• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಟ್ಟು, ಬೋಲ್ಟು ಮತ್ತು ಸ್ಕೂೃ!

By Staff
|

ರೇಡಿಯೋ, ಟೀವಿ, ಮಿಕ್ಸಿ, ಮೋಟರ್‌ ಬೈಕ್‌ ಹೀಗೆ ಸಾಧ್ಯವಾದ ಎಲ್ಲವೂ ನಮ್ಮ ರಿಪೇರಿ ವ್ಯಾಪ್ತಿಗೆ ಬರುತ್ತವೆ! ಸ್ಕೂೃ ಡ್ರೆೃವರ್‌ನಿಂದ ನಟ್ಟು-ಬೋಲ್ಟು ಬಿಗಿಗೊಳಿಸೋದು ನಾವು ಕಂಡುಕೊಂಡಿರುವ ತಂತ್ರಗಾರಿಕೆ! ಒಂದು ವೇಳೆ ಸಮಸ್ಯೆ ತೀರಿದರೇ, ರಾಜ್ಯ ಜಯಿಸಿದಷ್ಟು ಆನಂದ! ನಮ್ಮ ಆನಂದಕ್ಕೆ ಕಾರಣೀಭೂತವಾದ ನಟ್ಟು-ಬೋಲ್ಟು-ಸ್ಕೂೃಗಳ ಜಗತ್ತಿನಲ್ಲಿ ಈ ವಾರ(ವಿಚಿತ್ರಾನ್ನ-242) ವಿಹಾರ.

  • ಶ್ರೀವತ್ಸ ಜೋಶಿ

Nuts, Bolts and Screws!‘‘ವಿಚಿತ್ರ ವಿಷಯಗಳನ್ನೆತ್ತಿಕೊಂಡು ಬರೀತಿರ್ತೀರಿ... ನಟ್ಟುಗಳ ಬಗ್ಗೆ ಯಾಕೆ ನೀವೊಮ್ಮೆ ಬರೀಬಾರ್ದು?’’ ಎಂದು ಮಹಾನುಭಾವರೊಬ್ಬರು ನನಗೆ ಆದೇಶವಿತ್ತಿದ್ದರು. ಅದ್ಯಾವ nutಉಗಳ ಬಗ್ಗೆ ಅವರ ಇಂಗಿತವಿತ್ತೋ ಗೊತ್ತಿಲ್ಲ. ಅಮೆರಿಕದ ಸಿಹಿತಿಂಡಿಯಾದ ಡೊನಟ್‌ ಬಗ್ಗೆನಾ? ಅಂತ ನಾನು ಕೇಳಿದ್ದಕ್ಕೆ, ‘‘ಊಹುಂ, ಡೊನಟ್ಟೂ ಅಲ್ಲ ವಾಲ್‌ನಟ್ಟೂ ಅಲ್ಲ ಕೊಕೊನಟ್ಟೂ ಅಲ್ಲ!’’ ಎಂದಿದ್ದರು.

ಹಾಗಿದ್ದರೆ ಅವರೆಂದದ್ದು ನಮಗೆಲ್ಲರಿಗೂ ಗೊತ್ತಿರುವ ನಟ್ಟುಗಳ ಬಗ್ಗೆಯೇ ಇರಬಹುದು ಎಂದು ಊಹಿಸಿದೆ. ಇನ್ನೂ ಬರ್ದಿಲ್ವಾ ಎಂದು ಅವರು ನನ್ನನ್ನು ಬೆನ್‌‘ನಟ್ಟು’ವ ಮೊದಲೇ, ನಟ್ಟು... ಲೂಸು...ಟೈಟು ಎಂದೆಲ್ಲ ತಮಾಷೆ ಮಾಡುವ ಮೊದಲೇ ಬರೆದುಮುಗಿಸಬೇಕು ಎಂತಲೂ ಅಂದುಕೊಂಡೆ.

ಕ್ಷಮಿಸಿ, ನೀವೂ ಯಾವುದೇ ರೀತಿಯ ಅಪಾರ್ಥ ಮಾಡಿಕೊಳ್ಳಲು ಹೋಗಬೇಡಿ. ನಟ್ಟಿನ ಬಗ್ಗೆ ಹರಟೆಬರಹ ಬರೆಯಬೇಕಾದರೂ ಜತೆಯಲ್ಲಿ ಬೋಲ್ಟ್‌ (ಬೋಲ್ಟ್‌ ಇಲ್ಲದೆ ನಟ್‌ ಅಸ್ತಿತ್ವವಾದರೂ ಏನು), ಮತ್ತು ಅವುಗಳೊಂದಿಗೆ ಸ್ಕೂೃ ಸಹ ಸೇರಿದರೆ ಒಳ್ಳೇ ಟಾಪಿಕ್‌ ಎಂದು ನನ್ನ ಅಭಿಪ್ರಾಯ. ಕಾರಣವೇನೆಂದರೆ ನಟ್ಟಿಗಿಂತಲೂ ಬೋಲ್ಟು ಮತ್ತು ಅದರ ಮೂಲ ರೂಪವಾದ ಸ್ಕೂೃ ತುಂಬಾ ಪ್ರಾಚೀನವಾದವುಗಳು. ಅಷ್ಟೇ ಅಲ್ಲ, ಇವತ್ತಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರಮಾಣ ಅಥವಾ ಮಾನಕ (standards) ಅಂತ ಏನಿವೆಯೋ ಅವು ಹುಟ್ಟಿಕೊಳ್ಳಲು ಕಾರಣವೇ ಸ್ಕೂೃ. ಆದ್ದರಿಂದ ಮೊದಲು ಒಂದೆರಡು ಸುತ್ತು ಸ್ಕೂೃ ತಿರುಗಿಸಿಯೇ ನಟ್ಟು ಬೋಲ್ಟುಗಳ ವಿಚಾರಕ್ಕೆ ಬರೋಣ.

ಗ್ರೀಕರು ಕ್ರಿಸ್ತಪೂರ್ವ ಐದನೆಯ ಶತಮಾನದಲ್ಲೇ ಸ್ಕೂೃ ಅಥವಾ ಅದನ್ನು ಹೋಲುವ ಸಾಧನವನ್ನು ಉಪಯೋಗಿಸುತ್ತಿದ್ದರೆಂದು ತಿಳಿದುಬಂದಿದೆಯಂತೆ. ಆಮೇಲೆ ನಾಲ್ಕೈದು ಶತಮಾನಗಳ ನಂತರ ರೋಮನ್ನರೂ ಸಹ ಮರದ ತುಂಡುಗಳನ್ನು ಜೋಡಿಸಲು ಸ್ಕೂೃ ಬಳಕೆ ಆರಂಭಿಸಿದರೆನ್ನಲಾಗಿದೆ. ಅವು ಹಿತ್ತಾಳೆ ಅಥವಾ ಬೆಳ್ಳಿಯಿಂದ ಮಾಡಿದ ಸ್ಕೂೃಗಳು. ಲೋಹದ ಕಡ್ಡಿಯನ್ನು ಅರದಿಂದ ಉಜ್ಜಿ ತಿರುಪುಮೊಳೆಯಾಗಿಸುವ ಕಲೆ ಅವರಿಗೆ ಗೊತ್ತಿತ್ತು. ಆದರೆ ರೋಮನ್‌ ಅಧಿಪತ್ಯದ ಪತನವಾದ ಮೇಲೆ ಅವರ ಸ್ಕೂೃ ಟೆಕ್ನಾಲಜಿಯೂ ಸಡಿಲವಾಗಿ ಕಳಚಿಬಿತ್ತು ಎನ್ನುತ್ತಾರೆ ಇತಿಹಾಸಜ್ಞರು.

ಮುಂದೆ ಕ್ರಿ.ಶ ಹದಿನೈದನೆಯ ಶತಮಾನದಿಂದೀಚೆಗಷ್ಟೇ ಸ್ಕೂೃ ಕಾಣಿಸಿಕೊಂಡಿರುವುದು. ಜಾನ್‌ ಗುಟೆನ್‌ಬರ್ಗ್‌ ಆವಿಷ್ಕರಿಸಿದ ಮುದ್ರಣಯಂತ್ರದಲ್ಲಿ ಸ್ಕೂೃಗಳನ್ನು ಬಳಸಲಾಗಿತ್ತು. ಆವಾಗಲೇ ಬೋಲ್ಟ್‌ (ಸ್ಕೂೃನದೇ ಇನ್ನೊಂದು ರೂಪ, ಆದರೆ ಸ್ಕೂೃನಂತೆ ಸ್ವತಂತ್ರವಾಗಿ ಉಪಯೋಗಕ್ಕೆ ಬಾರದು, ಜತೆಯಲ್ಲಿ ನಟ್‌ ಬೇಕು) ಬಳಕೆ ಸಹ ಶುರುವಾದದ್ದು. ಆದರೆ ಒಂದೇ ಸಮಸ್ಯೆಯೆಂದರೆ ನಟ್ಟು-ಬೋಲ್ಟು-ಸ್ಕೂೃಗಳನ್ನು ಹೆಚ್ಚಾಗಿ ಕೈಕರಣಗಳಿಂದಲೇ ತಯಾರಿಸುತ್ತಿದ್ದದ್ದು, ಅವು ಏಕರೂಪದಲ್ಲಿರುತ್ತಿರಲಿಲ್ಲ. ಯಾವ ಬೋಲ್ಟಿಗೆ ಯಾವ ನಟ್‌ ಹೊಂದಿಕೆಯಾಗುತ್ತದೆಂದು ನಿಖರತೆಯಿರಲಿಲ್ಲ. ಟ್ರಯಲ್‌ ಏಂಡ್‌ ಎರರ್‌ ಮಾಡಿ ಹೊಂದಿಕೆಯಾದ ಜೋಡಿಯನ್ನು ಪ್ರತ್ಯೇಕವಾಗಿ ತೆಗೆದಿರಿಸಿ ಉಪಯೋಗಿಸಲಾಗುತ್ತಿತ್ತು ಅಷ್ಟೆ.

ಸುಮಾರು 19ನೇ ಶತಮಾನದ ಮಧ್ಯಭಾಗದವರೆಗೂ ಪರಿಸ್ಥಿತಿ ಹಾಗೆಯೇ ಇತ್ತು. ಕ್ರಿ.ಶ 1864ರಲ್ಲಿ ಅಮೆರಿಕದಲ್ಲಿ ಖ್ಯಾತ ಉದ್ಯಮಿಯಾಗಿದ್ದ ವಿಲಿಯಂ ಸೆಲ್ಲರ್‌ ಎಂಬುವವನು ಫಿಲಡೆಲ್‌ಫಿಯಾದಲ್ಲಿ ನಡೆದ ಸಭೆಯಾಂದರಲ್ಲಿ ಪ್ರಮಾಣಬದ್ಧ ಬೋಲ್ಟು-ಸ್ಕೂೃಗಳ ಅವಶ್ಯಕತೆಯನ್ನು ಪ್ರತಿಪಾದಿಸಿದನು. ನಿರ್ದಿಷ್ಟ ಅಳತೆಯ ಬೋಲ್ಟ್‌ನ ತಿರುಪುಗಳು ಎಲ್ಲಿ ಯಾವ ಕೈಗಾರಿಕೆಯಲ್ಲಿ ತಯಾರಿಸಿದರೂ ಬೇರೊಂದು ಕಡೆ ಉತ್ಪಾದಿಸಿದ ನಟ್ಟುಗಳಿಗೆ ಸರಿಹೋಗುವಂತಿರಬೇಕು ಎಂದು ಅವನ ವಾದ. ಅದರಲ್ಲಿ ಖಂಡಿತವಾಗಿಯೂ ತಿರುಳಿದ್ದದ್ದು ಹೌದು. ಅದಲ್ಲದೆ ಆ ಕಾಲದಲ್ಲಿ ಯಂತ್ರೋಪಕರಣ ತಯಾರಿಯ ಉದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಬಹುಮಾನ್ಯತೆ ಪಡೆದಿತ್ತಾದ್ದರಿಂದ (ಈಗ ಕಂಪ್ಯೂಟರ್‌ ಅಥವಾ ಸಾಫ್ಟ್‌ವೇರ್‌ ಉದ್ಯಮವಿದ್ದಂತೆ) ವಿಲಿಯಂ ಸೆಲ್ಲರ್‌ನ ಮಾತಿಗೆ ಬೆಲೆಯಿತ್ತು.

ಅದೇವೇಳೆಗೆ ಅಟ್ಲಾಂಟಿಕ್‌ ಸಾಗರದ ಇನ್ನೊಂದು ತೀರದಲ್ಲಿ ಅಂದರೆ ಯುರೋಪ್‌ನಲ್ಲಿ ಸಹ ಸ್ಕೂೃ ಕ್ರಾಂತಿ ಚಾಲ್ತಿಯಲ್ಲಿತ್ತು. ಅಲ್ಲಿ ಜೊಸೆಫ್‌ ವಿಟ್‌ವರ್ತ್‌ ಎಂಬ ಕೈಗಾರಿಕೋದ್ಯಮಿಯು ಸ್ಟಾಂಡರ್ಡೈಸ್ಡ್‌ ನಟ್ಟು-ಬೋಲ್ಟು-ಸ್ಕೂೃಗಳನ್ನು ಉತ್ಪಾದಿಸುತ್ತಿದ್ದನು. ಆದರೆ ವಿಲಿಯಂ ಸೆಲ್ಲರ್‌ನ ಅಭಿಪ್ರಾಯದಲ್ಲಿ ಆ ಯುರೋಪಿಯನ್‌ ಸ್ಕೂೃಗಳು ಸರಿಯಿರಲಿಲ್ಲ. ಅವನ್ನು ಉತ್ಪಾದಿಸಲು ಮೂರು ಥರದ ಕಟ್ಟರ್‌ಗಳು, ಎರಡು ಥರದ ಲೇತ್‌(ಚರಕಿಯಂತ್ರ)ಗಳೂ ಬೇಕಿದ್ದರಿಂದ ಕಷ್ಟ ಮತ್ತು ಖರ್ಚು ಎರಡೂ ಹೆಚ್ಚು. ಬದಲಿಗೆ ಸೆಲ್ಲರ್‌ನ ವಿಧಾನದಲ್ಲಿ ಒಂದು ಕಟ್ಟರ್‌ ಮತ್ತು ಒಂದು ಲೇತ್‌ ಮಾತ್ರ ಬಳಸಿ ಸ್ಕೂೃ ಉತ್ಪಾದನೆ ಸರಳ, ಕ್ಷಿಪ್ರ ಮತ್ತು ಅಗ್ಗ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X