• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯೂನಲ್ಲಿ ಕಾಯುವಿಕೆಗಿಂತ ಅನ್ಯ ಕಷ್ಟವಿಲ್ಲ...

By Staff
|

ಕ್ಯೂ ಬಗೆಗಿನ ಈ ಲೇಖನವನ್ನು ಒಬ್ಬೊಬ್ಬರೇ ಕ್ಯೂನಲ್ಲಿ ಬಂದು ಓದಿ ಎಂದರೆ ನೀವು ಮುನಿಯುವಿರೇನೋ? ಕ್ಯೂನಲ್ಲಿ ನಿಂತಾಗ.. ನಿಂತು ಕಾಲು ದಣಿದಾಗ.. ಸೋತೆ ನಾನಾಗ.. ಎಂದು ಹಾಡುವಿರೇನೋ? ಕ್ಯೂಗೂ ನಮಗೂ ಅಂಟಿದ ನಂಟು ಯಾವ ಜನ್ಮದ್ದೋ ಗೊತ್ತಿಲ್ಲ. ಕ್ಯೂನಲ್ಲೂ ಒಂದು ಸೈಕಾಲಜಿ ಇದೆಯಂತೆ ಗೊತ್ತೆ?


  • ಶ್ರೀವತ್ಸ ಜೋಶಿ

Queue and human psychologyಬೇಕಿದ್ದರೆ ಕ್ಯೂಎನ್ನಿ, ಇಲ್ಲ ಕತಾರ್ ಎನ್ನಿ (ಎಸ್‌ಟಿಡಿ/ಐ‌ಎಸ್‌ಡಿ ಟೆಲಿಫೋನ್ ಕರೆ ಮಾಡುವಾಗ ಆಪ್ ಕತಾರ್ ಮೆ ಹೈಂ... ಎಂಬ ಧ್ವನಿಮುದ್ರಿತ ಸಂದೇಶ ಕೇಳಬೇಕಾಗಿಬರುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಿ), ಅಮೆರಿಕದಲ್ಲಿ ಹೇಳುವಂತೆ ’ಲೈನ್’ ಎನ್ನಿ ಅಥವಾ ಅಚ್ಚಕನ್ನಡದಲ್ಲಿ ಸರತಿಯಸಾಲು ಎನ್ನಿ - ನಾವೆಲ್ಲರೂ ಜೀವನದ ಎಷ್ಟೋ ಗಂಟೆಗಳನ್ನು ಕ್ಯೂನಲ್ಲಿ ಕಳೆದಿರುತ್ತೇವೆ ಮತ್ತು ಇನ್ನೂ ಕಳೆಯುವವರಿದ್ದೇವೆ. ತಿರುಪತಿ ತಿಮ್ಮಪ್ಪನ ಧರ್ಮದರ್ಶನದಿಂದ ಹಿಡಿದು ತ್ರಿಭುವನ್ ಟಾಕೀಸ್‌ನಲ್ಲಿ ಸೆಕೆಂಡ್ ಶೋಗೆ ಟಿಕೇಟ್ ಪಡೆಯುವ ತನಕ..., ಮತಿಗೆಟ್ಟ ರಾಜಕಾರಣಿಯನ್ನು ಚುನಾಯಿಸಲು ಮತಗಟ್ಟೆಯಲ್ಲಿ ಸಾಲಾಗಿನಿಂತು ವೋಟಿಸುವುದರಿಂದ ಹಿಡಿದು ಮಗು ಹುಟ್ಟುವ ಮೊದಲೇ ಎಲ್‌ಕೆಜಿ ಸೀಟ್ ಗಿಟ್ಟಿಸಲು ವೈಟಿಂಗ್‌ಲಿಸ್ಟ್‌ನಲ್ಲಿ ವೈಟಿಸುವ ತನಕ... ಕ್ಯೂ ಎಂದರೇನೆಂದು ನಮಗ್ಯಾರೂ ವಿವರಿಸಬೇಕಾಗಿಲ್ಲ.

ಕ್ಯೂನಲ್ಲಿ ಜೀವನದ ಅದೆಷ್ಟೋ ಗಂಟೆಗಳನ್ನು ಕಳೆಯುತ್ತೇವೆ ಎಂದೆನಲ್ಲ, ಅಮೆರಿಕದ ಯಾರೋ ಪುಣ್ಯಾತ್ಮರು ಆ ಪ್ರಮಾಣ ಎಷ್ಟು ಎಂಬುದನ್ನು ಅಂದಾಜು ಸಹ ಮಾಡಿದ್ದಾರೆ. ಅಮೆರಿಕದ ಸರಾಸರಿ ಜನಸಂಖ್ಯೆಯನ್ನೆಲ್ಲ ಪರಿಗಣಿಸಿದರೆ ವರ್ಷಕ್ಕೆ ಸುಮಾರು 37 ಬಿಲಿಯನ್ ಮಾನವಗಂಟೆಗಳು ಕ್ಯೂನಲ್ಲಿ ಕಾಯುತ್ತ ವ್ಯಯವಾಗುತ್ತವಂತೆ! ಅಮೆರಿಕದ ಅತಿ ವ್ಯಸ್ತ ವಿಮಾನನಿಲ್ದಾಣಗಳಾದ ಚಿಕಾಗೊ, ಅಟ್ಲಾಂಟಾ ಮುಂತಾದೆಡೆ ರನ್‌ವೇಯಿಂದ ಟೇಕ್‌ಆಫ್ ಮಾಡಲು ವಿಮಾನಗಳೂ ಕ್ಯೂ ನಿಲ್ಲಬೇಕಾಗುತ್ತದೆ. ಸೋಮವಾರ ಬೆಳಗ್ಗಿನಹೊತ್ತು ಚಿಕಾಗೊ ಏರ್‌‍ಪೋರ್ಟಲ್ಲಿ ಯಾವುದೇ ಕ್ಷಣದಲ್ಲಿ ನೋಡಿದರೂ ಒಂದೊಂದು ರನ್‌ವೇಗೂ ಕನಿಷ್ಠಪಕ್ಷ ಹತ್ತಿಪ್ಪತ್ತಾದರೂ ವಿಮಾನಗಳು ಸರತಿಯಸಾಲಲ್ಲಿರುತ್ತವೆ. ಇನ್ನು, ನಮ್ಮ ವಾಷಿಂಗ್‌ಟನ್ ಡಿ.ಸಿ.ಯೂ ಸೇರಿದಂತೆ ಮೆಟ್ರೊಪೊಲಿಟನ್ ಸಿಟಿಗಳಲ್ಲಿ ವಾರದ ದಿನಗಳಲ್ಲಿ ಬೆಳಗಿನ ಮತ್ತು ಸಂಜೆಯ ಬಂಪರ್-ಟು-ಬಂಪರ್ ಟ್ರಾಫಿಕ್ ಸಂಗತಿಯಂತೂ ಕೇಳೋದೇ ಬೇಡ!

ಏರ್‌ಪೋರ್ಟ್‌ನದಿರಲಿ, ಸೂಪರ್‌ಮಾರ್ಕೆಟ್ ಚೆಕ್‌ಔಟ್‌ನದಿರಲಿ, ಅಥವಾ ಬ್ಯಾಂಕ್ ಕೌಂಟರ್‌ನದಿರಲಿ ಕ್ಯೂ ಎಂದಾಕ್ಷಣ ಅಲ್ಲಿ ಕಾಯುವಿಕೆ ಇದ್ದೇ‌ಇರುತ್ತದೆ; ಕಾಯುವಿಕೆ ಅಸಹನೀಯವಾದರೆ ಕಾಯುತ್ತಿರುವವರ ಧಿಮಾಕು ಕಾಯುವ ಸಾಧ್ಯತೆಗಳೂ ವಿಪುಲವಾಗಿರುತ್ತವೆ. ಆದ್ದರಿಂದ ಕ್ಯೂ ಮತ್ತು ಹ್ಯೂಮನ್ ಸೈಕಾಲಜಿಗೆ ಅನ್ಯೋನ್ಯ ನಂಟಿದೆ. ಕ್ಯೂ ಸಿಸ್ಟಮ್‌ಗಳ ವಿನ್ಯಾಸಕಾರರು ಕ್ಯೂನಲ್ಲಿ ನಿಲ್ಲುವವರ ಸೈಕಾಲಜಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಪ್ರತಿಯೊಂದು ದಿನವೂ ಎಂಬಂತೆ ಒಂದಿಲ್ಲೊಂದು ಕ್ಯೂನಲ್ಲಿ ನಿಲ್ಲುವ ಅವಶ್ಯಕತೆಯಿರುವ ನಾವೂ ಸಹ ಈ ಕ್ಯೂ-ಸೈಕಾಲಜಿಯನ್ನು ಅರ್ಥ ಮಾಡಿಕೊಂಡರೆ ಯಾವುದಕ್ಯೂ ಒಳ್ಳೆಯದೇ!

ಕ್ಯೂನಲ್ಲಿ ನಿಲ್ಲಬೇಕಾಗಿ ಬಂದಾಗ ಜನ ಬಹುಮಟ್ಟಿಗೆ ದ್ವೇಷಿಸುವುದೆಂದರೆ ಸಮಯ ವೃಥಾ ಪೋಲಾಗುವುದನ್ನು. ಇಂಗ್ಲಿಷಲ್ಲಿ ಇದನ್ನು empty time ಎನ್ನುತ್ತಾರೆ. ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು ಅನಿಸೋದು ಆವಾಗಲೇ. ನ್ಯೂಯಾರ್ಕ್‌ನ ಒಂದು ಬ್ಯಾಂಕ್ ತನ್ನ ಶಾಖೆಗಳಲ್ಲಿ ಗಿರಾಕಿಗಳು ಕ್ಯೂನಲ್ಲಿ ಕಾಯುವಾಗ ಅವರಿಗೆ ಮನರಂಜನೆಯೊದಗಿಸಲು ದೃಶ್ಯ-ಶ್ರಾವ್ಯ ಪ್ರದರ್ಶನಗಳ ಏರ್ಪಾಡು ಮಾಡಿ ಒಂದು ಪ್ರಯೋಗ ನಡೆಸಿತು. ಇದರಿಂದ ಗ್ರಾಹಕಸಂತೃಪ್ತಿ ಪ್ರಮಾಣ ಗಣನೀಯವಾಗಿ ಹೆಚ್ಚಿತು ಎಂದು ಕೊಚ್ಚಿಕೊಂಡಿತು. ಯಾವನೋ ಮಹಾಮೇಧಾವಿ ಪ್ರದರ್ಶನಕಲಾವಿದ ಈ ಬ್ಯಾಂಕಿಂಗ್ ಕ್ಯೂ ಮನರಂಜನಾ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಮಾಡಲಾರಂಭಿಸಿದ! ಆಮೇಲೆ ಬ್ಯಾಂಕ್‌ನವರು ಪ್ರಯೋಗವನ್ನು ನಿಲ್ಲಿಸಿಬಿಟ್ಟರು. ಈಗ ಮತ್ತೆ ಗ್ರಾಹಕರಿಗೆಲ್ಲ ಕ್ಯೂನಲ್ಲಿ ಆಕಳಿಸುತ್ತ ಕಾಯುವಿಕೆಗಿಂತನ್ಯ ತಪವು ಇಲ್ಲ...

ಕ್ಯೂಯಿಂಗ್ ಥಿಯರಿ ಮತ್ತು ಹ್ಯೂಮನ್ ಸೈಕಾಲಜಿ ಹೇಗೆ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ ಎನ್ನುವುದಕ್ಕೆ ಕೆಲ ವರ್ಷಗಳ ಹಿಂದೆ ಹ್ಯೂಸ್ಟನ್ ಏರ್‌ಪೋರ್ಟ್‌ನಲ್ಲಿ ಕೈಗೊಂಡ ಒಂದು ಅಧ್ಯಯನ ಒಳ್ಳೆಯ ಉದಾಹರಣೆ. ಅಲ್ಲಿ ದಿನಾ ಬೆಳಿಗ್ಗೆ 7 ರಿಂದ 9 ರವರೆಗಿನ ಎರಡು ಗಂಟೆಗಳಲ್ಲಿ, ಒಂದೇ ಏರ್‌ಲೈನ್‌ಗೆ ಸೇರಿದ ಸುಮಾರು ಏಳೆಂಟು ವಿಮಾನಗಳು ಬೇರೆಬೇರೆ ನಗರಗಳಿಂದ ಬಂದಿಳಿಯುತ್ತಿದ್ದವು. ಅವುಗಳಲ್ಲಿನ ಪ್ರಯಾಣಿಕರೆಲ್ಲ ಏರ್‌ಪೋರ್ಟ್‌ನಿಂದ ಬೇಗಬೇಗ ಹೊರಬಂದು ಹ್ಯೂಸ್ಟನ್‌ನಲ್ಲಿನ ಕಛೇರಿಗಳಿಗೆ, ಬಿಜಿನೆಸ್ ಮೀಟಿಂಗ್‌ಗಳಿಗೆ ಹೋಗುವ ತರಾತುರಿಯುಳ್ಳವರು. ಕೆಲವು ಪ್ರಯಾಣಿಕರ ಬಳಿ ಸಾಕಷ್ಟು ಲಗ್ಗೇಜ್ ಸಹ ಇದ್ದರೆ ಅವರೆಲ್ಲ ವಿಮಾನದಿಂದಿಳಿದು ತಂತಮ್ಮ ಲಗ್ಗೇಜು ಕನ್ವೇಯರ್‌ಬೆಲ್ಟ್‌ ಮೇಲೆ ಬರುವವರೆಗೆ ಕಾಯಬೇಕು ತಾನೆ?ಹ್ಯೂಸ್ಟನ್ ಏರ್‌ಪೋರ್ಟ್‌ನಲ್ಲಿ ಲಗ್ಗೇಜ್ ಬರುವುದು ತಡವಾಗುತ್ತದೆ, ತುಂಬಾಹೊತ್ತು ಕಾಯಬೇಕಾಗುತ್ತದೆ ಎಂದು ಖಾಯಂ ಪ್ರಯಾಣಿಕರು ದೂರುವುದು ನಿತ್ಯದ ಗೋಳಾಗಿತ್ತು.

ಕಂಪ್ಲೇಂಟ್ಸ್ ವಿಪರೀತವಾದಾಗ ಏರ್‌ಲೈನ್‌ನವರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ ಲಗ್ಗೇಜ್ ಬರಲು ತಗಲುವ ಅವಧಿಯನ್ನು ಕಡಿಮೆಗೊಳಿಸುವ ಕ್ರಮ ಕೈಗೊಂಡರು; ಅದನ್ನು ಸರಾಸರಿ ಎಂಟು ನಿಮಿಷಕ್ಕೆ (ಇಂಡಸ್ಟ್ರಿ ಸ್ಟಾಂಡರ್ಡ್ ಸರಾಸರಿಯಾಗಿ ಅಷ್ಟು ಪ್ರಮಾಣದಲ್ಲಿತ್ತು) ತರುವಲ್ಲಿ ಯಶಸ್ವಿಯಾದರು.ಆದರೂ ಕಂಪ್ಲೇಂಟ್ಸ್ ನಿಲ್ಲಲಿಲ್ಲ, ತಾಳ್ಮೆಯಿಲ್ಲದ ಪ್ರಯಾಣಿಕರಿಂದ ದೂರುಗಳು ಯಥಾಪ್ರಕಾರ ಬರುತ್ತಿದ್ದವು. ಏರ್‌ಲೈನ್‌ನವರು ಮತ್ತೆ ತಲೆಕೆಡಿಸಿಕೊಂಡು ಇದಕ್ಕೇನಪ್ಪಾ ಪರಿಹಾರ ಎಂದು ಕಂಡುಕೊಳ್ಳಲು ವಿಶೇಷ ಸಮಿತಿಯನ್ನು ನೇಮಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X