• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಕ್ಕೊಂದು ಓಲೆ: ತಾಳಿವಂತೆಯರ ಪತ್ರಾಂತರಂಗ-3ತಾಳಿ ಕಳೆದುಕೊಳ್ಳುವುದಕ್ಕಿಂತ ಕಟ್ಟೆ ಹುಡುಗರ ಗೇಲಿನೇ ವಾಸಿ...!?

By Staff
|

(‘ಮಾಂಗಲ್ಯಮ್‌...’ ವಿಚಿತ್ರಾನ್ನ ಸಂಚಿಕೆಗೆ ಬಂದ ಪತ್ರಗಳಲ್ಲಿ ಸ್ವತಂತ್ರ ಕಿರುಲೇಖನ ರೂಪ ‘ತಾಳಿ’ದ ಪ್ರತಿಕ್ರಿಯೆಗಳ ಮಾಲಿಕೆ)

  • ಮೀನಾ ಭಾರದ್ವಾಜ್‌; ಡಲ್ಲಾಸ್‌, ಟೆಕ್ಸಸ್‌

‘ತಾಳಿದವನು ಬಾಳಿಯಾನು’ ಎನ್ನುವುದಕ್ಕಿಂತ ‘ತಾಳಿ ಕಟ್ಟಿದವನು ಬಾಳಿಯಾನು’ ಎನ್ನುವುದೇ ಸರಿ. ನಮ್ಮ ಸರ್ವಜ್ಞ ಹೇಳಿರುವಂತೆ ಬೆಚ್ಚನೆಯ ಮನೆಯಾಳಗೆ ಇಚ್ಛೆ ಅರಿತು ನಡೆಯುವ ಸತಿ ಇರಲು, ಗಂಡ ಶಿಸ್ತಿನ ಸಿಪಾಯಿ ಆಗಲು ಮಾಂಗಲ್ಯ ಭಾಗ್ಯ ಬೇಕೇಬೇಕು.

ತಾಳಿಯ ವಿನ್ಯಾಸಗಳ ಬಗ್ಗೆ ನಾನು ಒಂದು ಮಾತು ಹೇಳಲೇಬೇಕು. ಕರ್ನಾಟಕದಲ್ಲಿ ಸುಮಾರು ಕಾಲದಿಂದ ಹೆಚ್ಚಾಗಿ ಕೋಲಾರ ಜಿಲ್ಲೆಯಲ್ಲಿ ನೆಲೆಸಿರುವ ಸಮುದಾಯ ‘ಅಷ್ಟಗ್ರಾಮ ಐಯರ್‌’ಗಳದು. ಅವರಲ್ಲಿ ತಾಳಿಯಲ್ಲಿ ಸೂರ್ಯ, ಚಂದ್ರ ಹಾಗೂ ಅಗ್ನಿಕುಂಡಗಳ ಚಿತ್ರವಿರುತ್ತದೆ.

ನನ್ನ ಮದುವೆಯ ಸಮಯ ಆ ತರಹದ ತಾಳಿಯನ್ನು ಮಾಡಿಕೊಡುವಂತೆ ಎಷ್ಟೇ ವಿವರಿಸಿದರೂ ಚಿತ್ರದುರ್ಗದ ಚಿನಿವಾರರು ಮಾಡಲು ತಯಾರಿರಲಿಲ್ಲ. ಅಷ್ಟು ಕಷ್ಟಪಟ್ಟು ಈ ತಾಳಿಯನ್ನು ಕಟ್ಟಿಯೇ ಮದುವೆ ಆಗಬೇಕೆ ಎನಿಸಿದ್ದೂ ಉಂಟು. ಅದೃಷ್ಟವಶಾತ್‌ ಕೋಲಾರದಲ್ಲಿದ್ದ ಅಣ್ಣ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿ, ಅಲ್ಲಿಯೇ ತಾಳಿ ಮಾಡಿಸಿ ತಂದರು.

ತಾಳಿಯು ಹೆಣ್ಣಿಗೆ ಮದುವೆಯಾಗಿರುವ ಸಂಕೇತವಷ್ಟೇ ಎನ್ನುವುದು ನನ್ನ ಭಾವನೆ ಆದರೂ ಅದನ್ನು ಒಂದು ದಿವಸವೂ ತೆಗೆಯುವ ಅಭ್ಯಾಸವಿಲ್ಲದಿರುವುದು ಅಶ್ಚರ್ಯ. ಅಭ್ಯಾಸ ಬಲವಿರಬಹುದು. ಅಂತರ್ಜಾತಿ ವಿವಾಹವಾಗಲು ಮನೆಯವರೊಡನೆ ಹೋರಾಡಿ ಯಶಸ್ವಿ ಆಗಿರುವ ಸ್ನೇಹಿತೆ ಲತಾ ನಾಗರಾಜ್‌ ಅವರ ಅನಿಸಿಕೆ ಹೀಗೆ : ‘‘ಹೃದಯಕ್ಕೆ ಹತ್ತಿರವಿರುವ ಗಂಡ ಇರುವಾಗ ತಾಳಿಯ ಅವಶ್ಯಕತೆ ಇಲ್ಲ...’’!

ಕಟ್ಟೆಮೇಲೆ ಕುಳಿತು ಗೇಲಿ ಮಾಡುವ ಪುಂಡರಿಂದ ತಪ್ಪಿಸಿಕೊಳ್ಳಲು ತಾಳಿಯನ್ನು ಮೇಲೆ ಧರಿಸಿ ಓಡಾಡುವ ಅಭ್ಯಾಸ ಹುಡುಗಿಯರಿಗೆ ಇತ್ತು. ತಾಳಿಯನ್ನು ನೋಡಿ ‘‘ಆಂಟಿ ಕಣ್ರೋ... ಬಿಡಿ’’ ಎಂದು ಗೇಲಿಮಾಡುವುದನ್ನು ಬಿಡುತ್ತಿದ್ದರು. ನನ್ನ ತಂಗಿಯ ತಾಳಿ ಪ್ರದರ್ಶನ ತಪ್ಪಿದ್ದು ಕಳ್ಳನೊಬ್ಬ ಬೈಸಿಕಲ್‌ನಲ್ಲಿ ಬಂದು ‘ಮಾಂಗಲ್ಯ ಅಪಹರಣದ ಯತ್ನ’ ಮಾಡಿದ ಮೇಲೆ.

ತಾಳಿ ಕಳೆದುಕೊಳ್ಳುವುದಕ್ಕಿಂತ ಕಟ್ಟೆ ಹುಡುಗರ ಗೇಲಿನೇ ವಾಸಿ...!?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more