• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೋ ಲೆಕ್ಕ ಬಿಡಿಸು, ಇಲ್ಲವೇ ಹಾಳೆ ಮಡಿಸು!

By Staff
|

ಒಂದು ಕಾಗದವನ್ನು 7ಸಲಕ್ಕಿಂತ ಜಾಸ್ತಿ ಸಲ ಮಡಿಸಲು ಸಾಧ್ಯವಿಲ್ಲ ಎಂಬುದು ಒಂದು ಥಿಯರಿ. ಆ ಥಿಯರಿ ಸುಳ್ಳು ಮಾಡಿ, 12 ಸಲ ಮಡಿಸಿದ ಅಮೆರಿಕದ ಹೈಸ್ಕೂಲ್‌ ವಿದ್ಯಾರ್ಥಿನಿ ಬಗ್ಗೆ ವಿಚಿತ್ರಾನ್ನ-240ನೇ ಸಂಚಿಕೆಯಲ್ಲಿ ವಿವರ. ನಿಮಗೆ ಬಿಡುವಿದ್ದರೇ, ಕಾಗದ ಮಡಿಸಿ, ಹೊಸ ದಾಖಲೆ ಬರೆಯಬಹುದು! ಸಾಧನೆ ಯಾರಪ್ಪನ ಮನೆ ಗಂಟು?

  • ಶ್ರೀವತ್ಸ ಜೋಶಿ

How many times can you fold a paper into half?‘‘ವೊ ಕಾಗಜ‚್‌ ಕಿ ಕಷ್ತಿ... ವೊ ಬಾರಿಶ್‌ ಕಾ ಪಾನಿ... ಮುಝ್‌ಕೊ ಲೌಟಾದೊ ಬಚ್‌ಪನ್‌ ಕಾ ಸಾವನ್‌...’’

ಓಹ್‌ ಇಲ್ಲಇಲ್ಲ, ಜಗಜಿತ್‌ಸಿಂಗ್‌ ಹಾಡಿದ ಆ ಗಜಲ್‌ಅನ್ನು ನೆನಪಿಸಿ ಮತ್ತೊಮ್ಮೆ ನಿಮ್ಮನ್ನು ಬಾಲ್ಯದದಿನಗಳ ನೊಸ್ಟಾಲ್ಜಿಯಾಕ್ಕೆ ತಳ್ಳುವ ಉದ್ದೇಶವಿಲ್ಲ. ‘ಕಾಗಜ‚್‌ ಕಿ ಕಷ್ತಿ’ (ಕಾಗದದ ದೋಣಿ) ಮಾಡಿ ಅದರಲ್ಲೇ ನಿಮಗೆ ನೆನಪುಗಳ ನೌಕಾವಿಹಾರ ಮಾಡಿಸುವ ಇರಾದೆಯಿಲ್ಲ. ದೋಣಿ ಮಾಡಿ ಮಳೆನೀರಲ್ಲಿ ತೇಲಿಬಿಟ್ಟು ಸಂತಸಪಡುತ್ತಿದ್ದ, ವಿಮಾನ ಮಾಡಿ ಕ್ಲಾಸ್‌ನೊಳಗೆ ಮೇಷ್ಟ್ರು ಪಾಠ ಮಾಡುತ್ತಿರುವಾಗಲೇ ಹಾರಿಸಿ ಮೋಜುಮಾಡುತ್ತಿದ್ದ ಅಥವಾ ಒರಿಗೆಮಿ ಪೇಪರ್‌ಫೋಲ್ಡಿಂಗ್‌ ಆರ್ಟ್‌ ಕಲಿಯುತ್ತಿದ್ದ ದಿನಗಳ ನೆನಪು ಅಮೂಲ್ಯವೇನೋ ಹೌದು. ಆದರೆ ಇಲ್ಲೀಗ ನಾವು ಕಾಗದ ಮಡಿಸಿ ದೋಣಿ ವಿಮಾನ ರಾಕೆಟ್‌ ಮಾಡ್ಲಿಕ್ಕೆ ಹೊರಟಿಲ್ಲ. ಲೇಖನದ ಶೀರ್ಷಿಕೆ ಹಾಗಿದ್ದರೂ ಜಾಣ್ಮೆಲೆಕ್ಕ ಬಿಡಿಸುವ ಮಂಡೆಬಿಸಿಯೂ ಇಲ್ಲಿಲ್ಲ.

ವಿಷಯ ಏನಪ್ಪಾ ಅಂತಂದ್ರೆ, ಒಂದು ಕಾಗದದ ಹಾಳೆಯನ್ನು (ಎ4 ಸೈಜ್‌ನದು) ತಗೊಳ್ಳಿ. ಅದನ್ನೀಗ ಅರ್ಧಕ್ಕೆ ಮಡಚಿ. ಇನ್ನೊಮ್ಮೆ ಅದರರ್ಧಕ್ಕೆ. ಮತ್ತೊಮ್ಮೆ ಅದರರ್ಧಕ್ಕೆ. ಹಾಗೆಯೇ ಮುಂದುವರೆಸಿ. ಎಷ್ಟು ಸಲ ಮಡಚಿದಿರಿ? ಏಳಕ್ಕಿಂತ ಹೆಚ್ಚು ಸಲ ಮಡಚುವುದು ಆಗಲಿಲ್ಲ ಅಲ್ವಾ? ಬೇಕಿದ್ದರೆ ಎ4ಗಿಂತ ದೊಡ್ಡದಾದ, ನ್ಯೂಸ್‌ಪೇಪರ್‌ನ ಒಂದು ಇಡೀ ಹಾಳೆಯನ್ನೇ ತಗೊಂಡು ನಿಮ್ಮ ಪ್ರಯೋಗವನ್ನು ಪುನರಾವರ್ತಿಸಿ. ಅದಕ್ಕಿಂತಲೂ ದೊಡ್ಡದು ಅಂದರೆ ಫುಟ್‌ಬಾಲ್‌ ಮೈದಾನದಷ್ಟು ವಿಸ್ತಾರವಾದ ಹಾಳೆಯನ್ನು ಮಡಚುತ್ತೇನೆಂದು ಪ್ರಯತ್ನಿಸಿ.

ಊಹುಂ, ಏಳಕ್ಕಿಂತ ಹೆಚ್ಚುಸಲ, ಅಬ್ಬಬ್ಬಾ ಅಂದ್ರೆ ಎಂಟು ಸಲ, ಆಮೇಲೆ ಮಡಚುವುದು ಸಾಧ್ಯವೇ ಇಲ್ಲ!

ಅರೆರೆ! ಹೌದಲ್ವಾ ಈ ಸಂಗತಿ ನಮಗೆ ಗೊತ್ತೇ ಇರಲಿಲ್ಲ ಎನ್ನುತ್ತೀರಾ? "No matter its size or thickness, no piece of paper can be folded in half more than 7 times" ಎಂಬ ವಿಶ್ವಸ್ವೀಕೃತ ಸಿದ್ಧಾಂತಕ್ಕೆ ನಿಮ್ಮ ಸಮ್ಮತಿಯ ಮುದ್ರೆಯೂ ಇದೆಯೆನ್ನುತ್ತೀರಾ?

ಹೌದು, ಕಾಗದದಹಾಳೆ ಮಡಚುವುದೇನು ಮಹಾ ಎಂದುಕೊಳ್ಳಬಹುದಾದರೂ, ಮಾಡಿ ನೋಡುವಾಗ ಅದರ ಮಿತಿ ನಮಗೆ ಅರ್ಥವಾಗುತ್ತದೆ. ಏಳಕ್ಕಿಂತ ಹೆಚ್ಚು ಸಲ ಮಡಚಲಾಗದಿರುವುದಕ್ಕೆ, ಕಾಗದವನ್ನು ಮಡಚಿದಂತೆಲ್ಲ ಅದರ ದಪ್ಪ ಎರಡರ ಘಾತದಲ್ಲಿ ಹೆಚ್ಚುತ್ತ ಹೋಗುವುದೇ ಕಾರಣ. ಕಾಗದ ಮಡಚುವ ಸಮಸ್ಯೆ ನಾವಂದುಕೊಂಡದ್ದಕ್ಕಿಂತ ನಿಜಕ್ಕೂ ಎಷ್ಟು ಅಗಾಧವಾಗಿದೆಯೆಂದರೆ, ಯಾವುದೇ ವಿಸ್ತೀರ್ಣದ ಒಂದು ಕಾಗದದ ಹಾಳೆಯನ್ನು ಅರ್ಧಕ್ಕರ್ಧದಂತೆ ಮಡಚುತ್ತ ಹೋದರೆ 50 ಸಲ (ಸಾಧ್ಯವಾದರೆ!) ಮಡಚುವಾಗ ಅದರ ದಪ್ಪ ಎಷ್ಟಾಗಬಹುದು? ಹತ್ತಿಪ್ಪತ್ತು ಅಡಿ ಅಥವಾ ಮೀಟರ್‌ಗಳಷ್ಟು? ಅಲ್ಲ, 100 ಮಿಲಿಯ ಕಿಲೋಮೀಟರ್‌ಗಳಷ್ಟು! ಅಂದರೆ ಭೂಮಿಯಿಂದ ಸೂರ್ಯನಿಗಿರುವ ದೂರದ ಮೂರನೆ ಎರಡರಷ್ಟು! ಆದ್ದರಿಂದಲೇ, ಕಾಗದದ ಹಾಳೆಯನ್ನು ಏಳಕ್ಕಿಂತ ಹೆಚ್ಚು ಸಲ ಮಡಿಸಲಾಗದು ಎಂಬ ತರ್ಕಕ್ಕೆ ವಿಶ್ವಮಟ್ಟದ ಮಾನ್ಯತೆ ಇದೆ.

ಆದರೆ 2002ರಲ್ಲಿ ಅಮೆರಿಕದ ಒಬ್ಬ ಹೈಸ್ಕೂಲ್‌ ವಿದ್ಯಾರ್ಥಿನಿ ಅದನ್ನು ಸುಳ್ಳಾಗಿಸಿದಂದಿನಿಂದ ಆ ಮಾನ್ಯತೆ ಮುರಿದುಬಿದ್ದಿದೆ. ಬದಲಿಗೆ ಕಾಗದವನ್ನು 12 ಸಲ ಮಡಚಿದ ಮಾನ್ಯತೆ ಈಗ ಆ ಹುಡುಗಿಗೆ ಸಿಕ್ಕಿದೆ. ಬ್ರಿಟ್ನಿ ಗೆಲಿವಾನ್‌ ಎಂದು ಅವಳ ಹೆಸರು. ಆಕೆ ಕ್ಯಾಲಿಫ‚ೊರ್ನಿಯಾದಲ್ಲಿ ಲಾಸ್‌ಎಂಜಲಿಸ್‌ ಬಳಿಯ ಪೊಮೊನಾ ನಗರದ ನಿವಾಸಿ.

ಕಾಗದ ಮಡಚುವ ಚಾಲೆಂಜನ್ನು ಬ್ರಿಟ್ನಿ ಎತ್ತಿಕೊಂಡದ್ದೂ ಒಂದು ವಿಚಿತ್ರ ಸನ್ನಿವೇಶದಲ್ಲಿ. ಲೆಕ್ಕ ಎಂದರೆ ತಲೆನೋವು ಎನ್ನುತ್ತಿದ್ದ ಅವಳಿಗೆ ಅವಳ ಮ್ಯಾತ್‌ಟೀಚರ್‌ ಗಣಿತಪ್ರಶ್ನೆಗಳನ್ನು ಕೊಡುವಾಗೆಲ್ಲ ಏನಾದರೂ ಪ್ರಲೋಭನೆಯನ್ನೋ ಪಂಥಾಹ್ವಾನವನ್ನೋ ಒಡ್ಡುತ್ತಿದ್ದರು. ಹಾಗೆ ಒಮ್ಮೆ ‘‘ಒಂದೋ ಈ ಲೆಕ್ಕವನ್ನು ಬಿಡಿಸು ಇಲ್ಲವೇ ಲೆಕ್ಕ ಬರೆದಿರುವ ಹಾಳೆಯನ್ನು 12 ಸಲ ಮಡಿಸು!’’ ಎಂಬ ಸವಾಲು ಬ್ರಿಟ್ನಿಗೆ. ಸಹಜವಾಗಿಯೇ ಕಾಗದ ಮಡಿಸುವುದನ್ನು ಆಯ್ಕೆ ಮಾಡಿಕೊಂಡಳವಳು. ಬೇರೆಬೇರೆ ವಿಸ್ತೀರ್ಣದ ಕಾಗದಹಾಳೆಗಳನ್ನು ಮಡಚತೊಡಗಿದಳು, ಏಳು ಅಥವಾ ಹೆಚ್ಚೆಂದರೆ ಎಂಟು ಸಲವಷ್ಟೇ ಮಡಿಸುವುದರಲ್ಲಿ ಯಶಸ್ವಿಯಾದಳು. 12 ಸಲ ಮಡಿಸುವ ಮಾತಂತೂ ದೂರವೇ ಉಳಿಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X