ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ದು! ಇದು ಒಂದು ಹದ್ದಿನ ಮನೆಯ ಕಥೆಯಲ್ಲ. ಸೃಷ್ಟಿ ನಿಯಮ.

By Staff
|
Google Oneindia Kannada News
True story of bald eagles in Washingtonಭೂಮಿಯ ಮೇಲಿರಲಿ, ಆಕಾಶದಲ್ಲಾಗಲಿ, ಭೂಮಿಯ ಒಳಗಾಗಲಿ, ಬ್ರಹ್ಮಾಂಡದಲ್ಲಿ ಎಲ್ಲೇ ಇರಲಿ ಸೃಷ್ಟಿ ನಿಯಮ ಎಲ್ಲರಿಗೂ ಒಂದೇ ಅಲ್ಲವೆ? ಒಂದು ಗಂಡಿಗೆ ಒಂದು ಹೆಣ್ಣು ಎಂದು. ಪ್ರಾಣಿಯಾಗಲಿ, ಪಕ್ಷಿಯಾಗಲಿ, ಮನುಜನಾಗಲಿ ಅಥವಾ ಎರೆಹುಳುವೇ ಆಗಲಿ, ಪ್ರಕೃತಿಯನ್ನು ಮೀರಲಾದೀತೇ? ಎರೆಹುಳುವನ್ನೇ ನೋಡಿ, ಅರ್ಧಕ್ಕೆ ಕತ್ತರಿಸಿದೊಡನೆ, ಬಾಲ ಮತ್ತೊಂದು ತಲೆಯನ್ನು ಹೊಂದುತ್ತದೆ, ಹಾಗೆ ತಲೆ ಇನ್ನೊಂದು ಬಾಲವನ್ನು. ಅವೇನು ಬಹುದಿನಗಳಿಂದ ತನ್ನೊಡನಿದ್ದ ಸಂಗಾತಿಯನ್ನು (ತಲೆ/ಬಾಲ) ಕಳೆದುಕೊಂಡು ಬದುಕುವುದೆಂತು, ಸಾವು ಬರಲಿ ಎಂದು ಅಳುವುದಿಲ್ಲ.

ಹಾಗೆ ನೋಡಿದರೆ ಗಂಡುಹದ್ದಿನ ಪತ್ನಿನಿಷ್ಠೆಗೆ ನಾವು ನಮಿಸಬೆಕು. ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅದು ಇನ್ನೊಂದು ಹೆಣ್ಣುಹಕ್ಕಿಯ ಸಹವಾಸವನ್ನು ಮಾಡಲಿಲ್ಲ (ಬದುಕಿನ ದುಃಖ ಮರೆಯಲು ಕುಡಿಯುವ, ವೇಶ್ಯೆಯ ಸಹವಾಸ ಮಾಡುವ ಮಾನವನಂತೆ). ಬದಲಾಗಿ, ಆ ಕ್ಷಣಗಳಲ್ಲಿ ಅದು ತನ್ನ ಅವಿಚ್ಛಿನ್ನ ನಿಷ್ಠೆಯನ್ನು ಪ್ರದರ್ಶಿಸಿದೆ. ತನ್ನೊಲುಮೆಯ ಪತ್ನಿ ಸತ್ತಾಗ, ಬಹುಶಃ ಅನಾಥ ಪ್ರಜ್ಞೆ ಕಾಡಿರಬೆಕು (ಮರಿಗಳೂ ಪರಲೋಕವಾಸಿಗಳಾಗಿದ್ದವಷ್ಟೆ?) ಹಾಗಾಗಿ ಅದು ತನ್ನ ಜೀವನವನ್ನು ಮತ್ತೊಬ್ಬಳ ಕೈಯಲ್ಲಿ ಹಾಕಿ ಈಗ ತಣ್ಣಗೆ ಕೂತಿರಬೆಕು.

ಮತ್ತೊಂದು ದೃಷ್ಟಿಯಿಂದ ಯೋಚಿಸಿದರೂ ಜಾರ್ಜ್‌ನ ಹೊಸ ನಡವಳಿಕೆ ಅಂಥ ಆಶ್ಚರ್ಯವನ್ನೇನೂ ತರುವುದಿಲ್ಲ. ಒಂದು ಹೆಣ್ಣಿಗಿರುವ ಸಹನಾಶಕ್ತಿ ಮತ್ತು ಕಷ್ಟಸಹಿಷ್ಣುತೆ ಗಂಡಿಗಿಲ್ಲ. ಅವನಿಗೆ ಒಂಟಿಯಾಗಿರಲು ಸಾಧ್ಯವಿಲ್ಲ (ಅಪರೂಪಕ್ಕೆ ಇದಕ್ಕೆ ಅಪವಾದಗಳೂ ಇರಬಹುದು). ಬಾಲ್ಯದಲ್ಲಿ ಅಮ್ಮನ ಕೈತುತ್ತು ತಿಂದು, ಅಮ್ಮನ ಕೈಹಿಡಿದು ನಡೆದ ಅವನು, ಹೆಂಡತಿ ಬರುವವರೆಗೂ ಅಮ್ಮನ ಹಸುಗೂಸೇ.

ಸೊಸೆ ಬಂದೊಡನೆ ಅತ್ತೆಯಾದವಳು ಮಗನನ್ನು ಅವಳಿಗೊಪ್ಪಿಸಿ, ಜೋಪಾನವಾಗಿರಿಸು ಎನ್ನುತ್ತಾಳೆ. ಹಾಗಾಗಿ, ಊಟ ಉಪಚಾರ ಪ್ರತಿಯೊಂದಕ್ಕೂ ಹೆಣ್ಣಿನ ಮೇಲೆ ಅವಲಂಬಿತನಾದಗಂದು, ಹೆಂಡತಿ ಸತ್ತಾಗ ಅಸಹಾಯಕನಾಗುವುದು ಸಹಜ (ಅದು ಅವನ ತಪ್ಪಲ್ಲ; ತಾಯಿಯಾಗಿ, ಹೆಂಡತಿಯಾಗಿ ಹೆಣ್ಣು ಅವನನ್ನು ಪೋಷಿಸಿದ ರೀತಿ ತಪ್ಪು). ಹೆಂಡತಿ ಕಣ್ಮರೆಯಾದೊಡನೆ ಅವಳನ್ನು ಮರೆತು ಮತ್ತೊಬ್ಬಳೊದನೆ ಬಾಳುವುದು ಅವನಿಗೆ ಅನಿವಾರ್ಯ. (ಅಥವ ಹಾಗೆಂದುಕೊಳ್ಳುತ್ತಾನೆ) ಆಗ ಬರುವ ನೆಪಗಳು ವಂಶಾಭಿವೃದ್ಧಿ, ಮತ್ತು ಹೆಂಡತಿಯ ಆತ್ಮಕ್ಕೆ ಶಾಂತಿಯನ್ನು ಕೊಡುವುದು ಇತ್ಯಾದಿ.

ಯಾವುದೇನೇ ಆದರೂ ಒಂದಂತೂ ಸತ್ಯ. ಗಂಡು ಈ ಒಂದು ವಿಷಯದಲ್ಲಿ, ಹೆಣ್ಣಿನಷ್ಟು ಸಬಲನಲ್ಲ. ತನ್ನ ಕಾಮನೆಗಳನ್ನು ಹತ್ತಿಕ್ಕಲು ಅವನಿಗೆ ಸಾಧ್ಯವಿಲ್ಲ (ಬಹುಶಃ ಹಿಂದಿನಿಂದ ಅನುಸರಿಸಿದ ರೀತಿರಿವಾಜುಗಳು ಕಾರಣವಿರಬಹುದು).

ಗಂಡನನ್ನು ಕಳೆದುಕೊಂಡ ಹೆಣ್ಣು ತನ್ನ ಎಷ್ಟೆಲ್ಲಾ ಪ್ರಸಾಧನಗಳನ್ನು ಬಿಡುತ್ತಾಳೆ, ಆದರೆ ಗಂಡು ಬಿಡುವುದು ದಾಡಿ ಮೀಸೆಗಳನ್ನು (ಅದೂ ಮೊದಲ ಕೆಲವು ದಿನ ಮಾತ್ರ). ಅದನ್ನು ತೆಗೆದೊಡನೆ, ಅವಳ ಮೇಲಿನ ವ್ಯಾಮೋಹವು ಕರಗುತ್ತದೆ. ಆದರೆ ಅದನ್ನು ತಪ್ಪು ಎಂದು ನಾನು ಹೇಳುವುದಿಲ್ಲ; ಕದ್ದು ಮುಚ್ಚಿ ಮತ್ತೊಬ್ಬಳನ್ನು ಕೂಡುವುದಕ್ಕಿಂತ ರಾಜಾರೋಶವಾಗಿ ಮದುವೆಯಾಗಿ ಸಂಸಾರ ನಡೆಸುವುದು ಒಳ್ಳೆಯದೇ!

ಇಲ್ಲಿ ಸಹ ಅದೇ ಆಗಿದೆ. ಮಾರ್ತಾ ಸತ್ತ ನಂತರವಷ್ಟೇ ಜಾರ್ಜ್ ಹೊಸ ಹದಿಹರೆಯದ ಹೆಣ್ಣಿನ ಸಂಪರ್ಕ ಮಾಡಿದ್ದು. ಯಾರೋ ಗೊತ್ತಿಲ್ಲದವರನ್ನು ವರಿಸುವುದಕ್ಕಿಂತ ಗೊತ್ತಿದ್ದವರನ್ನು ಸೇರುವುದು ಸರಿಯಲ್ಲವೆ? "A known devil is better than an unknown God" ಎನ್ನುವ ಗಾದೆಯಂತೆ. ಅವಳನ್ನು ಖಳನಾಯಕಿ ಎಂದೇಕೆ ಕರೆಯಬೇಕು, ಅವನನ್ನು ಮೆಚ್ಚಿ ಮೋಹಿಸಿ ಬಂದ ಸಖಿ ಎನ್ನುವುದು ಸೂಕ್ತ. ಮಾರ್ತಾಳನ್ನು ಮರೆಸುವಷ್ಟು ಶಕ್ತಿ ಅವಳಿಗಿರುವುದೇ ನಿಜವಾದರೆ, ಅವಳು ಅವನಿಗೆ ಪುನರ್ಜೀವನವನ್ನಿತ್ತ ಪರಾಗಸ್ಪರ್ಷ ಎನ್ನಲೇನಡ್ಡಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X