• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂದಾರವತಿ ಕಲ್ಯಾಣ - ಉತ್ತರಕಾಂಡ

By Staff
|

- ಗುಡಿಸಲಲ್ಲಿ ಏನೆಲ್ಲ ಸೌಲಭ್ಯಗಳಿವೆ ಅನ್ನೋದ್ರ ಮೇಲೆ ಡಿಪೆಂಡಾಗಿದೆ. ಒಂದು ವೇಳೆ ಅದು ski-cabin ಥರದ್ದಾದರೆ ಮಂದಾರವತಿ ಅದಕ್ಕೆ ಓಕೆ ಎನ್ನಬಹುದೇನೊ. (ಪೂರ್ಣಿಮಾ ನಾರಾಯಣ್‌, ಪೆನ್ಸಿಲ್ವೇನಿಯಾ)

- ಗುಡಿಸಲಿನ ಲೈಫ್‌ನಲ್ಲಿ ಏನೂ ಗ್ಲಾಮರ್‌ ಇರೋಲ್ಲ ಅಂತ ಜಾಣೆಯಾದ ಮಂದಾರವತಿಗೆ ಗೊತ್ತು. ಆದ್ದರಿಂದ ಅವಳು ಗಂಡನನ್ನು beach-front property ಖರೀದಿಸುವಂತೆ ಒತ್ತಾಯಿಸುತ್ತಾಳೆ. (ವಾಣಿ ಮಂಜುನಾಥ್‌, ಲಾಸ್‌ಏಂಜಲೀಸ್‌)

- ಹೊಳೆಬದಿಯಲ್ಲಿ ವಾಸ ಮಾಡೋದು ಒಳ್ಳೇದೆ. ಯಾಕಂದ್ರೆ, cost of living ಕಡಿಮೆ. BWSSB or any other ಜಲಮಂಡಳಿ ಕಾಟ ಇಲ್ಲದೆ ಬದುಕಬಹುದು. (ಶ್ರೀಹರ್ಷ, ಬೆಂಗಳೂರು)

- ಗುಡಿಸಲನ್ನು ನೋಡಿ ಮಂದಾರವತಿಗೆ ಒಂದೊಮ್ಮೆಗೆ ತೀವ್ರ ಅಘಾತವೇ ಆಯ್ತು. ಇದಕ್ಕಿಂತ ಸಾವೇ ಚೆನ್ನ ಎಂದೂ ಅಂದುಕೊಂಡಳು. ಆದರೆ ಒಡನೆಯೇ ಅವಳಿಗೆ ಯೋಚನೆ ಹೊಳೆದದ್ದೇನೆಂದರೆ ಉಳಿದಿಬ್ಬರು ಯುವಕರು ಈಗ ತಂದೆ ಮತ್ತು ಸೋದರನ ಪಾತ್ರದಲ್ಲಿದ್ದಾರಲ್ಲ, ಅವರನ್ನು ದುಡಿಸಿ ಒಂದು ಭವ್ಯವಾದ ಬಂಗಲೆಯನ್ನು ಕಟ್ಟಿಸಿಕೊಳ್ಳುವುದು! (ದಿನೇಶ್‌ ನೆಟ್ಟರ್‌, ನ್ಯೂಜೆರ್ಸಿ)

- ಫ‚ಾ್ಲಟ್‌ ಕೊಳ್ಳುವುದು ಒಳ್ಳೆಯ ವಿಚಾರವೇ. ಆದರೆ ಬೆಂಗಳೂರಲ್ಲಂತೂ ಖಂಡಿತ ಸಾಧ್ಯವಿಲ್ಲ. ಮಲೆನಾಡು ಪರವಾ ಇಲ್ಲವೋ ಏನೊ. ಬೆಸ್ಟ್‌ ಎಂದರೆ ಕುಂದಾಪುರ ಹತ್ತಿರದ ಮಂದಾರ್ತಿ ಎಂಬ ಹಳ್ಳಿಯಲ್ಲಿ ಮನೆ ಕಟ್ಟಿಸೋದು. ಮಂದಾರವತಿಗೆ ಮಂದಾರ್ತಿ ರ್ಹೈಮಿಂಗ್‌ ಅಲ್ವೇ? (ಡಾ.ಎಸ್‌.ಎಸ್‌, ಬೆಂಗಳೂರು)

- ಬೀಸೋ ದೊಣ್ಣೆ ತಪ್ಪಿದ್ರೆ ಸಾವಿರ ವರ್ಷ ಆಯಸ್ಸು ಅಂತಾರೆ. ಜೀವ ಮರಳಿ ಸಿಕ್ಕಿದ್ದೇ ಪುಣ್ಯ, ಅಂಥಾದ್ರಲ್ಲಿ ಹೊಸ ಫ‚ಾ್ಲಟ್‌/ಮನೆ ಬೇಕಂತೆ! ಇರಲಿ, ಮಾನವಸಹಜ ಆಸೆ. ಆದರೂ ಆಕೆ ರೆಡಿಮೇಡ್‌ ಫ‚ಾ್ಲಟ್‌ ಕೊಳ್ಳೊದೇ ವಾಸಿ. ಮನೆ ಗಿನೆ ಕಟ್ಟಿಸಲಿಕ್ಕೆ ಹೊರಟರೆ ಮಣ್ಣು ಅಗೆಯುವಾಗ ಮತ್ತೆ ಕಾಳಿಂಗಸರ್ಪ ಧುತ್ತೆಂದು ಪ್ರತ್ಯಕ್ಷವಾದರೆ!! ಅವಳ ಗಂಡನೂ ‘ರಿಯಲ್‌ ಎಸ್ಟೇಟ್‌’ ಟ್ರೆಂಡ್‌ ಹೇಗಿದೆ ಅಂತ ನೋಡೋದು ಬೆಟರ್‌. (ಅರುಣ್‌ ಕಟ್ಟಿ, ಪೆನ್ಸಿಲ್ವೇನಿಯಾ)

- ನದಿಬದಿಯ ಗುಡಿಸಲಿಗಿಂತ ಫ್ಲಾಟ್‌ ಖರೀದಿಸೋದೇ ಆ ಯುವಕನ ದೃಷ್ಟಿಯಿಂದಲೂ ಒಳ್ಳೆಯದು. ನದೀತೀರದಲ್ಲಿ ಅಕ್ಕಪಕ್ಕ ಮನೆಗಳೂ ಇರೋದಿಲ್ಲ, ಫ‚ಾ್ಲಟ್‌ ಆದರೆ ನೆರೆಹೊರೆಯವರಿರುತ್ತಾರೆ, ಒಳ್ಳೊಳ್ಳೆ ‘ಫಿಗರ್ಸ್‌’ ಸಿಗ್ತಾವೆ. ದಿನಕಳೆದಂತೆ ಅವನು ಯಾವುದಾದರೂ ಹುಡುಗಿಗೆ ಮನಸೋತು ಅಥವಾ ಹುಡುಗಿ ಇವನಿಗೆ ಲೈನ್‌ ಹೊಡೆದು ಜೀವನ ಸುಖಮಯವಾಗಬಹುದು. (ಬಸವರಾಜ್‌, ಬೆಂಗಳೂರು)

- ಹೊಳೆಬದಿಯ ಗುಡಿಸಲಿನ ಬದಲು ‘ಲೇಕ್‌ಸೈಡ್‌ ಪ್ಯಾಲೇಸ್‌’ ಖರೀದಿಸುವಂತೆ ಮಂದಾರವತಿ ಗಂಡನನ್ನು ಒತ್ತಾಯಿಸುತ್ತಾಳೆ. (ವಿಜಯಾ ಜಿ.ಯು, ಊರು?)

- ಆ ಗುಡಿಸಲು ಕೇವಲ ತಾತ್ಕಾಲಿಕ ವ್ಯವಸ್ಥೆ. ತಮ್ಮ ಮಧುಚಂದ್ರವನ್ನು ಆ ಗುಡಿಸಲಲ್ಲೇ ಮುಗಿಸಿದ ಯುವಕ ಮತ್ತು ಮಂದಾರವತಿ ಇಬ್ಬರೂ ಆಮೇಲೆ ನಗರಕ್ಕೆ ವಾಪಸಾದರು. ಅಲ್ಲಿ ಅವರಿಗೆ ದೊಡ್ಡದಾದ ಖಾಲಿ ಬಂಗಲೆಯಾಂದು ಕಾಯುತ್ತಿತ್ತು! (ಪ್ರಕಾಶ್‌ ದೇವೇಂದ್ರ, ಡಬ್ಲಿನ್‌)

- ಗುಡಿಸಲು ಬಿಡಿ, ಮಂದಾರವತಿಗೆ ಫ‚ಾ್ಲಟು, ಸೈಟು/ಮನೆ ಇತ್ಯಾದಿ ಸಹ ಏನೇನೂ ಸಾಲದು. ಸ್ವಲ್ಪಕಾಲ ಸ್ವರ್ಗಸ್ಥಳಾಗಿ ಇದೀಗ ಮತ್ತೆ ಭೂಲೋಕವಾಸಿಯಾಗಿರುವ ಅವಳು ಕಡಿಮೆಯೆಂದರೂ ಮೈಸೂರು ಅರಮನೆಯಂಥದ್ದನ್ನೇ ಬಯಸುತ್ತಾಳೆ! (ವಿಠಲದಾಸ್‌ ಪ್ರಭು, ಅಮೆರಿಕ)

- ಮಂದಾರವತಿ ಖಂಡಿತವಾಗಿಯೂ ಗುಡಿಸಲಲ್ಲಿ ಸೆಟ್ಲ್‌ ಆಗಲಿಲ್ಲ. ಅವಳ ಡಿಮ್ಯಾಂಡಿನ ಮೇರೆಗೆ ಗಂಡ ಎಕ್ಸ್‌ಡಿಎ (ಎಕ್ಸ್‌ ಯಾವುದೇ ಸಿಟಿ ಇರಬಹುದು - ಬೆಂಗಳೂರು, ಮೈಸೂರು, ದಾವಣಗೆರೆ...) ಸೈಟಿಗೆ ಅರ್ಜಿ ಗುಜರಾಯಿಸಿದ. ಆದರೆ ಎಕ್ಸ್‌ಡಿಎ ಸೈಟ್‌ ವಿಷಯ ಗೊತ್ತಲ್ಲ, ಸಿಕ್ಕಿದ್ರೂ ಅದು ಸಿಗೋದು ಮುಂದಿನ ಜನ್ಮಕ್ಕೆ. ಇಂಡಿಪೆಂಡೆಂಟ್‌ ಹೌಸ್‌ ಕೊಳ್ಳೋಣವೆಂದುಕೊಂಡರು, ಕೈಗೆಟಕುವ ಬೆಲೆಯಲ್ಲಿ ಅದೆಲ್ಲಿ ಸಿಗುತ್ತದೆ? ಕೊನೆಗೂ ಅವರೀಗ ಒಂದು ಫ‚ಾ್ಲಟ್‌ ಖರೀದಿಸುವುದರಲ್ಲಿದ್ದಾರಂತೆ, ಇದೀಗ ಬಂದ ವರದಿಯಂತೆ ‘ಜಿಮ್‌’ ಮತ್ತು ‘ಸ್ಪಾ’ ಇತ್ಯಾದಿ ಸೌಕರ್ಯವಿರುವ ಫ್ಲಾಟ್‌ನಲ್ಲಿ ಮಂದಾರವತಿಯು ಹಾಲುಕ್ಕಿಸುವ ಸಮಾರಂಭ ಸದ್ಯದಲ್ಲೇ ಜರುಗಲಿದೆ. (ಶಿವಶಂಕರ್‌, ಅಮೆರಿಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X