National Help Line Number
+91-11-23978046
Toll Free No: 1075

Coronavirus FAQs After Lockdown

Oneindia
ಸಾಮಾನ್ಯ ಪ್ರಶ್ನೆಗಳು
 • ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಯಮಗಳೇನು?
  ಪ್ರಯಾಣಿಕರಲ್ಲಿ ಪಾಸಿಟಿವ್ ಕಂಡುಬಂದರೆ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತದೆ. ಅವರ SARS-CoV-2 ಮಾದರಿಗಳಲ್ಲಿನ ಜೀನೋಮಿಕ್ ವ್ಯತ್ಯಾಸಗಳನ್ನು ಪತ್ತೆಗಾಗಿ ಸರ್ಕಾರದಿಂದ ಸ್ಥಾಪಿಸಲಾದ ಬಹು-ಪ್ರಯೋಗಾಲಯ, ಬಹು-ಏಜೆನ್ಸಿ, ಪ್ಯಾನ್-ಇಂಡಿಯಾ ನೆಟ್‌ವರ್ಕ್, INSACOG ಲ್ಯಾಬ್ಸ್ ನೆಟ್‌ವರ್ಕ್‌ಗೆ ಕಳುಹಿಸಲಾಗುತ್ತದೆ. ಜೀನೋಮ್ ಸೀಕ್ವೆನ್ಸಿಂಗ್ ನಡೆಸಿ ರೋಗಾಣು ಮತ್ತು ತಳಿಯನ್ನು ಕಂಡು ಹಿಡಿಯಲಾಗುತ್ತದೆ. ಸೋಂಕಿತರ ಸಂಪರ್ಕಿತರನ್ನು ರಾಜ್ಯ ಸರ್ಕಾರಗಳು ಪತ್ತೆ ಮಾಡುತ್ತವೆ. ಅದೇ ರೀತಿ 14 ದಿನಗಳವರೆಗೆ ನಿಯಮವನ್ನು ಅನುಸರಿಸುತ್ತವೆ.
 • ಅಪಾಯದಲ್ಲಿರುವ ದೇಶಗಳು ಯಾವುವು?
  ಯುನೈಟೆಡ್ ಕಿಂಗ್‌ಡಮ್, ಯುರೋಪ್‌ನ ಎಲ್ಲಾ 44 ದೇಶಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಇಸ್ರೇಲ್.
 • ಅಪಾಯದಲ್ಲಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿಯಮಗಳೇನು?
  ಅಪಾಯದಲ್ಲಿರುವ ದೇಶಗಳ ಪ್ರಯಾಣಿಕರು ಆಗಮನದ ವೇಳೆ COVID-19 ಸೋಂಕಿನ ಪರೀಕ್ಷೆ ನಡೆಸಲಾಗುತ್ತದೆ. ಅವರ ವರದಿಗಳು ಬರುವವರೆಗೂ ವಿಮಾನ ನಿಲ್ದಾಣದಿಂದ ಹೊರ ಹೋಗುವಂತಿಲ್ಲ. ನೆಗೆಟಿವ್ ವರದಿ ಬಂದರೆ 7 ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. 8ನೇ ದಿನದಂದು ಮರು-ಪರೀಕ್ಷೆ ಮಾಡಲಾಗುವುದು. ಮನೆಯಲ್ಲಿ ಪರಿಣಾಮಕಾರಿಯಾಗಿ ಐಸೋಲೇಟ್ ಆಗಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅಧಿಕಾರಿಗಳು ಅಂಥವರ ಮನೆಗೆ ಭೇಟಿ ನೀಡಬೇಕು.
ಲಸಿಕೆ ಹಾಕುವುದು
  • ಎಲ್ಲಾ ವಯೋಮಾನದ ಮಕ್ಕಳು ಈಗ COVID ಲಸಿಕೆ ಡೋಸ್ ಪಡೆಯಲು ಅರ್ಹರೇ?
   ಇಲ್ಲ, ಭಾರತ ಸರ್ಕಾರದ ಪ್ರಕಾರ, ಜನವರಿ 3, 2022 ರಿಂದ 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊವಿಡ್-19 ಲಸಿಕೆಗಳು ಲಭ್ಯವಿರುತ್ತವೆ.
  • 15 -18 ವಯೋಮಾನದವರು ಸಹ COVID ಲಸಿಕೆ ಡೋಸ್ ಪಡೆಯಲು ಹೆಸರು ನೋಂದಾಯಿಸಿಕೊಳ್ಳಬೇಕೇ?
   ಹೌದು, ಲಸಿಕೆಗೆ ಅರ್ಹರಾಗಿರುವವರು CoWin ಅಥವಾ Arogya-Setu ಅಪ್ಲಿಕೇಶನ್‌ಗಳ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು.
  • ಹದಿಹರೆಯದವರಿಗೆ ನೋಂದಣಿ ಪ್ರಕ್ರಿಯೆ ಹೇಗಿರಲಿದೆ?
   ಇದು ಇತರ ವಯೋಮಾನದವರಂತೆಯೇ ಇರುತ್ತದೆ. ಮೊಬೈಲ್ ಸಂಖ್ಯೆಯನ್ನು ನಮೂದಿಸಿ, OTP ಮೂಲಕ ದೃಢಪಡಿಸಿ, ಐಡಿ ದಾಖಲೆಯನ್ನು ಸಲ್ಲಿಸಿ ಮತ್ತು ಲಸಿಕೆ ಪಡೆಯಿರಿ.
  • ಆರೋಗ್ಯ-ಸೇತು ಅಪ್ಲಿಕೇಶನ್ ಮೂಲಕ ಹೇಗೆ ಹೆಸರು ನೋಂದಾಯಿಸಿಕೊಳ್ಳಬಹುದು?
   Arogya-Setu ನಲ್ಲಿ 'CoWin' ಟ್ಯಾಬ್ ನೀಡಲಾಗಿದೆ. ನೋಂದಣಿಯನ್ನು ಪೂರ್ಣಗೊಳಿಸಲು ಅಲ್ಲಿ ನೀಡಿರುವ ಸೂಚನೆಗಳನ್ನು ಅನುಸರಿಸಬೇಕು.
  • ನನ್ನ ಮಗುವಿಗೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಏನು ಮಾಡಬೇಕು?
   15-18 ವಯಸ್ಸಿನ ಮಕ್ಕಳು ಆಧಾರ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ತಮ್ಮ 10ನೇ ತರಗತಿಯ ಗುರುತಿನ ಚೀಟಿ ಬಳಸಿಕೊಂಡು ಲಸಿಕೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.
  • 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಲಸಿಕೆಗಾಗಿ ನೋಂದಣಿ ಪ್ರಕ್ರಿಯೆ ಯಾವಾಗ ಪ್ರಾರಂಭವಾಗುತ್ತದೆ?
   ಜನವರಿ 1, 2022 ರಿಂದ 15-18 ವಯಸ್ಸಿನವರಿಗೆ CoWin ಮತ್ತು Arogya-Setu ನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ.
  • ನಾನು 15 - 18 ವಯಸ್ಸಿನವರ ಲಸಿಕೆಯನ್ನು ಆಯ್ಕೆ ಮಾಡಬಹುದೇ?
   ಸದ್ಯಕ್ಕೆ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಮಕ್ಕಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.
  • COVID ಲಸಿಕೆಯ ಬೂಸ್ಟರ್ ಶಾಟ್‌ಗೆ ಪಡೆಯಲು ಯಾರು ಅರ್ಹರು?
   60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಅಸ್ವಸ್ಥತೆ ಮತ್ತು ಪ್ರಾಥಮಿಕ ಶ್ರೇಣಿ ಕಾರ್ಮಿಕರು ಜನವರಿ 10, 2022 ರಿಂದ ಬೂಸ್ಟರ್ ಲಸಿಕೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
  • ಅಸ್ವಸ್ಥತೆಯನ್ನನು ಸಾಬೀತುಪಡಿಸಲು ಹಿರಿಯ ನಾಗರಿಕರು ದಾಖಲೆ ಸಲ್ಲಿಸಬೇಕೇ?
   ಇಲ್ಲ, ಆದರೆ ಬೂಸ್ಟರ್ ಶಾಟ್ ತೆಗೆದುಕೊಳ್ಳಲು ಅವರ ಆರೋಗ್ಯವು ಉತ್ತಮವಾಗಿದೆಯೇ ಎಂದು ವೈದ್ಯರಿಂದ ಪರೀಕ್ಷಿಸಿಕೊಳ್ಳಲು ಸೂಚಿಸಲಾಗಿದೆ.
  • 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಯಾರಾದರೂ ಲಸಿಕೆ ಡೋಸ್ ತೆಗೆದುಕೊಳ್ಳಬಹುದೇ?
   ಇಲ್ಲ, 39 ವಾರಗಳ ಹಿಂದೆ ತಮ್ಮ ಎರಡನೇ ಡೋಸ್ ತೆಗೆದುಕೊಂಡವರಿಗೆ ಮಾತ್ರ ಅನ್ವಯ.
  • ಯಾರನ್ನು ಪ್ರಾಥಮಿಕ ಶ್ರೇಣಿ ಕಾರ್ಮಿಕರು ಎಂದು ಪರಿಗಣಿಸಲಾಗುತ್ತದೆ?
   ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು, ಮುಖ್ಯವಾಗಿ ಪುರಸಭೆಯ ಸಿಬ್ಬಂದಿ, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ.
  • ಬೂಸ್ಟರ್ ಡೋಸ್ ಆಗಿ ಯಾವ ಲಸಿಕೆಯನ್ನು ತೆಗೆದುಕೊಳ್ಳಬಹುದು?
   ಈ ಬಗ್ಗೆ ಪ್ರಾಧಿಕಾರ ಇನ್ನೂ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ. ಆದಾಗ್ಯೂ ತಜ್ಞರ ಸಮಿತಿಯು ಬೂಸ್ಟರ್ ಡೋಸ್‌ಗಳು ಮೊದಲು ತಗೆದುಕೊಂಡಿರುವ ಎರಡು ಡೋಸ್‌ಗಳಂತೆಯೇ ಇರಬೇಕು ಎಂದು ಶಿಫಾರಸು ಮಾಡಿದೆ.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X