• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಂಡೋಪಹಾರ ಮತ್ತು ಗಂಜಿಯೂಟ

By Staff
|

ಹಬ್ಬವೆಂದೋ, ಪಾರ್ಟಿಯೆಂದೋ ಪ್ರತಿ ದಿನ ಏನಾದರೂ ಬೇಡಾದಷ್ಟು ತಿನ್ನುತ್ತಲೇ ಇರುತ್ತೇವೆ! ಹೀಗಾಗಿಯೇ ಗಣೇಶನ ಹೊಟ್ಟೆ, ಸದ್ದಿಲ್ಲದೇ ಅಂಟಿಕೊಳ್ಳುತ್ತದೆ! ಬಿಡಿ, ತಿನ್ನೋದರ ಬಗ್ಗೆ ಆಮೇಲೆ ಯೋಚನೆ ಮಾಡಿ... ಸದ್ಯಕ್ಕೆ ಖಂಡೋಪಹಾರ ಮತ್ತು ಗಂಜಿಯೂಟ(ವಿಚಿತ್ರಾನ್ನ-224)ದ ಬಗ್ಗೆ ಗಮನಹರಿಸಿ...

  • ಶ್ರೀವತ್ಸ ಜೋಶಿ

‘ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌’ ಎಂದರೇನು, ಅದರಲ್ಲಿ ಏನೇನಿರುತ್ತದೆ, ಆ ಹೆಸರು ಹೇಗೆ ಬಂತು? ಒಂದು ಪುಟಕ್ಕೆ ಮೀರದಂತೆ ವಿವರಿಸಿ.

ಹೀಗೊಂದು ಪ್ರಶ್ನೆ ಅಂತಿಟ್ಕೊಳ್ಳಿ. ಹೊಟೆಲ್‌ ಮ್ಯಾನೇಜ್‌ಮೆಂಟ್‌ ಅಭ್ಯಸಿಸಿದವರಾದರೆ, ಅಥವಾ ಬಿಜಿನೆಸ್‌ ಟ್ರಿಪ್‌ಗಳಲ್ಲಿ ಹೊಟೆಲ್‌ವಾಸಿಗಳಾಗಿ ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌ ತಿಂದುಗೊತ್ತಿರುವವರಾದರೆ, ಅಥವಾ ಇತರೇ ‘ದೇಶ ಸುತ್ತಿ ಕೋಶ ಓದಿ’ಕೊಳ್ಳುವ ಖಯಾಲಿಯವರಾದರೆ ನಿಘಂಟುವಿನಲ್ಲಿನ ವ್ಯಾಖ್ಯೆಯಿಂದ ಹಿಡಿದು ಉದಾಹರಣೆಗಳ ಸಹಿತ ಮನದಟ್ಟಾಗುವಂತೆ ಇದನ್ನು ಉತ್ತರಿಸಬಹುದು.

ಪರಂತು ನಮ್ಮಂಥ ಶ್ರೀಸಾಮಾನ್ಯ ತಿಂಡಿಪೋತರಿಗೆ ಈ ಪ್ರಶ್ನೆಯನ್ನು ಕೇಳಿದರೆ? ಅದರಲ್ಲಿನ ‘ಕಾಂಟಿನೆಂಟಲ್‌’ ವಿಷಯ ಏನಾದ್ರೂ ಇರಲಿ ‘ಬ್ರೇಕ್‌ಫ‚ಾಸ್ಟ್‌’ ಭಾಗಕ್ಕೆ ಮಾತ್ರ ಯಥೇಷ್ಟ ನ್ಯಾಯ ಒದಗಿಸಬಲ್ಲೆವು! ಬ್ರೇಕ್‌ಫ‚ಾಸ್ಟ್‌ ಬಗ್ಗೆ ಫ‚ಾಸ್ಟ್‌ ಆಗಿ ಬ್ರೇಕೇ ಇಲ್ಲದೆ ಎಷ್ಟು ಬೇಕಾದ್ರೂ ಭಾಷಣ ಬಿಗಿಯಬಲ್ಲೆವು. ಅಲ್ವೇ ಮತ್ತೆ? ಕಾಂಟಿನೆಂಟಲ್‌ ಆದ್ರೇನು ಯುನಿವರ್ಸಲ್‌ ಆದ್ರೇನು, ಆ ಕಾಂಟಿನೆಂಟು ಏಷ್ಯಾ ಆದ್ರೇನು ಅಮೆರಿಕ ಆದ್ರೇನು, ನಮಗೆ ಬೇಕಾಗಿರೋದು ಹೊಟ್ಟೆತುಂಬ ರುಚಿರುಚಿಯಾದ ಬ್ರೇಕ್‌ಫ‚ಾಸ್ಟು. ಅದು ನಮ್ಮ ಟೇಸ್ಟು, ಮಿಕ್ಕಿದ್ದೆಲ್ಲ ವೇಸ್ಟು.

ಹೀಗಿದ್ದರೂ, ತಿಂಡಿ ಬೇಕು ತೀರ್ಥ ಬೇಕು... ತಿಂಡಿತೀರ್ಥಗಳ ಬಗ್ಗೆ ತಿಳಿವಳಿಕೆಯೂ ಬೇಕು... ಎಲ್ಲ ಬೇಕು ಎನ್ನುವ ಅಭಿ‘ ರುಚಿ’ಯವರಿಗೋಸ್ಕರ ಇವತ್ತು ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟು!

*

ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌ನ ಕಾಂಟಿನೆಂಟು ಏಷ್ಯಾ, ಅಮೆರಿಕ, ಆಫಿ‚್ರಕಾ, ಆಸ್ಟ್ರೇಲಿಯಾ, ಆಂಟಾರ್ಕಟಿಕಾ ಇವುಗಳ ಪೈಕಿ ಯಾವುದೂ ಅಲ್ಲ. ಅದು ಯುರೋಪ್‌! ಸ್ವಾರಸ್ಯವೆಂದರೆ ಇಡಿಯ ಯುರೋಪ್‌ ಸಹ ಅಲ್ಲ. ಗ್ರೇಟ್‌ಬ್ರಿಟನ್‌ ದ್ವೀಪರಾಷ್ಟ್ರಗಳನ್ನು ಹೊರತುಪಡಿಸಿದ ಯುರೋಪ್‌ ಖಂಡ!

ಇದರ ಹಿನ್ನೆಲೆಯೇನೆಂದರೆ ಇಂಗ್ಲೆಂಡ್‌ ಪ್ರಮುಖ ಭಾಗವಾಗಿರುವ ಗ್ರೇಟ್‌ಬ್ರಿಟನ್‌ ದ್ವೀಪರಾಷ್ಟ್ರಗಳ ಸಂಯುಕ್ತಕೂಟವು ಯುರೋಪ್‌ನ ಇತರ ಭಾಗವನ್ನು ‘ಕಾಂಟಿನೆಂಟಲ್‌ ಯುರೋಪ್‌’ ಎಂದೇ ಗುರುತಿಸುತ್ತದೆ ಮತ್ತು ಒಳಗೊಳಗೇ ‘ತಮಗಿಂತ ಆ ಭಾಗವು ಸ್ವಲ್ಪ ಹದಾ ಮಟ್ಟಿನದು’ ಎಂದು ಯಾವಾಗಲೂ ಮುಖ ಸಿಂಡರಿಸಿಕೊಳ್ಳುತ್ತದೆ. ಆಹಾರ, ಆಚಾರ-ವಿಚಾರ, ಸಂಸ್ಕೃತಿಯ ಮಾತು ಬಂದಾಗಲೂ ತಮ್ಮದು ಫ‚ಸ್ಟ್‌ ಕ್ಲಾಸ್‌, ಕಾಂಟಿನೆಂಟಲ್‌ ಯುರೋಪ್‌ನದು (ಮುಖ್ಯವಾಗಿ ಫ‚ಾ್ರನ್ಸ್‌ನದು) ಸೆಕೆಂಡ್‌ ಕ್ಲಾಸ್‌... ಎಂಬ ಅಭಿಪ್ರಾಯ ಅದೇಕೋ ಗ್ರೇಟ್‌ಬ್ರಿಟನ್‌ನ ಮನೆಮನಗಳಲ್ಲೂ ಬೆಚ್ಚಗೆ ಉಳಿದುಕೊಂಡು ಬಂದಿದೆ. ಹಾಗಾಗಿಯೇ ‘ಹೆವಿ’ ಇಂಗ್ಲಿಷ್‌ ಬ್ರೇಕ್‌ಫ‚ಾಸ್ಟ್‌ಗೆ ಹೋಲಿಸಿದರೆ ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟು ಅಷ್ಟಕ್ಕಷ್ಟೇ ಎಂಬುದು ಬ್ರಿಟಿಷರ ಅಂಬೋಣ.

ಹಾಗಾದರೆ ಬ್ರಿಟಿಷರ ‘ಹೆವಿ’ ಬ್ರೇಕ್‌ಫ‚ಾಸ್ಟಿಗೂ ಕಾಂಟಿನೆಂಟಲಿಗರ ‘ಲೈಟ್‌’ ಬ್ರೇಕ್‌ಫ‚ಾಸ್ಟ್‌ಗೂ ಇರುವ ವ್ಯತ್ಯಾಸವಾದರೂ ಏನು?

ಟಿಪಿಕಲ್‌ ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌ನಲ್ಲಿರುವುದು ಬ್ರೆಡ್‌ (ಅಥವಾ ಅದರ ರೂಪಗಳಾದ ಟೋಸ್ಟ್‌, ಕ್ರೊಸಾಂಟ್‌, ಪೇಸ್ಟ್ರಿ ಇತ್ಯಾದಿ) ಮತ್ತು ಕಾಫಿ‚/ಚಹ ಅಥವಾ ಬೇರಾವುದೇ ಒಂದು ಲಘುಪಾನೀಯ - ಇದಿಷ್ಟೇ. ಮೊಟ್ಟೆ-ಮಾಂಸ ಅಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬೆಳಗಿನ ಧಾವಂತದಲ್ಲಿ ಗಬಗಬನೆ ಮುಕ್ಕಿ ಮನೆಯಿಂದ ಹೊರಬೀಳಲು ಅನುವಾಗುವಂತೆ ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟಿನದು ಸಿಂಪಲ್‌ ಮೆನು.

ಆದರೆ ಇಂಗ್ಲಿಷ್‌ ಬ್ರೇಕ್‌ಫ‚ಾಸ್ಟು ಧಾವಂತದ್ದಲ್ಲ, ದೌಲತ್ತಿನದು. ಆರಾಮಾಗಿ ಕುಳಿತು ಬೇಕನ್‌, ಮೊಟ್ಟೆ (ಆಮ್ಲೆಟ್‌ ಅಥವಾ ಇತರ ರೂಪದಲ್ಲಿ), ಸೀರಿಯಲ್ಸ್‌, ಸಾಸೇಜ್‌, ಟೊಮ್ಯಾಟೊ, ಟೋಸ್ಟ್‌, ಮಾರ್ಮಲೇಡ್‌, ಹಣ್ಣುಗಳು, ಕಾಫಿ‚, ಟೀ... ಇತ್ಯಾದಿ ಶಾಸ್ತ್ರೋಕ್ತವಾಗಿ ಬೆಳಗಿನ ಆಹಾರ ಸೇವನೆ. ಅದು ‘ಉಪ’ಆಹಾರವಲ್ಲ, ದಿನದ ಮುಖ್ಯ ಆಹಾರ. ದಿನವಿಡೀ ಶಕ್ತಿ-ಚೈತನ್ಯಗಳನ್ನು ಒದಗಿಸಲು ಪರಿಪೂರ್ಣವಾದ ಫಳ್ಹಾರ. ಸಹಜವಾಗಿಯೇ ತಮ್ಮದಕ್ಕಿಂತ ಕಾಂಟಿನೆಂಟಲ್‌ನದು ಅಗ್ಗದ್ದೆಂಬ ತಾತ್ಸಾರ.

ವ್ಯತ್ಯಾಸ ಹೀಗಿದ್ದರೂ ಈಗ ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌ನ ವ್ಯಾಖ್ಯೆ ವಿಸ್ತಾರವಾಗಿದೆ. ಅಂತಾರಾಷ್ಟ್ರೀಯ ಹೊಟೆಲುಗಳಲ್ಲಿ ‘ಫಿ‚್ರೕ ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌’ ಎಂದು ಮಾರ್ಕೆಟಿಂಗ್‌ ತಂತ್ರವನ್ನು ಬಳಸುತ್ತಾರೆ, ಅಲ್ಲಿ ಬರೀ ಬ್ರೆಡ್ಡು-ಕಾಫಿ‚-ಟೀ ಕೊಟ್ಟರೆ ಯಾರೂ ಆಕರ್ಷಿತರಾಗುವುದಿಲ್ಲ ಎಂದು ಗೊತ್ತಿರುವುದರಿಂದ ಬೇಗಲ್ಸ್‌, ಚೀಸ್‌, ಡೊನಟ್ಸ್‌, ಮಫಿ‚ನ್ಸ್‌, ಎಗ್ಗ್‌-ಆಮ್ಲೆಟ್‌, ಫ‚ು್ರಟ್‌ಸಲಾಡ್‌, ಜ್ಯೂಸ್‌ ಅದೂಇದೂ ಅಂತ ತುಂಬಾ ಪ್ರಕಾರಗಳನ್ನು ಸೇರಿಸುತ್ತಾರೆ. ಒಮ್ಮೆ ತಿಂದರೆ ಪ್ರಪಂಚದ ಎಲ್ಲ ಕಾಂಟಿನೆಂಟ್ಸನ್ನೂ ಮುಟ್ಟಿಬರುವಷ್ಟು ಹೊಟ್ಟೆ ತುಂಬಿಸಬಲ್ಲದಾದ ಹೈಬ್ರಿಡ್‌ ಕಾಂಟಿನೆಂಟಲ್‌ ಬ್ರೇಕ್‌ಫ‚ಾಸ್ಟ್‌ ಅದು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more