keyboard_backspace

ಕಾಳಸಂತೆಯಲ್ಲಿ ನಕಲಿ ರೆಮ್‌ಡೆಸಿವಿರ್ ಮಾರಾಟ, ಅಧಿಕಾರಿಗಳು ಹೇಳಿದ್ದೇನು?

Google Oneindia Kannada News

ಬೆಂಗಳೂರು, ಏಪ್ರಿಲ್ 28: ಕೊರೊನಾ ಸೋಂಕಿತರಿಗೆ "ಸಂಜೀವಿನಿ" ಎಂದೇ ಭಾವಿಸಲ್ಪಟ್ಟಿರುವ ರೆಮ್‌ಡೆಸಿವಿರ್ ನಕಲಿ ಔಷಧ ಮಾರಾಟವಾಗುತ್ತಿದೆ ಎಂಬ ಬಹುದೊಡ್ಡ ಸಂಶಯ ಹುಟ್ಟಿಕೊಂಡಿದೆ.

ರೆಮ್‌ಡೆಸಿವಿರ್ ಇಂಜೆಕ್ಷನ್ ಹೆಸರಿನಲ್ಲಿ ನಕಲಿ ರೆಮ್‌ಡೆಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಸುದ್ದಿ ಸಾರ್ವಜನಿಕರ ನಿದ್ದೆಗೆಡಿಸಿದೆ. ಈ ಕುರಿತ ಮೆಡಿಕಲ್ ಆಕ್ಟಿವಿಸ್ಟ್ ಜಗದೀಶ್ ರಾಜ್ಯ ಔಷಧ ನಿಯಂತ್ರಣಾಲಯದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಕಲಿ ರೆಮ್‌ಡೆಸಿವಿರ್ ಔಷಧ ಬಗ್ಗೆ ರಾಜ್ಯ ಔಷಧ ನಿಯಂತ್ರಣಾಲಯದ ಅಧಿಕಾರಿಗಳು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ಸೋಂಕಿತರಿಗೆ ರೆಮ್‌ಡಿಸಿವಿರ್ ಇಂಜೆಕ್ಷನ್ ನೀಡಲಾಗುತ್ತಿದೆ. ಆರು ಸಾವಿರ ಮೌಲ್ಯದ ಈ ಇಂಜೆಕ್ಷನ್ ಕಾಳಸಂತೆಯಲ್ಲಿ ಒಂದು ಲಕ್ಷ ರೂಪಾಯಿಗೆ ಮಾರಾಟವಾದ ಉದಾಹರಣೆ ಇದೆ.ರೆಮ್‌ಡೆಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೆಡಿಕಲ್ ಸ್ಟೋರ್ ಸೇರಿದಂತೆ ಸುಮಾರು ಐದಕ್ಕೂ ಹೆಚ್ಚು ಪ್ರಕರಣ ಸಿಸಿಬಿ ಪೊಲೀಸರು ದಾಖಲಿಸಿದ್ದಾರೆ.

ಜೀವ ಅವಶ್ಯಕ ಔಷಧವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದವರ ಹೆಡೆಮುರಿ ಕಟ್ಟುವ ಕಾರ್ಯದಲ್ಲಿ ಸಿಸಿಬಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಔಷಧ ನಿಯಂತ್ರಣಾಲಯ ಅಧಿಕಾರಿಗಳು ಕೂಡ ಹಲವು ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ.

Covid 19: Suspicion of Fake Remdesivir Injection Selling In Black Market

ಆರ್‌ಟಿಐ ಕಾರ್ಯಕರ್ತರಿಂದ ದೂರು:
ಆದರೆ ಇದೀಗ ನಕಲಿ ರೆಮ್‌ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಸಂಗತಿ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆ ಆರಂಭವಾಗಿದೆ. ಅಸಲಿ ರೆಮ್‌ಡೆಸಿವಿರ್ ಹಾಗೂ ನಕಲಿ ರೆಮ್‌ಡಿಸಿವಿರ್ ಚುಚ್ಚು ಮದ್ದಿನ ಲೇಬಲ್ ಮೇಲೆ ಇರುವ ವ್ಯತ್ಯಾಸವನ್ನು ಗಮನಿಸಿರುವ ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ನಕಲಿ ರೆಮ್‌ಡೆಸಿವಿರ್ ಮಾರಾಟ ಮಾಡುತ್ತಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾಳಸಂತೆಯಲ್ಲಿ ನಕಲಿ ರೆಮ್‌ಡೆಸಿವಿರ್ ಮಾರಾಟ ಮಾಡುತ್ತಿದ್ದು ತನಿಖೆ ನಡೆಸಿ ಎಂದು ಕೋರಿ ಆರ್‌ಟಿಐ ಕಾರ್ಯಕರ್ತ ಎಸ್‌.ವಿ. ಜಗದೀಶ್ ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ಒಂದು ಕಡೆಯಾದರೆ, ಇನ್ನೊಂದು ಕಡೆ ನಕಲಿ ರೆಮ್‌ಡೆಸಿವಿರ್ ಮಾರಾಟ ಆಗುತ್ತಿರುವ ಮಾತು ಕೇಳಿ ಬರುತ್ತಿದೆ.

ಔಷಧ ನಿಯಂತ್ರಣಾಲಯದ ಅಧಿಕಾರಿ ಕೆಂಪಯ್ಯ ಸುರೇಶ್
ನಕಲಿ ರೆಮ್‌ಡೆಸಿವಿರ್ ಲೇಬಲ್‌ನಲ್ಲಿ ಹಲವು ವ್ಯತ್ಯಾಸವಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಜರುಗಿಸಿ ಎಂದು ಹೆಚ್ಚುವರಿ ಔಷಧ ನಿಯಂತ್ರಣಾಧಿಕಾರಿ ಕೆಂಪಯ್ಯ ಸುರೇಶ್ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಒನ್ಇಂಡಿಯಾ ಕನ್ನಡಕ್ಕೆ ಜಗದೀಶ್ ತಿಳಿಸಿದ್ದಾರೆ.

ರಾಜ್ಯದಲ್ಲಿ ರೆಮ್‌ಡೆಸಿವಿರ್ಹಂಚಿಕೆ ಜವಾಬ್ದಾರಿ ಹೊತ್ತಿರುವ ರಾಜ್ಯ ಔಷಧ ನಿಯಂತ್ರಣಾಲಯದ ಅಧಿಕಾರಿ ಕೆಂಪಯ್ಯ ಸುರೇಶ್ ಅವರನ್ನು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ, " ರೆಮ್‌ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ನಿಜ.

ಈ ಕುರಿತು ಹಲವರ ವಿರುದ್ಧ ನಾವೇ ಕ್ರಿಮಿನಲ್ ಕೇಸ್ ಬುಕ್ ಮಾಡಿದ್ದೇವೆ. ನಕಲಿ ರೆಮ್‌ಡೆಸಿವಿರ್ ಮಾರಾಟದ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಪರಿಶೀಲನೆ ಮಾಡುತ್ತೇವೆ. ನಮ್ಮ ಗಮನಕ್ಕೆ ಬಂದರೆ ಕೂಡಲೇ ಕ್ರಮ ಜರುಗಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Covid 19: Suspicion of Fake Remdesivir Injection Selling In Black Market

ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ
ರಾಷ್ಟ್ರದಲ್ಲಿ ಉತ್ಪಾದನೆಯಾಗುತ್ತಿರುವ ಪ್ರತಿಯೊಂದು ರೆಮ್‌ಡೆಸಿವಿರ್ ಚುಚ್ಚು ಮದ್ದು ಚಾಲೆನೈಸ್ ಆಗುತ್ತಿದೆ. ಎಲ್ಲಾ ಅಧಿಕಾರಿಗಳು ಅದರಲ್ಲೇ ಬ್ಯುಸಿಯಾಗಿದ್ದೇವೆ. ಒಂದು ವ್ಯವಸ್ಥೆಯ ಮೂಲಕವೇ ದೇಶದೆಲ್ಲೆಡೆ ರೆಮ್‌ಡೆಸಿವಿರ್ ಹಂಚಿಕೆಯಾಗುತ್ತಿದೆ.

ಉತ್ಪಾದನೆಯಾಗುತ್ತಿರುವ ರೆಮ್‌ಡೆಸಿವಿರ್‌ಗೆ ಒಂದು ವಯಲ್ ಸೇರ್ಪಡೆ ಮಾಡಲಿಕ್ಕೂ ಸಾಧ್ಯವಿಲ್ಲ. ನಮಗೆ ಲೆಕ್ಕ ಸಿಗುತ್ತದೆ. ಉದಾಹರಣೆಗೆ ಒಬ್ಬ ನೂರು ರೆಮ್‌ಡೆಸಿವಿರ್ ಉತ್ಪಾದನೆ ಮಾಡಿದ ಅಂದಿಟ್ಟುಕೊಳ್ಳಿ. ಅದು ಸಿಎಂಡ್‌ಎಫ್‌ಗೆ ಬರುತ್ತದೆ.

ಅಲ್ಲಿ ನೂರು ವಯಲ್‌ಗೂ ಬಿಲ್ ಆಗಿ ಎಲ್ಲಿಗೆ ಹೋಗಿದೆ ಎಂಬ ಲೆಕ್ಕ ಸಿಗುತ್ತದೆ. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ನನಗೆ ಅನುಮಾನವಿದೆ.

ಈ ಹಿಂದೆ ರೆಮ್‌ಡೆಸಿವಿರ್‌ಗೆ ಬೇಡಿಕೆ ಇರಲಿಲ್ಲ. ಈಗ ಬಂದಿರುವುದು. ಬ್ಲಾಕ್ ಮಾರ್ಕೆಟ್‌ನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ನಾವೇ ದಾಳಿ ನಡೆಸಿ ಕೇಸು ದಾಖಲಿಸಿದ್ದೇವೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಅಡಿಷನಲ್ ಡ್ರಗ್ ಕಂಟ್ರೋಲರ್ ಕೆಂಪಯ್ಯ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.

ಚುಚ್ಚುಮದ್ದಿಗೆ ಎಲ್ಲಿಲ್ಲದ ಬೇಡಿಕೆ
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದನ್ನೇ ದಾಳವಾಗಿ ಬಳಸಿಕೊಳ್ಳುತ್ತಿರುವ ದುರುಳರು ಹತ್ತು ಪಟ್ಟು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ.

ಇದೇ ಅವಧಿಯಲ್ಲಿ ನಕಲಿ ರೆಮ್‌ಡೆಸಿವಿರ್ ಮಾರಾಟ ವಾಗುತ್ತಿದೆ ಎಂಬ ಸಂಗತಿ ಮತ್ತಷ್ಟು ಗಾಬರಿ ಹುಟ್ಟಿಸುವಂತಿದೆ. ಈ ಕುರಿತು ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳು ತನಿಖೆ ನಡೆಸಿ ವಾಸ್ತವ ಸಂಗತಿಯನ್ನು ಸಮಾಜದ ಮುಂದಿಡುವುದು ಒಂದೇ ಸೂಕ್ತ ಪರಿಹಾರ.

ಒಂದು ವೇಳೆ ಕಾಳ ಸಂತೆಯಲ್ಲಿ ನಕಲಿ ರೆಮ್‌ಡೆಸಿವಿರ್ ಮಾರಾಟ ಮಾಡಿದ್ದೇ ಆದಲ್ಲಿ ಅದನ್ನು ಪತ್ತೆ ಮಾಡಿ ನಿಯಂತ್ರಣ ಮಾಡಬೇಕು. ಹಣದಾಸೆಗೆ ಬಿದ್ದಿರುವ ವಂಚಕರು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಬಡ ಜೀವಗಳ ಜತೆ ಆಟ ಆಡಬಹುದು.

ಇದನ್ನು ತಪ್ಪಿಸುವ ಜವಾಬ್ಧಾರಿ ಔಷಧ ನಿಯಂತ್ರಣ ಅಧಿಕಾರಿಗಳ ಮೇಲಿದೆ. ಅಥವಾ ಇದು ನಕಲಿ ಯಾಗಿದ್ದಲಿ ಈ ಕುರಿತ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹರಿಬಿಟ್ಟಿರುವ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕಿದೆ.

English summary
State drug control department officials gives clarification about selling of fake remdesivir injection in black market. Know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X