• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಳಿವಂತೆಯರ ಪತ್ರಾಂತರಂಗತಾಳಿ..., ಇವರೆಲ್ಲ ಏನಂತಾರೆ ಅನ್ನೋದನ್ನೂ ಕೇಳಿ!

By Staff
|

ಕರಿಮಣಿಯ ಬಗ್ಗೆ ಬರೆದ ಲೇಖನ ಓದಿದೆ. ನಮ್ಮ ಕಡೆ ಮದುವೆಯಲ್ಲಿ ಹೆಣ್ಣಿನ ಕಡೆಯವರ ತಾಳಿ ಹಾಗೂ ಬಂಗಾರದ ಕರಿಮಣಿಯನ್ನು ಹುಡುಗಿ ಮದುವೆ ಮಂಟಪಕ್ಕೆ ಬರುವ ಮೊದಲೇ ಮದುಮಗಳಿಗೆ ತೊಡಿಸುತ್ತಾರೆ. ಗಂಡಿನ ಕಡೆಯ ತಾಳಿಯನ್ನು ಅರಿಶಿನ ದಾರದಲ್ಲಿ ಪೋಣಿಸಿದ ಕರಿಮಣಿ ಸರಕ್ಕೆ ಹಾಕಿ, ಮಾಂಗಲ್ಯಧಾರಣೆಯ ಸಂದರ್ಭದಲ್ಲಿ ಗಂಡು ಹೆಣ್ಣಿಗೆ ತೊಡಿಸುತ್ತಾನೆ. ಮದುವೆಯ ನಂತರ ಆ ತಾಳಿಯನ್ನು ಬಂಗಾರದ ಕರಿಮಣಿಯ ಇನ್ನೊಂದು ತಾಳಿಯಾಂದಿಗೆ ಜೋಡಿಸುತ್ತಾರೆ.

ಕರಿಮಣಿಯಾಂದಿಗೆ ‘ಅರಿಮಣಿ’ಯನ್ನು ಗಂಡಿನ ಕಡೆಯವರು ವಧುವಿಗೆ ಹಾಕುವ ಬಗ್ಗೆ ಕೇಳಿದ್ದೀರಾ? ಅರಿಮಣಿಯು ಸಾಮಾನ್ಯವಾಗಿ ಚಿನ್ನದ ಗುಂಡುಗಳಿಂದ ಕೂಡಿದ್ದು ಅದಕ್ಕೆ ಅಶ್ವತ್ಥ ಎಲೆಯಾಕಾರದ ಪದಕದ ಮಧ್ಯೆ ಹುದುಗಿಸಿದ ತಾಳಿಯನ್ನು ಹಾಕುತ್ತಾರೆ. ಕರಿಮಣಿಯಾಂದಿಗೆ ಅರಿಮಣಿಯನ್ನೂ ಧರಿಸುವುದು ಸಂಪ್ರದಾಯ. ಈಗ ಸಮಾರಂಭಗಳಿಗೆ ಹೋಗುವಾಗ ಮಾತ್ರ ಅದನ್ನು ಹಾಕಿಕೊಂಡರೆ, ನಿತ್ಯದಲ್ಲಿ ತೆಗೆದಿಡುತ್ತಾರೆ.

ನ್ಯೂಜಿಲೇಂಡಿಗೆ ಬಂದ ಮೇಲೆ ಇಲ್ಲಿಯ ಮಾಡರ್ನ್‌ ಡ್ರೆಸ್‌ಗೆ ಅದು ಸೂಟ್‌ ಆಗುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚಿನವರು ಕರಿಮಣಿಯನ್ನೂ ತೆಗೆದಿಡುತ್ತಾರೆ. ಭಾರತೀಯ ಸಮಾರಂಭಗಳಿಗೆ ಹೋಗುವಾಗ ಸೀರೆ ಯಾ ಚೂಡಿದಾರ್‌ ಧರಿಸುವಾಗ ಬೇರೆ ಆಭರಣಗಳೊಂದಿಗೆ ಕರಿಮಣಿಯನ್ನೂ ಧರಿಸುತ್ತಾರೆ. ಇನ್ನು ಕೆಲವರು ಪುಟ್ಟ ಚೈನಿಗೆ ಒಂದು ತಾಳಿ ಹಾಕಿಕೊಂಡು ನಿತ್ಯದಲ್ಲಿ ಉಪಯೋಗಿಸುತ್ತಾರೆ. ನಾನು ಭಾರತದಲ್ಲಿರುವಾಗಲೂ ವೆಸ್ಟರ್ನ್‌ ಡ್ರೆಸ್‌ ಜೊತೆಗೆ ಪುಟ್ಟ ಕರಿಮಣಿ ಧರಿಸಿ ಅಭ್ಯಾಸವಾಗಿದ್ದ ಕಾರಣ ಅದೇ ಅಭ್ಯಾಸವನ್ನು ಇಲ್ಲೂ ಮುಂದುವರಿಸಿದ್ದೇನೆ.

- ಮೃಣಾಲಿನಿ ಕುಮಾರ್‌; ನ್ಯೂಜಿಲೇಂಡ್‌

*

ಮಹಿಳೆಯರ ದಿನಾಚರಣೆಗೆ ಕೊಟ್ಟಿರುವ ಬಹುಮಾನಕ್ಕಾಗಿ ಧನ್ಯವಾದಗಳು. ಕರಿಮಣಿಗೂ, ನಾರಿಮಣಿಗೂ ನಂಟು ಇತ್ತು. ಆದರೆ, ಈಗಿನ ದಿನಗಳಲ್ಲಿ ಕಾಣೆಯಾಗಿದೆ. ಅದು ಹೆಣ್ಣಿಗೆ ಗಂಡನ ಮನೆ ಕಡೆಯಿಂದ ಬಂದದ್ದಾದ್ದರಿಂದ, ಹೊಸ ಮಾದರಿಯದಲ್ಲವೆಂದೋ, ಹಾಕಿರುವ ಉಡುಪಿಗೆ ಹೊಂದುವುದಿಲ್ಲವೆಂದೋ, ಯಾವಾಗಲೂ ಯಾಕೆ ಒಂದೇ ಸರವನ್ನು ಧರಿಸಿರಬೇಕೆಂದೋ ನಾನಾ ವಿಧದ ಕಾರಣಗಳಿಗಾಗಿ ಹಾಕುವುದಿಲ್ಲ.

ಒಮ್ಮೆ ಗೆಳತಿ ಒಬ್ಬಳು, ಯಾವಾಗಲೂ ಸರ ಕತ್ತಿನ ಮೇಲಿದ್ದರೆ, ಕತ್ತಿನ ಸುತ್ತ ಚರ್ಮದ ಬಣ್ಣ ಬದಲಾಗುವುದೆಂದೂ, ಸಣ್ಣಸಣ್ಣ ಗಂಟುಗಳಾಗುವುದೆಂದೂ ಸರವನ್ನು ಯಾವಾಗಲೂ ಹಾಕಬಾರದೆಂದು ಸಲಹೆ ಇತ್ತಳು. ವೈದ್ಯ ಬಳಿ ಹೋಗಿದ್ದಾಗ, ಅವರನ್ನು ವಿಚಾರಿಸಿದಾಗ ಸರವನ್ನು ಯಾವಾಗಲೂ ಹಾಕಿದ್ದರೆ ವೈಜ್ಞಾನಿಕವಾಗಿ ಯಾವರೀತಿಯ ತೊಂದರೆಗಳಾಗುವುದೇನೂ ಇಲ್ಲವೆಂದು ತಿಳಿಸಿದರು. ಯಾವುದೊಂದನ್ನೂ, ಯೋಚನೆ ಮಾಡದೆ ಕಾರಣ ಹುಡುಕಿ ಇದನ್ನು ಯಾಕೆ ಮಾಡಬೇಕೆಂದು ಕೇಳುವ ಕಾಲ. ಮೊದಲಿಗೆ, ಮದುವೆಯ ಸಂಕೇತ, ಗುರು ಹಿರಿಯರು ಆಶೀರ್ವಾದ ಮಾಡಿ ಕಟ್ಟಿರುವ ಪವಿತ್ರ ಬಂಧನ ಮದುವೆ ಎಂದರೆ ಕೇಳುತ್ತಿದ್ದ ಕಾಲ. ಈಗ ಅದು ಅಲಂಕಾರಕ್ಕೆ ಉಪಯೋಗಿಸುವ ವಸ್ತು.

ಗಂಡನನ್ನು ಕಟ್ಟಿಕೊಂಡಿದ್ದೀವಲ್ಲ, ತಾಳಿ ಕಟ್ಟಿಕೊಂಡಿರದಿದ್ದರೆ ಅದನ್ನೇ ಒಂದು ಪದಕದ ಮಾದರಿಯಲ್ಲಿ ಬರೀ ಚಿನ್ನದ ಸರಕ್ಕೆ ಹಾಕಿಕೊಂಡವರಿದ್ದಾರೆ. ತಾಳಿ ಅಂದರೆ ನಾಯಿಗೆ ಹಾಕುವ ಕತ್ತಿನ ಪಟ್ಟಿಯಲ್ಲ ಅನ್ನುವವರಿದ್ದಾರೆ. ತಾಳಿದವನು ಬಾಳಿಯಾನು ಎಂದು ತಪ್ಪು ಗಾದೆ ಹುಟ್ಟಿರಬಹುದು. ತಾಳಿ ಕಟ್ಟಿಸಿ ಕೊಂಡವಳ ತಾಳ್ಮೆ ಪರೀಕ್ಷಿಸಲಾಗುವುದು, ಅದನ್ನು ಕಟ್ಟಿದವನದಲ್ಲ. ಹೆಣ್ಣುಮಕ್ಕಳಿಗೆ ತಾಳ್ಮೆ ಇರಬೇಕು, ಗಂಡು ಎಷ್ಟು ಬೇಕಾದರೂ ಕಿರುಚಾಡಬಹುದು ಅಂತ ಹೇಳುವುದು ವಾಡಿಕೆ. ಮನೆಯ ಗುಟ್ಟು ರಟ್ಟಾಗದಿರಲು ಬಿಸಿ ತುಪ್ಪವಾದರೂ ಸರಿ, ಸಹಿಸಿಕೊಂಡು ಬಾಳ ಸಂಗಾತಿಯಾಗಿ ಬಾಳಬೇಕಾಗುವುದು.

- ಆನುರಾಧಾ ಅರುಣ್‌; ಚಿಕಾಗೊ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more