National Help Line Number
+91-11-23978046
Toll Free No: 1075

ಭಾರತದಲ್ಲಿ ಕೊರೊನಾವೈರಸ್ ಪ್ರಯಾಣ ನಿರ್ಬಂಧ

Oneindia
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಕೊವಿಡ-19 ಸೋಂಕು ಇಲ್ಲ ಎಂಬುದು ದೃಢಪಟ್ಟ ಬಳಿಕವಷ್ಟೇ ಮನೆಗೆ ತೆರಳುವುದಕ್ಕೆ ಅವಕಾಸ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ಕೊವಿಡ್ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು
    ಎಲ್ಲಾ ರೋಗಲಕ್ಷಣರಹಿತ ಪ್ರಯಾಣಿಕರಿಗೆ ಸ್ಥಳೀಯ / ಖಾಸಗಿ ಸಾರಿಗೆಯಿಂದ ತಮ್ಮ ನಿವಾಸ / ಸ್ಥಳಗಳಿಗೆ ಪ್ರಯಾಣಿಸಲು ಅವಕಾಶವಿರುತ್ತದೆ. ಗೊತ್ತುಪಡಿಸಿದ ಕೋವಿಡ್ ಕೇರ್ ಕೇಂದ್ರದಲ್ಲಿ ರೋಗಲಕ್ಷಣವುಳ್ಳ ಪ್ರಯಾಣಿಕರನ್ನು ಪ್ರತ್ಯೇಕಿ ಇಡಲಾಗುತ್ತದೆ.
ಆಂಧ್ರಪ್ರದೇಶ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು https://www.spandana.ap.gov.in/online_user ಗೆ ದಾಖಲಾಗಬೇಕಾಗುತ್ತದೆ. ಪ್ರತಿಯೊಬ್ಬ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ನಂತರದಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟರೆ ಅವರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ. ಕೊವಿಡ್ ಹಾಟ್ ಸ್ಪಾಟ್ ನಿಂದ ಆಗಮಿಸಿದ ಜನರನ್ನು 7 ದಿನ ಸಾಂಸ್ಥಿಕ ದಿಗ್ಬಂಧನ ಹಾಗೂ 7 ದಿನ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
  • ನಾನು ಇತರ ದೇಶಗಳಿಂದ ಆಂಧ್ರಪ್ರದೇಶಕ್ಕೆ ಪ್ರಯಾಣಿಸಬಹುದೇ?
    ರಾಜ್ಯಕ್ಕೆ ಪ್ರಯಾಣಿಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಟಿಕೆಟ್ ಖರೀದಿಸುವ ಮೊದಲು spandana.ap.gov.in ಗೆ ದಾಖಲಾಗಬೇಕು. ರೋಗದ ಲಕ್ಷಣ ಕಂಡು ಬಂದವರನ್ನು ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರಿಸಲಾಗುತ್ತದೆ. ಏಳು ದಿನಗಳ ನಂತರ ಮತ್ತೊಮ್ಮೆ ತಪಾಸಣೆಗೊಳಪಡಿಸಲಾಗುತ್ತದೆ. ಸೋಂಕಿನ ಲಕ್ಷಣಗಳು ಕಂಡು ಬಾರದಿದ್ದರೆ ಅಂಥವರನ್ನು ಬಿಡುಗಡೆಗೊಳಿಸಿ 7 ದಿನ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
అరుణాచల్ ప్రదేశ్
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ರಾಜ್ಯದೊಳಗೆ ಸಂಚರಿಸಬಹುದು, ತಪಾಸಣೆ ಬಳಿಕ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ಸ್ಥಳೀಯರಾಗಿದ್ದರೆ ಸಂಚರಿಸಬಹುದಾಗಿದೆ. ಬೇರೆ ಕಡೆಯಿಂದ ರಾಜ್ಯಕ್ಕೆ ಬರುವವರುಗೆ ಅನುಮತಿ ಇಲ್ಲ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಆರೋಗ್ಯ ಸೇತು ಆ್ಯ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರೋಗದ ಲಕ್ಷಣ ಕಾಣಿಸಿಕೊಳ್ಳದಿದ್ದರೂ ಎಲ್ಲ ಪ್ರಯಾಣಿಕರು 14 ದಿನ ಗೃಹ ದಿಗ್ಬಂಧನದಲ್ಲಿ ಇರುವುದು ಕಡ್ಡಾಯವಾಗಿದೆ. ಸೋಂಕು ಕಾಣಿಸಿಕೊಂಡಲ್ಲಿ ಚಿಕಿತ್ಸೆಗಾಗಿ ಕೊವಿಡ್ ಕೇರ್ ಗೆ ಕಳುಹಿಸಿ ಕೊಡಲಾಗುತ್ತದೆ.
ಅಸ್ಸಾಂ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳಿಲ್ಲದಿದ್ದರೆ,ಮುಕ್ತವಾಗಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    7 ದಿನಗಳ ಗೃಹ ದಿಗ್ಬಂಧನ ಕಡ್ಡಾಯವಾಗಿದೆ. ಗರ್ಭಿಣಿಯರು, 75 ವರ್ಷಕ್ಕಿಂತ ಮೇಲ್ಪಟ್ಟವೃದ್ಧರಿಗೆ ವಿನಾಯಿತಿ ನೀಡಲಾಗಿದೆ. ಆಪ್ತ ಸಂಬಂಧಿಕರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ ಹಾಗೂ ಆಪ್ತ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 10ವರ್ಷಕ್ಕಿಂತ ಪುಟ್ಟ ಮಕ್ಕಳು, ವಿಕಲಚೇತನರು, 75 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಿನಾಯಿತಿ ನೀಡಲಾಗಿದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ವಿದೇಶಗಳಿಂದ ಆಗಮಿಸುವ ಮೊದಲೇ ಪ್ರತಿಯೊಬ್ಬರೂ 7 ದಿನಗಳ ಕಾಲ ಸಾಂಸ್ಥಿಕ ದಿಗ್ಬಂಧನ ಕೇಂದ್ರದಲ್ಲಿರಬೇಕು. ಅದಕ್ಕಾಗಿ ಹಣವನ್ನು ಪಾವತಿಸಬೇಕು. ನಂತರದಲ್ಲಿ 7 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿದ್ದುಕೊಂಡು ಆರೋಗ್ಯದ ಬಗ್ಗೆ ಸ್ವಯಂ ಕಾಳಜಿ ಹೊಂದಿರಬೇಕು. ವಿಕಲಚೇತರು, ಗರ್ಭಿಣಿಯರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ನಿಕಟ ಸಂಬಂಧಿಗಳ ಅಂತ್ಯಸಂಸ್ಕಾರಕ್ಕೆ ತೆರಳುವವರಿಗೆ ವಿನಾಯಿತಿ ನೀಡಲಾಗಿದೆ.
ಬಿಹಾರ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ಗುಜರಾತ್‌ನ ಅಹಮದಾಬಾದ್‌ನ ಸೂರತ್‌, ಮಹಾರಾಷ್ಟ್ರದ ಮುಂಬೈ, ಪುಣೆ; ದೆಹಲಿ, ಗಾಜಿಯಾಬಾದ್, ಫರಿದಾಬಾದ್, ಉತ್ತರ ಪ್ರದೇಶದ ನೋಯ್ಡಾ; ಪಶ್ಚಿಮ ಬಂಗಾಳದ ಕೋಲ್ಕತಾ, ಗುರುಗ್ರಾಮ್ ಮತ್ತು ಕರ್ನಾಟಕದ ಬೆಂಗಳೂರಿನಿಂದ ಆಗಮಿಸುವ ಪ್ರಯಾಣಿಕರಿಗೆ 14 ದಿನ ಕ್ವಾರೆಂಟೈನ್ ನಲ್ಲಿ ಇರಿಸಲಾಗುತ್ತದೆ.
  • ನಾನು ಇತರ ದೇಶಗಳಿಂದ ಬಿಹಾರಕ್ಕೆ ಪ್ರಯಾಣಿಸಬಹುದೇ?
    ಹೌದು, ಆದರೆ ನಿಮ್ಮಲ್ಲಿ ರೋಗದ ಲಕ್ಷಣವಿಲ್ಲದಿದ್ದರೂ 14 ದಿನಗಳವರೆಗೆ ಕಡ್ಡಾಯವಾಗಿ ಕ್ವಾರೆಂಟೈನ್ ನಲ್ಲಿ ಇರಿಸಲಾಗುತ್ತದೆ. ಅದಕ್ಕಾಗಿ ನೀವು ಹಣ ಪಾವತಿಸಬೇಕಾಗುತ್ತದೆ. ರೋಗಲಕ್ಷಣವಿರುವ ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲಾಗುತ್ತದೆ.
ఛత్తీస్గఢ్
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ರಾಜ್ಯದೊಳಗೆ ಮುಕ್ತವಾಗಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ರಾಜ್ಯದೊಳಗೆ ಸಂಚರಿಸಬಹುದು ಆದರೆ https://raipur.gov.in/cg-covid-19-epass/. ಇ ಪಾಸ್ ಪಡೆಯಬೇಕು. 14 ದಿನಗಳ ಕಾಲ ಗೃಹಬಂಧನದಲ್ಲಿರಬೇಕಾಗುತ್ತದೆ. ನಿಮಗೆ ರೋಗದ ಲಕ್ಷಣಗಳು ಕಂಡುಬಂದಲ್ಲಿ ಕೊವಿಡ್ 19 ಕೇರ್ ಸೆಂಟರ್‌ಗೆ ಕಳುಹಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ರೋಗದ ಲಕ್ಷಣಗಳಿಲ್ಲದ ಪ್ರಯಾಣಿಕರು 14 ದಿನ ಗೃಹ ದಿಗ್ಬಂಧನದಲ್ಲಿರಬೇಕು. ಪ್ರತ್ಯೇಕತೆಯ ಮಾನದಂಡದ ಅನುಸಾರವಾಗಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ఢిల్లీ
  • ದೆಹಲಿಯೊಳಗೆ ನಾನು ಸಂಚರಿಸಬಹುದೇ?
    ದೆಹಲಿಯ ಒಳಗೆ ಸಂಚರಿಸುವವರಿಗೆ ಯಾವುದೇ ನಿರ್ಬಂಧವಿಲ್ಲ. ಟಿಡಿಸಿ ಬಸ್ ಹಾಗೂ ಇತರೆ ಸಾರ್ವಜನಿಕ ಮತ್ತು ಖಾಸಗಿ ವಾಹನಗಳಲ್ಲಿ ದೆಹಲಿಯೊಳಗೆ ಸಂಚರಿಸಬಹುದು.
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ದೆಹಲಿಗೆ ಸಂಚರಿಸಬಹುದು ಆದರೆ 14 ದಿನಗಳ ಕಾಲ ಗೃಹಬಂಧನದಲ್ಲಿರಬೇಕಾಗುತ್ತದೆ.
  • ದೆಹಲಿಯಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು ಯಾವುವು?
    ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ -19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ನಂತರ 7 ದಿನಗಳ ಸಾಂಸ್ಥಿಕ ದಿಗ್ಬಂಧನದಲ್ಲಿ ಇರಬೇಕು. ಕೊವಿಡ್ ಲಕ್ಷಣರಹಿತ ಪ್ರಯಾಣಿಕರನ್ನು 7 ದಿನ ಗೃಹ ದಿಗ್ಬಂಧನದಲ್ಲಿ ಇರಿಸಲು ಅನುಮತಿ ನೀಡಲಾಗುತ್ತದೆ. ದೆಹಲಿಗೆ ಆಗಮಿಸುವವರು ಕಡ್ಡಾಯವಾಗಿ https://www.mygov.in/aarogya-setu-app/ ಲಿಂಕ್ ನಿಂದ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಗೋವಾ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ, ಮುಕ್ತವಾಗಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರೋಗದ ಲಕ್ಷಣಗಳು ಕಂಡು ಬಾರದಿದ್ದಲ್ಲಿ ನೀವು ತಪಾಸಣೆಗೆ ಒಳಪಡುವ ಅಗತ್ಯವಿಲ್ಲ. ಬದಲಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಗೃಹ ದಿಗ್ಬಂಧನಕ್ಕೆ ಒಳಗಾಗಬೇಕು.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದಾಗ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ವೈದ್ಯಕೀಯ ಪರೀಕ್ಷಾ ವರದಿ ಬರುವವರೆಗೂ ಸಾಂಸ್ಥಿಕ ದಿಗ್ಬಂಧನದಲ್ಲಿರಬೇಕು.
గుజరాత్
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜ್ಯದೊಳಗೆ ಸಂಚರಿಸಲು ಯಾವುದೇ ನಿರ್ಬಂಧಗಳಿಲ್ಲ.
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾರು ಗುಜರಾತ್‌ ಸಂಚರಿಸಲಿದ್ದಾರೆ ಅವರು ರಾಜ್ಯ ಅಥವಾ ಜಿಲ್ಲಾಡಳಿತದಿಂದ ಒಪ್ಪಿಗೆ ಪಡೆಯಬೇಕು. ಲಾಗ್‌ ಇನ್‌ ಆಗಿ digitalgujarat.gov.in ಅನುಮತಿ ಪಡೆಯಬೇಕು.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಸೂರತ್‌ಗೆ ಆಗಮಿಸುವ ಮೊದಲು ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು http://www.suratm Municipal.gov.in ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ರೋಗಲಕ್ಷಣವಿಲ್ಲದವರಿಗೆ 14 ದಿನಗಳ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
ಹರಿಯಾಣ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ವರದಿ ನೆಗೆಟಿವ್ ಬಂದಿದ್ದರೆ, ಯಾವುದೇ ನಿರ್ಭಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಸೋಂಕು ತಗುಲದಿದ್ದರೂ 14 ದಿನಗಳ ಗೃಹ ದಿಗ್ಬಂಧನದಲ್ಲಿ ಇರಬೇಕು. ಆರೋಗ್ಯ ಸೇತು ಆಪ್ ನ್ನು ಕಡ್ಡಾಯವಾಗಿ ಬಳಸಬೇಕು.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ವಿದೇಶದಿಂದ ಆಗಮಿಸುವ ಎಲ್ಲ ಪ್ರಯಾಣಿಕರು 14 ದಿನಗಳ ಕಡ್ಡಾಯವಾಗಿ ಕ್ಯಾರೆಂಟೈನ್ ನಲ್ಲಿರಬೇಕು. 7 ದಿನ ಪಾವತಿಸಿದ ಸಾಂಸ್ಥಿಕ ಕ್ಯಾರೆಂಟೈನ್ ಮತ್ತು ನಂತರ 7 ದಿನ ಗೃಹ ದಿಗ್ಬಂಧನದಲ್ಲಿರಬೇಕು.
ಹಿಮಾಚಲ ಪ್ರದೇಶ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನಿಮಗೆ ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳಿಲ್ಲದಿದ್ದರೆ, ಯಾವುದೇ ನಿರ್ಬಂಧವಿಲ್ಲ.ಮುಕ್ತವಾಗಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಕೆಂಪು ವಲಯದಿಂದ ಬಂದರೆ 14 ದಿನಗಳ ಸಾಂಸ್ಥಿಕ ದಿಗ್ಬಂಧನ. ಕೊವಿಡ್ ಸೋಂಕು ಇಲ್ಲ ಎಂಬುದರ ಬಗ್ಗೆ ಪ್ರಮಾಣಪತ್ರ ನೀಡಿದರೆ, 14 ದಿನಗಳ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ರಾಜ್ಯ ನಿವಾಸಿಗಳಿಗೆ ಮಾತ್ರ ವಿಮಾನ ಪ್ರಯಾಣಕ್ಕೆ ಅವಕಾಶ. ಎಲ್ಲ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ ಅಲ್ಲದೇ 28 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಬೇಕಾಗುತ್ತದೆ. 7 ದಿನ ಸಾಂಸ್ಥಿಕ ದಿಗ್ಬಂಧನ ಹಾಗೂ 21 ದಿನ ಗೃಹ ದಿಗ್ಬಂಧನದಲ್ಲಿರಬೇಕಾಗುತ್ತದೆ. ಪ್ರತಿಯೊಬ್ಬ ಪ್ರಯಾಣಿಕರು ಆರೋಗ್ಯ ಸೇತು ಆ್ಯ ಹೊಂದುವುದು ಕಡ್ಡಾಯವಾಗಿದೆ.
ಜಮ್ಮು ಮತ್ತು ಕಾಶ್ಮೀರ
  • ಕೇಂದ್ರಾಡಳಿತ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿಬಂಧನೆಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಕೊವಿಡ್ ತಪಾಸಣೆ ಮತ್ತು ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯ. ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಎಂದು ಬರುವವರೆಗೂ ಸಾಂಸ್ಥಿಕ ದಿಗ್ಬಂಧನದಲ್ಲಿ ಇರಬೇಕು. ನಿಗದಿತ ಸಮಯದವರೆಗೂ ಗೃಹ ದಿಗ್ಬಂಧನದಲ್ಲಿ ಇರಬೇಕು.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ವಿದೇಶದಿಂದ ಆಗಮಿಸುವ ಎಲ್ಲ ಪ್ರಯಾಣಿಕರು ಕೊವಿಡ್ ಪರೀಕ್ಷೆ ಮತ್ತು 14 ದಿನಗಳ ಸಾಂಸ್ಥಿಕ ದಿಗ್ಬಂಧನ ಕಡ್ಡಾಯವಾಗಿದೆ. ತದನಂತರ ಸೋಂಕಿತ ಲಕ್ಷಣಗಳು ಕಾಣಿಸದಿದ್ದಲ್ಲಿ ಬಿಡುಗಡೆಗೊಳಿಸಿ 7 ದಿನಗಳ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
జార్ఖండ్
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜ್ಯದಲ್ಲಿ ಮುಕ್ತವಾಗಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜ್ಯಕ್ಕೆ ಸಂಚರಿಸಬಹುದು ಆದರೆ 14 ದಿನಗಳ ಕಾಲ ಗೃಹಬಂಧನದಲ್ಲಿರಬೇಕಾಗುತ್ತದೆ
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ನಿಮ್ಮಲ್ಲಿ ಸೋಂಕು ಕಾಣಿಸದಿದ್ದಲ್ಲಿ 14 ದಿನಗಳ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
ಕರ್ನಾಟಕ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜ್ಯದೊಳಗೆ ಹಾಗೂ ಜಿಲ್ಲೆಯೊಳಗಿನ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಇದಕ್ಕಾಗಿ ಯಾವುದೇ ಪಾಸ್ ಗಳನ್ನು ಪಡೆಯುವ ಅಗತ್ಯವಿಲ್ಲ.
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಪಾಸ್ ಇಲ್ಲದೆ ಪ್ರಯಾಣಿಕರು ಕರ್ನಾಟಕದಿಂದ ಹೊರಗೆ ಹೋಗಲು ಅವಕಾಶವಿದೆ. ಆದರೆ ರಾಜ್ಯಕ್ಕೆ ಪ್ರವೇಶಿಸಲು ಜನರು ಸೇವಾ ಸಿಂಧು ಅಪ್ಲಿಕೇಶನ್‌ನಿಂದ (https://sevasindhu.karnataka.gov.in/Sevasindhu/Kannada?ReturnUrl=%2F) ಪಾಸ್ ಪಡೆಯಬೇಕು. ಕರ್ನಾಟಕಕ್ಕೆ ಪ್ರವೇಶಿಸುವವರು 14 ದಿನಗಳ ಕಾಲ ಸೆಲ್ಫ್ ಕ್ವಾರೆಂಟೈನ್ ಗೆ ಒಳಪಡಬೇಕು. ಕೊರೊನಾ ವೈರಸ್ ಸೋಂಕು ಅಥವಾ ಸೋಂಕಿನ ಲಕ್ಷಣಗಳು ಕಂಡುಬಂದರೆ, ಅವರು ಸಾಂಸ್ಥಿಕ ಕ್ವಾರೆಂಟೈನ್ ಗೆ ಒಳಪಡಿಸಲಾಗುತ್ತದೆ.
  • ತಮಿಳುನಾಡು ಅಥವಾ ದೆಹಲಿಯಿಂದ ಕರ್ನಾಟಕಕ್ಕೆ ಪ್ರಯಾಣಿಸಿದರೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕೆ?
    ಇಲ್ಲ, ಕೇವಲ 14 ದಿನಗಳ ಹೋಂ ಕ್ವಾರಂಟೈನ್
  • ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಸಿದರೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕೆ?
    ಇಲ್ಲ,7 ದಿನದ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನದ ಹೋಂ ಕ್ವಾರಂಟೈನ್‌ನಲ್ಲಿರಬೇಕು
  • ವಂದೇ ಭಾರತ್ ವಿಮಾನದಲ್ಲಿ ಬೇರೆ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಪ್ರಯಾಣಿಸಬಹುದೇ?
    ಹೌದು, ಆದರೆ ನೀವು ಸೇವಾ ಸಿಂಧು ಪೋರ್ಟಲ್ ‌ನಲ್ಲಿ sevasindhu.karnataka.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ಮತ್ತು ‘ಕೋವಿಡ್ -19: ಇತರ ದೇಶದಿಂದ ಕರ್ನಾಟಕಕ್ಕೆ ಪ್ರಯಾಣ’ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಅವಧಿವರೆಗೂ ಕ್ವಾರೆಂಟೈನ್ ನಲ್ಲಿದ್ದರೆ ಈ ಬಗ್ಗೆ ಘೋಷಣೆ ಪತ್ರವನ್ನು ನೀಡಬೇಕು.
ಕೇರಳ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನಿಮಗೆ ಕೊರೊನಾ ವೈರಸ್‌ನ ಯಾವುದೇ ಲಕ್ಷಣಗಳಿಲ್ಲದಿದ್ದರೆ, ಯಾವುದೇ ನಿರ್ಬಂಧವಿಲ್ಲ.ಮುಕ್ತವಾಗಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರೋಗಲಕ್ಷಣವಿಲ್ಲದವರು 14 ದಿನಗಳ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ. ರೋಗಲಕ್ಷಣಗಳು ಕಂಡು ಬಂದವರನ್ನು COVID ಆರೈಕೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಯಾವುದೇ ರೋಗಲಕ್ಷಣಗಳಿಲ್ಲದ ವಲಸಿಗರು 14 ದಿನಗಳ ಗೃಹ ದಿಗ್ಬಂಧನದಲ್ಲಿ ಇರಬೇಕಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ವಿಮಾನ ಟಿಕೆಟ್ ‌ಗಳನ್ನು ಕಾಯ್ದಿರಿಸಿದ ನಂತರ ಪ್ರಯಾಣಿಕರು covid19jagratha.kerala.nic.in ನಲ್ಲಿ ನೋಂದಾಯಿಸಿಕೊಳ್ಳಬೇಕು. ಮತ್ತು ಇ-ಪಾಸ್ ಪಡೆಯಬೇಕು. ಕೇರಳಕ್ಕೆ ವಾಪಸ್ಸಾದ ಸಂದರ್ಭ ಮತ್ತು 14 ದಿನಗಳ ಗೃಹ ದಿಗ್ಬಂಧನದಲ್ಲಿರುವ ವೇಳೆ ಅಧಿಕಾರಿಗಳು ಪರಿಶೀಲನೆಗೆ ತೆರಳಿದ ವೇಳೆಯಲ್ಲಿ ಈ-ಪಾಸ್ ಗಳನ್ನು ತೋರಿಸಬೇಕು.
ಮಧ್ಯಪ್ರದೇಶ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜ್ಯದೊಳಗೆ ಪ್ರಯಾಣಿಸಲು ಯಾವುದೇ ನಿರ್ಬಂಧವಿಲ್ಲ.
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಮಧ್ಯಪ್ರದೇಶಕ್ಕೆ ಆಗಮಿಸುವ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. www.mapit.gov.in/covid-19 ನಲ್ಲಿ ಇ-ಪಾಸ್ ಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ರೋಗಲಕ್ಷಣದ ಪ್ರಯಾಣಿಕರನ್ನು 14 ದಿನಗಳವರೆಗೆ ಸಾಂಸ್ಥಿಕ ಸಂಪರ್ಕತಡೆಗೆ ಕಳುಹಿಸಲಾಗುವುದು, ರೋಗಲಕ್ಷಣವಿಲ್ಲದವರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲು ಅನುಮತಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತದೆ. ಸೋಂಕಿತ ಲಕ್ಷಣ ಕಂಡು ಬಾರದಿದ್ದರೂ 7 ದಿನ ಪಾವತಿಸಿದ ಕ್ವಾರೆಂಟೈನ್ ಕೇಂದ್ರದಲ್ಲಿ ಇರಬೇಕಾಗುತ್ತದೆ. ನಂತರ 7 ದಿನ ಗೃಹ ದಿಗ್ಬಂಧನದಲ್ಲಿ ಇರಬೇಕಾಗುತ್ತದೆ. ಒಂದು ಬಾರಿ ಸೋಂಕಿತ ಲಕ್ಷಣ ಕಂಡು ಬಂದಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ಪಡೆದ ಬಳಿಕ ಆರೋಗ್ಯ ಸೇತು ಆಪ್ ಬಳಸುವುದು ಕಡ್ಡಾಯವಾಗಿದೆ.
ಮಹಾರಾಷ್ಟ್ರ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ಹಾಟ್‌ಸ್ಟಾಪ್ ಪ್ರದೇಶಗಳಿಗೆ ಸಂಚರಿಸದಿದ್ದರೆ ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಪ್ರತಿಯೊಬ್ಬ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ಕೊವಿಡ್ ಕೇರ್ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಸೋಂಕಿತ ಲಕ್ಷಣಗಳು ಕಂಡು ಬಾರದಿದ್ದಲ್ಲಿ 14 ದಿನಗಳ ಗೃಹ ದಿಗ್ಬಂಧನ ಕಡ್ಡಾಯವಾಗಿದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಆರೋಗ್ಯಾ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಆಗಮಿಸಿದಾಗ ಸ್ವಯಂ ಘೋಷಣೆ ಮಾಡಬೇಕಾಗುತ್ತದೆ. ಎಲ್ಲರಿಗೂ 14 ದಿನಗಳ ಗೃಹ ದಿಗ್ಬಂಧನದಲ್ಲಿರುವುದು ಕಡ್ಡಾಯವಾಗಿದೆ. ಆರೋಗ್ಯಾ ಸೆಟು ಅಪ್ಲಿಕೇಶನ್‌ಗೆ ಲಿಂಕ್ ಮಾಡಿ: https://www.mygov.in/aarogya-setu-app/
ಮಣಿಪುರ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧವಿಲ್ಲ.ಮುಕ್ತವಾಗಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರೋಗದ ಲಕ್ಷಣಗಳು ಕಂಡು ಬಾರದಿದ್ದರೆ ಗೃಹ ದಿಗ್ಬಂಧನದಲ್ಲಿ ಉಳಿದುಕೊಳ್ಳಬಹುದು. ಸೋಂಕಿತ ಲಕ್ಷಣ ಕಂಡು ಬಂದಲ್ಲಿ ಐಸೋಲೇಷನ್ ವಾರ್ಡ್ ಗೆ ಕಳುಹಿಸಲಾಗುತ್ತದೆ. ವಿಮಾನಗಳಲ್ಲಿ ಬರುವವರಿಗೆ, ಆಂಡ್ರಾಯ್ಡ್‌ಗೆ ಮಾತ್ರ ಲಭ್ಯವಿರುವ ಕ್ವಾರ್ಮಾನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿದೆ. ಕ್ಯಾರೆಂಟೈನ್ ಅವಧಿ ಮುಗಿಯುವವರೆಗೆ, ಬೆಳಗ್ಗೆ 8 ರಿಂದ 6 ಗಂಟೆಯವರೆಗೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಾಸ್ಕ್ ಇಲ್ಲದಿರುವ ಸೆಲ್ಪಿಯನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.
  • ಮಣಿಪುರದಲ್ಲಿ ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಆರೋಗ್ಯ ಸೇತು ಆ್ಯ ಕಡ್ಡಾಯವಾಗಿ ಹೊಂದಿರಬೇಕು. ಹಸಿರು ವಲಯಗಳಲ್ಲಿ ಇರುವವರಿಗೆ ಮಾತ್ರ ಸಂಚರಿಸುವುದಕ್ಕೆ ಅವಕಾಶವಿದೆ. ಸೋಂಕಿತ ಲಕ್ಷಣಗಳಿಲ್ಲದವರನ್ನು 14 ದಿನ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ. ಸೋಂಕಿತ ಲಕ್ಷಣಗಳಿದ್ದಲ್ಲಿ ಚಿಕಿತ್ಸಾ ಕೇಂದ್ರದ ಐಸೋಲೇಷನ್ ವಾರ್ಡ್ ಗೆ ಕಳುಹಿಸಿ ಕೊಡಲಾಗುತ್ತದೆ.
మేఘాలయ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಇ-ಪಾಸ್ ಇಲ್ಲದಿದ್ದರೆ ರಾಜ್ಯಕ್ಕೆ ಪ್ರವಶವಿಲ್ಲhttps://serviceonline.gov.in/epass/. ಪಾಸ್ ಪಡೆಯಬಹುದು. 14 ದಿನಗಳ ಕಾಲ ಗೃಹಬಂಧನದಲ್ಲಿರಬೇಕು
  • ಹೊರರಾಷ್ಟ್ರಗಳಿಂದ ಮೇಘಾಲಯಕ್ಕೆ ಆಗಮಿಸಬೇಕಾದರೆ ನಾನು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು?
    48 ಗಂಟೆಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರುವುದು ಕಡ್ಡಾಯವಾಗಿದೆ. ನಂತರದಲ್ಲಿ ನಿಮ್ಮಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಾರದಿದ್ದರೆ ಮನೆಗೆ ತೆರಳುವುದಕ್ಕೆ ಅವಕಾಶ ನೀಡಲಾಗುತ್ತದೆ.
మిజోరం
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜ್ಯದಲ್ಲಿ ಸಂಚಾರ ನಿರ್ಬಂಧವಿದೆ, ಆದರೆ ತುರ್ತು ಅಗತ್ಯವಿದ್ದರೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶವಿದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ರೋಗದ ಲಕ್ಷಣ ಕಾಣಿಸಿಕೊಳ್ಳದಿದ್ದರೂ ಎಲ್ಲ ಪ್ರಯಾಣಿಕರು 14 ದಿನ ಗೃಹ ದಿಗ್ಬಂಧನದಲ್ಲಿ ಇರುವುದು ಕಡ್ಡಾಯವಾಗಿದೆ. ಸೋಂಕು ಕಾಣಿಸಿಕೊಂಡಲ್ಲಿ ಚಿಕಿತ್ಸೆಗೆ ಕಳುಹಿಸಿ ಕೊಡಲಾಗುತ್ತದೆ.
ನಾಗಾಲ್ಯಾಂಡ್
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ರಾಜ್ಯದೊಳಗೆ ಪ್ರಯಾಣಿಸಲು ಅನುಮತಿಯಿದೆ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಸ್ಥಳೀಯ ಜನರಿಗೆ ಮಾತ್ರ ಅವಕಾಶವಿದ್ದು, ಅವರು nCovid-19 ನಾಗಾಲ್ಯಾಂಡ್ ವಿಸಿಟರ್ಸ್ ಅಪ್ಲಿಕೇಶನ್‌ನಲ್ಲಿ ಇ-ಪಾಸ್ ಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಹಾಗೂ ಆರೋಗ್ಯಾ ಸೆೇತು ಅಪ್ಲಿಕೇಶನ್ ಹೊಂದಿರಬೇಕು. ಎಲ್ಲಾ ಪ್ರಯಾಣಿಕರನ್ನು ಮೊದಲೇ ಗೊತ್ತುಪಡಿಸಿದ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ನಾಗಾಲ್ಯಾಂಡ್‌ನ ನಿವಾಸಿಗಳಿಗೆ ಮಾತ್ರ ಅನುಮತಿ ಇದೆ ಮತ್ತು ಅವರು ಎನ್‌ಕೊವಿಡ್ -19 ನಾಗಾಲ್ಯಾಂಡ್ ವಿಸಿಟರ್ ಅಪ್ಲಿಕೇಶನ್‌ನಲ್ಲಿ ಇ-ಪಾಸ್‌ಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ಆರೋಗ್ಯಾ ಸೇತು ಅಪ್ಲಿಕೇಶನ್ ಅನ್ನು ಹೊಂದಿರಬೇಕು. ಎಲ್ಲಾ ಒಳಬರುವ ಪ್ರಯಾಣಿಕರು 14 ದಿನ ಸಾಂಸ್ಥಿಕ ಕ್ವಾರೆಂಟೈನ್ ಮತ್ತು 14 ದಿನ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
ఒడిషా
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ, ಮುಕ್ತವಾಗಿ ರಾಜ್ಯದಲ್ಲಿ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ಒಡಿಶಾಗೆ ತೆರಳಬಹುದು, ಆದರೆ 14 ದಿನಗಳ ಕಾಲ ಗೃಹಬಂಧನದಲ್ಲಿರಬೇಕಾಗುತ್ತದೆ. ನಿಮಗೆ ರೋಗದ ಲಕ್ಷಣಗಳು ಗೋಚರಿಸಿದರೆ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಕೊವಿಡ್-19 ಸೋಂಕು ಕಾಣಿಸಿಕೊಳ್ಳದಿರುವ ಅಂತರರಾಷ್ಟ್ರೀಯ ಪ್ರಯಾಣಿಕರನ್ನು 14 ದಿನ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ. ಸೋಂಕು ಕಾಣಿಸಿಕೊಂಡ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇಡಲಾಗುತ್ತದೆ.
పుదుచ్చేరి
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ಸಂಚರಿಸಬಹುದು ಆದರೆ ಇ ಪಾಸ್‌ನ್ನು ಪಡೆಯಬೇಕು.https://epass.py.gov.in. 14 ದಿನಗಳ ಕಾಲ ಗೃಹಬಂಧನವಿರುತ್ತದೆ. ನಿಮಗೆ ರೋಗದ ಲಕ್ಷಣಗಳು ಕಂಡುಬಂದರೆ ಕೊವಿಡ್ 19 ಕೇಂದ್ರಗಳಿಗೆ ಕಳುಹಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು ಯಾವುವು?
    ಸೋಂಕಿತ ಲಕ್ಷಣಗಳು ಕಾಣಿಸಿಕೊಂಡವರನ್ನು ಕೊವಿಡ್ ಕೇರ್ ಗೆ ಕಳುಹಿಸಿಕೊಡಲಾಗುತ್ತದೆ ಹಾಗೂ ಸೋಂಕು ಇಲ್ಲದವರನ್ನು 14 ದಿನ ಗೃಹ ದಿಗ್ಬಂಧನದಲ್ಲಿ ಇಡಲಾಗುತ್ತದೆ.
ಪಂಜಾಬ್
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧವಿಲ್ಲ.
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಪ್ರತಿಯೊಬ್ಬ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಸೋಂಕಿತ ಲಕ್ಷಣಗಳು ಕಂಡು ಬಂದಲ್ಲಿ ಕೊವಿಡ್ ಕೇರ್ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಸೋಂಕಿತ ಲಕ್ಷಣಗಳು ಕಂಡು ಬಾರದಿದ್ದಲ್ಲಿ 14 ದಿನಗಳ ಗೃಹ ದಿಗ್ಬಂಧನ ಕಡ್ಡಾಯವಾಗಿದೆ.
  • ಬೇರೆ ರಾಷ್ಟ್ರಗಳಿಂದ ಪಂಜಾಬ್ ಗೆ ಪ್ರಯಾಣಿಸಬಹುದೇ?
    ಹೌದು, ಆದರೆ ವಿಮಾನ ಹತ್ತುವ ಮೊದಲು ನೀವು ಕೋವಾ ಪಂಜಾಬ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ರಾಜ್ಯಕ್ಕೆ ಆಗಮಿಸಿದಾಗ, ನೀವು 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ಯಾರೆಂಟೈನ್ ‌ಗೆ ಒಳಗಾಗಬೇಕಾಗುತ್ತದೆ. ಬಳಿಕ ಕೋವಿಡ್ -19 ಪರೀಕ್ಷಿಸಲಾಗುತ್ತದೆ ನಿಮ್ಮಲ್ಲಿ ಸೋಂಕಿತ ಲಕ್ಷಣಗಳು ಕಂಡುಬಾರದಿದ್ದಲ್ಲಿ ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ.
ರಾಜಸ್ಥಾನ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ, ಆದರೆ ಬೇರೆ ರಾಜ್ಯಗಳಿಗೆ ಹೋಗಲು ಅನುಮತಿ ಇಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜಸ್ಥಾನವು ರಾಜ್ಯದ ಗಡಿಯನ್ನು ಬಂದ್ ಮಾಡಲಾಗಿದ್ದು, ರಾಜ್ಯದೊಳಗೆ ಪ್ರವೇಶಿಸಲು ಪೂರ್ವಾನುಮತಿ ಪಡೆದುಕೊಳ್ಳಬೇಕಾಗಿದೆ. ಇ ಪಾಸ್ ಗಳನ್ನು ಪಡೆದುಕೊಳ್ಳಲು https://emitraapp.rajasthan.gov.in ಬಳಸಿ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ 18001806127 ಮತ್ತು 181
  • ಅಂತರರಾಷ್ಟ್ರೀಯ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು ಯಾವುವು?
    ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ನಿರ್ದೇಶನದಂತೆ ವಿವಿಧ ದೇಶಗಳಲ್ಲಿ ಸಿಲುಕಿರುವ ಜನರ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ.
సిక్కిం
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ರಾಜ್ಯದೊಳಗೆ ಸಂಚರಿಸಬಹುದು, ತಪಾಸಣೆ ಬಳಿಕ ಸಂಚರಿಸಬಹುದು
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಸಿಕ್ಕಿಂನಲ್ಲಿ ಸ್ಥಳೀಯರಿಗೆ ಮಾತ್ರ ಸಂಚಾರಕ್ಕೆ ಅನುಮತಿ ಇದ್ದು, ಬೇರೆಡೆಯಿಂದ ರಾಜ್ಯದೊಳಗೆ ಬರುವಂತಿಲ್ಲ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ರಾಜ್ಯದ ನಿವಾಸಿಗಳಿಗೆ ಮಾತ್ರ ಸಂಚರಿಸುವುದಕ್ಕೆ ಅವಕಾಶ ನೀಡಲಾಗಿದ್ದು, ಹೀಗೆ ಆಗಮಿಸಿದ ಪ್ರತಿಯೊಬ್ಬರನ್ನು 14 ದಿನಗಳ ಕಾಲ ರಾಜ್ಯ ಸರ್ಕಾರದ ಸಾಂಸ್ಥಿಕ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಾಗಿದೆ.
ತಮಿಳುನಾಡು
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಪ್ರಯಾಣಿಕರು ಜಿಲ್ಲಾಡಳಿತದಿಂದ ಪಾಸುಗಳನ್ನು ಪಡೆಯಬೇಕು. ಪಾಸುಗಳನ್ನು ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿhttps://tnepass.tnega.org/#/user/pass.
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ. ನೀವು https://tnepass.tnega.org/#/user/pass ನಿಂದ ಪಾಸ್ ಪಡೆಯಬೇಕಾಗುತ್ತದೆ. ನೀವು ನಕಾರಾತ್ಮಕತೆಯನ್ನು ಪರೀಕ್ಷಿಸಿದರೆ, ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿಯಿಂದ ಪ್ರಯಾಣಿಸಿದರೆ ನಿಮ್ಮನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ. ನಿಮ್ಮಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ,ನಿಮ್ಮನ್ನು ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತದೆ.
  • ತಮಿಳುನಾಡು ರಾಜ್ಯದಲ್ಲಿ ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ತಮಿಳುನಾಡಿಗೆ ಪ್ರಯಾಣಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಟಿಎನ್ ಇ-ಪಾಸ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪ್ರಯಾಣಿಕರು 14 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿರಬೇಕು. ಅಥವಾ ಹಣವನ್ನು ಪಾವತಿಸಿ ರಾಜ್ಯ ಸರ್ಕಾರದ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವ ಬಗ್ಗೆ ತೀರ್ಮಾನಿಸಬಹುದು.
ತೆಲಂಗಾಣ
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನೀವು ರಾಜ್ಯದೊಳಗೆ ಪ್ರಯಾಣಿಸಲು ಅನುಮತಿಯಿದೆ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ರಾಜ್ಯಗಳ ನಡುವೆ ಪ್ರಯಾಣಕ್ಕೆ ಯಾವುದೇ ಪಾಸ್ ಗಳ ಅವಶ್ಯಕತೆ ಇರುವುದಿಲ್ಲ. ಸೋಂಕುರಹಿತರಿಗೆ ಯಾವುದೇ ಕ್ವಾರೆಂಟೈನ್ ಕೂಡ ಇರುವುದಿಲ್ಲ. ಸೋಂಕು ಕಂಡು ಬಂದವರನ್ನು ಮಾತ್ರ 14 ದಿನಗಳ ಕಾಲ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಆರೋಗ್ಯ ಸೇತು ಆ್ಯಪ್ ಕಡ್ಡಾಯವಾಗಿದ್ದು, ಯಾವುದೇ ಪಾಸ್ ಅಗತ್ಯವಿಲ್ಲ. ಎಲ್ಲ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತದೆ. ಸೋಂಕುರಹಿತ ಪ್ರಯಾಣಿಕರು 7 ದಿನಗಳ ಕಾಲ ಪಾವತಿಸಿದ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಇರಬೇಕು ಹಾಗೂ 7 ದಿನ ಗೃಹ ದಿಗ್ಬಂಧನದಲ್ಲಿ ಇರಬೇಕು. ಸೋಂಕು ಕಾಣಿಸಿಕೊಂಡ ಪ್ರಯಾಣಿಕರನ್ನು ವೈದ್ಯಕೀಯ ಕೇಂದ್ರದ ಐಸೋಲೇಷನ್ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
త్రిపుర
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ತ್ರಿಪುರಕ್ಕೆ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ಬೇರೆ ಕಡೆಗಳಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ರೋಗದ ಲಕ್ಷಣ ಕಾಣಿಸಿಕೊಳ್ಳದಿದ್ದರೂ ಎಲ್ಲ ಪ್ರಯಾಣಿಕರು 14 ದಿನ ಗೃಹ ದಿಗ್ಬಂಧನದಲ್ಲಿ ಇರುವುದು ಕಡ್ಡಾಯವಾಗಿದೆ. ಸೋಂಕು ಕಾಣಿಸಿಕೊಂಡಲ್ಲಿ ಚಿಕಿತ್ಸೆಗೆ ಕಳುಹಿಸಿ ಕೊಡಲಾಗುತ್ತದೆ.
ఉత్తర ప్రదేశ్
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಯಾವುದೇ ನಿರ್ಬಂಧಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಬೇರೆ ಜಿಲ್ಲೆಗಳಿಗೆ ಸಂಚರಿಸುವವರಿಗೆ ಯಾವುದೇ ಪಾಸುಗಳ ಅಗತ್ಯವಿಲ್ಲ.ಒಂದೊಮ್ಮೆ ದಹಲಿಯ ನೊಯ್ಡಾ, ಘಾಜಿಯಾಬಾದ್‌ ಜಿಲ್ಲೆಗಳಿಂದ ಅಥವಾ ಕೊವಿಡ್ 19 ಹಾಟ್‌ಸ್ಪಾಟ್‌ ಪ್ರದೇಶಗಳು, ಕಂಟೈನ್ಮೆಂಟ್ ವಲಯಗಳಿಂದ ಬರುವವರಾಗಿದ್ದರೆ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ಯಾರೇ ಉತ್ತರ ಪ್ರದೇಶಕ್ಕೆ ತೆರಳಿದರೂ 14 ದಿನಗಳ ಗೃಹ ಬಂಧನ ಕಡ್ಡಾಯ.
  • ಉತ್ತರ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರು ಪಾಲಿಸಬೇಕಾದ ನಿಯಮಗಳು ಯಾವುವು?
    ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ಯಾರೆಂಟೈನ್ ಗೆ ಒಳಗಾಗಬೇಕಾಗುತ್ತದೆ, ಅಲ್ಲಿ ಅವರನ್ನು ಕೋವಿಡ್ -19 ಗೆ ಪರೀಕ್ಷಿಸಲಾಗುತ್ತದೆ. ನಕಾರಾತ್ಮಕವೆಂದು ಕಂಡುಬಂದಲ್ಲಿ, ಅವರು 7 ದಿನ ಗೃಹ ದಿಗ್ಬಂಧನದಲ್ಲಿ ಇರುವುದಕ್ಕಷ್ಟೇ ಅನುಮತಿಸುತ್ತಾರೆ. ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಆಗಮನ ಸಭಾಂಗಣದಿಂದ ನಿರ್ಗಮಿಸುವ ಮೊದಲು reg.upcovid.in ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಅಥವಾ 1800-180-5145 ಗೆ ಕರೆ ಮಾಡಬೇಕು. 7 ದಿನಗಳಿಗಿಂತ ಕಡಿಮೆ ಅವಧಿಗೆ ಬರುವವರಿಗೆ ಪುರಾವೆ ತೋರಿಸಿದ ನಂತರ ದಿಗ್ಬಂಧನದ ನಿಯಮದಿಂದ ವಿನಾಯಿತಿ ನೀಡಲಾಗುತ್ತದೆ.
ఉత్తరాఖండ్
  • ರಾಜ್ಯದೊಳಗೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ನಿರ್ದಿಷ್ಟ ನಿಬಂಧನೆಗಳಿಲ್ಲ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಹೌದು ನೀವು ಸಂಚರಿಸಬಹುದು, ಒಂದೊಮ್ಮೆ ನೀವು ಕೊವಿಡ್ 19 ರೋಗ ಹೆಚ್ಚಿರುವ ರಾಜ್ಯದಿಂದ ಬಂದಿದ್ದರೆ, 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಬೇರೆ ರಾಜ್ಯಗಳಿಂದ ಬಂದಿದ್ದು ರೋಗದ ಲಕ್ಷಣಗಳಿಲ್ಲದಿದ್ದರೆ 14 ದಿನ ಗೃಹಬಂಧನದಲ್ಲಿರಬೇಕು. ರೋಗದ ಲಕ್ಷಣವಿದ್ದರೆ ಕೊವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ವಿದೇಶಗಳಿಂದ ಆಗಮಿಸುವ ಪ್ರತಿಯೊಬ್ಬರೂ 14 ದಿನಗಳ ಸಾಂಸ್ಥಿಕ ದಿಗ್ಬಂಧನದಲ್ಲಿರಬೇಕು.
ಪಶ್ಚಿಮ ಬಂಗಾಳ
  • ಅಂತರ್-ರಾಜ್ಯಗಳ ನಡುವೆ ಸಂಚರಿಸಲು ಪಾಲಿಸಬೇಕಾದ ನಿಯಮಗಳು ಯಾವುವು?
    ಹೊರ ರಾಜ್ಯದಿಂದ ಆಗಮಿಸಿದವರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಸೋಂಕು ಕಾಣಿಸಿಕೊಳ್ಳದಿದ್ದಲ್ಲಿ 14 ದಿನ ಗೃಹ ದಿಗ್ಬಂಧನದಲ್ಲಿ ಇರುವುದು, ಸಂಧಾನೆ ಅಪ್ಲಿಕೇಷನ್ ನಲ್ಲಿ ನಿಮ್ಮ ಸ್ವವಿರವನ್ನು ಭರ್ತಿ ಮಾಡಬೇಕಾಗುತ್ತದೆ.
  • ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳು ಯಾವುವು?
    ಪಶ್ಚಿಮ ಬಂಗಾಳಕ್ಕೆ ಪ್ರಯಾಣಿಸಲು ಇಚ್ಛಿಸುವವರೆಲ್ಲ ಸಂಧೇನ್ ಅಪ್ಲಿಕೇಶನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಕಳೆದ ಎರಡು ತಿಂಗಳುಗಳಲ್ಲಿ ಅವನು/ಅವಳಲ್ಲಿ COVID-19 ಸೋಂಕು ಕಾಣಿಸಿಕೊಂಡಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ ಫಾರ್ಮ್ ಅನ್ನು ಸಲ್ಲಿಸಬೇಕಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X