• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಪಂಚದ ಪ್ರತಿಯಾಬ್ಬರೂ ಪರಸ್ಪರ ಪರಿಚಿತರೇ!

By Staff
|

Oh! its a small world! ಇದರಿಂದ ಷಟ್ಪದ ಸಾಮೀಪ್ಯ ಸಿದ್ಧಾಂತದಲ್ಲಿ ತಿರುಳಿದೆ ಎಂದು ಸಾಬೀತಾಯಿತು. ಸ್ಟಾನ್ಲೆಯ ಪ್ರಯೋಗ-ಫಲಿತಾಂಶ ವಿವರಗಳು ‘ಸೈಕಾಲಜಿ ಟುಡೇ’ ಮ್ಯಾಗಜೀನ್‌ನಲ್ಲಿ ಪ್ರಕಟವಾದುವು; Six degrees of separation ಎಂಬ ಪದಪುಂಜವು ಮಾಧ್ಯಮಗಳಲ್ಲೂ ಹೆಚ್ಚುಹೆಚ್ಚಾಗಿ ಉಲ್ಲೇಖಿಸಲ್ಪಟ್ಟಿತು. 1990ರಲ್ಲಿ ಅದೇ ಹೆಸರಿನ ಒಂದು ನಾಟಕ, ಆಮೇಲೊಂದು ಸಿನೆಮಾ ಸಹ ಬಂತು! ಇದೇ ಸಿದ್ಧಾಂತವನ್ನಾಧರಿಸಿ ಹಾಲಿವುಡ್‌ ಚಿತ್ರಗಳಲ್ಲಿ (ಇದುವರೆಗೆ ಬಿಡುಗಡೆಯಾದ ಎಲ್ಲ ಚಿತ್ರಗಳ ಮಾಹಿತಿರಾಶಿಯಿಂದ) ನಟಿಸಿರುವ ಯಾವುದೇ ಇಬ್ಬರು ನಟ/ನಟಿಯರನ್ನು ಅತಿಕಡಿಮೆ ಲಿಂಕ್‌ಗಳನ್ನುಪಯೋಗಿಸಿ ಕನೆಕ್ಟ್‌ ಮಾಡುವ ಆಟ ಮತ್ತು ಅದರ ವೆಬ್‌ಸೈಟ್‌ The Oracle of Bacon ಅತಿ ಜನಪ್ರಿಯವಾದುವು.

ಆದರೆ ಸ್ಟಾನ್ಲೆಯ ಪ್ರಯೋಗದಲ್ಲಿ ಮೆಸ್ಸಾಚುಸೆಟ್ಸ್‌ ವ್ಯಕ್ತಿಯನ್ನು ತಲುಪದೇ ಇದ್ದ ಪಾರ್ಸೆಲ್‌ಗಳ ಸಂಖ್ಯೆಯೂ ಗಣನೀಯವಾಗಿಯೇ ಇತ್ತು, ಅಷ್ಟೇ ಅಲ್ಲದೆ ಬರೀ ಸಾವಿರ ಸಂಖ್ಯೆಯ ಸ್ಯಾಂಪಲ್‌ಸೈಜ್‌ (ಕ್ಯಾನ್ಸಸ್‌ ಮತ್ತು ನೆಬ್ರಾಸ್ಕಾದ ಸುಮಾರು ಸಾವಿರ ಮಂದಿಯನ್ನಷ್ಟೇ ಸ್ಟಾನ್ಲೆ ತನ್ನ ಪ್ರಯೋಗಕ್ಕೆ ಆಯ್ದುಕೊಂಡಿದ್ದ) ತುಂಬಾ ಸಣ್ಣದಾಯಿತು - ಆದ್ದರಿಂದ ಅದರ ಫಲಿತಾಂಶವನ್ನು ಸಾರ್ವತ್ರೀಕರಣ ಮಾಡಲಾಗದು ಎಂದು ಅನೇಕರಿಂದ ಟೀಕೆ ಸಹ ಕೇಳಿಬಂತು.

2001ರಲ್ಲಿ, ಕೊಲಂಬಿಯಾ ವಿಶ್ವವಿದ್ಯಾಲಯದ ಡಂಕನ್‌ ವಾಟ್ಸ್‌ ಎಂಬ ಪ್ರೊಫೆಸರ್‌ ಷಟ್ಪದ ಸಾಮೀಪ್ಯದಲ್ಲಿ ಆಸಕ್ತನಾಗಿ ಈಹಿಂದೆ ಸ್ಟಾನ್ಲೆ ಮಿಲ್‌ಗ್ರಾಂ ಕೈಗೊಂಡಿದ್ದ ಪ್ರಯೋಗವನ್ನೇ ಹೊಸರೂಪದಲ್ಲಿ ಇಂಟರ್‌ನೆಟ್‌ ಇಮೇಲ್‌ಗಳನ್ನು ಉಪಯೋಗಿಸಿ ಮರುಪ್ರಯೋಗಕ್ಕೆ ಗುರಿಪಡಿಸಿದ. 157 ದೇಶಗಳಿಂದಾಯ್ದ ಸುಮಾರು 48000ದಷ್ಟು ಪ್ರಯೋಗಾರ್ಥಿಗಳಿಗೆ 19 ವಿವಿಧ ‘ಗುರಿ’ವ್ಯಕ್ತಿಗಳನ್ನು (ಅವರ ಹೆಸರು, ಊರು ಮತ್ತು ವೃತ್ತಿ ಇಷ್ಟು ಮಾತ್ರ ವಿವರಗಳನ್ನಾಧರಿಸಿ) ಇಮೇಲ್‌ ಮೂಲಕ ತಲುಪುವ ಸಾಹಸವನ್ನು ವಹಿಸಲಾಯಿತು. ಡಂಕನ್‌ನ ಹೊಸ ಪ್ರಯೋಗದ ಅಂಕಿಅಂಶಗಳನ್ನು ಕ್ರೋಡೀಕರಿಸಿದಾಗಲೂ ಆಶ್ಚರ್ಯದಲ್ಲಿ ಪರಮಾಶ್ಚರ್ಯವೆಂಬಂತೆ ಸರಾಸರಿಯಾಗಿ ಪ್ರತಿಯಾಂದು ಇಮೇಲ್‌ ಚೈನ್‌ ಸಹ ಆರು ಕೊಂಡಿಗಳನ್ನಷ್ಟೇ ಹೊಂದಿತ್ತು!

ಷಟ್ಪದ ಸಾಮೀಪ್ಯಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಹೊನ್ನಾವರದ ಪರಮೇಶ್ವರ ಹೆಗಡೆ ಎಂಬ ಕೃಷಿಕರಿಗೆ ಜರ್ಮನಿಯ ಹ್ಯಾನೊವರ್‌ನಲ್ಲಿ ಬಟ್ಟೆಯಂಗಡಿ ಇಟ್ಟುಕೊಂಡಿರುವ ಅರ್ನೆಸ್ಟ್‌ ಆಗಸ್ಟಸ್‌ ಹೇಗೆ ಪರಿಚಯ? ಪರಮೇಶ್ವರ ಹೆಗಡೆಯವರ ಮಗ ಗಣಪತಿ ಹೆಗಡೆಯ ಇಂಜನಿಯರಿಂಗ್‌ಕಾಲೇಜ್‌ಮೇಟ್‌ ಆಗಿದ್ದ ವಿಜಯ್‌ ಮಲ್ಹೋತ್ರಾ ಈಗ ಕ್ಯಾಲಿಫೋರ್ನಿಯಾದಲ್ಲಿ ಎಂ.ಎಸ್‌ ಮಾಡುತ್ತಿದ್ದು ವಿಜಯ್‌ನ ಈಗಿನ ರೂಮ್‌ಮೇಟ್‌ ಇಂಡೊನೆಷ್ಯಾ ಮೂಲದ ವಿಲಿಯಂ ಕೆರ್ಟಜಯ. ಅವನಿಗೆ ಹೈಸ್ಕೂಲಲ್ಲಿ ಗಿಟಾರ್‌ ಕಲಿಸಿಕೊಡುತ್ತಿದ್ದ ಜೊನಾಥನ್‌ನ ಗರ್ಲ್‌ಫ್ರೆಂಡ್‌ ಕ್ರಿಸ್ಟೀನಾ ಬೇರಾರೂ ಅಲ್ಲ, ಜರ್ಮನಿಯ ಬಟ್ಟೆಯಂಗಡಿಯವನ ಪಕ್ಕದ್ಮನೆ ಹುಡುಗಿ!

ಈಗ ಷಟ್ಪದ ಸಾಮೀಪ್ಯ ಸಿದ್ಧಾಂತಕ್ಕೆ ಮತ್ತಷ್ಟು ಪುಷ್ಠೀಕರಣ ಸಿಕ್ಕಿದ್ದು ಅದು ಜನಸಾಮಾನ್ಯರ ಸಂಭಾಷಣೆಯಲ್ಲೂ ಕಾಣಿಸಿಕೊಳ್ಳತೊಡಗಿದೆ. ಮೊನ್ನೆ ವರ್ಜೀನಿಯಾ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ ಬರ್ಬರ ನರಮೇಧದ ನಂತರ ಅಲ್ಲಿನ ವಿದ್ಯಾರ್ಥಿಸಮೂಹವು ಹೃದಯಸ್ಪರ್ಶಿಯಾಗಿ ಒಗ್ಗಟ್ಟಾಗಿದ್ದು ಪರಸ್ಪರ ಸಾಂತ್ವನ ಹೇಳಿಕೊಳ್ಳುತ್ತಿದ್ದುದನ್ನು ನೋಡಿದ ಮಾಧ್ಯಮಗಳು ‘‘ಸಿಕ್ಸ್‌ ಡಿಗ್ರೀಸ್‌ ಆಫ‚್‌ ಸೆಪರೇಶನ್‌ ಅಂತಾರೆ... ಇಲ್ಲಿ ನಿಮ್ಮ ಒಗ್ಗಟ್ಟನ್ನು ನೋಡಿದರೆ ನೀವೆಲ್ಲ ಪ್ರತಿಯಾಬ್ಬರೂ ಪ್ರಥಮ ಹಂತದ ಪರಿಚಯದವರಂತಿದ್ದೀರಿ!’’ ಎಂದು ಶ್ಲಾಘಿಸಿದ್ದುವು.

ಕಂಪ್ಯೂಟರ್‌ ನೆಟ್‌ವರ್ಕಿಂಗ್‌, ವಿದ್ಯುತ್‌ ವಿತರಣಾ ಜಾಲಗಳ ವಿನ್ಯಾಸ, ಕಾರ್ಪೊರೆಟ್‌ ಕಮ್ಯುನಿಕೇಶನ್‌, ಮಾರ್ಕೆಟಿಂಗ್‌ ಯೋಜನೆಗಳ ತಯಾರಿ (ಆ್ಯಮ್‌ವೇಯಂಥ ಕಂಪೆನಿಗಳು, ಸ್ಟೀಲ್‌ಪಾತ್ರೆ/ಟೀಕ್‌ವುಡ್‌ನಂಥ ಸ್ಕೀಮುಗಳು ಸಹ!) ಇತ್ಯಾದಿಯಷ್ಟೇ ಅಲ್ಲದೆ ಸಾಂಕ್ರಾಮಿಕ ರೋಗಗಳ ಹರಡುವಿಕೆ, ಪ್ರಾಣಿಗಳ ನರಮಂಡಲದಲ್ಲಿ ಸಂದೇಶರವಾನೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಅಧ್ಯಯನಕ್ಕೆ ಷಟ್ಪದ ಸಾಮೀಪ್ಯ ಸಿದ್ಧಾಂತವು ಹೊಸರೂಪ ಕೊಟ್ಟಿದೆ. ಸಂಪರ್ಕ ಕ್ರಾಂತಿಯ, ಸೆಲ್‌ಫೋನ್‌/ಇಮೇಲ್‌/ಚಾಟಿಂಗ್‌ಗಳ, ಒರ್ಕಟ್‌ನಂಥ ಅಂತರ್ಜಾಲ ಸ್ನೇಹಸೇತು ಸಮುದಾಯಗಳ ಈಗಿನ ಯುಗದಲ್ಲಿ ನಮ್ಮ ಅನುಭವಕ್ಕೆ ಎಷ್ಟೋ ಸಲ ಬಂದಿಲ್ಲವೇ ಎಷ್ಟು ಪುಟ್ಟ ಪ್ರಪಂಚವಿದು ಒಂದು ವಿಶ್ವಗ್ರಾಮವಿದ್ದಂತೆ ಎಂದು!?

ಇದಿಷ್ಟನ್ನು ಓದುವ ಹೊತ್ತಿಗೆ ಬಹುಶಃ ನಿಮ್ಮ ಮನದಲ್ಲಿ ಒಂದು ಪ್ರಖ್ಯಾತ ಸುಭಾಷಿತೋಕ್ತಿ ‘...ವಸುಧೈವ ಕುಟುಂಬಕಮ್‌’ ರಿಂಗಣಿಸಿದ್ದರೆ ಆಶ್ಚರ್ಯವಿಲ್ಲ. 14ನೇ ಶತಮಾನದಲ್ಲಿ ಶಾರ್ಙ್ಗಧರಕವಿ ರಚಿಸಿದ ಆ ಸುಭಾಷಿತದ ಪೂರ್ಣರೂಪ ಹೀಗಿದೆ: ಅಯಂ ನಿಜಃ ಪರೊವೇತಿ ಗಣನಾ ಲಘುಚೇತಸಾಮ್‌। ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್‌।। ಶ್ಲೋಕದ ಅರ್ಥವೇನೆಂದರೆ ‘‘ಇವನು ನನ್ನವನು/ನನಗೆ ಪರಿಚಯವಿರುವವನು, ಅವನು ಅನ್ಯ/ಅಪರಿಚಿತ/ಪರಕೀಯ ಎಂಬುದೆಲ್ಲ ಸಂಕುಚಿತ ಮನೋಭಾವದವರ ದೃಷ್ಟಿಕೋನ. ವಿಶಾಲಹೃದಯವುಳ್ಳವರಿಗಾದರೋ ಇಡಿಯ ಭೂಲೋಕವೇ ಸ್ವಂತದ ಕುಟುಂಬವಿದ್ದಂತೆ!’’

ವಸುಧೈವ ಕುಟುಂಬಕಮ್‌ - ಎಂತಹ ಉದಾತ್ತ ಚಿಂತನೆ! ಹೌದಲ್ವಾ, small-world, six-degrees-separation ಅಂತೆಲ್ಲ ಪಾಶ್ಚಾತ್ಯರಿಗೆ ಮನದಟ್ಟಾದದ್ದು 20ನೇ ಶತಮಾನದಲ್ಲಾದರೆ ನಮ್ಮ ಶುದ್ಧ ಭಾರತೀಯ ಸಂಸ್ಕೃತಿ ಸಂಸ್ಕಾರಗಳಲ್ಲಿ ರೂಪುಗೊಂಡವರಿಗೆ ಆ ಚಿಂತನೆ ಸಹಸ್ರಾರು ವರ್ಷಗಳ ಹಿಂದಿನಿಂದಲೇ ಇದೆ. ಅಥರ್ವವೇದದಲ್ಲಿ ಬರುವ ‘‘ಮಾತಾ ಭೂಮಿಃ ಪುತ್ರೋಹಮ್‌ ಪೃಥಿವ್ಯಾಃ ...’’ ಸೂಕ್ತದ ಆಶಯವೂ ಅದೇ. ‘‘ಭೂದೇವಿಯೇ ನಮಗೆಲ್ಲರಿಗೂ ಅಮ್ಮ, ನಾವೆಲ್ಲ ಅವಳ ಮಕ್ಕಳು’’ ಎಂದು ಪೃಥ್ವಿಯ ಪುತ್ರ-ಪುತ್ರಿಯರೆಲ್ಲ ಅಂದುಕೊಂಡರೆ ಎಲ್ಲರೂ ಒಡಹುಟ್ಟಿದವರೇ! ಅಂದಮೇಲೆ, ಪ್ರಪಂಚದ ಪ್ರತಿಯಾಬ್ಬರೂ ಪರಸ್ಪರ ಪರಿಚಿತರೇ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more