• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂದಾರವತಿ ಕಲ್ಯಾಣ - ಉತ್ತರಕಾಂಡ

By Staff
|

ಎರಡನೆ ಪ್ರಶ್ನೆ - ಕೇಶವ ಏನಾದನು? ಲಾಂಗ್‌ ಟೈಮ್‌ ನೊ ಸೀ!

- ಯಾವಾಗ ಮಂದಾರವತಿಗೆ ಸನ್ಯಾಸಿ (ಮೂರನೆ ಯುವಕ) ಮರುಜನ್ಮ ನೀಡಿದನೋ ಅಂದೇ ಅವನು ಕಪಿಯಾದ (ಕನ್ಯಾಪಿತೃ). ಆದ್ದರಿಂದ ಇನ್ನುಮುಂದೆ ಅವಳ ಸಂಪೂರ್ಣ ಜವಾಬ್ದಾರಿಯನ್ನು (ವರದಕ್ಷಿಣೆ ಇತ್ಯಾದಿ ಖರ್ಚು...) ಅವನೇ ವಹಿಸಿಕೊಳ್ಳತಕ್ಕದ್ದು. ಹೀಗೆ ಸುಲಭವಾಗಿ ಮಗಳ ಮದುವೆ ಜವಾಬ್ದಾರಿಯಿಂದ ತಪ್ಪಿಸಿಕೊಂಡ ಕೇಶವ ಎಲ್ಲೋ ಅರಾಮಾಗಿ ಇರಬಹುದು. ಅವನ ಪಾಡಿಗೆ ಬಿಟ್ಟು ಬಿಡಿ. (ಬರಹ ವಾಸು, ನ್ಯೂಜೆರ್ಸಿ)

- ಕೇಶವ ಭಟ್ರು, ಹೇಗೂ ಮಗಳ ಮದುವೆಯಾಯಿತು ಇನ್ನಾವುದೇ ಜವಾಬ್ದಾರಿ ಇಲ್ಲದಿದ್ದುದರಿಂದ ಹಿಂದೆ ಮಾಡಿದ ಪೆನ್ಷನ್‌ ಪ್ಲಾನಿನ ಹಣದಲ್ಲಿ ಜೀವನ ಸಾಗಿಸುತ್ತ, ಮಗಳ ಮದುವೆ ಸಮಯದಲ್ಲಿ ಮೆಚ್ಯೂರಾದ ಇನ್ಶೂರೆನ್ಸ್‌ ಹಣವನ್ನು ಶೇರು ವಹಿವಾಟಿನಲ್ಲಿ ತೊಡಗಿಸಿ ಮಗ್ನರಾಗಿರಬಹುದು. (ವಿವೇಕ್‌ ಐತಾಳ, ಬೆಂಗಳೂರು)

- ಮಗಳನ್ನು ಕಳೆದುಕೊಂಡ (ಕಾಳಿಂಗಸರ್ಪ ಕಚ್ಚಿ ಆಕೆ ಸತ್ತಾಗ) ದುಃಖದಲ್ಲಿ ಕೇಶವ ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋದವನು ಅಲ್ಲೇ ಇದ್ದಾನಂತೆ. ಈ ಮೂವರು ಯುವಕರ ಕಿತಾಪತಿಗಳಾವುವೂ ಅವನಿಗೆ ಗೊತ್ತೇ ಇಲ್ಲ! (ವಾಣಿ ಮಂಜುನಾಥ್‌, ಲಾಸ್‌ಏಂಜಲಿಸ್‌)

- ಸತ್ತು ಬದುಕಿದ ಮಂದಾರವತಿಗೆ ವರ ಯಾರೆಂದು ನಿರ್ಧಾರವಾದ ಮೇಲೆ ಕೇಶವ ಅವನನ್ನು ’ಮನೆ ಅಳಿಯ’ನನ್ನಾಗಿಸಿದ. ಆ ಮೂಲಕ ವೃದ್ಧಾಪ್ಯದಲ್ಲಿ ಮಗಳು-ಅಳಿಯರಿಂದ ತಕ್ಕಮಟ್ಟಿನ ಸೇವೆ ಮಾಡಿಸಿಕೊಂಡು ಧನ್ಯನಾದ. (ರಾಮಚಂದ್ರ ಹೆಗ್ಡೆ, ಸಿಂಗಾಪುರ)

- ಕೇಶವ ವಯಸ್ಸಾದ್ದರಿಂದ Kಶವವಾದರೆಂದು ರವಿ ಬೆಳಗೆರೆಯವರು ನಿನ್ನೆ ರಾತ್ರಿ ಕ್ರೈಮ್‌ ಡೈರಿಯಲ್ಲಿ ವಿವರಿಸಿದ್ದಾರೆ. ಈ ವರದಿ ಉದಯ ಟಿವಿಯಲ್ಲಿ ಕಾಕತ್ಕರ್‌ ಕ್ರೈಮ್‌ ಸ್ಟೋರಿ (?)ಯಲ್ಲಿನ್ನೂ ಪ್ರಕಟವಾದಂತಿಲ್ಲ. (ಶ್ರೀಹರ್ಷ, ಬೆಂಗಳೂರು)

- ಕೇಶವನ ಬಗ್ಗೆ ಸುಳಿವು ಬೇಕೇ? ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಂಗಳೂರು ಕಾರ್ಯಾಲಯ ’ಕೇಶವ ಕೃಪಾ’ದಲ್ಲಿ ಆ ಮಾಹಿತಿ ಸಿಗಬಹುದೇನೊ! (ಡಾ. ಎಸ್‌.ಎಸ್‌, ಬೆಂಗಳೂರು)

- ಮಗಳು ಸತ್ತ ಮೇಲೆ ಆ ಮೂವರು ಯುವಕರೂ ಒಬ್ಬೊಬ್ಬರು ಒಂದೊಂದು ಮಾರ್ಗ ಹಿಡಿದರಲ್ಲವೆ? ಒಬ್ಬ ಸತ್ತ, ಇನ್ನೊಬ್ಬ ನದಿತೀರದಲ್ಲಿ ವಾಸಿಸತೊಡಗಿದೆ, ಮೂರನೆಯವನು ಸನ್ಯಾಸಿಯಾದ. ಕೇಶವನ ಬಳಿ ಈ ಮೂವರ ಮೊಬೈಲ್‌ ನಂಬರ್‌ ಇತ್ತಾದರೂ ಕರೆ ಮಾಡಿದಾಗೆಲ್ಲ ‘‘ನೀವು ಕರೆ ಮಾಡಿರುವ ವ್ಯಕ್ತಿ ವ್ಯಾಪ್ತಿ ಪ್ರದೇಶದೊಳಗಿಲ್ಲ...’’ ಎಂಬ ಮೆಸೇಜನ್ನೇ ಕೇಳಿಕೇಳಿ ಹುಚ್ಚುಹಿಡಿದ ಕೇಶವ ಜೀವಂತಶವವಾದ! (ಬಸವರಾಜ್‌, ಬೆಂಗಳೂರು)

- ಕೇಶವ ತನ್ನ ಅಳಿಯನ (ಅವನು ಮೂರನೆಯ ಯುವಕನಿಂದ ಗುತ್ತಿಗೆಪಡೆದ) ‘ಲೈಫ‚್‌ ಸೇವರ್ಸ್‌’ ಬಿಸಿನೆಸ್ಸಿನ ಆಫ್‌-ಶೋರ್‌ ಆ್ಯಕ್ಟಿವಿಟೀಸ್‌ ಎಲ್ಲ ನೋಡ್ಕೊಳ್ತಾ ಇದ್ದಾನೆ. (ಶಿವಶಂಕರ್‌, ಅಮೆರಿಕ)

- ಕೇಶವನ ನೆನಪಲ್ಲಿ ಬ್ರಾಹ್ಮಣರೆಲ್ಲ ‘ಕೇಶವಾಯನಮಃ...’ ಎಂದೇ ಸಂಧ್ಯಾವಂದನೆಯನ್ನು ಆರಂಭಿಸಬೇಕೆಂದು ಬ್ರಹ್ಮೋಪದೇಶವಾಗಿದೆ! (ಅಬ್ದುಲ್‌ ನಾರಾಯಣ್‌ ಡಿಸೋಜಾ, ಸರ್ವಧರ್ಮನಗರ)

ಮೂರನೆ ಪ್ರಶ್ನೆ - ಪೊಲೀಸ್‌ಕಂಪ್ಲೇಂಟ್‌ ವಿಷಯ...

- ಒಂದುವೇಳೆ ಬ್ರಾಹ್ಮಣ ದಂಪತಿಗಳು, ಪುಸ್ತಕ ಕದ್ದಿದ್ದಾನೆ ಎಂದು ಸನ್ಯಾಸಿಯ ಮೇಲೆ ಪೊಲೀಸ್‌ಕಂಪ್ಲೇಂಟ್‌ ಕೊಟ್ಟರೆ, ಇನ್ವೆಸ್ಟಿಗೇಶನ್‌ನಲ್ಲಿ ತಾವು ‘ಚೈಲ್ಡ್‌ ಅಬ್ಯೂಸ್‌’ ಮಾಡುತ್ತಿದ್ದ ವಿಷಯ ಹೊರಬಿದ್ದರೆ!? ಅದಕ್ಕೆ ಅವರು ಸುಮ್ಮನಾಗಿರಬೇಕು. (ಬರಹ ವಾಸು; ನ್ಯೂಜೆರ್ಸಿ)

- ಪುಸ್ತಕ ಕಳಕೊಂಡ ಬ್ರಾಹ್ಮಣ ಪೊಲೀಸ್‌ಕಂಪ್ಲೆಂಟ್‌ನ ಉಸಾಬರಿಗೆ ಹೋಗದೆ ಗೂಗಲಿನಲ್ಲಿ ಆ ಪುಸ್ತಕದ ಸಾಫ‚್‌್ಟಕಾಪಿಯನ್ನು ಸರ್ಚಿಸಿ, ಡೌನ್‌ಲೋಡಿಸಿ ’ಆಫೀಸಿನ’ ಪ್ರಿಂಟರ್‌ನಲ್ಲಿ ಪ್ರಿಂಟಿಸಿ ಮನೆಯಲ್ಲಿಟ್ಟುಕೊಳ್ಳಬಹುದು. ಯಾಕೆಂದರೆ ಪೊಲೀಸು ಕೋರ್ಟ್‌ ಕಛೇರಿಯಂತಹ ಕೆಲಸಕ್ಕೆ ಕೈಹಾಕಿ ಸುಮ್ಮನೆ ಸಾವಿರಗಟ್ಟಲೆ ಹಣ ಕಳೆದುಕೊಳ್ಳುವಂತಹ ದುಬಾರಿ ಪ್ರಯತ್ನವನ್ನು ಕೈಬಿಟ್ಟು, ಒಂದು ರೂಪಾಯಿ ಕಾಸೂ ಖರ್ಚಿಲ್ಲದೆ ಆಗುವ ಐಡಿಯಾವನ್ನು ಲೈಕಿಸುವುದು ಒಳ್ಳೇದು. ಎಷ್ಟಾದ್ರೂ ಅವರೂ ಭಟ್ರಲ್ವಾ ಮಾರಾಯ್ರೆ! (ವಿವೇಕ್‌ ಐತಾಳ, ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X