ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಎಲ್ಲರನ್ನೂ ಗೆಲ್ಲು’ವುದಕ್ಕಿಂತ, ಎಲ್ಲರೂ ಗೆಲ್ಲೋಣ!

By Staff
|
Google Oneindia Kannada News


‘ಎಲ್ಲರನ್ನೂ ಗೆಲ್ಲುವವನು’ ಯಾರು? ಅಂತಹ ವ್ಯಕ್ತಿ ಈ ಪ್ರಪಂಚದಲ್ಲಿ ಇರಲು ಸಾಧ್ಯವೇ? ಯಾರಾದರೂ ಒಬ್ಬ ವ್ಯಕ್ತಿ ಮಾತ್ರ ಈ ಬುವಿಯಲ್ಲಿನ ಮಿಕ್ಕೆಲ್ಲ ಜೀವಜಂತುಗಳನ್ನು ಗೆಲ್ಲಬಹುದೇ ಹೊರತು ಎಲ್ಲರೂ ಎಲ್ಲರನ್ನೂ ಗೆಲ್ಲುವುದು ಇಂಪ್ರಾಕ್ಟಿಕಲ್‌, ಇಂಪಾಸಿಬಲ್‌.

  • ಶ್ರೀವತ್ಸ ಜೋಶಿ
Win-Win Situation: Beyond the corridors of Corporate Clinicsಸರ್ವಜಿತ್‌- ಇದೀಗ ಆರಂಭವಾಗಿರುವ ಹೊಸ ಸಂವತ್ಸರದ ಹೆಸರು ಸುಂದರವಾಗಿದೆ, ಸ್ವಾರಸ್ಯಕರವಾಗಿದೆ, ಅಷ್ಟೇ ವಿಚಾರಪ್ರಚೋದಕವೂ ಆಗಿದೆ! ನಾವು ಚಿಕ್ಕಂದಿನಲ್ಲಿ ಸಂವತ್ಸರಗಳ ಹೆಸರುಗಳನ್ನು ಮಗ್ಗಿಪುಸ್ತಕದಿಂದ ಬಾಯಿಪಾಠ ಕಲಿಯುತ್ತಿದ್ದಾಗ ಈ ಸಂವತ್ಸರದ ಹೆಸರು ‘ಸರ್ವಜಿತು’ ಎಂದಿತ್ತು, ಈಗ ಆಧುನಿಕವಾಗಿ ಹೆಸರಿನ ಕೊನೆಯಕ್ಷರವನ್ನು ಅರ್ಧದಷ್ಟೇ ಉಚ್ಚರಿಸುವುದು ಫ‚ಾ್ಯಶನ್‌ ಆದ್ದರಿಂದ ‘ಸರ್ವಜಿತ್‌’ ಸರಿಹೋಗುತ್ತದೆ ಎಂದು ನೀವಂದುಕೊಳ್ಳಬಹುದು; ಆದರೆ ಈ ಹೆಸರಿನ ಮಟ್ಟಿಗೆ ಇದು ಫ‚ಾ್ಯಶನ್‌ ಅಲ್ಲ, ಸರ್ವಜಿತ್‌ ಎಂಬುದು ಸಂಸ್ಕೃತ ಪದದ ಸರಿಯಾದ ರೂಪ. ಎಲ್ಲರನ್ನೂ ಜಯಿಸಿದವನು ಎಂಬುದು ಅದರ ಅರ್ಥ.

‘ಎಲ್ಲರನ್ನೂ ಗೆಲ್ಲುವ’ ಎಂಬ ಈ ಅರ್ಥ ಬಹುಶಃ ಕವಿಕೋಗಿಲೆಗಳಿಗೆ (ವಸಂತಋತು ಅವರದೇ ಸೀಸನ್‌ ತಾನೆ?) ಇನ್ನಷ್ಟು ಖುಶಿ ಕೊಟ್ಟಿರಬಹುದು. ಯುಗಾದಿ ಸಂದರ್ಭದ ಕವನಗಳಲ್ಲಿ ಈ ವರ್ಷ ‘ಬೆಲ್ಲ’, ‘ಪಲ್ಲವ’(ಮಾವುಬೇವುಗಳ ಚಿಗುರು)ಗಳನ್ನು ಪ್ರಾಸಬದ್ಧವಾಗಿ ‘ಸೊಲ್ಲು’ತ್ತ ‘ಮೆಲ್ಲು’ವುದರೊಂದಿಗೆ ‘ಎಲ್ಲ’ರನ್ನೂ ‘ಗೆಲ್ಲು’ವ ಹೆಚ್ಚುವರಿ ಸಂಭ್ರಮ!

ಕೊಂಚ ವಿಚಾರ ಮಾಡಿ. ‘ಎಲ್ಲರನ್ನೂ ಗೆಲ್ಲುವವನು’ ಯಾರು? ಅಂತಹ ವ್ಯಕ್ತಿ ಈ ಪ್ರಪಂಚದಲ್ಲಿ ಇರಲು ಸಾಧ್ಯವೇ? ಯಾರಾದರೂ ಒಬ್ಬ ವ್ಯಕ್ತಿ ಮಾತ್ರ ಈ ಬುವಿಯಲ್ಲಿನ ಮಿಕ್ಕೆಲ್ಲ ಜೀವಜಂತುಗಳನ್ನು ಗೆಲ್ಲಬಹುದೇ ಹೊರತು ಎಲ್ಲರೂ ಎಲ್ಲರನ್ನೂ ಗೆಲ್ಲುವುದು ಇಂಪ್ರಾಕ್ಟಿಕಲ್‌, ಇಂಪಾಸಿಬಲ್‌. ಆಯುಶ್ಮಾನ್‌ ಭವ... ಎಂದಂತೆಯೇ ಸರ್ವಜಿತ್‌ ಭವ... ಎಂದು ಹಿರಿಯರು ಉಪದೇಶಿಸಿದರು ಅಂತಿಟ್ಟುಕೊಳ್ಳೋಣ. ಒಂದಕ್ಕಿಂತ ಹೆಚ್ಚು ಜನ ಈ ಆಶೀರ್ವಾದ ಪಡೆದರೆ ಅದು ಕಾರ್ಯಗತವಾಗಲು ಸಾಧ್ಯವಿದೆಯೇ? ಒಂದೊಮ್ಮೆ ಹಾಗೆ ಆದರೆ ಎಲ್ಲರೂ ‘ವೆನಿ-ವಿಡಿ-ವಿಸಿ’ (ನಾ ಬಂದೆ... ನಾ ನೋಡ್ದೆ... ನಾ ಗೆದ್ದೆ!) ಎಂದು ಜೂಲಿಯಸ್‌ ಸೀಸರ್‌ನಂತೆಯೋ ಶರಪಂಜರದ ಕಲ್ಪನಾಳಂತೆಯೋ ಕಿರುಚತೊಡಗಿದರೆ!? ಕೈಯೆತ್ತಿ ತೋರುಬೆರಳು-ಮಧ್ಯದಬೆರಳು ಅಗಲಿಸಿ ವಿಕ್ಟರಿ ಸೈನ್‌ ತೋರಿಸುತ್ತ ಕುಣಿದಾಡತೊಡಗಿದರೆ!?

ವಿಕ್ಟರಿ ಸೈನ್‌ (V sign) ಬಗ್ಗೆ ಒಂಚೂರು ಹೆಚ್ಚಿನ ವಿವರಣೆಯನ್ನು ಇಲ್ಲಿ ಸೇರಿಸಬಹುದು ಅನಿಸುತ್ತದೆ. ಚುನಾವಣೆಯಲ್ಲಿ (ಕಾಲೇಜಲ್ಲಿ ಸ್ಟುಡೆಂಟ್‌ ಯುನಿಯನ್‌ ಎಲೆಕ್ಷನ್‌ನಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೆ) ಗೆದ್ದುಬರುವ ಅಭ್ಯರ್ಥಿ ಜನಸಮುದಾಯದೆಡೆಗೆ ‘ವಿ’ಸೈನ್‌ ತೋರಿಸುತ್ತ ವಿಜಯದ ಬಿಗುಮಾನವನ್ನು ಪ್ರದರ್ಶಿಸುವ ಚಿತ್ರ ನಮಗೆಲ್ಲ ಗೊತ್ತೇ ಇದೆ. ಕನ್ನಡದ ನಂ.1 ದಿನಪತ್ರಿಕೆ ‘ವಿಜಯಕರ್ನಾಟಕ’ದ ಓದುಗರಿಗಂತೂ ದಿನಾಬೆಳಿಗ್ಗೆ ಪತ್ರಿಕೆಯ ಮಾಸ್ಟ್‌ಹೆಡ್‌ನಲ್ಲೇ ‘ವಿ’ಸೈನ್‌ ದರ್ಶನ. ದರಸಮರದ ಮೂಲಕ ಇತರ ಪತ್ರಿಕೆಗಳನ್ನು ಗೆದ್ದ, ಲವಲವಿಕೆಯ ಹೂರಣ ಮತ್ತು ನವನವೀನ ಪ್ರಯೋಗಗಳ ಮೂಲಕ ಓದುಗರ ಜನಮಾನಸವನ್ನು ಗೆದ್ದ ಆ ಪತ್ರಿಕೆಯ ಮಾಸ್ಟ್‌ಹೆಡ್‌ನಲ್ಲಿ ‘ವಿ’ಸೈನ್‌ ಅನ್ವರ್ಥಕವಾಗಿಯೇ ಇದೆಯೆನ್ನಿ.

‘ವಿ’ಸೈನ್‌ ಫ‚ಾ್ಯಶನ್‌ ಆರಂಭವಾದದ್ದು ವಿನ್ಸ್‌ಟನ್‌ ಚರ್ಚಿಲ್‌ ಅವರಿಂದ ಎನ್ನಲಾಗಿದೆ. ಎರಡನೇ ಪ್ರಪಂಚ ಯುದ್ಧದ ವೇಳೆಗೆ ಬ್ರಿಟಿಷ್‌ ಪ್ರಧಾನಿಯಾಗಿದ್ದ ಚರ್ಚಿಲ್‌ ಯುದ್ಧದ ವೇಳೆ ಸಾರ್ವಜನಿಕ ಸಭೆಗಳಲ್ಲಿ, ಮೈತ್ರಿದೇಶಗಳ ರಾಯಭಾರಿಗಳೊಂದಿಗೆ ಅಥವಾ ಮಿಲಿಟರಿ ಅ-ಧಿಕಾರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದಾಗ ಅವರೆಲ್ಲರ ಉತ್ಸಾಹವರ್ಧನೆಗಾಗಿ ಈ ಬಾಡಿಲಾಂಗ್ವೇಜ್‌ ಉಪಯೋಗಿಸುತ್ತಿದ್ದರಂತೆ. ಆಮೇಲೆ ಬ್ರಿಟಿಷ್‌ ಸಂಪ್ರದಾಯಗಳು ಪಸರಿಸಿದ ದೇಶಗಳಲ್ಲೆಲ್ಲ ‘ವಿ’ಸೈನ್‌ ವಿಜಯದ (ಮುಖ್ಯವಾಗಿ ರಾಜಕೀಯ ವಿಜಯದ) ಸಂಕೇತ ಎನಿಸಿಕೊಂಡಿತು.

ಆದರೆ ‘ವಿ’ಸೈನ್‌ ತೋರಿಸುವಾಗ ಎಚ್ಚರವಿರಬೇಕು. ಒಂದನೆಯದಾಗಿ ಬಲಗೈಯಿಂದಷ್ಟೇ ಆ ಸಂಜ್ಞೆಯನ್ನು ಮಾಡಬೇಕು, ಅದಕ್ಕಿಂತಲೂ ಮುಖ್ಯವಾಗಿ ಆ ಸಂಜ್ಞೆಯ ವೇಳೆ ಅಂಗೈಯು ಜನರೆಡೆಗೆ ತಿರುಗಿದ್ದಿರಬೇಕು. ತದ್ವಿರುದ್ಧವಾಗಿ ಅಂದರೆ ಅಂಗೈಯು ತನ್ನಕಡೆ ತಿರುಗಿದ್ದಾಗ ‘ವಿ’ಸೈನ್‌ ತೋರಿಸಿದರೆ ಅದು ಗೇಲಿ ಮಾಡಿದಂತೆ, ಅವಮಾನಿಸಿದಂತೆ ಅಥವಾ ತಿರಸ್ಕಾರವನ್ನು ಸೂಚಿಸಿದಂತೆ. ಅಂತಹ ಶಿಷ್ಟಾಚಾರ ಗಾಢವಾಗಿರುವ ದೇಶಗಳಲ್ಲಿ ‘ವಿ’ಸೈನ್‌ ಮೂಲಕ ವಿಜಯಪತಾಕೆ ಹಾರಿಸುವವರು ಅಂಗೈಯ ಡೈರೆಕ್ಷನ್‌ ಸರಿಯಿದೆಯೇ ಅನ್ನೋದನ್ನು ಖಾತರಿಪಡಿಸಿಕೊಳ್ಳದಿದ್ದರೆ ಎಡವಟ್ಟಾದೀತು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X