• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂದಾರವತಿ ಕಲ್ಯಾಣ - ಉತ್ತರಕಾಂಡ

By ಶ್ರೀವತ್ಸ ಜೋಶಿ
|

‘ಸೂರ್ಯನಿಗೇ ಟಾರ್ಚಾ' ಎನ್ನುವಂತೆ ಬೇತಾಳ, ವಿಚಿತ್ರಾನ್ನದ ಓದುಗರಿಗೆ ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿದೆ! ನಮ್ಮ ಉತ್ತರಭೂಪರ ಉತ್ತರ, ಅನುಮಾನ, ಗೇಲಿ, ಟೀಕೆಗಳನ್ನು ಕೇಳಿ ಸುಸ್ತಾಗಿದೆ! ಅಷ್ಟು ಮಾತ್ರವಲ್ಲ, ಇದೀಗ ಬೇತಾಳದ ತಲೆಯೇ 1024 ಹೋಳುಗಳಾಗಿವೆ! ಅಯ್ಯೋ ಪಾಪ!

‘ಮೂವರು ಯುವಕರಲ್ಲಿ ಯಾರು ಮಂದಾರವತಿಗೆ ಯೋಗ್ಯನಾದ ವರ?' ಎಂಬ ಪ್ರಶ್ನೆಯನ್ನು ಬೇತಾಳವು ರಾಜಾತ್ರಿವಿಕ್ರಮನಿಗೆ ಕೇಳಿತ್ತಷ್ಟೆ? ಎಲ್‌ಕೆಜಿಯಿಂದಲೂ ಮೆರಿಟ್‌ಸ್ಟುಡೆಂಟ್‌ ಆಗಿದ್ದ, ಸಹಪಾಠಿಗಳಿಂದ ‘ಕುಡುಮಿ' ಎಂದು ಕರೆಯಿಸಿಕೊಂಡಿದ್ದ ರಾಜಾತ್ರಿವಿಕ್ರಮನು ಎಂದಿನಂತೆಯೇ ತನ್ನ ಸೂಪರ್‌ ಸ್ಮಾರ್ಟ್‌ನೆಸ್‌ ಬಳಸಿಕೊಂಡು ಬೇತಾಳಕ್ಕೆ ಈರೀತಿ ಉತ್ತರಿಸಿದನು :

‘‘ಮಂದಾರವತಿಯನ್ನು ವರಿಸಲು ಯೋಗ್ಯನಾದ ಮತ್ತು ಅರ್ಹನಾದ ವರನೆಂದರೆ ಅವಳ ಚಿತೆಯ ಬಳಿಯಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತಿದ್ದ ಯುವಕ. ಏಕೆಂದರೆ, ಮಂದಾರವತಿಗೆ ಮರುಹುಟ್ಟು ನೀಡಿದ ಮೂರನೆ ಯುವಕ (ಭಿಕ್ಷುಕಸನ್ಯಾಸಿ) ಅವಳಿಗೆ ಈಗ ಪಿತೃಸಮಾನನಾಗುತ್ತಾನೆ; ಚಿತೆಯಲ್ಲಿ ಹಾರಿ ಸತ್ತು, ಇದೀಗ ಅವಳೊಂದಿಗೆ ಮರುಹುಟ್ಟು ಪಡೆದ ಮೊದಲ ಯುವಕ ಅವಳ ಭ್ರಾತೃಸಮಾನನಾಗುತ್ತಾನೆ. ಹಾಗಾಗಿ ಅವರಿಬ್ಬರೂ ಮಂದಾರವತಿಯನ್ನು ಮದುವೆಯಾಗಲು ಸಾಧ್ಯವಿಲ್ಲ!''

ಈ ಉತ್ತರವನ್ನು ಮನಸ್ಸಲ್ಲಿ ಕಂಪೋಸ್‌ ಮಾಡುತ್ತಿರುವಾಗಲೇ ರಾಜಾತ್ರಿವಿಕ್ರಮನಿಗೆ ಉಜ್ಜೈನಿಯ ತನ್ನ ಪ್ಯಾಲೇಸಿನ ‘ಹೋಮ್‌ ಥಿಯೇಟರ್‌'ನಲ್ಲಿ ಹಳೆಯ ಕನ್ನಡ ಚಲನಚಿತ್ರ ‘ಮಧುಮಾಲತಿ'ಯನ್ನು ವೀಕ್ಷಿಸಿದ್ದು, ಅದರಲ್ಲಿ ರಾಜ್‌-ಉದಯ್‌-ಅರುಣ್‌ ಕುಮಾರತ್ರಯರ ಅಭಿನಯವನ್ನು ನೋಡಿ ಮೆಚ್ಚಿದ್ದು, ಭಾರತಿಯ ಬ್ಯೂಟಿಯನ್ನು ಶ್ಲಾಘಿಸಿದ್ದು... ಇತ್ಯಾದಿ ನೆನಪಾಗಿತ್ತು. ಕಾರಣವೇನೆಂದರೆ ಆ ಚಲನಚಿತ್ರದ ಕಥೆಯೂ ಈಗಷ್ಟೇ ಬೇತಾಳವು ಹೇಳಿ ಮುಗಿಸಿರುವ ಕಥೆಯೇ ಆಗಿತ್ತು!

ಆದರೆ ಇದೇ ಬೇತಾಳಪ್ರಶ್ನೆಯು ಒಕ್ಲಹೊಮಾ ಯುನಿವರ್ಸಿಟಿಯ ಸ್ಟುಡೆಂಟ್‌ನ ನೆಪದಲ್ಲಿ ವಿಚಿತ್ರಾನ್ನದ 223ನೇ ಸಂಚಿಕೆಯ ಮೂಲಕ ಓದುಗರ ಮೇಲೂ ಎಸೆಯಲ್ಪಟ್ಟಿತ್ತಷ್ಟೆ? ತ್ರಿವಿಕ್ರಮನೊಂದಿಗೆ ಸೈಮಲ್ಟೇನಿಯಸ್‌ ಆಗಿ ವಿಚಿತ್ರಾನ್ನಗಿರಾಕಿಗಳೂ ಈಗ ಅದೇ thought processಗೊಳಗಾದರು. ಒಂದನೆಯದಾಗಿ ತುಂಬಾ ವರ್ಷಗಳ ನಂತರ ಬಾಲ್ಯದ ಚಂದಮಾಮ ದಿನಗಳನ್ನು ನೆನಪಿಗೆ ತಂದ ಮತ್ತು ಈರೀತಿ ನೊಸ್ಟಾಲ್ಜಿಯಾ ನೌಕಾವಿಹಾರವನ್ನು ಮಾಡಿಸಿದ ವಿಚಿತ್ರಾನ್ನ ಸಂಚಿಕೆಯನ್ನು ಓದಿದ ಸಂಭ್ರಮ; ಜತೆಯಲ್ಲೇ ಬೇತಾಳಪ್ರಶ್ನೆಗೆ ರಾಜಾತ್ರಿವಿಕ್ರಮನಂತೆಯೇ ಇಂಟೆಲಿಜೆಂಟ್‌ ಆನ್ಸರ್‌ ಕೊಡಬೇಕೆಂಬ ಹಂಬಲ. ಓಹ್‌! ಈಮೈಲ್‌ನಲ್ಲಿ ಪ್ರತಿಕ್ರಿಯೆಗಳ/ಉತ್ತರಗಳ ಪ್ರವಾಹವೇ ಬಂತು.

ಐವತ್ತಕ್ಕೂ ಹೆಚ್ಚು ಈಮೈಲ್‌ಗಳ ಪೈಕಿ, ಕೆಳಗಿನ ಪಟ್ಟಿಯಲ್ಲಿರುವವರೆಲ್ಲ ಬೇತಾಳಪ್ರಶ್ನೆಗೆ ಸುಪರ್‌ಸ್ಮಾರ್ಟ್‌ ಉತ್ತರವನ್ನು ಕೊಟ್ಟು ತ್ರಿವಿಕ್ರಮನಿಗೆ ಸರಿಸಾಟಿಯಾದರು :

ಪ್ರವೀಣಶಂಕರ್‌ (ಬೆಂಗಳೂರು); ಮಾಲತಿ ಶೆಣೈ (ಬೆಂಗಳೂರು); ಶ್ರೀಲೋಲ ಸೋಮಯಾಜಿ (ಬೆಂಗಳೂರು); ಶ್ರೀಮಂತ್‌ ಲಕ್ಷ್ಮಣ್‌ (ಬೆಂಗಳೂರು); ರಮ್ಯಾ ರಘುನಾಥ್‌ (ಮಿಶಿಗನ್‌); ವಿಜಯಲಕ್ಷ್ಮೀ ಗೌಡ (ಮೇರಿಲ್ಯಾಂಡ್‌); ಕೃಷ್ಣ ಕುರಮ್‌ (ಕ್ಯಾಲಿಫೊರ್ನಿಯಾ); ಷಣ್ಮುಗಂ ಐಯರ್‌ (ರಿಚ್‌ಮಂಡ್‌); ಶ್ರೀನಾಥ್‌ ಭಲ್ಲೆ (ರಿಚ್‌ಮಂಡ್‌); ಮಂಗಲಾ ಉಡುಪ (ಆಟ್ಲಾಂಟಾ); ವಿವೇಕ್‌ ಐತಾಳ್‌ (ಬೆಂಗಳೂರು); ಸುಚೇತಾ ಕುಲಕರ್ಣಿ (ತಾಳಿಕೋಟೆ); ವಾಣಿ ಮಂಜುನಾಥ್‌ (ಲಾಸ್‌ಏಂಜಲೀಸ್‌); ಮೃಣಾಲಿನಿ (ನ್ಯೂಜಿ‚ಲ್ಯಾಂಡ್‌); ಶ್ರೀಹರ್ಷ (ಬೆಂಗಳೂರು); ಧರ್ಮೇಂದ್ರ ಕುಮಾರ್‌ (ಬಹರೈನ್‌); ಶಿವಶಂಕರ್‌ (ಅಮೆರಿಕ); ಪ್ರಕಾಶ್‌ ದೇವೇಂದ್ರ (ಡಬ್ಲಿನ್‌); ನಂದಕಿಶೋರ್‌ (ಮೈಸೂರು); ಚಂದ್ರಪ್ರಭಾ ತಮ್ಮಯ್ಯ (ಮೇರಿಲ್ಯಾಂಡ್‌); ವಿಠಲದಾಸ್‌ ಪ್ರಭು (ಅಮೆರಿಕ); ಹಂಸಾ ಹರೀಶ್‌ (ಬೆಂಗಳೂರು) ಮತ್ತು ಅಕ್ಷರ ಕುಮಾರ್‌ (ಬೆಂಗಳೂರು).

ಸರಿ, ಇದುವರೆಗಿನ ಇನ್ಸಿಡೆಂಟ್‌ಗಳಲ್ಲಿ ಬೇತಾಳನ ಪ್ರಶ್ನೆಗಳಿಗೆ ರಾಜನು ಸೂಕ್ತ ಉತ್ತರಗಳನ್ನು ಹೇಳಿದ ಮೇಲೆ ಅವು ಸರಿಯೋ ತಪ್ಪೋ ಎಂದು ಇವಾಲ್ಯುವೇಟ್‌ ಸಹ ಮಾಡದೆ ಬೇತಾಳವು ಮತ್ತೆ ಹಾರಿಹೋಗಿ ಮರದ ಕೊಂಬೆಗೆ ನೇತಾಡಿಕೊಳ್ಳುತ್ತಿತ್ತಲ್ಲವೇ? ಆದರೆ ಈಸಲ ಕೊಂಬೆಗೆ ನೇತುಕೊಳ್ಳುವುದನ್ನು ಪೋಸ್ಟ್‌ಪೊನಿಸಿದ ಬೇತಾಳವು ಮತ್ತೂ ಒಂದಿಷ್ಟು ಪ್ರಶ್ನೆಗಳನ್ನು ರಾಜನ ಮೇಲೆಸೆದು ಇದು ಮಂದಾರವತಿಕಲ್ಯಾಣದ ಉತ್ತರಕಾಂಡ, ಈಗ ಇವನ್ನೂ ಸೊಲ್ವಿಸುವ ಪ್ರಯತ್ನ ಮಾಡು ಎಂದಿತು. ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ 1024 ಹೋಳಾಗುತ್ತದೆ...! ಎಂದು ತನ್ನ ಟ್ರೇಡ್‌ಮಾರ್ಕ್‌ ಶೈಲಿಯಲ್ಲಿ ರಾಜನಿಗೆ ಧಮ್ಕಿ ಕೊಡುವುದನ್ನು ಮರೆಯಲಿಲ್ಲ ಅದು.

English summary
Vichitranna specialist Srivathsa Joshi had asked a riddle about Mandaravati. Readers have responded splendidly to the question. The present episode talks about reincarnation of Mandaravati Kalyana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X