೀತೆ?

ವರ್ಷದ ಅಂತ್ಯದ ವೇಳೆಗೆ ಎಲ್ಲಾ 94 ಕೋಟಿ ವಯಸ್ಕರಿಗೆ ಸಂಪೂರ್ಣ ಕೋವಿಡ್‌ ಲಸಿಕೆ ಹಾಕುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ. ಆದರೆ ಅದು ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗಳನ್ನು ತಜ್ಞರು ಕೇಳಿದ್ದಾರೆ. "ಇಡೀ ಜನಸಂಖ್ಯೆಯ ಸುಮಾರು ಶೇಕಡ 80 ರಷ್ಟು ಜನರು ಡಿಸೆಂಬರ್ ವೇಳೆಗೆ ಕೋವಿಡ್‌ ಲಸಿಕೆಯನ್ನು ಪಡೆಯಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಹಿನ್ನೆಲೆ ಉಳಿದವರು ಲಸಿಕೆ ಪಡೆಯಲಾರರು. ಕೋವಿಡ್‌ ಲಸಿಕೆ ಪಡೆಯಲು ಈಗಾಗಲೇ ಬಾಕಿ ಉಳಿದಿರುವ 45+ ವಯಸ್ಸಿನ ಜನಸಂಖ್ಯೆಯ ಒಂದು ಭಾಗವು ಇದೆ. ಏಪ್ರಿಲ್‌ನಿಂದ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದರೂ ಸಾಕಷ್ಟು ಕೋವಿಡ್‌ ಲಸಿಕೆ ಲಭ್ಯವಿದ್ದರೂ 45+ ವಯಸ್ಸಿನ ಅಧಿಕ ಜನರು ಲಸಿಕೆಯನ್ನು ಪಡೆದುಕೊಂಡಿಲ್ಲ," ಎಂದು ತಜ್ಞರು ಹೇಳಿದ್ದಾರೆ.

ದೇಶದ ದೈನಂದಿನ ಕೋವಿಡ್‌ ಪ್ರಕರಣದಲ್ಲಿ ಕೇರಳದ ಪಾಲು ಶೇ. 68!ದೇಶದ ದೈನಂದಿನ ಕೋವಿಡ್‌ ಪ್ರಕರಣದಲ್ಲಿ ಕೇರಳದ ಪಾಲು ಶೇ. 68!

 ಅಕ್ಟೋಬರ್‌ ಅಂತ್ಯದಲ್ಲಿ ಚಿತ್ರಣ ಸ್ಪಷ್ಟವಾಗಲಿದೆ

ಅಕ್ಟೋಬರ್‌ ಅಂತ್ಯದಲ್ಲಿ ಚಿತ್ರಣ ಸ್ಪಷ್ಟವಾಗಲಿದೆ

ಇನ್ನೊಬ್ಬ ಹಿರಿಯ ಅಧಿಕಾರಿಯು, "ಕೊರೊನಾ ವೈರಸ್‌ ಸೋಂಕಿನ ವಿರುದ್ದ ನೀಡುವ ಲಸಿಕೆಯ ಮೊದಲ ಡೋಸ್‌ಗೆ ಬೇಡಿಕೆಗಳು ಕಡಿಮೆಯಾದ ಸಂದರ್ಭದಲ್ಲಿ ಅಕ್ಟೋಬರ್ ಅಂತ್ಯದ ವೇಳೆಗೆ ಚಿತ್ರವು ಸ್ಪಷ್ಟವಾಗುತ್ತದೆ," ಎಂದು ಹೇಳಿದ್ದಾರೆ. "ಈಗಾಗಲೇ ಅಧಿಕ ಮಂದಿಗೆ ಕೋವಿಡ್‌ನ ಮೊದಲ ಡೋಸ್‌ ಲಸಿಕೆ ನೀಡಿದೆ. ಆದರೆ ಉಳಿದವಿಗೆ ಕೋವಿಡ್‌ ಲಸಿಕೆ ನೀಡುವಲ್ಲಿ ಭಾರೀ ಕಷ್ಟ ಅನುಭವಿಸುತ್ತಿದೆ. ಕೋವಿಡ್‌ ಲಸಿಕೆಯನ್ನು ಪಡೆಯದವರಿಗೆ ಕೋವಿಡ್‌ ಲಸಿಕೆಯನ್ನು ನೀಡಲು ಮತದಾರರ ಪಟ್ಟಿಯ ಸಹಾಯವನ್ನು ತೆಗೆದುಕೊಳ್ಳುತ್ತಿದೆ. ಜನರು ಕೋವಿಡ್‌ ಲಸಿಕೆ ಪಡೆಯುವಂತೆ ಪ್ರೋತ್ಸಾಹ ಮಾಡಲು ಹಳ್ಳಿಗಳಲ್ಲಿ ವಿಶೇಷ ಪ್ರಚಾರಗಳನ್ನು ನಡೆಸುತ್ತಿದೆ," ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
The government is expecting to substantially complete the first dose job in the country by the end of October and about a dozen states to do so by the end of September.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X