• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕೈ ಗುಣ’ದಿಂದ ಕಾಯಿಲೆ ಗುಣವಾಗುವುದೇ?

By Staff
|

Emily Rosaಸೊ ಫಾರ್‌ ಸೊ ಗುಡ್‌! ಈಗ ನಮ್ಮ ವಿವರಣೆಯಲ್ಲಿ ‘ಎಮಿಲಿ ರೊಸಾ’ ಎಂಬ 9 ವರ್ಷದ ಶಾಲಾಬಾಲಕಿಯ ಪ್ರವೇಶವಾಗುತ್ತದೆ...

ಎಮಿಲಿ ರೊಸಾ ಅಮೆರಿಕದ ಕೊಲರೊಡೊ ಸಂಸ್ಥಾನದಲ್ಲಿನ ಒಬ್ಬ ರಿಜಿಸ್ಟರ್ಡ್‌ ನರ್ಸ್‌ನ ಮಗಳು. ತನ್ನ ತಾಯಿಯು Therapeutic touch ಕುರಿತ ಯಾವುದೊ ವಿಡಿಯಾ ನೋಡುತ್ತಿದ್ದಾಗ ಅದನ್ನು ಗಮನಿಸಿದ ಎಮಿಲಿ ಆ ಚಿಕಿತ್ಸಾವಿಧಾನದ ಬಗ್ಗೆ ಆಸಕ್ತಳಾದಳು. ರೋಗಿಯನ್ನು ಸ್ಪರ್ಶಿಸದೆಯೇ, ಬೇರಾವ ಔಷಧಿಯ ಪ್ರಯೋಗವೂ ಇಲ್ಲದೆಯೇ ಕಾಯಿಲೆಯನ್ನು ವಾಸಿಮಾಡುವುದೆಂದರೆ ಅದರಲ್ಲೇನೋ ಇರಬೇಕು, ಅದನ್ನು ತಾನು ಪರೀಕ್ಷಿಸಿ ಸತ್ಯಾಸತ್ಯತೆಯನ್ನು ಹೊರಹಾಕಬೇಕು ಎಂದು ನಿಶ್ಚಯಿಸಿದಳು. ಶಾಲೆಯಲ್ಲಿ ತನ್ನ ‘ ಸೈನ್ಸ್‌ ಪ್ರೊಜೆಕ್ಟ್‌’ಗೆ ಹೇಗೂ ಅವಳಿಗೊಂದು ವಿಷಯ ಬೇಕಿತ್ತು, ಅದಕ್ಕೆ ‘ ಸ್ಪರ್ಶಚಿಕಿತ್ಸಾವಿಧಾನ’ವನ್ನೇ ಆಪರೇಷನ್‌ಗೊಳಪಡಿಸೋಣ ಎಂದುಕೊಂಡಳು.

ಎಮಿಲಿ ಒಂದು ಪ್ರಯೋಗವನ್ನು ಸಿದ್ಧಪಡಿಸಿದಳು. Therapeutic touch ಅನ್ನು ಪ್ರಾಕ್ಟೀಸ್‌ ಮಾಡುತ್ತಿದ್ದ 21 ಮಂದಿಯನ್ನು ಕಲೆಹಾಕಿದಳು. ಅವರೆಲ್ಲ ಮಾನವಶಕ್ತಿಕ್ಷೇತ್ರವನ್ನು ಅನುಭವಿಸುವ ಸಿದ್ಧಿಯನ್ನು ನಿಜಕ್ಕೂ ಗಳಿಸಿದ್ದಾರೆಯೇ ಎಂದು ಪರೀಕ್ಷಿಸುವುದು ಅವಳ ಪ್ರಯೋಗದ ಉದ್ದೇಶ. ಎಮಿಲಿ ಮತ್ತು ಪರೀಕ್ಷಾರ್ಥಿಯ ನಡುವೆ ಒಂದು ಪರದೆ. ಅದರ ಕೆಳಗಿನಿಂದ ಪರೀಕ್ಷಾರ್ಥಿಯು ತನ್ನೆರಡು ಕೈಗಳನ್ನು ಅಂಗಾತ ಹಿಡಿಯಬೇಕು. ಪರದೆಯ ಈಕಡೆಗೆ ಕುಳಿತ ಎಮಿಲಿ ತನ್ನ ಒಂದು ಕೈಯನ್ನು ಪರೀಕ್ಷಾರ್ಥಿ ಚಾಚಿರುವ ಕೈಗಳ ಪೈಕಿ ಯಾವುದಾದರೂ ಒಂದರ ಮೇಲೆ ತುಸು ಎತ್ತರದಲ್ಲಿ ಹಿಡಿಯುತ್ತಾಳೆ. ಎಮಿಲಿಯ ಕೈ ಸುತ್ತಲಿನ ’ಮಾನವಶಕ್ತಿಕ್ಷೇತ್ರ’ವು ತನ್ನ ಯಾವ ಕೈಗೆ (ಎಡವೇ ಬಲವೇ) ಅನುಭವಕ್ಕೆ ಬಂತು ಎಂಬುದನ್ನು ಪರೀಕ್ಷಾರ್ಥಿ ತಿಳಿಸಬೇಕು. ಪ್ರತಿಯಾಬ್ಬ ಪರೀಕ್ಷಾರ್ಥಿಗೂ ಹತ್ತು ಸಲ ಇದರ ಪುನರಾವರ್ತನೆ.

Emily Rosa conducting the experimentಎಲ್ಲ 21 ಪರೀಕ್ಷಾರ್ಥಿಗಳ (ಅವರೆಲ್ಲ ‘ ಸ್ಪರ್ಶಚಿಕಿತ್ಸಾಪ್ರವೀಣ’ರು ಎಂಬುದನ್ನು ನೆನಪಿಟ್ಟುಕೊಳ್ಳಿ!) ಸರದಿ ಮುಗಿದು ಫಲಿತಾಂಶವನ್ನು ಕ್ರೋಡೀಕರಿಸಿದಾಗ ಒಂದು ಅಪ್ಪಟಸತ್ಯವು ಹೊರಬಿತ್ತು! ನೂರಕ್ಕೆ ನೂರು ಸರಿಯಾಗಿರಬೇಕಿತ್ತು ಎಲ್ಲ ಪರೀಕ್ಷಾರ್ಥಿಗಳ ಉತ್ತರಗಳು. ಹಾಗಿರಲಿಲ್ಲ. ಅವರೆಲ್ಲ ಬರೀ ಗೆಸ್‌ವರ್ಕ್‌ ಮಾಡ್ತಿದ್ದಾರೆಂದುಕೊಂಡು (ನಾಣ್ಯ ಚಿಮ್ಮಿಸಿ ಹೆಡ್‌ ಅಥವಾ ಟೈಲ್‌ ಎಂದು ನಿರ್ಧರಿಸಿದಂತೆ) ಎಡಗೈ ಅಥವಾ ಬಲಗೈ ಎಮಿಲಿಯ ಶಕ್ತಿಕ್ಷೇತ್ರವನ್ನು ಕಂಡುಕೊಂಡಿತು ಎಂದಿದ್ದರೂ ಒಟ್ಟಾಗಿ 50% ಸರಿಯಿರಬೇಕಿತ್ತಲ್ಲವೇ? ನೆಟ್‌ ರಿಸಲ್ಟ್ಸ್‌ ಅಷ್ಟೂ ಇರಲಿಲ್ಲ. 47% ಉತ್ತರಗಳು ಮಾತ್ರ ಸರಿಯಾಗಿದ್ದುವು!

ಪರೀಕ್ಷಾರ್ಥಿಗಳು ಸಹಜವಾಗಿಯೇ ಅಪ್‌ಸೆಟ್‌ ಆದರು. ಇನ್ನೊಮ್ಮೆ ಪರೀಕ್ಷೆ ಮಾಡೋಣ ಎಂದರು. ಎಮಿಲಿ ಒಪ್ಪಿಕೊಂಡಳು. ಈಗ ಪರೀಕ್ಷೆಯನ್ನು ಒಂದಷ್ಟು ಸರಳಗೊಳಿಸಲಾಯಿತು. ರಿಹರ್ಸಲ್‌ ಎಂದು ಎಮಿಲಿಯ ಶರೀರದ ಶಕ್ತಿಕ್ಷೇತ್ರವನ್ನು ಮೊದಲೇ ಒಮ್ಮೆ ಅನುಭವಿಸುವ ಅವಕಾಶವನ್ನು ಎಲ್ಲ ಪರೀಕ್ಷಾರ್ಥಿಗಳಿಗೆ ಕಲ್ಪಿಸಲಾಯಿತು, ಹಾಗೆಯೇ ಎಮಿಲಿ ತನ್ನ ಬಲಗೈಯನ್ನು ಮಾತ್ರ ಪರೀಕ್ಷಾರ್ಥಿಯ ಕೈಗಳ ಹತ್ತಿರ ಹಿಡಿಯುವುದೆಂದು ತೀರ್ಮಾನವಾಯಿತು. ಈಗಲಾದರೂ ಉತ್ತಮ ಫಲಿತಾಂಶ ಬರುತ್ತದೆಂದುಕೊಂಡರೆ ಎಲ್ಲ ಪರೀಕ್ಷಾರ್ಥಿಗಳ ಉತ್ತರಗಳನ್ನು ಕ್ರೋಡೀಕರಿಸಿದಾಗ ಸರಿಯುತ್ತರಗಳು ಬರೀ 41% ಮಾತ್ರ!

ಪ್ರಯೋಗ-ಪರೀಕ್ಷೆ-ಫಲಿತಾಂಶಗಳ ಬಗ್ಗೆ ಎಮಿಲಿ ತನ್ನ ಸ್ಕೂಲ್‌ ಪ್ರೊಜೆಕ್ಟ್‌ಗಾಗಿ ವರದಿಯನ್ನು ತಯಾರಿಸಿದಳು. ಜತೆಯಲ್ಲಿಯೇ ಒಂದು ರಿಸರ್ಚ್‌ಪೇಪರ್‌ ಕೂಡ ಬರೆದಳು, ಜರ್ನಲ್‌ ಆಫ‚್‌ ಅಮೆರಿಕನ್‌ ಮೆಡಿಕಲ್‌ ಅಸೊಸಿಯೇಶನ್‌ (JAMA) ಗೆ ಸಲ್ಲಿಸಿದಳು. 1998ರಲ್ಲಿ ಅವಳು 11 ವರ್ಷದವಳಾಗಿದ್ದಾಗ ಆ ಸಂಶೋಧನಾಪ್ರಬಂಧ ಪ್ರಕಟವಾಯಿತು, ಅಮೆರಿಕದ ಪ್ರತಿಷ್ಠಿತ ಜರ್ನಲ್‌ನಲ್ಲಿ ಪ್ರಬಂಧವನ್ನು ಪ್ರಕಟಿಸಿದ ಅತಿ ಕಡಿಮೆ ವಯಸ್ಸಿನ ಸಂಶೋಧಕಿಯೆಂಬ ಮಾನ್ಯತೆಯನ್ನು ಗಳಿಸಿಕೊಂಡಳು ಎಮಿಲಿ ರೊಸಾ!

ಸ್ಪರ್ಶಚಿಕಿತ್ಸಾಪದ್ಧತಿಯ ಬೆಳವಣಿಗೆಗೆ ಎಮಿಲಿ ರೊಸಾಳ ಪ್ರಯೋಗ ಒಂದುರೀತಿಯಲ್ಲಿ ಮುಳುವಾಯಿತು. ಜತೆಯಲ್ಲೇ ಅದೇ ವರ್ಷ (1998) ಜೇಮ್ಸ್‌ ರಾಂಡಿ ಎಜುಕೇಶನಲ್‌ ಫ‚ೌಂಡೇಶನ್‌ ಒಂದು ಪಂಥಾಹ್ವಾನ ಹೊರಡಿಸಿತು - ಪ್ರಯೋಗಶಾಲೆಯಲ್ಲಿ ’ಮಾನವಶಕ್ತಿಕ್ಷೇತ್ರದ ಅನುಭವ’ವನ್ನು ಸಾಬೀತುಪಡಿಸಿದವರಿಗೆ 750000 ಡಾಲರ್‌ ಮೊತ್ತವನ್ನು ಘೋಷಿಸಿತು. ವಿಶ್ವಾದ್ಯಂತದ ಒಂದು ಲಕ್ಷ ಸ್ಪರ್ಶಚಿಕಿತ್ಸಕರಲ್ಲಿ ಒಬ್ಬಾಕೆ ಮಾತ್ರ ಸವಾಲನ್ನು ಸ್ವೀಕರಿಸಿದಳು, ಆದರೆ ಪ್ರಯೋಗಾಲಯ ಪರೀಕ್ಷೆಯಲ್ಲಿ ಅವಳು ಅನುತ್ತೀರ್ಣಳಾದಳು. ಈಗ ಮೊತ್ತವನ್ನು 1.1 ಮಿಲಿಯನ್‌ ಡಾಲರ್‌ಗೆ ಏರಿಸಲಾಗಿದೆ. ಶಕ್ತಿಕ್ಷೇತ್ರದ ಅನುಭವವನ್ನು ಸಾಬೀತುಪಡಿಸುತ್ತೇವೆಂದು ದಾವೆ ಹೂಡುವ ಶಕ್ತಿಯುಳ್ಳ ಚಿಕಿತ್ಸಕರಾರೂ ಮುಂದೆಬಂದಿಲ್ಲ!

ಸ್ಪರ್ಶಚಿಕಿತ್ಸೆಯ ಸತ್ಯಾಸತ್ಯತೆ ಏನಾದರೂ ಇರಲಿ. ತೀವ್ರ ಕಾಯಿಲೆ ಬಂದಾಗಷ್ಟೇ ಅಲ್ಲ, ಸ್ವಲ್ಪೇಸ್ವಲ್ಪ ದೇಹಾಲಸ್ಯವಿದ್ದರೂ ಸನಿಹದಲ್ಲಾರಾದರೂ ಇರಲಿ, ಮೈದಡವಿ ಮುದ್ದುಮಾಡಲಿ, ಮುದುಡಿದ ಮನಸ್ಸಿಗೆ ಸ್ಪರ್ಶಸುಖದ ಬೆಚ್ಚನೆಯ ಇಸ್ತ್ರಿ ಬಿದ್ದು ನಿರಿಗೆಗಳೆಲ್ಲ ನವಿರಾಗಲಿ... ಎಂಬ ಹಾತೊರೆಯುವಿಕೆ ನಮ್ಮೆಲ್ಲರಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಆಗುವುದಿದೆ. ಹಣೆಮೇಲೆ ಕೈಯಿಟ್ಟು ಜ್ವರ ಇಲ್ಲ ಎನ್ನುವವರು ಬೇಕೆನಿಸುವುದಿದೆ. ಹಾಗೆಯೇ ಮಾನವಶಕ್ತಿಕ್ಷೇತ್ರದ ವಿಷಯ ಹೇಗೂ ಇರಲಿ ಒಂಥರಾ ‘ತೇಜೋವಲಯ’ (aura) ಇರುವ ವ್ಯಕ್ತಿಗಳು ಅನೇಕರಿರುತ್ತಾರೆ. ಫೊಟೊದಲ್ಲಿ ಏಸುಕ್ರಿಸ್ತ ಬುದ್ಧ ರಾಮ ಕೃಷ್ಣ ವಿವೇಕಾನಂದರ ತಲೆಯ ಹಿಂದೊಂದು ಪ್ರಕಾಶವಿದ್ದಂತೆ ಅವರಿಗೆಲ್ಲ aura ಇರುತ್ತದೆ. ಆ ಕಿರಣಗಳಿಂದಾಗಿ ನಮ್ಮ ಮನಸ್ಸೆಂಬ ತಾವರೆಹೂ ಮುದುಡಿದ್ದು ಅರಳುವುದರಲ್ಲಿ ಆಶ್ಚರ್ಯವಿಲ್ಲ - ಯುಧಿಷ್ಠಿರನ ತೇಜಸ್ಸಿನಿಂದ ಧೃತರಾಷ್ಟ್ರ ಚೇತರಿಸಿಕೊಂಡಂತೆ!

ನೀವೇನಂತೀರಿ? ತಿಳಿಸಿ. ವಿಳಾಸ srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more