• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯೂನಲ್ಲಿ ಕಾಯುವಿಕೆಗಿಂತ ಅನ್ಯ ಕಷ್ಟವಿಲ್ಲ...

By Staff
|

Queue and human psychologyಆ ಸಮಿತಿಯ ಸದಸ್ಯರೇ ಒಂದೆರಡು ಸಲ ಪ್ರಯೋಗಾರ್ಥವಾಗಿ ಲಗ್ಗೇಜ್ ಸಹಿತ ವಿಮಾನಪ್ರಯಾಣ ಮಾಡಿದರು. ಹ್ಯೂಸ್ಟನ್ ಏರ್‌ಪೋರ್ಟ್‌ನಲ್ಲಿ ವಿಮಾನದಿಂದಿಳಿದು, ಲಗೇಜ್ ಕಲೆಕ್ಟ್ ಮಾಡುವಲ್ಲಿಗೆ ನಡಕೊಂಡು ಬಂದರು. ಆಗ ಅವರಿಗೆ ಒಂದು ಆಸಕ್ತಿಕರ ಅಂಶ ಮನವರಿಕೆಯಾಯಿತು. ವಿಮಾನದಿಂದಿಳಿದು ಲಗೇಜ್ ಕಲೆಕ್ಟ್ ಮಾಡುವಲ್ಲಿಗೆ ನಡಕೊಂಡು ಬರಲು ಕೇವಲ ಒಂದೆರಡು ನಿಮಿಷಗಳು ಮಾತ್ರ ಸಾಕಾಗುತ್ತಿತ್ತು. ಮತ್ತೆ ಲಗೇಜ್ ಬೆಲ್ಟ್ ಬಳಿ ಏಳು ನಿಮಿಷ ಕಾಯಬೇಕಾಗುತ್ತಿತ್ತು. ಚೆಕ್‌ಇನ್ ಲಗ್ಗೇಜ್ ಇಲ್ಲದವರು (ಬರೀ ಒಂದು ಬ್ರೀಫ್‌ಕೇಸ್ ಮಾತ್ರ ಕ್ಯಾಬಿನ್ ಬ್ಯಾಗೇಜ್ ಹೊಂದಿದವರು) ಬೇಗಬೇಗನೆ ಏರ್‌ಪೋರ್ಟ್‌ನಿಂದ ಹೊರಬಂದು ಟ್ಯಾಕ್ಸಿ ಹಿಡಿಯುತ್ತಿದ್ದರು. ಅವರೆಲ್ಲ ಬೇಗ ಹೋಗುತ್ತಿರುವುದನ್ನು ನೋಡುತ್ತಾ ತಾವು ಮಾತ್ರ 7 ನಿಮಿಷ ಕಾಯಬೇಕು ಎಂದು ಈ ಚೆಕ್‌ಇನ್ ಲಗ್ಗೇಜುದಾರರಿಗೆ ಹೊಟ್ಟೆಯುರಿ. ಅದರ ಪರಿಣಾಮವೇ ಅಸಹನೆ ಮತ್ತು ಕಂಪ್ಲೇಂಟ್ಸ್!

ಏರ್‌ಲೈನ್‌ನವರು ಒಂದು ಚಾಲೂ ಉಪಾಯವನ್ನು ಕಂಡುಕೊಂಡರು. ಪ್ರಯಾಣಿಕರಿಗೆ ವಿಮಾನದಿಂದಿಳಿದು ಲಗ್ಗೇಜ್ ಕಲೆಕ್ಟ್ ಮಾಡುವಲ್ಲಿಗೆ ನಡಕೊಂಡುಬರಲು ತಗಲುವ ಅವಧಿಯನ್ನು ಹೆಚ್ಚಿಸುವುದೇ ಆ ಉಪಾಯ. ಅದಕ್ಕಾಗಿ ಸಾಧ್ಯವಾದಷ್ಟು ದೂರದ ಟರ್ಮಿನಲ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ, ಲಗ್ಗೇಜ್ ಬೆಲ್ಟ್‌ಗಳ ಪೈಕಿ ಅತ್ಯಂತ ಕೊನೆಯಲ್ಲಿರುವುದರ ಮೇಲೆ ಲಗ್ಗೇಜನ್ನು ಕಳಿಸುವ ಏರ್ಪಾಡು ಮಾಡಿತು. ವಿಮಾನದಿಂದ ತೆಗೆಯಲ್ಪಟ್ಟ ಲಗ್ಗೇಜು ಬೆಲ್ಟ್ ಮೇಲೆ ಬಂದು ತಲುಪಲು ಈಗಲೂ ಎಂಟು ನಿಮಿಷಗಳೇ. ಆದರೆ ಪ್ರಯಾಣಿಕರು ವಿಮಾನದಿಂದಿಳಿದು ಲಗ್ಗೇಜ್ ಕಲೆಕ್ಟ್ ಮಾಡುವಲ್ಲಿಗೆ ತಲುಪಲು ಕನಿಷ್ಠ ಆರು ನಿಮಿಷಗಳು ಬೇಕಾಗುತ್ತಿತ್ತು. ಒಂದೆರಡು ನಿಮಿಷಗಳಷ್ಟೇ ಕಾದುನಿಂತು ತಂತಮ್ಮ ಸಾಮಾನುಗಳನ್ನು ಪಡೆದ ಪ್ರಯಾಣಿಕರು ಹಸನ್ಮುಖದಿಂದಲೇ ಹೊರನಡೆಯತೊಡಗಿದರು, ಕಂಪ್ಲೇಂಟ್‌ಗಳ ಸಂಖ್ಯೆ ಗಣನೀಯವಾಗಿ ಇಳಿಯಿತು.

ಹಾಗೆಂದು, ಎಲ್ಲ ಕಡೆ ಎಲ್ಲ ವಿಧದ ಕ್ಯೂಗಳಲ್ಲಿ ಕಾಯುವ ಸಮಯವನ್ನು ಕಡಿಮೆಮಾಡುವುದು ಒಳ್ಳೆಯದೆಂದೇನೂ ಅಲ್ಲ. ಕೆಲವೊಂದು ಕ್ಯೂಗಳಲ್ಲಿ ಹ್ಯೂಸ್ಟನ್ ಏರ್‌ಪೋರ್ಟ್ ಉಪಾಯದ ತದ್ವಿರುದ್ಧದ್ದನ್ನೂ ಮಾಡುವುದಿದೆ, ಅದೂ ಉದ್ದೇಶಪೂರ್ವಕವಾಗಿ. ಮುಖ್ಯವಾಗಿ ಮನರಂಜನಾ ಪಾರ್ಕ್‌ಗಳಲ್ಲಿ, ಸಿನೆಮಾ/ನಾಟಕ ಥಿಯೇಟರ್‌ಗಳ ಪ್ರವೇಶದ್ವಾರಗಳಲ್ಲಿ ಬೇಕಂತಲೇ ಮೈಲುದ್ದದ ಕ್ಯೂ ರಚನೆಯಾಗುವಂತೆ ನೋಡಿಕೊಳ್ಳುತ್ತಾರೆ. ಇದರ ಹಿಂದೆ ಎರಡು ಉದ್ದೇಶಗಳಿರುತ್ತವೆ - ಒಂದನೆಯದಾಗಿ, ಪ್ರದರ್ಶನವನ್ನು ನೋಡಲಿರುವವರ ಮನಸ್ಸಲ್ಲಿ ನಿರೀಕ್ಷೆ-ಉದ್ವೇಗಗಳ ಮಟ್ಟವನ್ನು ಹೆಚ್ಚಿಸುವುದು. ಪ್ರೇಕ್ಷಕನಿಗೆ ಹೆಚ್ಚುಹೊತ್ತು ಕಾದಷ್ಟೂ ಆಮೇಲೆ ಪ್ರದರ್ಶನದಿಂದ ಸಿಗುವ ಆನಂದದ ಪ್ರಮಾಣ ಹೆಚ್ಚುತ್ತದೆಯಂತೆ. ಇನ್ನೊಂದು ಉದ್ದೇಶವೇನೆಂದರೆ ಈರೀತಿ ಮೈಲುದ್ದದ ಕ್ಯೂ ನೋಡಿ ಇತರರೂ ಈ ಪ್ರದರ್ಶನದ ಹಿರಿಮೆಯನ್ನು ಅರಿಯಲಿ ಎಂದು!

ಮನರಂಜನಾ ಪಾರ್ಕ್‌ಗಳು, ಕಲಾಪ್ರದರ್ಶನಗಳು ಮುಂತಾದೆಡೆಗಳಲ್ಲಿ ಹೆಚ್ಚಾಗಿ ಸಿಂಗಲ್ ಕ್ಯೂ ಇರುವುದು. ಇದೊಂದು ರೀತಿ ಸಾಮಾಜಿಕ ಸಮಾನತೆಯನ್ನು ಪ್ರತಿಬಿಂಬಿಸಿದಂತೆ. ಮೇಲುಕೀಳು ಭೇದಭಾವವಿಲ್ಲದೆ ಎಲ್ಲರೂ ಒಂದೇ ಸಾಲಲ್ಲಿ ನಿಂತುಕೊಳ್ಳಬೇಕು. ರಟ್ಟೆಯ ಬಲಪ್ರದರ್ಶನವಿಲ್ಲದೆ, ಚಾಲಾಕಿನ ಚರ್ಯೆಗಳಿಲ್ಲದೆ ಶಿಸ್ತುಬದ್ಧವಾಗಿ ಮೊದಲು ಬಂದವನಿಗೆ ಮೊದಲು ಸೇವೆ ಒದಗಿಸುವ ವ್ಯವಸ್ಥೆ. ಆದರೆ ಸೂಪರ್‌ಮಾರ್ಕೆಟ್‌ನ ಚೆಕ್‌ಔಟ್ ಲೇನ್ಸ್, ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಕ್ಲಿಯರೆನ್ಸ್‌ಗಾಗಿ ಸರತಿಯಸಾಲು - ಇವೆಲ್ಲ ಸಿಂಗಲ್ ಕ್ಯೂ ಆಗಿರುವುದಿಲ್ಲ. ಅಲ್ಲಿ ಆರೇಳು ಅಥವಾ ಕೆಲವೊಮ್ಮೆ ಹತ್ತುಹದಿನೈದರವರೆಗೂ ಸಮಾಂತರ ಕ್ಯೂಗಳಿರುತ್ತವೆ. ಅಂತಹ ಕ್ಯೂಗಳಲ್ಲಿ ಕಾಯುವಾಗ ಇನ್ನೊಂದು ನಮೂನೆಯ ಅಸಹನೆಯಾಗುವುದಿದೆ.

ತಾನು ನಿಂತಿರುವ ಕ್ಯೂ ಮಾತ್ರ ನಿಧಾನವಾಗಿ ಚಲಿಸುತ್ತಿದೆ, ಅಕ್ಕಪಕ್ಕದ ಕ್ಯೂಗಳೆಲ್ಲ ಬಿರುಸಾಗಿ ಮುಂದುವರೆಯುತ್ತಿವೆ ಎಂದು ಅನಿಸುವುದಿದೆ. ಪಕ್ಕದ ಕ್ಯೂ ಚಿಕ್ಕದಾಗಿ ಕಂಡರೆ ಅದರ ಕೊನೆಗೆ ಸೇರಿಕೊಳ್ಳುವುದು, ಅಲ್ಲಿ ದುರದೃಷ್ಟಕ್ಕೆ ಮುಂದಿರುವ ಯಾವನೋ ಒಬ್ಬ ಗಿರಾಕಿಗೆ ತೀರಾ ಕ್ಲಿಷ್ಟಕರ ಸೇವೆಯ ಅಗತ್ಯ ಬಂದು ಅವನ ಹಿಂದಿರುವವರೆಲ್ಲ ಹೆಲ್ಡ್‌ಅಪ್ ಆಗೋದು... ಕ್ಯೂ ಸಿಸ್ಟಂನಲ್ಲಿ ತಾಳ್ಮೆಯ ಕಟ್ಟೆಯೊಡೆಯುವುದಕ್ಕೆ ಇವೆಲ್ಲವೂ ಕಾರಣವಾಗುತ್ತವೆ.

ಸಮಾನಾಂತರ ಕ್ಯೂಗಳಿರುವಲ್ಲಿ ನಿಮ್ಮ ಕೆಲಸ ಬೇಗ ಮುಗಿಯುವ ಸಂಭವನೀಯತೆಯನ್ನು ಹೆಚ್ಚಿಸಬೇಕಾದರೆ ನಿಮಗೊಂದು ’ಕ್ಯೂಮಾತು’ ಏನೆಂದರೆ ಸಾಧ್ಯವಾದಷ್ಟು ಮಟ್ಟಿಗೆ ಮಧ್ಯದ ಕ್ಯೂಗಳ ಬದಲು, ಬದಿಯಲ್ಲಿರುವ ಕ್ಯೂಗೆ ಸೇರಿಕೊಳ್ಳಬೇಕು. ಯಾಕೆ ಗೊತ್ತೇ? ಮಧ್ಯದ ಕ್ಯೂಗಳಿಗೆ ಆಚೀಚೆ ಎರಡೂಕಡೆಗಳ ಕ್ಯೂಗಳಿಂದ ಜಂಪ್ ಮಾಡುವವರಿರುತ್ತಾರೆ, ಕೊನೆಗಿರುವ ಕ್ಯೂನಲ್ಲಾದರೆ ಹಾಗೆ ಬಂದುಸೇರಿಕೊಳ್ಳುವವರ ಪ್ರಮಾಣ ಅರ್ಧದಷ್ಟು ಕಡಿಮೆ!

ಕೊನೆಯದಾಗಿ, Queue ಎನ್ನುವ ಆಂಗ್ಲಪದವನ್ನು ಗಮನಿಸಿ. ಏಕಾಕ್ಷರ ಉಚ್ಚಾರದ ಈ ಪದದ ಸ್ಪೆಲ್ಲಿಂಗ್ ನೋಡಿದರೆ ಅಲ್ಲೇ ಅಕ್ಷರಗಳದೊಂದು ಕ್ಯೂ ಇದ್ದಂತಿದೆ!

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more