• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಹದ್ದು ಮೀರಿದ ಹದ್ದಿನ ಕತೆ!

By Staff
|

ಇದು 2006ಲವ್ ಸ್ಟೋರಿ! ಹಾಲುಜೇನಿನಂತಿದ್ದ ಅವನು ಮತ್ತು ಅವಳ ನಡುವೆ, ಇನ್ಯಾವಳೋ ಬಂದು ಹುಳಿಹಿಂಡಿದ ಕತೆ! ಕಾಲನಲೀಲೆಗೆ ಸುಖಿ ಸಂಸಾರ ಸಂಕಷ್ಟಕ್ಕೆ ಸಿಕ್ಕ ಕತೆ! ಅವಳು ಸತ್ತ ಮೇಲೆ ಅವನು ವಿರಹದಿಂದ ನೊಂದ ಕತೆ! ಈಗ ಎಲ್ಲವನ್ನು ಮರೆತು ಅವನು, ಇನ್ಯಾವಳೊಂದಿಗೋ ಸರಸವಾಡುತ್ತಿರುವ ಕತೆ! ಇದು ಕಾಗೆಗುಬ್ಬಿ ಕತೆಯಲ್ಲ! ಒಂದು ಸತ್ಯ ಕತೆ!

  • ಶ್ರೀವತ್ಸ ಜೋಶಿ

True story of bald eagles in Washingtonಇದಕ್ಕೆ ನಾನು "ಜಾರ್ಜ್ ಮತ್ತು ಮಾರ್ತಾ ಸಂಸಾರದಲ್ಲಿ ಹುಳಿಹಿಂಡಿದ ಅವಳು!" ಎಂಬ ಶೀರ್ಷಿಕೆಯನ್ನು ಕೊಡಬಹುದಿತ್ತು. ಆಗ ನೀವು ಇದ್ಯಾವುದೋ ಹಾಲಿವುಡ್ ಸಿನೆಮಾಕತೆಯೋ ಅಥವಾ ಅಮೆರಿಕನ್ ಟಿವಿ ಸೋಪ್‍ಒಪೆರಾ ಕತೆಯೋ ಇರಬಹುದು ಎಂದುಕೊಂಡಿರುತ್ತಿದ್ದಿರಿ. ಅಮೆರಿಕದ ಟಿವಿ ಸೀರಿಯಲ್‌ಗಳೇನು ಈಗ ಭಾರತದಲ್ಲೂ ಮೆಗಾಧಾರಾವಾಹಿಗಳದು ಅದೇ ಸರಕು ತಾನೆ? ವಿವಾಹೇತರ ಸಂಬಂಧಗಳು, ಬಾಯ್ತೆರೆದರೆ ಬೀದಿಜಗಳಗಳು, ಒಬ್ಬರಿಗಿಂತ ಇನ್ನೊಬ್ಬರು ಅವಕಾಶವಾದಿಗಳು. ಸಮಾಜವೂ ಅದೇರೀತಿ ಇದೆಯೆಂದೇ ಅಥವಾ ಇರಬೇಕೆಂದೇ?

ಸತಿಪತಿಯರು ಹಾಲುಜೇನಿನಂತೆ ಅರಿತು-ಬೆರೆತು ಸುಖೀಸಂಸಾರ ಸಾಗಿಸುತ್ತಿದ್ದರೆ ಅಲ್ಲಿ ಮೂರನೆವ್ಯಕ್ತಿ (ಅದು, ಅವಳು ಇರಬಹುದು, ಅವನು ಇರಬಹುದು) ಪ್ರವೇಶಿಸಿ ಹಾಲಲ್ಲಿ ಹುಳಿಹಿಂಡಿ ಹಾಲಾಹಲವಾಗಿಸುವ ಕತೆಗಳು, ಘಟನೆಗಳು ಹೊಸದೇನಲ್ಲ - ಆಧುನಿಕತೆಯ ಇಪ್ಪತೊಂದನೇ ಶತಮಾನದಲ್ಲೂ, ಆದಿಮಾನವ ಕಾಲದ ಪುರಾಣೇತಿಹಾಸಗಳಲ್ಲೂ; ದಾಂಪತ್ಯವೆಂದರೆ ಪರಮಪವಿತ್ರವೆಂಬ ಭಾವವಿರುವ ಪೂರ್ವದೇಶಗಳಲ್ಲೂ, ವಿಚ್ಛೇದನವೆಂದರೆ ಹೊಸ ಉಡುಪು ಖರೀದಿಸಿದಂತೆ ಎನ್ನುವಂತಿರುವ ಪಶ್ಚಿಮಾರ್ಧದಲ್ಲೂ.

ಆದರೆ ಈ ಕತೆ ಮನುಷ್ಯರದಲ್ಲ, ಹದ್ದುಗಳ ಸಂಸಾರದ್ದು! ಕಟ್ಟುಕತೆಯಲ್ಲ, ನಿಜವಾಗಿ ನಡೆದದ್ದು!

ಬೋಳುತಲೆಯ ಹದ್ದು (bald eagle) ಅಮೆರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪಕ್ಷಿ. ಬೋಳುತಲೆ ಎನ್ನುವುದಕ್ಕಿಂತ ಬಿಳಿತಲೆ ಎನ್ನೋಣ (ಹಿಂದಿನಕಾಲದಲ್ಲಿ bald ಪದಕ್ಕೆ ಬಿಳಿ ಎಂದೇ ಅರ್ಥವಿತ್ತಂತೆ). ಶುಭ್ರಶ್ವೇತವರ್ಣದ ತಲೆ, ಹಳದಿ ಕೊಕ್ಕು, ಕಂದು ದೇಹ - ವಿಶಿಷ್ಟ ಸೌಂದರ್ಯ, ಗತ್ತಿನ ಗಾಂಭೀರ್ಯ ಇಲ್ಲಿನ ಹದ್ದುಗಳದು. ಅದಕ್ಕೆಂದೇ ಸರಕಾರಿ ಮರ್ಯಾದೆ. ರಾಷ್ಟ್ರಪಕ್ಷಿಯಾಗಿದ್ದೂ ಸಂತತಿ ಕ್ಷೀಣಿಸುತ್ತ ಇರುವುದರಿಂದ ಎನ್‌ಡೇಂಜರ್‍ಡ್ ಸ್ಪೀಸಿಸ್ ಪಟ್ಟಿಯಲ್ಲಿ ಸೇರುತ್ತದೋ ಎನ್ನುವ ಆತಂಕ.

ಅಮೆರಿಕದ ಪ್ರಜೆಗಳ ಜಾಯಮಾನಕ್ಕೆ (ಅಥವಾ ಎಲ್ಲರೂ ಆರೀತಿಯೆಂದು ನಾವು ಭಾರತದಲ್ಲಿ ತಪ್ಪಾಗಿ ತಿಳಿದುಕೊಂಡಂತೆ) ವಿರುದ್ಧವಾಗಿ ಈ ಹದ್ದುಗಳದು ಏಕಪತ್ನಿ-ಏಕಪತಿ ಅವಿನಾಭಾವ ಸಂಸಾರಕ್ರಮ. ಸರಿಸುಮಾರು ಇಪ್ಪತ್ತು ವರ್ಷಗಳ ಆಯಸ್ಸಿನುದ್ದಕ್ಕೂ ಗಂಡು-ಹೆಣ್ಣು ಜೋಡಿ ಆದರ್ಶದಂಪತಿಯಾಗಿ ಬಾಳುತ್ತವೆ. ವರ್ಷಕ್ಕೆ ಒಂದೋ ಎರಡೋ ಮಾತ್ರ ಮರಿಗಳನ್ನು ಹುಟ್ಟಿಸುತ್ತವೆ. ಬೇಟೆಯಾಡುವುದು ಜಾತಿಧರ್ಮವಾದ್ದರಿಂದ ಬೇಟೆಯಾಡಿ ಮಾಂಸಾಹಾರಿಗಳಾಗಿ ಬದುಕುತ್ತವೆಯೇ ವಿನಃ ಕೊಳೆತದ್ದಕ್ಕೇ ಸದಾ ಹೊಂಚುಹಾಕುತ್ತಿರುವ ಕ್ಷುದ್ರಗೃಧ್ರವಾಗಿ ಕಾಣಸಿಗುವುದಿಲ್ಲ.

ರಾಜಧಾನಿ ವಾಷಿಂಗ್ಟನ್ ಪ್ರದೇಶದಲ್ಲಿ ಇಂಥ ಒಂದು ಜೋಡಿ ಹದ್ದುಗಳ ಸಂಸಾರವಿತ್ತು. ಕಳೆದ ಹತ್ತುಹದಿನೈದು ವರ್ಷಗಳಿಂದ ಸುಖವಾಗಿ ಬದುಕು ಸಾಗಿಸಿತ್ತು. ಕನಿಷ್ಠಪಕ್ಷ ಹದಿನಾರಾದರೂ ಹಕ್ಕಿಗಳನ್ನು ರಾಷ್ಟ್ರೀಯ ಗರುಡಗಣತಿಗೆ ಸೇರಿಸಿತ್ತು. ಅಲ್ಲೇಪಕ್ಕ ಶ್ವೇತಭವನದಲ್ಲಿ ಕಪ್ಪುಚುಕ್ಕೆಯಿಟ್ಟಂತೆ ತಥಾಕಥಿತ ಕ್ಲಿಂಟನ್-ಮೋನಿಕಾ ವಿವಾಹೇತರ ಗುಸುಗುಸು ಜಗಜ್ಜಾಹೀರಾದರೂ, ಈ ಹದ್ದಿನಜೋಡಿ ಮಾತ್ರ ಯಾವುದೇ ಕಾರಣಕ್ಕೂ ಹದ್ದುಮೀರಿರಲಿಲ್ಲ. ಅವುಗಳದು ಅನ್ಯೋನ್ಯಪ್ರೇಮದ ಅನನ್ಯ ಮಾದರಿ.

ಅಷ್ಟಕ್ಕೂ, ಉತ್ತರ ಅಮೆರಿಕ ಖಂಡದಾದ್ಯಂತ (ಮುಖ್ಯವಾಗಿ ಅಲಾಸ್ಕಾದಲ್ಲಿ) ಎಪ್ಪತ್ತುಸಾವಿರ ಸಂಖ್ಯೆಯ ಹದ್ದುಗಳಿರಬೇಕಿದ್ದರೆ ಈ ರಾಜಧಾನಿ ಹದ್ದುಗಳಷ್ಟೇ ಏಕೆ ಇಷ್ಟು ಪ್ರಖ್ಯಾತವಾದವು? ಸುದ್ದಿಯ ಸುಳಿಗೆ ಸಿಲುಕಿದವು?

ಅದಕ್ಕೆ ಕಾರಣವಿದೆ. ರಾಜಧಾನಿ ವಾಷಿಂಗ್ಟನ್ ಡಿಸಿ ಅಂದರೆ ಬರೀ 65 ಚದರಮೈಲುಗಳ ಒಂದು ಕೇಂದ್ರಾಡಳಿತ ಪ್ರದೇಶವಿದ್ದಂತೆ. ಅದನ್ನು ಸುತ್ತುವರಿದಿರುವ ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ಸಂಸ್ಥಾನಗಳು. ಅವೆರಡನ್ನು ಪ್ರತ್ಯೇಕಿಸುವ ಪೊಟೊಮ್ಯಾಕ್ ನದಿ. ವಾಷಿಂಗ್ಟನ್‌ಗೆ ಉಡುದಾರ ತೊಡಿಸಿದಂತೆ ಇರುವ ರಿಂಗ್‍ರೋಡ್ - ಕ್ಯಾಪಿಟಲ್ ಬೆಲ್ಟ್‌ವೇ ಎಂದೇ ಬಹುಪ್ರಖ್ಯಾತ, ರಾಜಕೀಯವಾಗಿಯೂ ಭೌಗೋಳಿಕವಾಗಿಯೂ. ಬೆಲ್ಟ್‌ವೇಯು ಪೊಟೊಮ್ಯಾಕ್ ನದಿಯನ್ನು ದಾಟಬೇಕಾಗುವಲ್ಲಿ ಇರುವುದು ವುಡ್ರೊ ವಿಲ್ಸನ್ ಸೇತುವೆ. ಅಮೆರಿಕದ ಒಬ್ಬ ಮಾಜಿ ಅಧ್ಯಕ್ಷನ ನೆನಪಿಗೆ ಆ ಹೆಸರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more