• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಬರೆದ ಈ ಲೇಖನದ ತಲೆಬರಹ

By Staff
|

‘ಬೈಬಲ್‌ನಲ್ಲಿ ಒಂದೇಒಂದು ಮಿಸ್ಟೇಕ್‌ ಸಹ ಇಲ್ಲ’ ಎಂಬ ಹೇಳಿಕೆಯನ್ನೇ ತಗೊಳ್ಳಿ. ಆದರೆ ಅದೇ ಬೈಬಲ್‌ನಲ್ಲಿ "David made a mistake…" ಎಂಬ ವಾಕ್ಯ ಬರುತ್ತದೆ, ಆಮೂಲಕ ಬೈಬಲ್‌ನಲ್ಲಿ ಮಿಸ್ಟೇಕ್‌ ಇದೆ! ಕೊರಾನ್‌ನಲ್ಲಿ ‘ಇಕ್ತೆಲಾಫನ್‌’ (ವಿರೋಧಾಭಾಸ) ಎಂಬ ಪದ ಒಂದೇಒಂದು ಸಲ ಬರುತ್ತದಂತೆ. ‘‘ದೇವನಿಂದಲೇ ಬಂದ ಕೊರಾನ್‌ಅನ್ನು ನಂಬುವುದಿಲ್ಲವೇ? ಬೇರಾರಿಂದಲೂ ಬಂದದ್ದಾದರೆ ಅದರಲ್ಲಿ ಅನೇಕ ವಿರೋಧಾಭಾಸಗಳಿರುತ್ತಿದ್ದುವು’’ ಎಂಬ ವಾಕ್ಯ ಕೊರಾನ್‌ನಲ್ಲೇ ಇದೆಯಂತೆ. ಅನೇಕ ವಿರೋಧಾಭಾಸಗಳಿಲ್ಲದೆ ಒಂದೇಒಂದು ವಿರೋಧಾಭಾಸವಿರುವ ಕೊರಾನ್‌ ಆ ಮಟ್ಟಿಗೆ ಕನ್ಸಿಸ್ಟೆಂಟ್‌ ಎನ್ನುತ್ತಾನೆ ಗೊಡೆಲ್‌.

ಕೆಲವೊಂದು ಸನ್ನಿವೇಶಗಳು ಸ್ವಪ್ರಸ್ತಾಪದಿಂದಾಗಿ ಸ್ವಾರಸ್ಯಕರವಾಗುತ್ತವೆ. ಅದು, ಉದಯಟಿವಿಯಲ್ಲಿ ಪ್ರಸಾರವಾಗುವ ಚಲನಚಿತ್ರದ ದೃಶ್ಯವೊಂದರಲ್ಲಿ ನಾಯಕಿ ಉದಯಟಿವಿ ವಾರ್ತೆಗಳನ್ನು ನೋಡಿ ನಾಯಕನ ಅಪಹರಣವಾಗಿರುವುದನ್ನು ತಿಳಿಯುವ ಸಂದರ್ಭವಿರಬಹುದು, ಅಥವಾ ವಿಜಯಕರ್ನಾಟಕದಲ್ಲಿ ಪ್ರಕಟವಾಗುವ ವಾರ್ತಾವರದಿಯಲ್ಲಿ ‘ಸಚಿವರ ಆಪ್ತಕಾರ್ಯದರ್ಶಿ ಈ ಮಾಹಿತಿಯನ್ನು ವಿಜಯಕರ್ನಾಟಕಕ್ಕೆ ತಿಳಿಸಿದರು...’ ಎಂಬ ವಾಕ್ಯವಿರಬಹುದು.

ಅದಕ್ಕಿಂತಲೂ ಮಜಾ ಎಂದರೆ ಕಾಲಿಂಗ್‌ ಬೆಲ್‌ ರಿಪೇರಿಯ ಜೋಕು. ಎಲೆಕ್ಟ್ರಿಶಿಯನ್‌ಗೆ ಫೋನ್‌ ಮಾಡಿದ್ದಾಯ್ತು, ಅವನು ಹೇಳಿದ ಸಮಯಕ್ಕೇ ಬಂದ, ಕರೆಗಂಟೆ ಒತ್ತಿದಾಗ ಯಾರೂ ಬಾಗಿಲು ತೆಗೆಯಲಿಲ್ಲವೆಂದು ಹಾಗೆಯೇ ವಾಪಸಾದ! ಅದೇರೀತಿ ‘‘ದುಡ್ಡು ಮಾಡುವ ಅತಿಸರಳ ವಿಧಾನವನ್ನು ಕಲಿಸುತ್ತೇವೆ, 1000 ರೂ. ರಿಜಿಸ್ಟ್ರೇಶನ್‌ ಫಿ‚ೕ ಈಗಲೆ ಕಳಿಸಿ’’ ಎಂದು ಜಾಹೀರಾತು ಹೊರಡಿಸಿ ಎಲ್ಲರಿಂದ ಹಣ ಸಂಗ್ರಹಿಸಿ ಸುಮ್ಮನೆ ಕುಳಿತು ಅತಿಸರಳ ವಿಧಾನದಲ್ಲಿ ದುಡ್ಡುಮಾಡಿದ ಮೇಧಾವಿಯ ಸ್ವಪ್ರಸ್ತಾಪ ಕೌಶಲ್ಯವನ್ನು ಮೆಚ್ಚದಿರಲಾದೀತೇ?

ಇನ್ನೊಬ್ಬ ಲೇಖಕಮಹಾಶಯ ಒಂದು ಪುಸ್ತಕ ಬರೆದು ಪ್ರಕಟಿಸಿದ. ಅದರಲ್ಲಿ ಅರ್ಪಣೆ ಹೀಗಿತ್ತು - ‘‘ಅರ್ಪಣೆ: ನನ್ನ ಹೆಂಡತಿಗೆ. ಈ ಪುಸ್ತಕದ ರಚನೆಯಲ್ಲಿ ಅವಳು ನೀಡಿರುವ ಸಕಲ ಸಹಕಾರಕ್ಕೆ (ಅರ್ಪಣೆ ಬರೆದುಕೊಟ್ಟದ್ದೂ ಸೇರಿದಂತೆ!)’’ ಅಷ್ಟಾಗಿ ಅವನು ಬರೆದ ಪುಸ್ತಕದ ಶೀರ್ಷಿಕೆ ಏನು ಗೊತ್ತೇ? How To Write a How-To Book. ಪುಸ್ತಕಪ್ರಕಟಣೆಗೆ ಸಂಬಂಧಿಸಿದ್ದೇ ಇನ್ನೊಂದು ನೆನಪಾಗುತ್ತದೆ. ‘ಶ್ರೀಮಾನ್‌ ಸೊ ಏಂಡ್‌ ಸೊ ಅವರ ಅಪ್ರಕಟಿತ ಕೃತಿಗಳ ಸಂಕಲನ’ ಎಂಬಂಥ ಪುಸ್ತಕಗಳನ್ನು ನೀವು ನೋಡಿದ್ದಿರಬಹುದು. ಪುಸ್ತಕರೂಪದಲ್ಲಿ ಬಂದಮೇಲೆ ಅವು ಅಪ್ರಕಟಿತ ಕೃತಿಗಳಾಗುವುದು ಹೇಗೆ? ‘ಇದುವರೆಗೆ ಅಪ್ರಕಟಿತವಾಗಿದ್ದ ಕೃತಿಗಳು...’ ಎನ್ನುತ್ತೀರಾದರೆ ಇದುವರೆಗೆ ಪ್ರಿಂಟಾಗಿರುವ ಪ್ರತಿಯಾಂದು ಪುಸ್ತಕವೂ ‘ಅದುವರೆಗೆ’ ಅಪ್ರಕಟಿತವಾಗಿಯೇ ಇದ್ದ ಕೃತಿಯಲ್ಲವೇ?

ಎರಡನೆ ಪ್ರಪಂಚಯುದ್ಧದ ನಂತರ ಸ್ಟೀಫನ್‌ ಬರ್ಗ್‌ಮನ್‌ ಎಂಬ ರಷ್ಯನ್‌ ಸೈನಿಕ ಫ‚ಾ್ರನ್ಸ್‌ನಲ್ಲಿ ಉಳಿದುಬಿಟ್ಟ. ಆತನದು ಸಂದಿಗ್ಧ ಪರಿಸ್ಥಿತಿ. ಯಾವುದೇ ದಾಖಲೆಪತ್ರಗಳಿಲ್ಲದೆ ಬರಿಗೈಯವನಾಗಿದ್ದ ಅವನಿಗೆ ರೇಷನ್‌ಕಾರ್ಡ್‌ ಸಹ ಸಿಕ್ಕುವಂತಿರಲಿಲ್ಲ. ಬರ್ಗ್‌ಮನ್‌ ಒಂದು ಉಪಾಯ ಹೂಡಿದ. ಪ್ಯಾರಿಸ್‌ಗೆ ಸಮೀಪದ ಒಂದು ಪಟ್ಟಣದ ಮೇಯರ್‌ನ ಬಳಿಗೆ ಹೋಗಿ ಒಂದು ಸರ್ಟಿಫಿಕೇಟ್‌ ಕೊಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದ. ಆ ಸರ್ಟಿಫಿಕೇಟ್‌ನ ಒಕ್ಕಣೆ ಏನೆಂದರೆ ‘‘ಈ ಮನುಷ್ಯನ ಹತ್ತಿರ ಯಾವುದೇ ಸರ್ಟಿಫಿ‚ಕೇಟ್‌ಗಳಿಲ್ಲ ಎಂದು ಪ್ರಮಾಣೀಕರಿಸಲಾಗಿದೆ’’! ಇಲ್ಲದ ಸರ್ಟಿಫಿ‚ಕೇಟ್‌ ಉಳ್ಳವನಾಗಿ ಸ್ಟೀಫನ್‌ ಬರ್ಗ್‌ಮನ್‌ ಫ‚ಾ್ರನ್ಸ್‌ನಲ್ಲಿ ತನಗೊಂದು ರೇಷನ್‌ಕಾರ್ಡ್‌ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದ!

ಕೊನೆಯಲ್ಲಿ, ಈ ಕೆಳಗಿನ ಕೆಲವು ಸಂಗತಿಗಳಲ್ಲಿ ಸುಳಿಯುವ ಸ್ವಪ್ರಸ್ತಾಪ ಸ್ವಾರಸ್ಯವನ್ನು ಸವಿಯುವಂಥವರಾಗಿ.

* Before I begin speaking, there is something I would like to say... ಅಥವಾ ಹಿಂದಿಯಲ್ಲಿ ‘ಸಬ್‌ಸೆ ಪೆಹಲೆ ಸುನಿಯೆ...’

* ಇದು ಒಂದು ಪ್ರಶ್ನೆಯೇ?

* ವಿನಾಕಾರಣ ಹಲಸಿನಹಣ್ಣಿನ ಪ್ರಸ್ತಾಪ ತೆಗೆದ ಪ್ರಶ್ನೆ ಯಾವುದು?

* ಈ ವಿಶ್ವವು ಒಂದು ಅದ್ಭುತವೇನೋ ಸರಿ; ಆದರೆ ಇದು ಇಲ್ಲದಿರುತ್ತಿದ್ದರೆ ಯಾರೂ ಇದನ್ನು ಮಿಸ್‌ ಮಾಡ್ಕೊಳ್ತಿರಲಿಲ್ಲ!

* ಈ ವಾಕ್ಯದಲ್ಲಿ ಹದಿನೈದು ಅಕ್ಷರಗಳಿವೆ.

* ಈ ವಾಕ್ಯದಲ್ಲಿ ಆರು ಪದಗಳು ಕಡಿಮೆ ಇರುತ್ತಿದ್ದರೆ ಇದೊಂದು ಒಟ್ಟು ಏಳು ಪದಗಳು ಇರುವ ವಾಕ್ಯ ಆಗುತ್ತಿತ್ತು!

* .ಕ್ಯವಾ ವರುದಿರೆಬ ಗಾರುಮುಗಾರುತಿ ದುಇ

* What is the difference between ignorance and indifference? I dont know and I dont care!

* How many consonants are there in the following words? One, Two, Three.

* ಇತ್ತೀಚೆಗೆ ನನಗೆ ಮರೆಗುಳಿತನ ಜಾಸ್ತಿಯಾಗುತ್ತಿದೆ. ಕೆಲವೊಮ್ಮೆಯಂತೂ ಏನನ್ನಾದರೂ ಹೇಳುವಾಗ ವಾಕ್ಯದ ಮಧ್ಯದಲ್ಲೇ...

* ಯಶಸ್ಸಿಗೆ ಕೇವಲ ಎರಡು ಸೂತ್ರಗಳು: 1. ಗೊತ್ತಿರುವುದೆಲ್ಲವನ್ನೂ ಇತರರಿಗೆ ಹೇಳಿಬಿಡಬೇಡಿ.

* ಯಾರಾದರೂ ನಿಮ್ಮನ್ನು ಪ್ರೀತಿಸಿದರೆ ಮಾತ್ರ ನಿಶ್ಶರ್ತವಾಗಿ ಅವರನ್ನೂ ನೀವು ಪ್ರೀತಿಸಿ.

* ನಾನು ಬರೆದ ಈ ಲೇಖನದ ತಲೆಬರಹ ‘‘ನಾನು ಬರೆದ ಈ ಲೇಖನದ ತಲೆಬರಹ’’.

ಇತಿ, ನಾನು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more