ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂದಾರವತಿ ಕಲ್ಯಾಣ - ಉತ್ತರಕಾಂಡ

By Staff
|
Google Oneindia Kannada News


- ಅದೆಲ್ಲೋ ಒಮ್ಮೆ ಸನ್ಯಾಸಿ ಮತ್ತು ಬ್ರಾಹ್ಮಣ ಮತ್ತೆ ಭೇಟಿಯಾದರು. ಸನ್ಯಾಸಿಯು ಬ್ರಾಹ್ಮಣನನ್ನು ಹೇಗೋ ಪುಸಲಾಯಿಸಿ ಗ್ರಂಥದ ಕ್ಸೆರಾಕ್ಸ್‌ ಕಾಪಿ ಮಾಡಿಕೊಂಡು, ಒರಿಜಿನಲನ್ನು ಬ್ರಾಹ್ಮಣನಿಗೆ ರಿಟರ್ನ್‌ ಮಾಡಿರುವುದರಿಂದ ಬ್ರಾಹ್ಮಣ ಪೊಲೀಸ್‌ಕೇಸ್‌ ಹಾಕುವುದಿಲ್ಲ. (ವಾಣಿ ಮಂಜುನಾಥ್‌, ಲಾಸ್‌ಎಂಜಲಿಸ್‌)

- CCB branch ಪೊಲೀಸರು ಕಳೆದುಹೋಗಿರುವ documentನ ಶೋಧದಲ್ಲಿದ್ದಾರೆಂದು ಇವತ್ತು ಬೆಳಿಗ್ಗೆ ತಿಳಿದುಬಂತು. ಅಕಸ್ಮಾತ್‌ ಸಿಗಲಿಲ್ಲವೆಂದರೆ, ನಮ್‌ ಕಂಪೆನಿಯ Tech-writerಗೆ ಹೇಳಿ ಒಂದು documentation ready ಮಾಡಿಸೋಣ ಬಿಡಿ. ನೀವು Dont worry ಮಾಡ್ಕೊಬೇಡಿ. (ಶ್ರೀಹರ್ಷ, ಬೆಂಗಳೂರು)

- ಬ್ರಾಹ್ಮಣ ಪೊಲೀಸ್‌ಕಂಪ್ಲೇಂಟ್‌ ಕೊಡಲಿಲ್ಲ, ಏಕೆಂದರೆ ಅದರಿಂದ ಕೆಳಜಾತಿಯ ವ್ಯಕ್ತಿಯಾಬ್ಬ ಇನ್ಸ್‌ಪೆಕ್ಷನ್‌ಗಾಗಿ ಮನೆಗೆ ಬರೋದು... ಹೆಂಡತಿಯನ್ನೂ ಪ್ರಶ್ನೆ ಕೇಳೋದು... ಫಿಂಗರ್‌ಪ್ರಿಂಟ್‌ ತಗೊಳ್ಳೋದು... ಹುಡುಕಾಟದ ನೆಪದಲ್ಲಿ ಅವನಿಗೆ ಮನೆಯಲ್ಲಿನ ಬೇರೆ ಪುಸ್ತಕಗಳೆಲ್ಲ ಸಿಗೋದು... ಲಂಚ ಕೇಳೋದು... ಅಯ್ಯೋ ಕಾನ್ಸಿಕ್ವೆನ್ಸಸ್‌ ಎಣಿಸ್ಕೊಂಡ್ರೇ ಅವೆಲ್ಲ ಬೇಡ ಅನಿಸುತ್ತದೆ. ಹೇಗಿದ್ದರೂ ಅವನತ್ರ ‘ಬ್ಯಾಕ್‌ಅಪ್‌’ ಸಾಫ್ಟ್‌ಕಾಪಿ ಸಿಡಿಯಲ್ಲಿ ಬರ್ನ್‌ ಮಾಡಿದ್ದಿತ್ತು. ಅದೆಲ್ಲ ಓಕೆ, ದೊಡ್ಡ ಪ್ರಾಬ್ಲೆಂ ಏನಾಯ್ತೆಂದರೆ ಈ ನಂ.3 ಯುವಕ (ಸನ್ಯಾಸಿ) ತನ್ನಲ್ಲಿದ್ದ ಗ್ರಂಥಮಂತ್ರವನ್ನು ಯದ್ವಾತದ್ವಾ ಮನಬಂದಲ್ಲೆಲ್ಲ ಚಾಂಟಿಸಿದ್ದರಿಂದ, ಸತ್ತವರು (ಮುದುಕರಾಗಿ, ರೋಗಿಗಳಾಗಿ, ಅಪಘಾತದಲ್ಲಿ, ಶಿಕ್ಷೆಗೊಳಗಾಗಿ... ಹೀಗೆ ಬೇರೆಬೇರೆ ಥರ ಸತ್ತವರೆಲ್ಲ) ಮತ್ತೆ ಬದುಕಿ ಬರಲಾರಂಭಿಸಿದರು! ಜನಜೀವನ ತುಂಬ ಮಿಸರೆಬಲ್‌ ಆಯ್ತು. ಚಿತ್ರಗುಪ್ತನಿಗಂತೂ ಮಂಡೆಬೆಚ್ಚ ಆಗಿ ತನ್ನ ಎಕೌಂಟ್‌ಬುಕ್‌ಗಳನ್ನೆಲ್ಲ ಬ್ಯಾಕ್‌ಟ್ರಾಕ್‌ ಮಾಡಬೇಕಾಯಿತು. ಕೊನೆಗೂ ಅವನು ಸ್ಪೆಷಲ್‌ ಏಜಂಟನೊಬ್ಬನನ್ನು ಕಳಿಸಿ ಆ ಗ್ರಂಥವನ್ನೂ, ಗ್ರಂಥಧಾರಿ ನಂ.3 ಆಸಾಮಿಯನ್ನೂ ‘ಮಟಾಷ್‌’ ಮಾಡುವಂತೆ ಆಜ್ಞಾಪಿಸಿದನು. (ದಿನೇಶ್‌ ನೆಟ್ಟರ್‌, ನ್ಯೂಜೆರ್ಸಿ)

- ಹೌದು ಕೇಸ್‌ ದಾಖಲಾಗಿದೆ. ಸಿಸಿಬಿ ಕೈಯಲ್ಲಿದೆ. ಶಿವರಾಮ್‌ ಬಿಕೆ ಮತ್ತು ರವಿಕಾಂತೇಗೌಡರು ಇನ್ವೆಸ್ಟಿಗೇಶನ್‌ ಮಾಡಿದ್ರೆ ರಹಸ್ಯ ಬಯಲಾಗುವ ಸಾಧ್ಯತೆಗಳಿವೆ ಮಾತ್ರವಲ್ಲ, ಈ ‘ಅರ್ಜುನ ಸನ್ಯಾಸಿ’ ಎನ್‌ಕೌಂಟರ್‌ಗೆ ಗುರಿಯಾಗುವ ಸಂಭವವೂ ಇದೆ! (ಡಾ. ಎಸ್‌. ಎಸ್‌, ಬೆಂಗಳೂರು)

- ಕೇಸ್‌ ದಾಖಲಾಗಿದೆ, ಉತ್ತರಪ್ರದೇಶದ ಹೈಕೋರ್ಟ್‌ನಲ್ಲಿ. ಅಲ್ಲಿ ಅದು ಯಥಾಪ್ರಕಾರ ಯಾವ ಪ್ರಗತಿಯನ್ನೂ ಕಾಣದಾಗಿ, ಕೇಂದ್ರ ಸರಕಾರವು ಈಗ ಸಿಬಿಐ ತನಿಖೆಗೆ ಆದೇಶ ನೀಡಿದೆ. ಅಸೆಂಬ್ಲಿ ಮತ್ತು ಪಾರ್ಲಿಮೆಂಟಲ್ಲಿ ಈಬಗ್ಗೆ ಸಾಕಷ್ಟು ವಾದವಿವಾದಗಳು ನಡೆದಿವೆ, ಸಾಕ್ಷ್ಯಾಧಾರಗಳೆಲ್ಲ ಶಿಥಿಲವಾಗಿವೆ. ಈಗುಳಿದಿರುವುದೆಂದರೆ ಅವತ್ತು ಸನ್ಯಾಸಿಯು ಬ್ರಾಹ್ಮಣನ ಮನೆಯಾಳಗೆ ನುಗ್ಗಲು ತೆಗೆದಿದ್ದ ಮೇಲ್ಛಾವಣಿಯ ಒಂದು ಹಂಚು ಮಾತ್ರ! (ಅರುಣ್‌ ಕಟ್ಟಿ, ಪೆನ್ಸಿಲ್ವೇನಿಯಾ)

- ಬ್ರಾಹ್ಮಣನು ಸನ್ಯಾಸಿಯ ಮೇಲೆ ಎರಡು ಮೊಕದ್ದಮೆಗಳನ್ನು ಹೂಡಿದ್ದಾನೆ. ಒಂದು, ಪುಸ್ತಕವನ್ನು ಕದ್ದದ್ದಕ್ಕಾಗಿ. ಇನ್ನೊಂದು ಕಾಪಿರೈಟ್‌ ವಯಾಲೇಶನ್‌ ಕುರಿತು. ಆ ಮಂತ್ರಟೆಕ್ನಾಲಜಿಗೆ ಅವನ ಹೆಸರಲ್ಲಿ ಪೆಟೆಂಟ್‌ ಇತ್ತು! (ಶಿವಶಂಕರ್‌, ಅಮೆರಿಕ)

- ಪುಸ್ತಕವನ್ನು ಕದ್ದ ವ್ಯಕ್ತಿಯ ಹೆಜ್ಜೆಯ ಗುರುತಿನ ಜಾಡನ್ನು ಅನುಕರಿಸಿ ಬಂದ ಬ್ರಾಹ್ಮಣನಿಗೆ, ನದಿಯ ತೀರದಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ ಮೂರನೆಯ ಯುವಕ ಕಂಡುಬಂದ. ಪುಸ್ತಕವನ್ನು ಹಿಂದಿರುಗಿಸುವಂತೆ ಬ್ರಾಹ್ಮಣ ಕೇಳಿದ. ಯುವಕನಿಗೋ ಆ ಮಂತ್ರಗಳನ್ನು ಸಂಪೂರ್ಣವಾಗಿ ಕಲಿಯುವ ಆಸೆ. ಆಗಿನ್ನೂ ಕ್ಸೆರಾಕ್ಸ್‌ ಕಂಪೆನಿಯ ‘ನಕಲು ಯಂತ್ರ’ಗಳು ಇಲ್ಲದಿದ್ದ ಕಾಲ. ಯುವಕನು ಆ ಮಂತ್ರವನ್ನು ಬಾಯಿಪಾಠ ಮಾಡುವ ನಿರ್ಧಾರ ತೆಗೆದುಕೊಂಡು ಲಗುಬಗೆಯಿಂದ ಪಠಣವನ್ನು ಮಾಡಲಾರಂಭಿಸಿದ. ಬ್ರಾಹ್ಮಣನು ಆತನ ಬೆನ್ನಟ್ಟಿದ. ತನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದ ಬ್ರಾಹ್ಮಣನು ಆ ಪುಸ್ತಕವನ್ನು ಕಸಿದುಕೊಳ್ಳುವುದರೊಳಗಾಗಿ ಅವನು ಇಡಿಯ ಮಂತ್ರವನ್ನು ಕಲಿಯಬೇಕಾಗಿತ್ತು. ಓಡುತ್ತಾ ಓಡುತ್ತಾ (ಓದುತ್ತಾ ಓದುತ್ತಾ...) ಮಂತ್ರದ ಕಡೆಯ ಸಾಲನ್ನು ಹೇಳುವಷ್ಟರಲ್ಲಿ ಯುವಕನು ಜಾರಿ ನದಿಗೆ ಬಿದ್ದ. ಯುವಕನು ಬಿದ್ದ ರಭಸಕ್ಕೆ ನದಿಯ ನೀರು ಮೇಲಕ್ಕೆ ಚಿಮ್ಮಿ (’ಆರ್ಕಿಮಿಡೀಸ್‌ ತತ್ವ’ ಗೊತ್ತಿದೆ ತಾನೆ?) ನದಿಯ ದಂಡೆಯಲ್ಲಿದ್ದ ಸ್ಮಶಾನ ಭೂಮಿಯಲ್ಲಿ ಬಿತ್ತು. ಶತಮಾನಗಳಿಂದ ಚಿರಶಯ್ಯೆಯಲ್ಲಿದ್ದವರೆಲ್ಲ ಜೀವಂತರಾಗಿ ಮೇಲೆದ್ದು ಬಂದರು! ಅವರೆಲ್ಲರಿಗೂ ಪುಸ್ತಕದ ಮಹಿಮೆ ತಿಳಿದು ಬಂದಿತು. ತಮ್ಮತಮ್ಮ ಪೂರ್ವಜರನ್ನು ಬದುಕಿಸಿಕೊಳ್ಳುವ ಹಂಬಲ ಮೂಡಿಬಂದ ಆ ಪ್ರೇತಾತ್ಮಗಳು (ಈಗ ಸಜೀವಿಗಳು!) ಯುವಕನ ಕೈಯಿಂದ ಪುಸ್ತಕವನ್ನು ಕಿತ್ತುಕೊಳ್ಳಲು ಧಾವಿಸಿದರು. ಆ ಕಿತ್ತಾಟದಲ್ಲಿ, ಮಂತ್ರದ ಪುಸ್ತಕವು ಸಾವಿರದೆಂಟು ಚೂರಾಗಿ ಹರಿದು ಹೋಯ್ತು! (ಪ್ರಕಾಶ್‌ ದೇವೆಂದ್ರ, ಡಬ್ಲಿನ್‌)

*

ಇಲ್ಲಿಗೆ ಮಂದಾರವತಿಕಲ್ಯಾಣದ ಉತ್ತರಕಾಂಡವು ಮುಗಿದುದು. ಕಥಾಸಾರಾಂಶವೇನೆಂದರೆ, ವಿಚಿತ್ರಾನ್ನದ ಸ್ಮಾರ್ಟ್‌ ಓದುಗರ ಈ ಸುಪರ್‌ಸ್ಮಾರ್ಟ್‌ ಉತ್ತರಗಳನ್ನು ಕೇಳಿ ಇದೀಗ ಬೇತಾಳದ ತಲೆಯೇ 1024 ಹೋಳುಗಳಾಗಿ ಹೋಗಿರುವುದು. ಈ ಬಗ್ಗೆ ನಿಮ್ಮದೇನಾದರೂ ಅನಿಸಿಕೆ-ತರ್ಕ-ತಕರಾರುಗಳಿದ್ದರೆ ಎಂದಿನಂತೆಯೇ ಈಮೈಲ್‌ ಬರೆದು ತಿಳಿಸುವುದು. ವಿಳಾಸ : ಠ್ಟಜಿಡಚಠಿಜಠಚ್ಜಟಠಜಜಿಃಢಚಜಟಟ.್ಚಟಞ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X