ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ

By ಶ್ರೀ ಶ್ರೀ ರವಿಶಂಕರ್ ಗುರೂಜಿ
|
Google Oneindia Kannada News

ಯೋಗದಿಂದ ಅನೇಕ ರೀತಿಗಳಲ್ಲಿ ಲಾಭವಾಗುತ್ತದೆ. ಮೊಟ್ಟಮೊದಲನೆಯದಾಗಿ ಯೋಗದಿಂದ ಆರೋಗ್ಯ ವರ್ಧಿಸುತ್ತದೆ. ಒತ್ತಡ-ರಹಿತವಾದ ಜೀವನವನ್ನು ನಡೆಸಲು ಅವಶ್ಯಕವಾದ ಸಲಕರಣೆಗಳನ್ನು ಮತ್ತು ಪ್ರಕ್ರಿಯೆಗಳನ್ನು ನಮಗೆ ಯೋಗವು ನೀಡುತ್ತದೆ.

ಯೋಗವು ಮಾನವ ಜನಾಂಗಕ್ಕೆ ನೀಡಲಾಗಿರುವ ಅನರ್ಘ್ಯ ಸಂಪತ್ತು. ಈ ಸಂಪತ್ತಿನ ಉದ್ದೇಶ ಸಂತೋಷವನ್ನು ಮತ್ತು ಹಿತವನ್ನು ತರುವುದು. ಯೋಗವನ್ನು ಒಂದು ಸಂಪತ್ತು ಎಂದು ಕರೆಯುವ ಯೋಗದಿಂದ ನಮಗೆ ಪೂರ್ಣಹಿತ ಸಿಗುತ್ತದೆ. ಹಿಂಸಾ-ಮುಕ್ತ ಸಮಾಜ, ರೋಗಮುಕ್ತ ದೇಹ, ಗೊಂದಲರಹಿತವಾದ ಮನಸ್ಸು, ಪ್ರತಿರೋಧಗಳಿಂದ ಮುಕ್ತವಾದ ಬುದ್ಧಿ, ಆಘಾತಗಳ ನೆನಪಿನಿಂದ ಮುಕ್ತವಾದ ಸ್ಮೃತಿ ಮತ್ತು ದುಃಖದಿಂದ ವಿಮುಕ್ತವಾದ ಆತ್ಮವು ಪ್ರತಿಯೊಬ್ಬ ಮಾನವನ/ಮಾನವಳ ಜನ್ಮಸಿದ್ದ ಹಕ್ಕು.

ಯೋಗ ಶಿಕ್ಷಕಿ ರೂಪಾ ಶಿವಮೊಗ್ಗ ಅವರ ವಿಶೇಷ ಸಂದರ್ಶನಯೋಗ ಶಿಕ್ಷಕಿ ರೂಪಾ ಶಿವಮೊಗ್ಗ ಅವರ ವಿಶೇಷ ಸಂದರ್ಶನ

ನಮ್ಮ ಜನರಿಗೆ ಸಂತೋಷ ಸಿಗಬೇಕೆಂಬುದೇ ನಮ್ಮೆಲ್ಲರ ಆಶಯ ಮತ್ತು ನಮ್ಮ ಜೀವನಕ್ಕೆ ಅತ್ಯಾವಶ್ಯಕವಾದ ಸಂತೋಷವನ್ನು ಪಡೆದುಕೊಳ್ಳುವ ಒಂದು ದಾರಿಯೇ ಯೋಗ. ಯೋಗ ಎಂದರೆ ಒಂದು ರೀತಿಯ ವ್ಯಾಯಾಮ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. 80ರ ಮತ್ತು 90ರ ದಶಕದಲ್ಲಿ ನಾನು ಯೂರೋಪ್ ಪ್ರವಾಸವನ್ನು ಮಾಡುತ್ತಿದ್ದಾಗ, ಸಮಾಜದ ಮುಖ್ಯವಾಹಿನಿಯಲ್ಲಿ ಯೋಗವನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ.

ಜಗತ್ತಿನಾದ್ಯಂತ ಯೋಗವು ವಿಶ್ರಾಂತಿಯ, ಸಂತೋಷದ ಮತ್ತು ಸೃಜನಶೀಲತೆಯ ಪರ್ಯಾಯವಾಗಿದೆ. ದೊಡ್ಡ ಕಂಪನಿಗಳೂ ಸಹ ತಮ್ಮ ಜಾಹೀರಾತುಗಳಲ್ಲಿ ಜನರು ಧ್ಯಾನದ ಭಂಗಿಯಲ್ಲಿ ಅಥವಾ ಯೋಗದ ಭಂಗಿಯಲ್ಲಿ ಕುಳಿತು, ಆಂತರಿಕ ಶಾಂತಿಯನ್ನು ಕಂಡುಕೊಳ್ಳುತ್ತಿರುವಂತೆ ತೋರಿಸಲಾಗುತ್ತದೆ.

ಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನ

ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ

ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ

ನಮಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ ನಾವೆಲ್ಲರೂ ಯೋಗಿಗಳಾಗಿ ಜನಿಸುತ್ತೇವೆ. ಒಂದು ಮಗುವನ್ನು ಗಮನಿಸಿದರೆ ನಮಗೆ ಯೋಗ ಶಿಕ್ಷಕರ ಅವಶ್ಯಕತೆಯೇ ಇರುವುದಿಲ್ಲ. ಜಗತ್ತಿನ ಯಾವುದೇ ಮಗುವು ಮೂರು ತಿಂಗಳಿನಿಂದ ಮೂರು ವರ್ಷದವರೆಗೆ ಎಲ್ಲಾ ಯೋಗಾಸನಗಳನ್ನೂ ಮಾಡುತ್ತದೆ. ಅದರ ಉಸಿರಾಟ, ಅದು ಮಲಗುವ ರೀತಿ, ಅದು ನಗುವ ರೀತಿ, ಎಲ್ಲವೂ ಯೋಗವೆ. ಇದರಿಂದಾಗಿ ಒಂದು ಮಗುವು ಒತ್ತಡರಹಿತವಾಗಿರುತ್ತದೆ, ಅದರಲ್ಲಿ ಸಂತೋಷವಿರುತ್ತದೆ. ಒಂದು ಮಗುವು ದಿನಕ್ಕೆ 400 ಸಲ ನಗುತ್ತದೆ.

ವರ್ತನೆಯಲ್ಲಿ ಬದಲಾವಣೆ ತರುವ ಯೋಗ

ವರ್ತನೆಯಲ್ಲಿ ಬದಲಾವಣೆ ತರುವ ಯೋಗ

ಯೋಗದ ಮತ್ತೊಂದು ಪ್ರಮುಖ ಲಾಭವೆಂದರೆ, ಅದರಿಂದ ಜನರು ವರ್ತಿಸುವ ರೀತಿ ಬದಲಾಗುತ್ತದೆ, ಏಕೆಂದರೆ ಒಂದು ವ್ಯಕ್ತಿಯ ವರ್ತನೆಯು ಅವರಲ್ಲಿರುವ ಒತ್ತಡದ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಯೋಗದಿಂದ ಒಬ್ಬರಲ್ಲಿ ಸ್ನೇಹಶೀಲ ಪ್ರವೃತ್ತಿ ಉಂಟಾಗುತ್ತದೆ ಮತ್ತು ಜನರ ನಡುವೆ ಹಿತಕರವಾದ ವಾತಾವರಣವನ್ನು ಉಂಟು ಮಾಡುತ್ತದೆ.

ಯೋಗ ಸಕಾರಾತ್ಮಕವಾದ ಕಂಪನಗಳು ಹೆಚ್ಚುತ್ತದೆ

ಯೋಗ ಸಕಾರಾತ್ಮಕವಾದ ಕಂಪನಗಳು ಹೆಚ್ಚುತ್ತದೆ

ಯೋಗದಿಂದ ನಮ್ಮ ಸಕಾರಾತ್ಮಕವಾದ ಕಂಪನಗಳು ಹೆಚ್ಚುತ್ತವೆ. ನಮ್ಮ ಮಾತುಗಳಿಗಿಂತಲೂ ಹೆಚ್ಚಾಗಿ ನಮ್ಮ ಇರುವಿಕೆಯಿಂದ ನಾವು ಜನರೊಡನೆ ಸಂಪರ್ಕಿಸುತ್ತೇವೆ. ಕ್ವಾನ್ಟಮ್ ಮೆಕ್ಯಾನಿಕ್ಸ್‌ನ ಭಾಷೆಯಲ್ಲಿ ಹೇಳಬೇಕೆಂದರೆ ನಾವೆಲ್ಲರೂ ಕಂಪನಗಳನ್ನು ಅಥವಾ ತರಂಗಾಂತರಗಳನ್ನು ಹೊರಸೂಸುತ್ತೇವೆ. ಸಂಪರ್ಕವು ಮುರಿದುಬಿದ್ದಾಗ, ನಮ್ಮ ತರಂಗಾಂತರಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎನ್ನುತ್ತೇವೆ.

ಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣಯೋಗದಿಂದ ಮಧುಮೇಹ ರೋಗವನ್ನು ಸೋಲಿಸೋಣ

ಯೋಗ ಎಂದರೆ ಕೇವಲ ವ್ಯಾಯಾಮವಲ್ಲ

ಯೋಗ ಎಂದರೆ ಕೇವಲ ವ್ಯಾಯಾಮವಲ್ಲ

ಯೋಗದ ಪ್ರತಿಪಾದಕನಾದ ಭಗವಾನ್ ಕೃಷ್ಣನು ಭಗವದ್ಗೀತೆಯಲ್ಲಿ, ಯೋಗ ಎಂದರೆ ಕರ್ಮದಲ್ಲಿ ಕುಶಲತೆ ಎಂದಿದ್ದಾನೆ. ಯೋಗ ಎಂದರೆ ಕೇವಲ ವ್ಯಾಯಾಮವಲ್ಲ, ನೀವೆಷ್ಟು ಕುಶಲವಾಗಿ ಸಂಪರ್ಕಿಸಬಲ್ಲಿರಿ ಮತ್ತು ಎಷ್ಟು ಕುಶಲವಾಗಿ ಒಂದು ಪರಿಸ್ಥಿತಿಯಲ್ಲಿ ಕಾರ್ಯವನ್ನು ನಿರ್ವಹಿಸಬಲ್ಲಿರಿ ಎಂಬುದೇ ಯೋಗ. ನವೀನತೆ, ಅಂತಃಸ್ಫುರಣೆ, ಕುಶಲತೆ ಮತ್ತು ಉತ್ತಮವಾದ ಸಂಪರ್ಕ, ಇವೆಲ್ಲವೂ ಯೋಗದ ಪ್ರಭಾವಗಳು.

ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ

ಯೋಗದ ಅರ್ಥವೇ ಒಂದಾಗುವುದು

ಯೋಗದ ಅರ್ಥವೇ ಒಂದಾಗುವುದು

ಯೋಗವು ಸದಾ ವೈವಿಧ್ಯತೆಯಲ್ಲಿ ಸಾಮರಸ್ಯವನ್ನು ವರ್ಧಿಸುತ್ತದೆ. ಯೋಗ ಎಂಬ ಪದದ ಅರ್ಥವೇ ಒಂದಾಗುವುದು, ಜೀವನದ ಎಲ್ಲಾ ವಿವಿಧ ಅಂಶಗಳೊಡನೆ, ಅಸ್ತಿತ್ವದ ಎಲ್ಲಾ ಅಂಶಗಳೊಡನೆ ಒಂದಾಗುವುದು. ಒಬ್ಬರು ವ್ಯಾಪಾರಿಯಾಗಿರಲಿ ಅಥವಾ ಸಾರ್ವಜನಿಕವಾಗಿ ಗುರುತಿಸಲ್ಪಡುವ ವ್ಯಕ್ತಿಯಾಗಿರಲಿ ಅಥವಾ ಖಾಸಗಿ ವ್ಯಕ್ತಿಯಾಗಿರಲಿ, ನಮಗೆ ಶಾಂತಿ ಬೇಕು, ಎಲ್ಲರೂ ಮುಗುಳ್ನಗಲು ಬಯಸುತ್ತಾರೆ, ಸಂತೋಷವಾಗಿರಲು ಬಯಸುತ್ತಾರೆ.

ಗ್ರಾಸ್ ಡೊಮೆಸ್ಟಿಕ್ ಹ್ಯಾಪಿನಸ್‌

ಗ್ರಾಸ್ ಡೊಮೆಸ್ಟಿಕ್ ಹ್ಯಾಪಿನಸ್‌

ಅಸಂತೋಷದ ಮೂಲಕಾರಣದತ್ತ ನೋಡಿದಾಗ ಮಾತ್ರ ಸಂತೋಷ ಸಿಗಲು ಸಾಧ್ಯ. ಅಸಂತೋಷವು ದೂರದೃಷ್ಟಿಯ ಅಭಾವದಿಂದ ಉಂಟಾಗುತ್ತದೆ, ಒತ್ತಡದಿಂದ, ಉದ್ವೇಗದಿಂದ ಉಂಟಾಗುತ್ತದೆ. ಯೂರೋಪಿಯನ್ ಯೂನಿಯನ್ ಇತ್ತೀಚೆಗೆ ಜಿಡಿಎಚ್‌ನ ಬಗ್ಗೆ ಮಾತನಾಡುತ್ತಿದೆ. ಜಿಡಿಪಿಯಿಂದ ಈಗ ಜಿಡಿಎಚ್‌ನತ್ತ, ಗ್ರಾಸ್ ಡೊಮೆಸ್ಟಿಕ್ ಹ್ಯಾಪಿನಸ್‌ನತ್ತ ತೆರಳುತ್ತಿದ್ದೇವೆ. ಇದಕ್ಕೆ ಸಹಾಯ ಮಾಡಬಲ್ಲ ಉತ್ತಮವಾದ ಸಲಕರಣೆಯೆಂದರೆ ಯೋಗ.

ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ

ಎಷ್ಟೇ ಉದ್ವೇಗವಿದ್ದರೂ ಮುಗುಳ್ನಗೆ ತರುತ್ತದೆ ಯೋಗ

ಎಷ್ಟೇ ಉದ್ವೇಗವಿದ್ದರೂ ಮುಗುಳ್ನಗೆ ತರುತ್ತದೆ ಯೋಗ

ಇಂದು ಬಹುತೇಕ ಜನಸಂಖ್ಯೆಯು ಖಿನ್ನತೆಯಿಂದ ನರತ್ತಿದೆ. ಒಂದು ಪ್ರೊಜಾಕ್ ಗುಳಿಗೆಯನ್ನು ಅಥವಾ ಖಿನ್ನತೆಗಾಗಿ ಗುಳಿಗೆಗಳನ್ನು ತೆಗೆದುಕೊಳ್ಳುವುದರಿಂದ ಸಹಾಯವಾಗುವುದಿಲ್ಲ. ಸಹಜವಾದ ಏನಾದರೊಂದು ನಮಗೆ ಬೇಕು; ನಮ್ಮ ಉಸಿರಿನಷ್ಟು ಸಹಜವಾದದ್ದು ನಮಗೆ ಬೇಕು. ಇದನ್ನು ನಮ್ಮ ಆತ್ಮದ ಉತ್ಥಾಪನೆಗಾಗಿ ಬಳಸಬಹುದು. ನಿಮ್ಮಲ್ಲಿ ಒತ್ತಡ, ಉದ್ವೇಗ ಉಂಟಾಗುತ್ತಿದ್ದರೂ, ದಿನನಿತ್ಯದ ಜೀವನದಲ್ಲಿ ಅನೇಕ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೂ ನಿಮ್ಮ ಮುಖದ ಮೇಲೆ ಮುಗುಳ್ನಗೆಯನ್ನು ಉಂಟುಮಾಡುವ ಉದ್ದೇಶವನ್ನು ಯೋಗವು ಹೊಂದಿದೆ. [www.artofliving.org]

ಯೋಗದಿಂದ ಸೊಂಪಾದ ಕೂದಲು ಉಳಿಸಿಕೊಳ್ಳಲು ಸಾಧ್ಯಯೋಗದಿಂದ ಸೊಂಪಾದ ಕೂದಲು ಉಳಿಸಿಕೊಳ್ಳಲು ಸಾಧ್ಯ

English summary
What are the advantages of Yoga? An article by Art of Living founder Sri Sri Ravishankar Guruji on World Yoga Day. Yoga spreads happiness, reduces stress. Just observe babies. They do all the yoga asanas before they reach 3 years. Baby is the best Yoga teacher.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X