• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಟ್ಟು, ಬೋಲ್ಟು ಮತ್ತು ಸ್ಕೂೃ!

By Staff
|


1880ರ ಹೊತ್ತಿಗೆ ಅಮೆರಿಕದಲ್ಲಿ ದೇಶವ್ಯಾಪಿ ರೈಲುಮಾರ್ಗಗಳ ನಿರ್ಮಾಣ ಯೋಜನೆಯಲ್ಲಿ ವಿಲಿಯಂ ಸೆಲ್ಲರ್‌ ವಿನ್ಯಾಸದ ಸ್ಕೂೃ ಮತ್ತು ನಟ್ಟು-ಬೋಲ್ಟುಗಳಿಗೆ ಭಾರೀ ಬೇಡಿಕೆ ಬಂತು. ಏಕರೂಪಕ್ಕಾಗಿ ಇತರ ಪೂರೈಕೆದಾರರೂ ವಿಲಿಯಂ ಸೆಲ್ಲರ್‌ನ ಸ್ಕೂೃಗಳ ಪಡಿಯಚ್ಚುಗಳನ್ನೇ ಸರಬರಾಜು ಮಾಡಬೇಕಿತ್ತು. ದೇಶದ ಉದ್ದಗಲದಲ್ಲೂ ಉತ್ಪನ್ನವೊಂದಕ್ಕೆ ಒಂದೇ ರೂಪ ಎಂಬ ವಾಡಿಕೆ ಶುರುವಾದದ್ದು ಹಾಗೆ.

ಅಮೆರಿಕದಲ್ಲೇನೋ ಸ್ಕೂೃ ಸ್ಟಾಂಡರ್ಡ್‌ ರೂಢಿಗೆ ಬಂತು. ಬೇರೆ ದೇಶಗಳಲ್ಲಿ ಅಲ್ಲಿಯದೇ ಆದ ಸ್ಟಾಂಡರ್ಡ್‌ಗಳಿದ್ದುವು. 1941-42ರಲ್ಲಿ ಪ್ರಪಂಚಯುದ್ಧದ ವೇಳೆ ಅಮೆರಿಕನ್‌ ಸ್ಕೂೃ ಸ್ಟಾಂಡರ್ಡ್‌ಗೆ ಅಂತಿಮಜಯ ಸಿಕ್ಕಿತು. ಯುದ್ಧಕಾಲದಲ್ಲಿ ಜರ್ಮನ್‌ ಪಡೆಗಳಿಗೂ ಬ್ರಿಟಿಷ್‌ (ಅಮೆರಿಕದ ಮೈತ್ರಿಕೂಟ) ಸೈನ್ಯಕ್ಕೂ ಘೋರವಾದ ಕಾಳಗ ನಡೆಯುತ್ತಿದ್ದಾಗ ಎರಡೂ ಕಡೆಯ ಟ್ಯಾಂಕರ್‌ಗಳು ಸವೆದು ಅವುಗಳ ನಟ್ಟು ಬೋಲ್ಟುಗಳು ಸಡಿಲಗೊಂಡು ಮುರಿದುಬೀಳುತ್ತಿದ್ದುವು.

ಅಮೆರಿಕದ ಫ‚ಾಕ್ಟರಿಗಳು ಟನ್‌ಗಟ್ಟಲೆ ಸ್ಕೂೃ-ಬೋಲ್ಟುಗಳನ್ನು ಯುದ್ಧಭೂಮಿಗೆ ಕಳಿಸುತ್ತಿದ್ದವು. ಆದರೆ ಬ್ರಿಟಿಷ್‌ ಟ್ಯಾಂಕ್‌ಗಳಿಗೆ ಅವು ಸರಿಹೊಂದುತ್ತಿರಲಿಲ್ಲ. ಹಾಗಾಗಿ ಅಮೆರಿಕನ್‌ ಫ‚ಾಕ್ಟರಿಗಳು ಅಮೆರಿಕದಲ್ಲಿ ಬಳಕೆಗೆ ಒಂದು ನಮೂನೆಯಲ್ಲಿ, ಯುದ್ಧನಿರತ ಬ್ರಿಟಿಷ್‌ ಟ್ಯಾಂಕ್‌ಗಳಿಗೋಸ್ಕರ ಇನ್ನೊಂದು ನಮೂನೆಯಲ್ಲಿ - ಹೀಗೆ ಎರಡುರೀತಿಯ ತಿರುಪುಗಳ ಸ್ಕೂೃಗಳನ್ನು ಉತ್ಪಾದಿಸಬೇಕಾದ ಅಗತ್ಯ ಬಂತು. ಹೊಂದಿಕೆಯಾಗದ ಸ್ಕೂೃಗಳ ಕಾರಣದಿಂದ ಯುದ್ಧವನ್ನು ಸೋಲುವುದೆಂದರೆ ನಾಚಿಕೆಗೇಡು ಎಂದರಿತ ಬ್ರಿಟಿಷರು ತಮ್ಮ ಟ್ಯಾಂಕರ್‌ಗಳಿಗೆ ಅಮೆರಿಕದ ವಿಲಿಯಂ ಸೆಲ್ಲರ್‌ ಮಾನಕವನ್ನೇ ಅಳವಡಿಸಿಕೊಂಡರು. ಹೀಗೆ ಸೆಲ್ಲರ್‌ನ ಸ್ಕೂೃ ಸ್ಟಾಂಡರ್ಡ್‌ ಅಮೆರಿಕದಿಂದ ಬ್ರಿಟಿಷ್‌ ಸಾಮ್ರಾಜ್ಯಕ್ಕೂ ವಿಸ್ತರಿಸಿಕೊಂಡಿತು.

ಅಂದಹಾಗೆ ಸ್ಕೂೃ ಕುರಿತು ಇಷ್ಟೆಲ್ಲ ಬರೆಯುವಾಗ ಸ್ಕೂೃಡ್ರೈವರ್‌ನ್ನು ಮರೆಯಲಾದೀತೇ? ಅದರಲ್ಲೂ ‘ಫಿಲಿಪ್ಸ್‌’ ಸ್ಕೂೃಡ್ರೈವರ್‌ ಬಗ್ಗೆ, ಅದನ್ನು ಕಂಡುಹಿಡಿದ ಉದ್ಯಮಿ ಹೆನ್ರಿ ಫಿಲಿಪ್ಸ್‌ (ಆತ ಅಮೆರಿಕದ ಒರೆಗಾನ್‌ ಸಂಸ್ಥಾನದ ಪೋರ್ಟ್‌ಲ್ಯಾಂಡ್‌ನವನು) ಬಗ್ಗೆ ಎರಡು ಮಾತುಗಳನ್ನಾದರೂ ಇಲ್ಲಿ ಉಲ್ಲೇಖಿಸಲೇಬೇಕು.

ಅದುವರೆಗೂ ಜನಪ್ರಿಯವಾಗಿದ್ದ ‘ಸ್ಲಾಟ್‌ ಸ್ಕೂೃ’ಗಳು (ತಲೆಯ ಉದ್ದಕ್ಕೂ ಒಂದು ಕಿರುಕಣಿವೆ ರಚನೆಯವು) ಆಧುನಿಕ ಅಸೆಂಬ್ಲಿಲೈನ್‌ ವ್ಯವಸ್ಥೆಗೆ (ಪವರ್‌ಸ್ಕೂೃಡ್ರೈಂವಿಂಗ್‌ ವಿಧಾನಕ್ಕೆ) ಯೋಗ್ಯವಲ್ಲ ಎಂಬ ವಿಚಾರ ಹೆನ್ರಿ ಫಿಲಿಪ್ಸ್‌ಗೆ ಮನವರಿಕೆಯಾಯಿತು. ಅವನ ತರ್ಕ ಸರಿಯಾಗಿಯೇ ಇತ್ತು. ಕಾರಣವೆಂದರೆ ಅ) ಸ್ಕೂೃಡ್ರೈವರನ್ನು ಸ್ಕೂೃ ಸ್ಲಾಟ್‌ಗೆ ಸರಿಯಾಗಿ ಹಿಡಿಯುವುದರಲ್ಲೇ ಕಾಲಹರಣವಾಗುತ್ತದೆ. ಆ) ತಿರುಗುತ್ತಿರುವಾಗಲೇ ಸ್ಲಾಟ್‌ನಿಂದ ಸ್ಕೂೃಡ್ರೈವರ್‌ ಜಾರುವ ಸಂಭವ ಹೆಚ್ಚಿರುತ್ತದೆ ಮತ್ತು ಇ) ಸ್ಕೂೃ ಫಿ‚ಕ್ಸ್‌ ಆದಮೇಲೆ ಸ್ಕೂೃಡ್ರೈವರನ್ನು ಹಿಂತೆಗೆದುಕೊಳ್ಳುವುದೂ ಕಷ್ಟ.

ಅದಕ್ಕಿಂತ, ಪ್ಲಸ್‌ ಆಕಾರದ ಕಣಿವೆಯುಳ್ಳ (ಸ್ಟಾರ್‌ ಸ್ಕೂೃ ಅಂತೇವಲ್ಲ, ಅದು) ಸ್ಕೂೃ ಇದ್ದರೆ ಅಸೆಂಬ್ಲಿಲೈನಿಂಗ್‌ ತುಂಬ ಸುಲಭವಾಗುತ್ತದೆ. ಸ್ಟಾರ್‌ ಸ್ಕೂೃಡ್ರೈವರ್‌ ಸುಲಭವಾಗಿ ಸ್ಕೂೃದೊಂದಿಗೆ ಹೊಂದಿಕೊಳ್ಳುತ್ತದೆ. ಸ್ಕೂೃ ಸರಿಯಾಗಿ ಭದ್ರವಾದ ಮೇಲೆ ಸ್ಕೂೃಡ್ರೈವರ್‌ ಹಿಂತೆಗೆಯುವುದೂ ಸುಲಭ. ಈ ಅನುಕೂಲಗಳನ್ನು ಮನಗಂಡ ಅಮೆರಿಕದ ಅಟೊಮೊಬೈಲ್‌ ಉದ್ಯಮವು ಕಾರುಗಳ ಉತ್ಪಾದನೆಯಲ್ಲಿ ಸ್ಟಾರ್‌ ಸ್ಕೂೃಗಳನ್ನೇ ಸ್ಟಾಂಡರ್ಡ್‌ ಆಗಿ ಅಳವಡಿಸಿಕೊಂಡಿತು.

ಹಾಗೆನೋಡಿದರೆ ಬಹಳ ಆಶ್ಚರ್ಯವಾಗುತ್ತದೆ. 1864ರಲ್ಲಿ ಬರೀ ಒಂದು ಭಾಷಣದ ಮೂಲಕ ಎಲ್ಲದರಲ್ಲೂ ಏಕರೂಪಮಾನಕ (standards) ಇರಬೇಕೆಂದು ಒತ್ತಾಯಿಸಿ ಸ್ಕೂೃ ತಯಾರಿಯಲ್ಲಿ ಅದನ್ನು ಸಾಧಿಸಿಯೂ ತೋರಿದ ವಿಲಿಯಂ ಸೆಲ್ಲರ್‌ನ ಬಗ್ಗೆ, ಸ್ಕೂೃ ತಲೆಗೂ ಒಂದು ಸ್ಟಾಂಡರ್ಡ್‌ ಹುಟ್ಟಿಸಿದ ಹೆನ್ರಿ ಫಿಲಿಪ್ಸ್‌ ಬಗ್ಗೆ ಹೆಮ್ಮೆಯೆನಿಸುತ್ತದೆ. ಒಂದು ರೀತಿಯಲ್ಲಿ ಇವರೆಲ್ಲ ತಂತಮ್ಮ ಸ್ವಾರ್ಥಕ್ಕಾಗಿ ಪ್ರಪಂಚವನ್ನೇ ತಾವು ಹೇಳಿದ್ದು ಕೇಳುವಂತೆ ಬದಲಾಯಿಸಿಕೊಂಡವರೆಂದರೂ ತಪ್ಪಲ್ಲ, ಆದರೆ ಅದರಿಂದಾಗಿರುವ ಅನುಕೂಲಗಳನ್ನು ನೋಡಿದರೆ ಅವರ ಸ್ವಾರ್ಥ ಗೌಣವೆನಿಸುತ್ತದೆ.

ಇವತ್ತು ನಮ್ಮೀ ಪ್ರಪಂಚದಲ್ಲಿ ಸ್ಕೂೃ ಮತ್ತು ಸ್ಕೂೃಡ್ರೈವರ್‌ ಮಾತ್ರವಲ್ಲ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ವಸ್ತು/ವಿಷಯಗಳಿಗೆ ಅನ್ವಯವಾಗುವ ಸ್ಟಾಂಡರ್ಡ್ಸ್‌ ಇವೆ. ಪೆಟ್ರೋಲ್‌ನಿಂದ ಹಿಡಿದು ಪೇಪರ್‌ ಅಳತೆಯವರೆಗೆ, ಚಪ್ಪಲಿಗಳ ಸೈಜ್‌ನಿಂದ ಹಿಡಿದು ಚಿನ್ನದ ಕೆರೆಟ್‌ ಲೆಕ್ಕದವರೆಗೆ, ರೇಜ‚ರ್‌ ಬ್ಲೇಡಿಂದ ಹಿಡಿದು ರೋಡ್‌ರೋಲರ್‌ ಗಾಲಿಗಳವರೆಗೆ, ಬ್ಯಾಟರಿಗಳಿಂದ ಹಿಡಿದು ಬ್ರಾ ಕಪ್‌ಸೈಜ್‌ವರೆಗೂ... ವಿಶ್ವಾದ್ಯಂತ ಸ್ಟಾಂಡರ್ಡ್‌ ಅಂತ ಒಂದಿದೆಯಾದರೆ ಅದೆಲ್ಲದಕ್ಕೂ ಮೂಲ ಸ್ಕೂೃ ಕಂಡುಕೊಂಡ ಸ್ಟಾಂಡರ್ಡ್‌.

ಹಾಗಾಗಿ screw ಎಂದರೆ ನಾಮಪದ ರೂಪದಲ್ಲಾಗಲೀ ಕ್ರಿಯಾಪದ ರೂಪದಲ್ಲೇ ಆಗಲೀ ಲಘುವಾಗಿ ಪರಿಗಣಿಸಬೇಡಿ. ಸ್ಕೂೃ ಎಂದರೆ ಇಂಟರ್ನಾಶನಲ್‌ ಸ್ಟಾಂಡರ್ಡೈಜೇಶನ್‌ನ ಹರಿಕಾರ!

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more