• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಪಾನಿಶ್‌ ನಾಡಿನಲ್ಲಿ ಪೊರ್ಕೆ ಮತ್ತು ಮಸಾಲೆದೋಸೆ...

By Staff
|

ಅಲ್ಲಿನ ವೈಟರ್‌ಗಳು ಸ್ಪಾನಿಶ್‌-ಇಂಗ್ಲಿಷ್‌ ಮಾತಾಡಬಲ್ಲವರು. "This restaurant offers some exotic Indian cuisine. Let me explain whats what on the menu..." ಎನ್ನುತ್ತಾರೆ. ಮೆನುಕಾರ್ಡ್‌ ನೋಡಿದಾಗ ‘ತಂತ್ರ’ದ ವಿಶೇಷತೆ ಅಥವಾ ಅನನ್ಯತೆ ಅರಿವಾಗುತ್ತದೆ. ಅದೊಂದು ಇಂಡೊ-ಲ್ಯಾಟಿನ್‌ ಅಡುಗೆಪದ್ಧತಿಗಳ ಫ್ಯೂಷನ್‌ ಪ್ರಯೋಗ. ದಕ್ಷಿಣಭಾರತೀಯ ಶೈಲಿಯ ಸಸ್ಯಾಹಾರ-ಮಾಂಸಾಹಾರಗಳನ್ನೂ, ತಂದೂರಿ ವೈವಿಧ್ಯಗಳನ್ನೂ, ಲ್ಯಾಟಿನ್‌ ಶೈಲಿಯ ಖಾದ್ಯಗಳನ್ನೂ ಸ್ಥಳೀಯ (ಕೆರಿಬಿಯನ್‌) ಮಸಾಲೆಪದಾರ್ಥಗಳ ಮೂಲಕ ಬೆಸೆಯುವ ಪಾಕಶಾಲೆ.

ಆಲ್ಕೊಹಾಲ್‌ಪ್ರಿಯರಿಗೆ ಅಲ್ಲಿನ ವಿವಿಧ (ಕೊಕೊನಟ್‌, ಕಾರ್ಡಮಮ್‌, ಪ್ಯಾಶನ್‌ಫ‚ು್ರಟ್‌, ಮ್ಯಾಂಗೊ, ಸಿನಮನ್‌...) ಮಾರ್ಟಿನಿಗಳ ಹೆಸರನ್ನು ನೋಡಿಯೇ ಅಮಲೇರಬಹುದು. ಮೆನುಕಾರ್ಡ್‌ನಲ್ಲಿರುವ ಸಮೊಸಾ, ಪಕೋಡಾ ಜತೆಯಲ್ಲೇ ಪೇರಳೆಹಣ್ಣಿನ ಸಾಸ್‌ನೊಂದಿಗೆ ಚಿಕನ್‌ ರೋಲ್ಸ್‌, ಕೊಬ್ಬರಿ-ಶುಂಠಿ ಸಾಸ್‌ನೊಂದಿಗೆ ಸುಶಿ ಟ್ಯುನಾ, ಕಾಶ್ಮೀರ್‌ ಹನಿ ಚಿಕನ್‌, ಬಾಸ್ಮತಿ-ರಾಜ್ಮಾ ಮಾನ್‌ಪೊಸ್ಟೊ ಮೊದಲಾದ ಎಂಟ್ರಿಗಳಲ್ಲೆಲ್ಲ ಇಂಡೊ-ಲ್ಯಾಟಿನ್‌ ಫ‚ೂ್ಯಷನ್‌ ಢಾಳಾಗಿ ಕಾಣುತ್ತದೆ. ಅಲ್ಲಿ ಬಾಳೆಕಾಯಿಯ ‘ಬಜ್ಜಿ’ಯೂ ಇದೆ, ಬಾಳೆಕಾಯಿಯನ್ನು ಬೇಯಿಸಿ ಮ್ಯಾಶ್‌ ಮಾಡಿದ ಪೊರ್ಟರಿಕೊ ಸ್ಪೆಷಲ್‌ ‘ಮೊಫಂಗಾ’ ಸಹ ಇದೆ. ದಾಲ್‌, ಪಾಲಕ್‌ಪನೀರ್‌, ಚನಾಮಸಾಲಾ ಮತ್ತು the omnipresent ಮಸಾಲೆದೋಸೆಯಂತೂ ಇದ್ದೇ ಇದೆ. ಡೆಸರ್ಟ್‌ ಎಂದು ಏಲಕ್ಕಿ-ಲವಂಗ-ದಾಲ್ಚೀನಿ-ಜಾಯಿಕಾಯಿ ಸಂಗಮದ ‘ಮಸಾಲಾ ಕೇಕ್‌’ ಸಹ ಇದೆ!

Srivathsa Joshi with Ramesh Pillai (left)‘ತಂತ್ರ’ ರೆಸ್ಟೊರೆಂಟ್‌ನ ಸ್ಥಾಪಕ, ಮಾಲೀಕ ಮತ್ತು ಚೀಫ‚್‌ಚೆಫ‚್‌ ಎಲ್ಲವೂ ಆಗಿರುವ ರಮೇಶ್‌ ಪಿಳ್ಳೈ ಅವರನ್ನು ಮಾತನಾಡಿಸುವ ಅವಕಾಶವೂ ನನಗಲ್ಲಿ ಸಿಕ್ಕಿತು. ಮೂಲತಃ ನಾಗರಕೊಯಿಲ್‌ನವರಾದ ರಮೇಶ್‌ 1979ರಲ್ಲಿ ಇಂಗ್ಲೆಂಡ್‌ಗೆ ಅಡಿಯಿಟ್ಟರಂತೆ, ಇಂಗ್ಲೆಂಡ್‌ನಲ್ಲಿ, ಸ್ವಿಟ್ಜರ್ಲೇಂಡ್‌ನಲ್ಲಿ ಹೊಟೆಲ್‌ ನಡೆಸಿ ಆಮೇಲೆ 1982ರಲ್ಲಿ ಲಾಸ್‌ಎಂಜಲಿಸ್‌ಗೆ ಬಂದರು. ಅಲ್ಲಿನ ಹಿಲ್ಟನ್‌, ಬೆವರ್ಲಿಹಿಲ್ಸ್‌ನ ಲಾಬೆಲ್ಲಾ, ಸಾನ್‌ಡಿಯಾಗೊದ ಇಂಟರ್‌ಕಾಂಟಿನೆಂಟಲ್‌, ಮಯಾಮಿಯ ಹಾಯಟ್‌ ಹೊಟೆಲ್‌ಗಳಲ್ಲಿ ಚೆಫ‚್‌ ಆಗಿದ್ದವರು 1995ರಲ್ಲಿ ಪೊರ್ಟರಿಕೊಗೆ ಬಂದು ವಿಂಡ್‌ಹ್ಯಾಮ್‌ದಲ್ಲಿ ಕಾರ್ಪೊರೆಟ್‌ ಚೆಫ‚್‌ ಆದರು. 2002ರಲ್ಲಿ ತಮ್ಮದೇ ಆದ ‘ತಂತ್ರ’ ರೆಸ್ಟೊರೆಂಟನ್ನು ಸ್ಥಾಪಿಸಿದರು.

ಇಡಿಯ ಪೊರ್ಟರಿಕೊ ದ್ವೀಪದಲ್ಲಿ ಭಾರತೀಯ ಕುಟುಂಬಗಳಿರುವುದು ಒಟ್ಟು ಹದಿನೈದು ಮಾತ್ರವಂತೆ. ಅವರಿಗೆಲ್ಲ ಇಂಡಿಯನ್‌ ಫ‚ುಡ್‌ ಸವಿಯಲು ‘ತಂತ್ರ’ ಬೇಕಾಗಿಲ್ಲ. ತಂತ್ರಕ್ಕೆ ಮತ್ತೆಮತ್ತೆ ಬರುವ ಗಿರಾಕಿಗಳೆಂದರೆ ಪೊರ್ಟರಿಕೊ ದ್ವೀಪಕ್ಕೆ ಬರುವ ಅಮೆರಿಕನ್‌ ಪ್ರವಾಸಿಗಳೇ. ಹಾಗೆಯೇ ಇಂಗ್ಲೆಂಡ್‌ನಲ್ಲಿ ‘ಇಂಡಿಯನ್‌ ಕರ್ರಿ’ ರುಚಿಹತ್ತಿರುವ ಬ್ರಿಟಿಷ್‌ ನಾವಿಕರು ಅಟ್ಲಾಂಟಿಕ್‌ ಸಾಗರದ ಪೊರ್ಟರಿಕೊದಲ್ಲಿ ಹಡಗುಗಳಿಗೆ ಲಂಗರುಹಾಕಿ ತಂತ್ರಕ್ಕೆ ಬಂದು ತಮ್ಮ ನೆಚ್ಚಿನ ಕರ್ರಿಗಳನ್ನು ಸವಿಯುತ್ತಾರೆ. ಶುಕ್ರ-ಶನಿವಾರಗಳ ಏರುರಾತ್ರೆಯಲ್ಲಿ ’ಬೆಲ್ಲಿ ಡ್ಯಾನ್ಸರ್‌’ ಶೋ ಸಹ ಇರುವಾಗ ತಂತ್ರ ಒಂದು ಅರೆಬಿಯನ್‌ ಅಡ್ಡಾ ಆಗಿ ಮಾರ್ಪಾಡಾಗುತ್ತದೆ ಎನ್ನುತ್ತಾರೆ ಪಿಳ್ಳೈ.

‘ತಂತ್ರ’ದಲ್ಲಿ ನಾನು ಮಸಾಲೆದೋಸೆಯನ್ನು ಚಪ್ಪರಿಸಿದೆ, ಮಸಾಲಾ ಕೇಕ್‌ನ ರುಚಿ ನೋಡಿದೆ. ತಂತ್ರದ ಮಾಲೀಕನನ್ನೇ ಭೇಟಿಯಾಗಿ ಮಾತಾಡಿಸಿ ಅಭಿನಂದಿಸಿದೆ. ದೋಸೆ ಮಾಡುವ ತವಾದ ಮೇಲೆ ನೀರು ಚಿಮುಕಿಸಿ ಪೊರಕೆಯಿಂದ ಒರೆಸುತ್ತೀರಾ ಎಂಬ ಕೆಟ್ಟಕುತೂಹಲದ ಪ್ರಶ್ನೆಯನ್ನು ಮಾತ್ರ ಕೇಳಲಿಲ್ಲ. Por que (ಏಕೆಂದರೆ) ಪೊರ್ಟರಿಕೊದಂಥದ ದ್ವೀಪದಲ್ಲೂ ನಮ್ಮೂರಿನ ಮಸಾಲೆದೋಸೆ ಸಿಕ್ಕಿದ್ದೇ ನನಗೆ ಸ್ವರ್ಗಕ್ಕೆ ಮೂರುಗೇಣು ಎನ್ನುವಂತಾಗಿತ್ತೇ ಹೊರತು ತವಾದ ಮೇಲೆ ಪೊರಕೆ ಉಪಯೋಗವಾಗುತ್ತದೆಯೇ ಎಂಬ ಪ್ರಶ್ನೆಯಲ್ಲ.

srivathsajoshi@yahoo.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X