ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ಯುತಿಸಂಚಯವೋ ನಯವಂಚನೆಯೋ?

By Staff
|
Google Oneindia Kannada News


‘ಕಾಲವನ್ನು ತಡೆಯೋರು ಯಾರು ಇಲ್ಲ...’ ಅನ್ನೋದು ಅವರಿಗೂ ಗೊತ್ತಿದೆ. ಆದರೂ ಕಾಲದ ಜೊತೆ ಒಂದಿಷ್ಟು ಸರಸ ಆಡೋದು, ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವುದು, ಆ ಮೂಲಕ ಲಾಭ ಹೊಂದುವ ಬಗ್ಗೆ ಪ್ರಯೋಗಗಳು ನಡೆದಿವೆ. ಇದರ ತಲೆ ಬುಡ ಅರ್ಥ ಮಾಡಿಕೊಳ್ಳಲು, ಈ ವಾರದ ವಿಚಿತ್ರಾನ್ನದ ಮೇಲೆ ಕಣ್ಣಾಡಿಸಿ!

  • ಶ್ರೀವತ್ಸ ಜೋಶಿ
Daylight Saving Time increased from 2007 - Whats the logic?ಮನೆಯಲ್ಲಿನ ವಾಚು ಗಡಿಯಾರಗಳಷ್ಟೇ ಅಲ್ಲದೆ ಸಮಯಾಸಮಯವುಳ್ಳ ಎಲ್ಲ ಯಂತ್ರಗಳಿಗೂ (ಮೈಕ್ರೊವೇವ್‌, ಮ್ಯುಸಿಕ್‌ಸಿಸ್ಟಂ ಇತ್ಯಾದಿತ್ಯಾದಿ) ಈಗಷ್ಟೇ ಒಂದು ಗಂಟೆ ಮುಂಬಡ್ತಿ ಕೊಟ್ಟು ಇದನ್ನು ಬರೆಯಲಿಕ್ಕೆ ಕುಳಿತಿದ್ದೇನೆ. ಕರಾರುವಾಕ್ಕಾಗಿಯಾದರೆ ಈ ಪ್ರಕ್ರಿಯೆಯು ಅಪರಾತ್ರಿ 2 ಗಂಟೆಯಾದಾಗ ಅದನ್ನು 3 ಎಂದು ಮಾಡುವ ಮೂಲಕ ಜರುಗಬೇಕಿತ್ತು, ನಾನಾದರೋ ಎಲ್ಲರಂತೆಯೇ ಬೆಳಿಗ್ಗೆ ಎದ್ದು ‘ಸ್ವಲ್ಪ ಅಡ್ಜಸ್ಟ್‌ ಮಾಡ್ಕೊಳ್ಳಿ’ ಅಂದೆ ಅಷ್ಟೆ. ಇರಲಿ, ನಾನೀಗ ಬರೆಯಹೊರಟಿರುವುದು ಸ್ಪ್ರಿಂಗ್‌ ಫ‚ಾರ್ವರ್ಡ್‌ - ವಸಂತಋತು ಬರುವಾಗ ಇಲ್ಲಿ ಅಮೆರಿಕದಲ್ಲಿ ಗಡಿಯಾರಗಳನ್ನು ಒಂದು ಗಂಟೆ ಮುಂದೆ ಮಾಡಿಡುವ- ಪ್ರಕ್ರಿಯೆ ಬಗ್ಗೆ. ಇನ್ನೂ ನಿಖರವಾಗಿ ಹೇಳಬೇಕಾದರೆ, ಗಡಿಯಾರಗಳನ್ನು ಮುಂದೆ ಮಾಡುವುದರ ಹಿಂದೆ ಅಡಗಿರುವ ಕೆಲವು ‘ ಸ್ವಾರ್ಥ’ಗಳ ಬಗ್ಗೆ.

ಬೆಳಕಿನ ಉಳಿತಾಯ ಅಥವಾ ದ್ಯುತಿಸಂಚಯ ಅಥವಾ ಡೇಲೈಟ್‌ ಸೇವಿಂಗ್‌ ಎನ್ನುವುದು ಇಂದುನಿನ್ನೆಯ ವಿದ್ಯಮಾನವಲ್ಲ. ಕ್ರಿ.ಶ 1784ರಲ್ಲಿ, ಬೆಂಜಮಿನ್‌ ಫ‚ಾ್ರಂಕ್ಲಿನ್‌ (ಆಗ ಪ್ಯಾರಿಸ್‌ನಲ್ಲಿ ಸಚಿವನಾಗಿದ್ದ) ಮಂಡಿಸಿದ ಪ್ರಬಂಧದಲ್ಲಿ ಅದು ಮೊಟ್ಟಮೊದಲು ಪ್ರಸ್ತಾಪವಾಯಿತೆನ್ನಲಾಗಿದೆ. ಆದರೆ ಆಗ ಯಾರೂ ಅದನ್ನು ಬೆಂಬಲಿಸಲಿಲ್ಲ, ಬಹುಶಃ ಹೆಚ್ಚಿನವರಿಗೆ ಅದು ಅರ್ಥವಾಗಲೂ ಇಲ್ಲ! ಮುಂದೆ 1907ರಲ್ಲಿ ವಿಲಿಯಂ ವಿಲೆಟ್ಟ್‌ ಎಂಬ ಬ್ರಿಟಿಷ್‌ ಪ್ರಜೆಯು ಡೇಲೈಟ್‌ ಸೇವಿಂಗ್‌ ಬಗ್ಗೆ, ಅದರಿಂದಾಗುವ ಪ್ರಯೋಜನಗಳ ಬಗ್ಗೆ ತೀವ್ರವಾಗಿ ಪ್ರಚಾರನಡೆಸಿದ್ದರಿಂದ ಬ್ರಿಟನ್‌ನಲ್ಲಿ ನಿಧಾನವಾಗಿ ಅದರ ಮಹತ್ವ ಅರಿವಾಗತೊಡಗಿತು.

ಡೇಲೈಟ್‌ ಸೇವಿಂಗ್‌ ನಿಜಕ್ಕೂ ಸೇವಿಂಗ್‌ ಮಾಡುತ್ತದೆಂದು ಸಾಬೀತಾದದ್ದು 1918ರಲ್ಲಿ ಮೊದಲ ಪ್ರಪಂಚ ಯುದ್ಧದ ವೇಳೆ. ಯುದ್ಧಕಾಲವೆಂದರೆ ಗೊತ್ತಲ್ಲ, ಎಲ್ಲದಕ್ಕೂ ರೇಷನ್ನು. ಸಿಪಾಯಿಗಳಿಗಷ್ಟೇ ಅಲ್ಲ, ಪೌರರಿಗೂ. ಗಾಳಿ, ನೀರು, ಆಹಾರ, ಬೆಳಕೂ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನೆಲ್ಲ ಮಿತಪ್ರಮಾಣದಲ್ಲಿ ಉಪಯೋಗಿಸುವಂತೆ ಸರಕಾರದ ಬಿನ್ನಹ. ಅಂತಹ ಸಂದರ್ಭದಲ್ಲಿ ಬೇಸಿಗೆಯಲ್ಲಿ ಸೂರ್ಯನನ್ನು ಒತ್ತಾಯಪೂರ್ವಕವಾಗಿ ಒಂದು ಗಂಟೆ ತಡವಾಗಿ ಮುಳುಗಿಸುವುದರಲ್ಲಿ ಸಾಕಷ್ಟು ಲಾಭವಿದೆ. ಮಲಗುವ ಸಮಯವಾಗುವವರೆಗೂ ಸೂರ್ಯನ ಬೆಳಕಿರುವುದರಿಂದ, ವಿದ್ಯುಚ್ಛಕ್ತಿಯಿಂದಾಗಲೀ ಕಲ್ಲೆಣ್ಣೆಯಿಂದಾಗಲೀ ಸಂಜೆಯ ಹೊತ್ತು ಕೃತಕ ಬೆಳಕು ಹಚ್ಚಿಡುವುದು ತಪ್ಪುತ್ತದೆ.

ಮುಂದೆ ಎರಡನೆ ಪ್ರಪಂಚಯುದ್ಧದ ವೇಳೆಯಲ್ಲೂ (1941) ಡೇಲೈಟ್‌ ಸೇವಿಂಗ್‌ ಮಾಡುವಂತೆ ಅಮೆರಿಕದ ಆಗಿನ ಅಧ್ಯಕ್ಷ ಫ‚ಾ್ರಂಕ್ಲಿನ್‌ ಡಿ ರೂಸ್‌ವೆಲ್ಟ್‌ ಒಂದು ಅಧ್ಯಾದೇಶ ಹೊರಡಿಸಿದರು. ಬೇಸಿಗೆಯಲ್ಲಷ್ಟೇ ಅಲ್ಲ ವರ್ಷಪೂರ್ತಿ ಡೇಲೈಟ್‌ ಸೇವಿಂಗ್‌ ಟೈಮ್‌ ಅನುಸರಿಸುವಂತೆ ಕಾನೂನು ಮಾಡಲಾಯಿತು. ಯುದ್ಧ ಮುಗಿದ ಮೇಲೆ, ಅಂದರೆ ರೇಷನ್‌ ಸಿಸ್ಟಂ ಕೊನೆಗೊಂಡ ಮೇಲೆ ಡೇಲೈಟ್‌ ಸೇವಿಂಗ್‌ಅನ್ನು ಕೈಬಿಡಲಾಯಿತು. ಆಮೇಲೆ 1973ರಲ್ಲಿ ಅರಬ್‌ದೇಶಗಳಿಂದ ತೈಲ ಆಮದಿನ ಸಮಸ್ಯೆ ತಲೆದೋರಿದಾಗ ಮತ್ತೆ ಡೇಲೈಟ್‌ ಸೇವಿಂಗ್‌ಗೆ ಶರಣಾಗಬೇಕಾಯಿತು. ಅಲ್ಲಿಂದೀಚೆಗೆ ಪ್ರತಿವರ್ಷವೂ ಡೇಲೈಟ್‌ ಸೇವಿಂಗ್‌ ಟೈಮ್‌ ಅನುಸರಿಸುವ ಕ್ರಮ ಅನುಷ್ಠಾನಕ್ಕೆ ಬಂತು. ‘ಸ್ಪ್ರಿಂಗ್‌ ಫ‚ಾರ್ವರ್ಡ್‌ - ಫ‚ಾಲ್‌ ಬ್ಯಾಕ್‌’ (ಏಪ್ರಿಲ್‌ನಲ್ಲಿ ಗಡಿಯಾರಗಳನ್ನು ಒಂದು ಗಂಟೆ ಮುಂದೆ ಮಾಡಿ, ಅಕ್ಟೋಬರ್‌ನಲ್ಲಿ ಒಂದು ಗಂಟೆ ಹಿಂದೆ ಮಾಡುವುದು) ಅರಿಜೋನಾ ಹಾಗೂ ಹವಾಯಿ ಸಂಸ್ಥಾನಗಳನ್ನು ಹೊರತುಪಡಿಸಿ ಇಡಿಯ ಯು.ಎಸ್‌.ಎಯಲ್ಲಿ ರೂಢಿಯಾಯಿತು.

1984ರಲ್ಲಿ ಒಂದು ತಮಾಷೆ ನಡೆಯಿತು. ಅಮೆರಿಕದ ಇಲಿನಾಯ್‌ ಸಂಸ್ಥಾನದಲ್ಲಿರುವ ಒಂದು ಪುಟ್ಟ ಊರಾದ (ಜನಸಂಖ್ಯೆ ಸುಮಾರು 4500) ಎಲ್ಡೊರಾಡೊದಲ್ಲಿ ಅಲ್ಲಿನ ಪತ್ರಿಕೆ ‘ಎಲ್ಡೊರಾಡೊ ಡೈಲಿ ಜರ್ನಲ್‌’ ಒಂದು ವಿಶಿಷ್ಟ ಸ್ಪರ್ಧೆಯನ್ನೇರ್ಪಡಿಸಿತು. ‘‘ಈವರ್ಷದ ಡೇಲೈಟ್‌ಸೇವಿಂಗ್‌ ಸೀಸನ್‌ನಲ್ಲಿ ಅತಿ ಹೆಚ್ಚು ಬೆಳಕನ್ನು ಸಂಗ್ರಹಿಸಿದವರಿಗೆ ಬಹುಮಾನವಿದೆ!’’ ಎಂದು ಘೋಷಿಸಿತು. ‘‘ಸೂರ್ಯನ ಬೆಳಕನ್ನು ಮಾತ್ರ ಸಂಗ್ರಹಿಸಬೇಕು. ಬೆಳದಿಂಗಳನ್ನಾಗಲೀ ಅಥವಾ ಮಾನವನಿರ್ಮಿತ ಆಕರಗಳಿಂದಾಗಲೀ ಬೆಳಕನ್ನು ಸೇರಿಸಬಾರದು. ಸ್ಪ-ರ್ಧಿಗಳು ತಾವು ಸಂಗ್ರಹಿಸಿದ ಬೆಳಕನ್ನು ತಮಗಿಷ್ಟ ಬಂದ ಕಂಟೈನರ್‌ನಲ್ಲಿ ತುಂಬಿಸಿ ಪತ್ರಿಕೆಯ ಕಚೇರಿಗೆ ತರತಕ್ಕದ್ದು. ಸ್ಪರ್ಧೆ ಮುಗಿದ ನಂತರ, ಸಂಗ್ರಹವಾದ ಬೆಳಕನ್ನೆಲ್ಲ ಡೇಲೈಟ್‌ ಸೇವಿಂಗ್‌ ಮಾಡದ ನತದೃಷ್ಟ ರಾಷ್ಟ್ರಗಳ ಪ್ರಜೆಗಳಿಗೆ ಉದಾರವಾಗಿ ವಿತರಿಸಲಾಗುವುದು...’’ - ಇವು ಸ್ಪರ್ಧೆಯ ನಿಯಮಗಳು.

ಆ ವಿಶಿಷ್ಟ ಸ್ಪರ್ಧೆಯ ಜಾಹೀರಾತು ಇಡೀ ಅಮೆರಿಕದ ಗಮನ ಸೆಳೆಯಿತು! ಬರೀ 1200 ಪ್ರಸಾರಸಂಖ್ಯೆಯ ಪುಟ್ಟ ಪತ್ರಿಕೆಯ ಸಂಪಾದಕ ‘ಬಾಬ್‌ ಎಲ್ಲಿಸ್‌’ನನ್ನು ರಾಷ್ಟ್ರೀಯ ಜಾಲದ ಟಿವಿ/ರೇಡಿಯಾಸ್ಟೇಷನ್‌ಗಳು, ಪತ್ರಿಕೆಗಳು ಸಂದರ್ಶಿಸಿದವು. ಏಪ್ರಿಲ್‌ 1ಕ್ಕೆ ಸರಿಯಾಗಿ, ಡೇಲೈಟ್‌ ಸೇವಿಂಗ್‌ ಸೀಸನ್‌ಗೆ ಪೂರ್ವಭಾವಿಯಾಗಿ (ಆಗ ಡೇಲೈಟ್‌ ಸೇವಿಂಗ್‌ ಶುರುವಾಗುತ್ತಿದ್ದದ್ದು ಏಪ್ರಿಲ್‌ ಕೊನೆಯ ಭಾನುವಾರದಂದು), ಇಂಥದೊಂದು ಪ್ರಕಟಣೆಯ ಕುಚೋದ್ಯದಿಂದ ಜನರನ್ನು ಅರ್ಥಪೂರ್ಣವಾಗಿ ಫ‚ೂಲ್‌ ಮಾಡಿದ ಅವನ ಬುದ್ಧಿಮತ್ತೆಯನ್ನು ಕೊಂಡಾಡಿದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X