ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳಿವಂತೆಯರ ಪತ್ರಾಂತರಂಗತಾಳಿ..., ಇವರೆಲ್ಲ ಏನಂತಾರೆ ಅನ್ನೋದನ್ನೂ ಕೇಳಿ!

By Staff
|
Google Oneindia Kannada News


ಮಂಗಳಸೂತ್ರ/ಕರಿಮಣಿ ಲೇಖನ ಒಂದು ಅವಶ್ಯವಾದ ಲೇಖನವಾಗಿ, ಮಾನಿನಿಯರಿಗೆ ಸಿಹಿ ನೆನಪುಗಳನ್ನು (ಸಿಹಿ ಅಥವಾ ಕಹಿ) ತಂದು ಕೊಟ್ಟಿದೆ ಎಂದರೆ ಸುಳ್ಳಾಗುವುದಿಲ್ಲ. ನಿಮಗೆ ಧನ್ಯವಾಧಗಳು! ನನಗೆ ನಿಮ್ಮ ಲೇಖನ ಓದಿದಾಗ ಎರಡು ಹಾಡುಗಳು ನೆನಪಿಗೆ ಬಂದವು. ಮೊದಲನೆಯದು, ನಮ್ಮ ಕನ್ನಡಿಗರೆಲ್ಲರ ಮನ ಮೆಚ್ಚಿದ ಹಾಡು - ‘‘ಶುಭಮಂಗಳ...ಸುಮುಹೂರ್ತವೇ...’’ - ಈ ಹಾಡು ಯಾರ ಬಾಯಲ್ಲಿ ಬಂದಿಲ್ಲ ಹೇಳಿ, ಇದೊಂದು ಶುಭವೇ ಅಲ್ಲವೇ?

ಸುವಾಸಿನಿಯರಿಗೆ ಶುರುವಿನಲ್ಲಿ ಎಲ್ಲವೂ ಶುಭವೇ, ಆದರೆ ಕಾಲಕ್ರಮೇಣ ನತದೃಷ್ಟರಿಗೆ ಸನ್ಮಂಗಳವು ಸದಾ ಹಸಿರಾಗೇ ಇರುವುದಿಲ್ಲ. ಅದನ್ನು ಬಲ್ಲವರ್ಯಾರು? ಎರಡನೇ ಹಾಡು ಒಂದು ಜನಪದ ಪದ್ಯ. ನಾನು ಸಣ್ಣವಳಿದ್ದಾಗ ದೊಂಬರಾಟದವರು ಮತ್ತು ಭಿಕ್ಷೆಬೇಡಲು ಬರುವ ಹೆಂಗಸರು ಪುಟ್ಟ ಹೆಣ್ಣುಮಕ್ಕಳ ಸೌಂದರ್ಯವನ್ನು ನೋಡಿ, ಒಂದಲ್ಲಾ ಒಂದು ದಿನ ಈ ಮಗು ದೊಡ್ಡದಾಗಿ ಬೆಳೆದು, ಸೀರೆ ಉಟ್ಟುಕೊಂಡು ಮದುಮಗಳಾಗಿ ಗಂಡನ ಜೊತೆಯಲಿ ಹೋಗುತ್ತಾಳೆ... ಎಂದು ಸಂಕೇತಿಸುವ ಪದ್ಯವದು. ಹೀಗಿದೆ.

ಸಣ್ಣಕ್ಕಿ ಸಣ್ಣ ಗುಲಗಂಜಿ ಬಣ್ಣ
ಕರಿಸೀರೆ ಉಡಿಸಿ ಬಿಳಿ ರೌಕೆ ತೊಡಿಸಿ
ಕರಿಮಣಿ ಪೋಣಿಸಿ ಮಾಂಗಲ್ಯ ಕಟ್ಟಿಸಿ
ಆನೆಮೇಲೆ ಕೂರಿಸಿ ಅಂಬಾರಿ ಮಾಡಿಸಿ ಕಳಿಸ್ಬಹುದಣ್ಣ...

ಇನ್ನೊಂದು ತಮಾಷೆ ಎಂದರೆ, ನಾನು ‘ಸಪ್ತಪದಿ’ ವಿಷಯವನ್ನು ನನ್ನ ಅಮೆರಿಕನ್‌ ಗೆಳತಿಗೆ ಹೇಳುವಾಗ, ನನ್ನ ಗೆಳತಿ ಜಿಲ್‌ ಕೇಳಿದಳು - ‘‘ನೀವು ಧರ್ಮೇಚ, ಕಾಮೇಚ, ಅರ್ಥೇಚ ಹೇಳುವಾಗ ಸೈಕೇಚ (ಸೈಕಲಾಜಿಕಲ್‌ ಇಶ್ಯೂಸ್‌)ನೂ ಹೇಳುತ್ತೀರಾ?’’ ಎಂದು. ಅದಕ್ಕೆ ನಾನು ‘‘ನನಗನಿಸಿದ ಹಾಗೆ ಧರ್ಮೇಚ ಕವರ್ಸ್‌ ಎ ವೈಡ್‌ ವೆರೈಟಿ ಆಫ‚್‌ ಥಿಂಗ್ಸ್‌’’ ಅಂತ ಹೇಳಿದೆ. ಅದಕ್ಕೇ ಇರಬೇಕು ‘‘ನಿಮ್ಮ ದೇಶದಲ್ಲಿ ಅಮೇರಿಕಾದಷ್ಟು ಡೈವೊರ್ಸ್‌ ಇಲ್ಲ’’ ಎಂದಳು.

- ಡಾ. ಮೀನಾ ಸುಬ್ಬರಾವ್‌; ಕ್ಯಾಲಿಫ‚ೋರ್ನಿಯಾ

*

ಕರಿಮಣಿಯ ಹಾಗೆ ಇನ್ನೊಂದು ಭಾವನಾತ್ಮಕ ಒಡವೆಯ ಬಗ್ಗೆ ಹೇಳಲು ಮರೆತಿದ್ದೀರಿ. ಅದೇ ಕಾಲುಂಗುರ. ನಾನು ಅಮೆರಿಕದಲ್ಲಿ ಇದ್ದಾಗ, ಒಬ್ಬಳು ನನ್ನ ಎರಡೂ ಕಾಲುಂಗುರ ನೋಡಿ ಅದರ ಮಹತ್ವ ಕೇಳಿದ್ದಳು. ನಿಮಗೆ ಗೊತ್ತೇ ಇರುವಂತೆ ಕಾಲುಂಗುರವನ್ನು ಸಪ್ತಪದಿಯಲ್ಲಿ ತೊಡಿಸುತ್ತಾರೆ. ಕರಿಮಣಿ ತೊಡುವ ವಿಷಯದಲ್ಲಿ ನನಗೆ ಅರ್ಥವಾಗದಿರುವುದು ಎಂದರೆ ಅದು ಕಪ್ಪುಬಣ್ಣದ್ದಾಗಿದ್ದೂ ಪಾವಿತ್ರ್ಯವನ್ನು ಪಡೆದಿರುವುದು! ಗೌರಿಬಳೆಯೂ ಅದೇ ಥರ. ಆದರೆ ಎಷ್ಟೋ ಸಲ ಸಮಾರಂಭಗಳಿಗೆ ಕಪ್ಪುಸೀರೆ ಉಡುವಂತಿಲ್ಲ, ಕಪ್ಪು ಬಿಂದಿ ಹಚ್ಚಿಕೊಳ್ಳುವಂತಿಲ್ಲ... ಅದು ಅಪಶಕುನವಂತೆ! ಈ ಬಗ್ಗೆ ಮುಂದೆಂದಾದರೂ ಒಂದು ಲೇಖನದಲ್ಲಿ ಬೆಳಕು ಚೆಲ್ಲುತ್ತೀರಾ?

- ಸರಸ್ವತಿ ವಟ್ಟಮ್‌; ಬೆಂಗಳೂರು

*

ಮಂಗಲಸೂತ್ರದ ಲೇಖನ ತೀರಾ ಸಾಧರಣವಾಗಿ ಬಂದಿದೆ. ಇನ್ನೂ ಚೆನ್ನಾಗಿ ವಿವರಣೆ ಅದರ ವೈಶಿಷ್ಟ್ಯ ಇವನ್ನೆಲ್ಲ ನೀಡಬಹುದಿತ್ತು ಅನ್ನಿಸುತ್ತೆ. ಏಕೆಂದರೆ ನಿಮ್ಮ ಅನೇಕ ಒಳ್ಳೆಯ ಬರಹಗಳನ್ನು ಓದಿರುವುದರಿಂದ ಇದು ಅಷ್ಟು ಚೆನ್ನಾಗಿ ಮೂಡಿಬಂದಿಲ್ಲ ಅಂತ ನನ್ನ ಅನಿಸಿಕೆ.

ನಾನು ಬೆಂಗಳೂರಿನಲ್ಲಿ ನೆಲೆಸಿರುವ ಐಯಂಗಾರ್‌ ಕುಟುಂಬದವಳು. ನಮ್ಮಲ್ಲಿ ಮದುವೆಗೆ ಮುಂಚೆ ತಾಯಿ/ಸೋದರಮಾವ ಒಂದು ತಾಳಿ ಕಟ್ಟುವರು. ನಂತರ ಧಾರೆ ಸಮಯದಲ್ಲಿ ಮದುವೆಗಂಡು ಇನ್ನೊಂದು ತಾಲಿ ಕಟ್ಟುವರು. ನಾವು ತಾಳಿಯನ್ನು ಹೊರಗೆ ಕಾಣಿಸುವ ರೀತಿ ಹಾಕಿಕೊಂಡರೆ ತಪ್ಪಿಲ್ಲ. ಆದರೆ ಆಂಧ್ರ/ತಮಿಳ್ನಾಡಿನವರು ಅದನ್ನು ಮುಚ್ಚಿಟ್ಟುಕೊಳ್ತಾರೆ. ಇದರ ಕಾರಣ ಏನೂಂತ ಗೊತ್ತಿಲ್ಲ.

- ವೀಣಾ ಟಿ. ಎಸ್‌.; ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X