ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ

By ನಾಗನೂರಮಠ ಎಸ್ಎಸ್
|
Google Oneindia Kannada News

ಯಾವುದೇ ಖರ್ಚಿಲ್ಲದೇ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವುದು ಮತ್ತು ಕಡಿಮೆ ಮಾಡಿಕೊಳ್ಳುವುದು ಯೋಗಾಸನಗಳಿಂದ ಮಾತ್ರ ಸಾಧ್ಯವೆನ್ನಬಹುದು. ಏಕೆಂದರೆ ಈಗೀಗ ಚಿಕಿತ್ಸೆಗೆಂದು ಸಾವಿರಾರು ಖರ್ಚು ಮಾಡಬೇಕಾಗುತ್ತದೆ. ಜೊತೆಗೆ ನೋವಿನ ಚಿಕಿತ್ಸೆಯನ್ನು ಅನುಭವಿಸುವುದು ಕೂಡ ತಪ್ಪುವುದಿಲ್ಲ.

ಹೀಗಾಗಿ ಯಾವುದೇ ಹಣ ಖರ್ಚು ಮಾಡದೇ ಬರೀ ದೇಹದ ಬೆವರಿಳಿಸುವ ಮೂಲಕ ನಾವು ನಮ್ಮಲ್ಲಿರುವ, ಬಂದಿರುವ ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇನ್ನು ರೋಗ ಬಂದಿಲ್ಲವಾದರೂ ರೋಗ ಬರದಂತೆ ಮುಂಜಾಗ್ರತೆ ವಹಿಸಿಕೊಳ್ಳಬಹುದು.

ಮೊದಲು ಯೋಗ ಮಾಡಬೇಕೆನ್ನುವವರು ಸೋಮಾರಿತನ, ಆಲಸ್ಯತನವನ್ನು ಬಿಡಬೇಕು. ಮನಸ್ಸು ಕೆಲವೊಮ್ಮೆ ದೇಹ ದಂಡಿಸಲು ಬಯಸುವುದಿಲ್ಲ. ಆದರೆ ದೇಹದಂಡನೆಯಿಂದಲೇ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಮನಗಂಡು, ಮನಸ್ಸಿನ ಮಾತು ಕೇಳದೇ ಯೋಗಾಭ್ಯಾಸ ಶುರು ಮಾಡಬೇಕು. ಒಂದೆರಡು ದಿನ ಕಷ್ಟವೆನಿಸುತ್ತದೆ. ನಂತರ ಕ್ರಮೇಣ ತಾನಾಗಿಯೇ ರೂಢಿಯಾಗುತ್ತದೆ. ಉದಾಹರಣೆಗೆ ಚಿಕ್ಕಮಕ್ಕಳು ಮೊದ ಮೊದಲು ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ನಂತರ ರೂಢಿಯಾಗಿ ಶಾಲೆ ತಪ್ಪಿಸಲು ಮನಸ್ಸು ಮಾಡಲ್ಲ. ಇದೇ ರೀತಿ ಯೋಗಾಭ್ಯಾಸವೂ ಕೂಡ ಒಂದು.

ರೋಗಗಳ ಚಿಕಿತ್ಸೆಗೆ ವೈದ್ಯರು ನೀಡುವ ಔಷಧಿಗಳನ್ನು ನಾವು ಹೇಗೆ ತಪ್ಪಿಸದೇ ತೆಗೆದುಕೊಳ್ಳುತ್ತೇವೆಯೋ, ಅದೇ ರೀತಿ ಯೋಗಾಭ್ಯಾಸವನ್ನು ಚಿಕಿತ್ಸೆ ಎಂದೇ ತಿಳಿದುಕೊಂಡರೆ ಸಾಕು. ನಿರಂತರ ಯೋಗಾಭ್ಯಾಸ ಮಾಡುತ್ತ ಮನಸ್ಸು ಮತ್ತು ಹೃದಯ ಒಂದಾಗುತ್ತದೆ. ದೇಹದ ಮೇಲಿನ ಪ್ರೀತಿ ಹೆಚ್ಚಳವಾಗುತ್ತದೆ. [ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ 'ಸ್ಮಾರ್ಟ್' ಯೋಗ!]

Yoga exercise for Diabetes and Obesity

ಇನ್ನು, ಯಾವ ರೋಗಕ್ಕೆ ಯಾವ ಯೋಗಾಸನ ಸೂಕ್ತವೆಂಬುದನ್ನು ನೋಡೋಣ.

ಸಾಮಾನ್ಯವಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾಣುವ ಸಮಸ್ಯೆಯೆಂದರೆ ಮಧುಮೇಹ, ಬೊಜ್ಜು, ಮೊಣಕಾಲು ನೋವು, ಬೆನ್ನು ನೋವು ಮತ್ತು ಸುಸ್ತು. ಇವೆಲ್ಲವುಗಳಿಗೆ ಬೇರೆ ಬೇರೆ ಆಸನಗಳನ್ನು ಮಾಡಬೇಕಾಗುತ್ತದೆ. ಎಲ್ಲ ಯೋಗಾಸನಗಳನ್ನು ಕೂಡ ಮಾಡಬಹುದು. ನಿರ್ದಿಷ್ಟ ಇಂತಹದೇ ಮಾಡಬೇಕೆಂದಿನಿಲ್ಲ. ಒಟ್ಟಿನಲ್ಲಿ ಎಲ್ಲ ಯೋಗಾಸನಗಳನ್ನು ಮಾಡುತ್ತಿದ್ದರೆ ತೊಂದರೆ ಏನಿಲ್ಲ.

ಕೇವಲ ಪ್ರತಿನಿತ್ಯ ಒಂದು ಗಂಟೆ ಸಂಜೆಯಾಗಲಿ ಅಥವಾ ಮುಂಜಾನೆಯಾಗಲಿ ಯೋಗಾಭ್ಯಾಸ ಮಾಡಿದರೆ ಸಾಕು. ಎರಡೂ ಹೊತ್ತು ಮಾಡಿದರೆ ತಪ್ಪೇನಿಲ್ಲ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]

ಬೊಜ್ಜು ನಿವಾರಣೆಗೆ ಮಾಡಬೇಕಾದ ಆಸನಗಳು:

Yoga exercise for Diabetes and Obesity

ಶೀರ್ಷಾಸನ, ಮಯೂರಾಸನ, ಧನುರಾಸನ, ಶಲಭಾಸನ, ಭುಜಂಗಾಸನ, ಉತ್ಥಿತ ತ್ರಿಕೋಣಾಸನ, ಉತ್ಥಿತ ಏಕಪಾದಾಸನ, ಉತ್ಥಿತ ದ್ವಿಪಾದಾಸನ, ಉತ್ತೀತ ತ್ರಿಕೋಣಾಸನ, ಪಶ್ಚಿಮೋತ್ಥಾಸನ, ಹಲಾಸನ, ಮೇರು ದಂಡಾಸನ, ಪಾದಸ್ಪರ್ಶ ಹಸ್ತಮೇರು ದಂಡಾಸನ, ಸರ್ವಾಂಗಾಸನ, ಮೇರು ದಂಡಾಸನ.

ಈ ಮೇಲ್ಕಂಡ ಆಸನಗಳನ್ನು ಪ್ರತಿನಿತ್ಯ 10ರಂತೆ ಮಾಡುತ್ತಿದ್ದರೆ ಕೇವಲ 30 ದಿನಗಳಲ್ಲಿ ದೇಹದಲ್ಲಿ ಬೊಜ್ಜು ಕರಗಿ ಸುಂದರ ದೇಹ ಕಾಣುವುದರಲ್ಲಿ ಸಂಶಯವೇ ಇಲ್ಲ. ಆದರೆ ಯೋಗಾಸನದೊಂದಿಗೆ ಈ ಹಿಂದಿನ ಲೇಖನದಲ್ಲಿ ಹೇಳಿದಂತೆ ಆಹಾರ ಪಥ್ಯ ಮಾಡಲೇಬೇಕು ತಪ್ಪಿಸದೇ.

ಮುಂದಿನ ಲೇಖನದಲ್ಲಿ : ಬೊಜ್ಜು ನಿವಾರಿಸುವ ಯೋಗಾಸನಗಳನ್ನು ಮಾಡುವ ಬಗೆ ಹೀಗೆ.

English summary
What kind of yoga needs to be done for various ailments? The yoga master has suggested few yogasanas for Diabetes and obesity. Do these yoga exercises like a treatment. Lead a healthy life by doing Yoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X