• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!

By Staff
|


ಏಕಾಗ್ರತೆ ಸಾಧಿಸಲು ಕೆಲವರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಕೆಲವರು ಸಿಗರೇಟ್ ತುದಿಗೆ ಬೆಂಕಿ ಹಚ್ಚಿ, ಬಿಳಿ ಮೋಡಗಳ ಸೃಷ್ಟಿಸುತ್ತಾರೆ. ಇನ್ನೂ ಕೆಲವರು ನಾಲಿಗೆ ಹೊರಚೆಲ್ಲಿ, ಎಡಕ್ಕೆ ಬಲಕ್ಕೆ ನಾಲಿಗೆಯನ್ನು ವಾಕಿಂಗ್ ಮಾಡಿಸುತ್ತಾರೆ! ನಾಲಿಗೆ ಹೊರಚಾಚುವುದರಿಂದ ಯಾರಿಗೇನು ನಷ್ಟವಿಲ್ಲ. ಅವರ ನಾಲಿಗೆ, ಅವರಿಷ್ಟ ಬಿಡಿ! ಇಷ್ಟಕ್ಕೂ ನಾಲಿಗೆ ಹೊರಚಾಚಲು ಏನು ಕಾರಣ? ಅದರಿಂದ ಏನಾದರೂ ಅನುಕೂಲವಿದೆಯಾ? ತಿಳಿಯೋಣ ಬನ್ನಿ.

  • ಶ್ರೀವತ್ಸ ಜೋಶಿ
Why do some people stick out their tongue?ನಮ್ಮ ತಂದೆಯವರಿಗೆ ಆ ಅಭ್ಯಾಸವಿತ್ತು. ಅಭ್ಯಾಸ ಎನ್ನುವುದಕ್ಕಿಂತಲೂ ಅದನ್ನೊಂದು ಪರಾವರ್ತಿತ ಪ್ರತಿಕ್ರಿಯೆ ಎನ್ನೋಣ. ಅವರು ಕೈಕರಣದ ಯಾವುದೇ ಕೆಲಸದಲ್ಲಿ - ಅದು ಮನೆಹಿತ್ತಲಿನಲ್ಲಿ ಕಳೆಗಿಡಗಳನ್ನು/ಹುಲ್ಲನ್ನು ತೆಗೆಯುವುದಿರಲಿ, ಬೆತ್ತದ ಬುಟ್ಟಿಗಳನ್ನು ಹೆಣೆಯುವುದಿರಲಿ, ಒಣಗಿದ ಅಡಿಕೆ ಸುಲಿಯುವುದಿರಲಿ - ತಲ್ಲೀನರಾಗಿದ್ದಾಗ ಬಾಯಿಂದ ನಾಲಿಗೆಯನ್ನು ಸ್ವಲ್ಪವಷ್ಟೇ ಹೊರಚಾಚಿರುತ್ತಿದ್ದರು. ಇದೇ ಅಭ್ಯಾಸ ಇಂಗ್ಲೆಂಡ್‌ನಲ್ಲಿರುವ ನಮ್ಮಣ್ಣನ ಒಂದು ಕ್ಯಾರಕ್ಟರಿಸ್ಟಿಕ್ ಸಹ ಹೌದು. ಅವರು ಕೈಬರಹದಿಂದ ಕಾಗದ ಬರೆಯುತ್ತಿರಬೇಕಾದರೆ ಬಾಯಿಂದ ಹೊರಚಾಚಿದ ನಾಲಿಗೆಯೂ ಬರವಣಿಗೆಯ ಸಾಲಿನ ಓಘದಂತೆಯೇ ಎಡದಿಂದ ಬಲಕ್ಕೆ ನಿಧಾನಕ್ಕೆ ಹೊರಳುತ್ತಿರುತ್ತದೆ!

ಕೆಲಸದಲ್ಲಿ ತಲ್ಲೀನರಾಗಿದ್ದಾಗ ನಾಲಿಗೆಯನ್ನು ತುಸುವಷ್ಟೇ ಹೊರಚಾಚಿಕೊಂಡಿರುವವರು ನಿಮಗೂ ಕೆಲವರಾದರೂ ಗೊತ್ತಿರಬಹುದು. ಅಥವಾ ನೀವೇ ಅಂಥವರ ಪೈಕಿ ಒಬ್ಬರಾಗಿರಲೂಬಹುದು. ಕಾರ್ಯತತ್ಪರತೆಯ ಕುರುಹಾಗಿ ನಾಲಿಗೆಚಾಚುವುದು - ಇದೊಂದು ಸರ್ವೇಸಾಮಾನ್ಯ ಸಂಗತಿ. ಸಣ್ಣ ಮಕ್ಕಳಲ್ಲಂತೂ ಹೆಚ್ಚಾಗಿ ಕಂಡುಬರುತ್ತದೆ. ಮಗು ಆಟಿಗೆಯ ಬ್ಲಾಕ್‌ಗಳನ್ನು ಜೋಡಿಸುವಾಗ, ಬಿಗಿಯಾದ ಮುಚ್ಚಳವನ್ನು ಎರಡೂ ಕೈಗಳಿಂದ ತೆಗೆಯುವ ಪ್ರಯತ್ನ ಮಾಡುವಾಗ ಅಥವಾ ಇನ್ನಾವುದೇ ತಲ್ಲೀನ ಚಟುವಟಿಕೆಯ ಸಂದರ್ಭದಲ್ಲೂ ನಾಲಿಗೆ ಚಾಚಿಕೊಂಡಿದ್ದಿರುತ್ತದೆ.

ವಿಶ್ವವಿಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್‌ನ ಭಾವಚಿತ್ರವೊಂದರಲ್ಲಿ ಅವರ ನಾಲಿಗೆ ಹೊರಚಾಚಿದ್ದಿದೆ. ಆ ಚಿತ್ರವು ನ್ಯೂಟನ್ ಪ್ರಯೋಗನಿರತನಾಗಿದ್ದಾಗ ತೆಗೆದಿರುವುದೋ ಅಥವಾ ಬೇರಾವ ಸಂದರ್ಭದಲ್ಲೋ ಗೊತ್ತಿಲ್ಲ. ಅಮೆರಿಕದ ಪ್ರಖ್ಯಾತ ಬಾಸ್ಕೆಟ್‌ಬಾಲ್ ಆಟಗಾರ (ಈಗ ನಿವೃತ್ತ) ಮೈಕೇಲ್ ಜಾರ್ಡನ್ ಆಟದಲ್ಲಿ ತನ್ಮಯನಾಗಿ ಬಾಸ್ಕೆಟ್‌ಗೆ ಚೆಂಡು ಹಾಕುವ ಕ್ಷಣದಲ್ಲಿ ಅವನ ನಾಲಿಗೆ ಹೊರಚಾಚಿದ್ದಿರುತ್ತಿತ್ತಂತೆ. ಅಂದರೆ ಅದು ಆಟದಲ್ಲಿನ ಅವನ ಕಾನ್ಸಂಟ್ರೇಶನ್‌ನ ಪ್ರತೀಕವೇಂದೇ ಆಯ್ತು.

ಮೊನ್ನೆಯಷ್ಟೇ ಅಮೆರಿಕದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟ ಗಂಗಾ-ಕಾವೇರಿ ವಾದ್ಯವೃಂದದಲ್ಲಿ ರಿದಂಪ್ಯಾಡ್ಸ್ ಕಲಾವಿದನಾಗಿದ್ದ ಅರುಣ್‌ಕುಮಾರ್ ಅವರ ಅದ್ಭುತ ಕರಚಳಕವನ್ನು ಗಮನಿಸುತ್ತಿದ್ದೆ - ಡ್ರಮ್ಸ್ ಬಾರಿಸುವ ತಾದಾತ್ಮ್ಯದಲ್ಲಿರುವಾಗ ಅವರ ನಾಲಿಗೆಯ ತುದಿ ಹೊರಚಾಚಿದ್ದಿರುತ್ತಿತ್ತು!

ಹೀಗೆ ಎಷ್ಟೋ ಉದಾಹರಣೆಗಳನ್ನು ಕೊಡುತ್ತಾಹೋಗಬಹುದು. ಆದರೆ ಮೂಲಭೂತ ಪ್ರಶ್ನೆ - ಕೈಕರಣದ ಕೆಲಸದಲ್ಲಿನ ಕಾನ್ಸಂಟ್ರೇಶನ್‌ಗೂ ನಾಲಿಗೆ ಹೊರಚಾಚಿಕೊಳ್ಳುವುದಕ್ಕೂ ಏನು ಸಂಬಂಧ? ಇದು ಎಲ್ಲರಲ್ಲೂ ಇಲ್ಲದೆ ಕೆಲವರಲ್ಲಿ ಮಾತ್ರ ಕಂಡುಬರುವುದಕ್ಕೆ ಏನು ಕಾರಣ? ಇದೊಂದು ನ್ಯೂನತೆಯೇ, ಕಾಯಿಲೆಯೇ, ಅಥವಾ ಆರೋಗ್ಯವಂತ ಸ್ಥಿತಿಯ ಒಳ್ಳೆಯ ಲಕ್ಷಣವೇ?

ಅಮೆರಿಕದ ನಾರ್ತ್‌ಕೆರೊಲಿನಾದಲ್ಲಿರುವ ಇಬ್ಬರು ವೈದ್ಯರಾದ ಡಾ. ಇವಾನ್ ಬಾಲರ್ಡ್ ಮತ್ತು ಡಾ. ವಿಲ್ಸನ್ ಗ್ರಿಫಿನ್‌ರ ಮಾರ್ಗದರ್ಶನದಲ್ಲಿ ನಾವೊಮ್ಮೆ ಮನುಷ್ಯನ ಮೆದುಳಿನ ಗೈಡೆಡ್ ಟೂರ್ ಮಾಡಿದರೆ ಈ ಪ್ರಶ್ನೆಗಳಿಗೆಲ್ಲ ಉತ್ತರ ಸಿಗುತ್ತದೆ.

ಮನುಷ್ಯನ ಮೆದುಳಿನಲ್ಲಿ ಸೆರೆಬ್ರಲ್ ಕಾರ್ಟೆಕ್ಸ್ ಎಂಬ ಭಾಗದಲ್ಲಿ ಸಂಕೀರ್ಣವಾದ ಕೆಲಸಗಳು ಮತ್ತು ಆಲೋಚನೆಗಳ ಸಂಘಟನೆಯಾಗುವುದು. ಕಾಲು, ಮಂಡಿ, ಸೊಂಟ, ಬೆನ್ನು, ಅಂಗೈ, ಕಿವಿ... ಹೀಗೆ ದೇಹದ ಪ್ರತಿಯೊಂದು ಭಾಗಕ್ಕೆ ಸಂಬಂಧಿಸಿದಂತೆಯೂ ಸೆರೆಬ್ರಲ್ ಕಾರ್ಟೆಕ್ಸ್‌ನಲ್ಲಿ ನಿರ್ದಿಷ್ಟವಾದ ಮತ್ತು ಪ್ರತ್ಯೇಕವಾದ ವಿಭಾಗಗಳಿರುತ್ತವೆ. ಒಂದು ರೀತಿಯಲ್ಲಿ ಅವು ಆಯಾ ಅಂಗಗಳ ಕಮಾಂಡ್/ಕಂಟ್ರೋಲ್ ಸೆಂಟರ್ ಇದ್ದಂತೆ, ಅಥವಾ ಹೆಡ್ ಆಫೀಸ್ ಎಂದರೂ ಸಮಂಜಸವಾದೀತು. ಅದರ ಪೈಕಿ, ಕೈಗಳಿಗೆ ಸಂಬಂಧಿಸಿದ ಭಾಗ ಮತ್ತು ನಾಲಿಗೆಗೆ ಸಂಬಂಧಿಸಿದ ಭಾಗಗಳು ಒಂದಕ್ಕೊಂದು ತಾಗಿಕೊಂಡು ಇವೆ. ಹಾಂ! ಇದೇನೂ ಕಾಕತಾಳೀಯವಾಗಿ ಆಗಿರುವುದಲ್ಲ; ಅಥವಾ ಅಕ್ಕಪಕ್ಕದ ಬಿಡಿ‌ಎ ಸೈಟ್‌ಗಳನ್ನು ಲಂಚಕೊಟ್ಟು ಎಲಾಟ್‌ಮೆಂಟ್ ಮಾಡಿಸಿಕೊಂಡಂತೆಯೂ ಅಲ್ಲ. ಈ ಭಾಗಗಳು ಅಕ್ಕಪಕ್ಕದಲ್ಲಿರುವುದಕ್ಕೆ ಜೀವವಿಕಾಸದ ದೃಷ್ಟಿಯಿಂದ ಬಲವಾದ ಕಾರಣವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more