ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುದ್ದೀಪ ಸಂಶೋಧಕ ಥೊಮಸ್‌ ಎಡಿಸನ್‌ ಅಲ್ವಾ?

By Staff
|
Google Oneindia Kannada News


Did Thomas Alva Edison invent the Electric Bulb? ‘ಎಡಿಸನ್‌ ಏಂಡ್‌ ಸ್ವಾನ್‌ ಯುನೈಟೆಡ್‌ ಎಲೆಕ್ಟ್ರಿಕ್‌ ಕಂಪೆನಿ’ ಹುಟ್ಟಿಕೊಂಡಿತು. ಶಿಕ್ಷೆಗಾಗಿ, ಪಾಲುದಾರನಾಗಿ ಸೇರಿಕೊಂಡ ಎಡಿಸನ್‌ ಮುಂದೆ ಕ್ರಮೇಣ ಆ ಕಂಪೆನಿಯ ಸಂಪೂರ್ಣ ಮಾಲಿಕತ್ವವನ್ನು ತಾನೇ ವಹಿಸಿಕೊಂಡ. ಇವತ್ತು ‘ಜನರಲ್‌ ಎಲೆಕ್ಟ್ರಿಕ್‌’ (GE) ಎಂಬ ಹೆಸರಿನ ಬಹುಉತ್ಪನ್ನ ಬಹುರಾಷ್ಟ್ರೀಯ ದೈತ್ಯಕಂಪೆನಿಯಿದೆಯಲ್ಲ, ಅದೇ ಮೂಲತಃ ಸ್ವಾನ್‌-ಎಡಿಸನ್‌ ಪಾಲುದಾರಿಕೆಯ ಕಂಪೆನಿ!

ಅಮೆರಿಕದಲ್ಲಿ ಎಡಿಸನ್‌ಗೆ ದುಡ್ಡು ದೌಲತ್ತು ಎಲ್ಲ ಸಿಕ್ಕಿತಾದರೂ ಎಲೆಕ್ಟ್ರಿಕ್‌ ಬಲ್ಬ್‌ನ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದಾಗ ಒಂದು ತೊಡಕಾಯಿತು. ಎಡಿಸನ್‌ನ ಪ್ರಯೋಗಗಳು ಇನ್ನೊಬ್ಬ ಅಮೆರಿಕದವನೇ ಆದ ವಿಲಿಯಂ ಸಾಯರ್‌ ಎಂಬುವವನ ಕಲ್ಪನೆಗಳಿಂದ ಪ್ರೇರಿತವಾದದ್ದು ಎಂದು ಪೇಟೆಂಟಿಂಗ್‌ ಪ್ರಾಧಿಕಾರವು ಎಡಿಸನ್‌ನ ಅರ್ಜಿಯನ್ನು ತಿರಸ್ಕರಿಸಿದುವು. ಬಹುಶಃ ಆಗಲೇ ಎಡಿಸನ್‌ಗೆ ಜ್ಞಾನೋದಯವಾದದ್ದು - ಮೇಧಾವಿತನವೆಂದರೆ 99% ಬೆವರು ಮತ್ತು 1% ಸ್ಪೂರ್ತಿ ಎಂಬ ಕಟುಸತ್ಯ. ಹಾಗೆಯೇ, ‘‘ಒಂದು ಬಲ್ಬನ್ನು ಬದಲಿಸಲು ಎಷ್ಟು ಜನ ‘ಇಂಥವರು’ ಬೇಕು?...’’ ಸರಣಿಯ ಪ್ರಖ್ಯಾತ ಜೋಕ್‌ಗಳಂತೆಯೇ ‘‘ಒಂದು ಬಲ್ಬನ್ನು ಆವಿಷ್ಕರಿಸಲು ಮತ್ತು ಸಂಶೋಧಿಸಲು ಎಷ್ಟು ಜನ ವಿಜ್ಞಾನಿಗಳು ಬೇಕು?’’

ಇಷ್ಟೆಲ್ಲ ಆದರೂ ಎಲೆಕ್ಟ್ರಿಕ್‌ ಬಲ್ಬ್‌ನ ಜತೆಗೆ ಇವತ್ತಿಗೂ ಥೊಮಸ್‌ ಆಲ್ವಾ ಎಡಿಸನ್‌ನ ಹೆಸರಷ್ಟೇ ತಳಕುಹಾಕಿಕೊಂಡಿರುವುದಕ್ಕೆ ಏಕೈಕ ಕಾರಣವೆಂದರೆ ಜನರಲ್‌ ಎಲೆಕ್ಟ್ರಿಕ್‌ ಕಂಪೆನಿಯು ಬೆಳೆದುಬಂದ ರೀತಿ. ಅದಲ್ಲದೇ ವಿದ್ಯುಚ್ಛಕ್ತಿಯೇ ಇಲ್ಲದಿದ್ದರೆ ವಿದ್ಯುದ್ದೀಪದ ವಿಶೇಷವಾದರೂ ಏನು?

ಈಗ ಎಡಿಸನ್‌ನ ಬಲ್ಬನ್ನು ಒಮ್ಮೆ ಸ್ವಿಚ್‌ ಆಫ್‌ ಮಾಡಿ ವಿದ್ಯುಚ್ಛಕ್ತಿಯ ಬಗ್ಗೆ ಸ್ವಲ್ಪ ಬೆಳಕನ್ನು ಹರಿಸೋಣ.

ವಿದ್ಯುಚ್ಛಕ್ತಿಯ ಹರಿವು ನೇರಪ್ರವಾಹ (Direct Current) ಮತ್ತು ಪರ್ಯಾಯಪ್ರವಾಹ (Alternating Currnet) - ಈ ಎರಡು ವಿಧಗಳಲ್ಲಿ ಇರುತ್ತದೆ ಎಂದು ನಾವೆಲ್ಲ ಹೈಸ್ಕೂಲ್‌ನಲ್ಲೇ ಕಲಿತಿರುತ್ತೇವೆ. ಎಲೆಕ್ಟ್ರಿಕ್‌ ಬಲ್ಬ್‌ನಿಂದ ಮತ್ತು ಜನರಲ್‌ ಎಲೆಕ್ಟ್ರಿಕ್‌ ಕಂಪೆನಿಯಿಂದ ಇಷ್ಟೊಂದು ಖ್ಯಾತಿ ಗಳಿಸಿದ ಎಡಿಸನ್‌ಗೆ ಗೊತ್ತಿದ್ದದ್ದು ನೇರಪ್ರವಾಹದ ವಿದ್ಯುಚ್ಛಕ್ತಿ ಮಾತ್ರ. ನಿಕೊಲಾ ಟೆಲ್ಸಾ ಎಂಬ ಹೇಳಹೆಸರಿಲ್ಲದ ವಿಜ್ಞಾನಿಯು ಜಾರ್ಜ್‌ ವೆಸ್ಟಿಂಗೌಸ್‌ ಎಂಬುವವನೊಂದಿಗೆ ಸೇರಿ ಪರ್ಯಾಯಪ್ರವಾಹದ ವಿದ್ಯುಚ್ಛಕ್ತಿಯ ಬಗ್ಗೆ ಪ್ರಚುರಪಡಿಸಲು ಮುಂದಾದಾಗ, ನಯಾಗರಾ ಜಲಪಾತದಲ್ಲಿ ಮೊಟ್ಟಮೊದಲ ಜಲವಿದ್ಯುತ್‌ ಉತ್ಪಾದನಾ ಯಂತ್ರವನ್ನು ಸ್ಥಾಪಿಸಿ ರಾಷ್ಟ್ರದ ಗಮನ ಸೆಳೆದಾಗ ಅದನ್ನು ಮೂದಲಿಸಿದ ಮಹಾನುಭಾವ ಎಡಿಸನ್‌ ದ ಗ್ರೇಟ್‌.

ಈ ಎಸಿ-ಡಿಸಿ ಜಟಾಪಟಿಯದೂ ಒಂದು ರೋಚಕ ಕಥೆಯಿದೆ. ನ್ಯೂಯಾರ್ಕ್‌ ಸಂಸ್ಥಾನದಲ್ಲಿ, ಮರಣದಂಡನೆಯನ್ನು ಅತಿಕಡಿಮೆ ನೋವಿನ ರೀತಿಯಲ್ಲಿರುವಂತೆ ಮಾಡುವ ವಿಧಾನದ ಹುಡುಕಾಟ ನಡೆದಿತ್ತು. ‘ವಿದ್ಯುತ್‌ಕುರ್ಚಿ’ ಅದಕ್ಕೆ ಸೂಕ್ತ ಎನ್ನುವ ಅಭಿಪ್ರಾಯ ಕೇಳಿಬರತೊಡಗಿತ್ತು. ಡಿಸಿ ತಂತ್ರಜ್ಞಾನವನ್ನು ಬಳಸಿದ ವಿದ್ಯುತ್‌ಕುರ್ಚಿಯನ್ನು ಎಡಿಸನ್‌ ತಯಾರಿಸಿದರೆ ಅವನ ಪ್ರತಿಸ್ಪರ್ಧಿ ವೆಸ್ಟಿಂಗೌಸ್‌ ಎಸಿ ತಂತ್ರಜ್ಞಾನದ ಕುರ್ಚಿ ರಚಿಸಿದ. ತಾನು ರಚಿಸಿದ ಡಿಸಿ ಕುರ್ಚಿಯೇ ನೋವುರಹಿತ ಮರಣದಂಡನೆಗೆ ಪ್ರಶಸ್ತವೆಂದು ಎಡಿಸನ್‌ ಪ್ರಚಾರಮಾಡಿರಬಹುದು ಎಂದುಕೊಂಡರೆ ನಾವು ತಪ್ಪುತಿಳಿದಂತಾಗುತ್ತದೆ. ವಾಸ್ತವವಾಗಿ ಎಡಿಸನ್‌ ಬೇಕಂತಲೇ ವೆಸ್ಟಿಂಗೌಸ್‌ನ ಎಸಿ ಕುರ್ಚಿಯೇ ಆ ಉಪಯೋಗಕ್ಕೆ ಒಳ್ಳೆಯದು ಎಂದು ಪ್ರಚಾರಮಾಡಿದ!

ಯಾಕಿರಬಹುದು? ಡಿಸಿ ತಂತ್ರಜ್ಞಾನದಲ್ಲಿ (ಮರಣಕುರ್ಚಿಯ ರಚನೆಗಷ್ಟೆ ಅಲ್ಲ, ಬೇರೆ ಉಪಯೋಗಗಳಿಗೂ) ಅಷ್ಟೊಂದು ಬಂಡವಾಳ ತೊಡಗಿಸಿದ್ದ ಎಡಿಸನ್‌ಗೆ, ಡಿಸಿ ತಂತ್ರಜ್ಞಾನವು ಅಪಾಯರಹಿತವಾದುದು, ಎಸಿ ತಂತ್ರಜ್ಞಾನವು ಜೀವಹಾನಿಯಾಗುವಂಥದ್ದು ಎಂದು ಪ್ರಚಾರಮಾಡಲು ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಸಿಕ್ಕೀತೇ? ನೆನಪಿರಲಿ, ಎಡಿಸನ್‌ ಬರೀ ವಿಜ್ಞಾನಿಯಷ್ಟೇ ಆಗಿರದೆ ಒಬ್ಬ ಚತುರ ಉದ್ಯಮಿಯೂ ಆಗಿದ್ದ!

ಕೊನೆಗೂ ನ್ಯೂಯಾರ್ಕ್‌ ಸಂಸ್ಥಾನದಲ್ಲಿ ಅಪರಾಧಿಯಾಬ್ಬನನ್ನು ಮರಣದಂಡನೆಗೆ ಗುರಿಪಡಿಸಿದ ಒಂದು ಕೇಸ್‌ನಲ್ಲಿ ವೆಸ್ಟಿಂಗೌಸ್‌ನ ಎಸಿ ವಿದ್ಯುತ್‌ಕುರ್ಚಿಯನ್ನೇ ಬಳಸಲಾಯಿತು. ಆದರೆ ಬಹುಶಃ ಆ ಕ್ಷಣದಲ್ಲಿ ಸಾವು ಆ ಅಪರಾಧಿಯ ಹಣೆಯಲ್ಲಿ ಬರೆದಿರಲಿಲ್ಲವೆಂದು ತೋರುತ್ತದೆ, ಕುರ್ಚಿ ಟೆಕ್ನಾಲಜಿ ಕೈಕೊಟ್ಟು ಟುಸ್ಸೆಂದಿತು! ಹೇಳಿಕೇಳಿ ಅದು ಮರಣಕುರ್ಚಿ, ಅದನ್ನು ಮೊದಲು ಯಶಸ್ವಿಪರೀಕ್ಷೆಗೆ ಗುರಿಪಡಿಸುವುದಾದರೂ ಹೇಗೆ? ಎಡಿಸನ್‌ ಮತ್ತು ವೆಸ್ಟಿಂಗೌಸ್‌ ಇಬ್ಬರೂ ತಂತಮ್ಮ ಹಣೆಚಚ್ಚಿಕೊಂಡರು.

ಕ್ರಮೇಣ ಎಸಿ ತಂತ್ರಜ್ಞಾನವೇ ಮರಣಕುರ್ಚಿಗಷ್ಟೇ ಅಲ್ಲದೆ ಗೃಹೋಪಯೋಗದ ವಿದ್ಯುತ್ತಿಗೂ ಒಳ್ಳೆಯದು ಎಂದು ಎಲ್ಲರಿಗೂ ಮನವರಿಕೆಯಾಯಿತು. ಪ್ರಪಂಚದಾದ್ಯಂತ ಪರ್ಯಾಯಪ್ರವಾಹದ ವಿದ್ಯುತ್ತೇ ಹರಿಯತೊಡಗಿದುದರಿಂದ ಎಡಿಸನ್‌ ಸಹ ಡಿಸಿ ಟೆಕ್ನಾಲಜಿಗೆ ವಿದಾಯ ಹೇಳಿ ಎಸಿ ವಿದ್ಯುತ್‌ ಬಳಸುವ ಬಲ್ಬುಗಳನ್ನೂ ಇತರ ಸಲಕರಣೆಗಳನ್ನೂ ತನ್ನ ಕಂಪೆನಿಯಲ್ಲಿ ಉತ್ಪಾದಿಸತೊಡಗಿದ. ವಿದ್ಯುತ್‌ ಬಲ್ಬ್‌ ಒಂದೇ ಅಲ್ಲದೇ ಫೊನೊಗ್ರಾಫ್‌ ಮೊದಲಾದ ವಿವಿಧ ಉಪಕರಣಗಳನ್ನು ಆವಿಷ್ಕರಿಸಿ (ಇಲ್ಲವೇ ಸಂಶೋಧಿಸಿ) ಒಟ್ಟು 1093 ಪೇಟೆಂಟ್‌ಗಳನ್ನು ತನ್ನದಾಗಿಸಿಕೊಂಡ ಮಹಾಮೇಧಾವಿ ಥೊಮಸ್‌ ಆಲ್ವಾ ಎಡಿಸನ್‌!

ಹೀಗೆ ಸದಾ ಸುದ್ದಿಯ ಬೆಳಕಿನಲ್ಲಿದ್ದ ಎಡಿಸನ್‌ನ ಹೆಸರೇ ಅವನ ಪ್ರಯೋಗಶಾಲೆಯಿದ್ದ ನ್ಯೂಜೆರ್ಸಿ ಸಂಸ್ಥಾನದ ನಗರವೊಂದಕ್ಕೆ ಬಂದಿರುವುದು - ‘ಎಡಿಸನ್‌’ ಎಂದು.

- [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X