• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾರೆಟ್‌ ಕಾ ಕ್ಯಾ ರೇಟ್‌ ಹೈ?...

By Staff
|

ಸರಿ, ‘ಎ’ ಜೀವಸತ್ವಕ್ಕೂ ಕಣ್ಣುಗಳ ಕ್ಷೇಮಾರೋಗ್ಯಕ್ಕೂ ಏನು ನಂಟು? ಯಕೃತ್ತಿನಲ್ಲಿ ಸಂಸ್ಕರಣೆಗೊಂಡ ಜೀವಸತ್ವವು ರಕ್ತದ ಮೂಲಕ ಅಕ್ಷಿಪಟಲ ಅಥವಾ ಕಣ್ಣುಗುಡ್ಡೆಯ ಹಿಂದಿನ ಪ್ರಕಾಶಗ್ರಾಹಿ ಪೊರೆಯತ್ತ ಪಯಣಿಸುತ್ತದೆ. ಅಲ್ಲಿ ಮತ್ತೆ ಅದು ‘ರೆಟಿನಲ್‌’ ಎಂಬ ರಾಸಾಯನಿಕವಾಗಿ ಪರಿವರ್ತಿತವಾಗುತ್ತದೆ. ಈ ರಾಸಾಯನಿಕದ ಮೇಲೆ ಬೆಳಕು ಬಿದ್ದಾಗ ಅದು ವಿದ್ಯುತ್‌ತರಂಗಗಳಾಗಿ ಮೆದುಳಿಗೆ ತಲುಪುತ್ತದೆ, ಆ ವಿದ್ಯುಚ್ಛಕ್ತಿಯ ನೆರವಿಂದ ಚಿತ್ತಭಿತ್ತಿಯಲ್ಲಿ ನಾವು ‘ನೋಡಿದ’ ದೃಶ್ಯಾವಳಿ ಮೂಡಿಬರುತ್ತದೆ. ಕಣ್ಣುಗುಡ್ಡೆಯಲ್ಲಿ ರೆಟಿನಲ್‌ ರಾಸಾಯನಿಕಕ್ಕೆ ಬರಗಾಲ ಬಂದರೆ, ಅಂದರೆ ನಮ್ಮ ದೇಹಕ್ಕೆ ‘ಎ’ ಜೀವಸತ್ವ ಅಥವಾ ಅದರ ಇನ್ನೊಂದು ರೂಪವಾದ ಕೆರೊಟಿನ್‌ನ ಸರಬರಾಜು ಕಡಿಮೆಯಾದರೆ ಸಹಜವಾಗಿಯೇ ಕಣ್ಣು ಕಾಣದವರಾಗುವ ಸಂಭವವಿರುತ್ತದೆ!

ಈ ವೈಜ್ಞಾನಿಕ ಸತ್ಯವನ್ನೇ ಎರಡನೇ ಪ್ರಪಂಚಯುದ್ಧದ ಸಮಯದಲ್ಲಿ ಬ್ರಿಟನ್‌ನ ರಾಯಲ್‌ ಏರ್‌ಫೋರ್ಸ್‌ ಒಂದು ವಿಶಿಷ್ಟ ರೀತಿಯಲ್ಲಿ ಪ್ರಚಾರತಂತ್ರವಾಗಿ ಬಳಸಿಕೊಂಡಿತು.

1940ರಲ್ಲಿ ಬ್ರಿಟಿಷ್‌ ಯುದ್ಧವಿಮಾನಚಾಲಕ ಜಾನ್‌ ಕನ್ನಿಂಗ್‌ಹಾಮ್‌ ಮೊಟ್ಟಮೊದಲಿಗೆ ರಾಡಾರ್‌ (RADAR) ತಂತ್ರಜ್ಞಾನವನ್ನುಪಯೋಗಿಸಿ ವೈರಿಪಡೆ (ಜರ್ಮನಿಯ ಲುಫ್ಟ್‌ವೇಫ‚್‌ ಬಾಂಬರ್ಸ್‌) ವಿಮಾನಗಳನ್ನು ಹೊಡೆದುರುಳಿಸಿದವನೆಂಬ ಕೀರ್ತಿಗೆ ಪಾತ್ರನಾದ. ರಾತ್ರಿಯ ಹೊತ್ತು ರಾಡಾರ್‌ ಬಳಸಿ ವಿಮಾನದಾಳಿ ಮಾಡುವ ಅದ್ಭುತ ಕೌಶಲ್ಯ ಹೊಂದಿದ್ದ ಕನ್ನಿಂಗ್‌ಹಾಮ್‌ನಿಗೆ Cat Eyes ಎಂದೇ ಉಪನಾಮವಿತ್ತು. ಆದರೆ ತಾನು ಬಳಸುತ್ತಿರುವುದು ಆಗಷ್ಟೇ ಆವಿಷ್ಕಾರವಾಗಿದ್ದ ರಾಡಾರ್‌ ತಂತ್ರಜ್ಞಾನವೆಂದು ಜಗಜ್ಜಾಹೀರುಪಡಿಸಲು ಇಚ್ಛಿಸದ ಬ್ರಿಟನ್‌ ಸಾಮ್ರಾಜ್ಯವು, ಜಾನ್‌ ಕನ್ನಿಂಗ್‌ಹಾಮ್‌ ಮತ್ತು ಅವನ ಸಹಚರ ಪೈಲಟ್‌ಗಳ ಅದ್ವಿತೀಯ ಕೌಶಲ್ಯಕ್ಕೆ, ಪ್ರಖರದೃಷ್ಟಿಗೆ ಅವರು ತಿನ್ನುವ ಕ್ಯಾರೆಟ್‌ ಕಾರಣ ಎಂದು ಒಂದು ‘ಕಟ್ಟುಕಥೆ’ಯನ್ನು ತೇಲಿಸಿಬಿಟ್ಟಿತು!

ದಿನಪತ್ರಿಕೆಗಳಲ್ಲೂ ಪ್ರಕಟವಾದ ಕ್ಯಾರೆಟ್‌-ಕಾ-ಕಮಾಲ್‌ ಬ್ರಿಟನ್‌ನಲ್ಲಿ ಮನೆಮಾತಾಯಿತು. ಅದನ್ನು ಪ್ರಾಮಾಣಿಕವಾಗಿ ನಂಬಿದ ನಾಗರಿಕರು ಹೆಚ್ಚುಹೆಚ್ಚು ಕ್ಯಾರೆಟ್‌ ಬೆಳೆಸಿ ಸೇವಿಸತೊಡಗಿದರು. ಯುದ್ಧಕಾಲದಲ್ಲಿ ಕಡ್ಡಾಯವಾಗಿ ಚಾಲ್ತಿಯಿದ್ದ ಕಟ್ಟಿರುಳ ಕರ್ಫ್ಯೂ (Night blackout) ವೇಳೆ ಅಷ್ಟಿಷ್ಟು ಕಾಣುವುದಕ್ಕಾದರೂ ಪ್ರಯೋಜನವಾಗುತ್ತದೆ ಎಂದು ಈ ವದಂತಿಗೆ ರೆಕ್ಕೆಪುಕ್ಕಗಳೂ ಹುಟ್ಟಿದುವು. ಕ್ಯಾರೆಟ್‌ ತಿಂದರೆ ಮಾತ್ರ ರಾತ್ರಿಯಲ್ಲಿ ಕಣ್ಣುಕಾಣೋದು, ಇಲ್ಲಾಂದರೆ ನಿಶಾಂಧತೆ (ರಾತ್ರಿಕುರುಡು) ಬರುವುದು ಖಚಿತವೆನ್ನುವಷ್ಟು ನಂಬಿಕೆ ಬೇರುಬಿಟ್ಟಿತು. ಕ್ಯಾರೆಟ್‌ ತಿನ್ನುವಂತೆ ಮಕ್ಕಳನ್ನು ಹೆದರಿಸಲು ಅದು ಏಕಕಾಲಕ್ಕೆ stick ಮತ್ತು carrot ಎರಡೂ ಆಯಿತು!

ಹಾಗಂತಹೇಳಿ ತೀರಾ ಜಾಸ್ತಿ ಪ್ರಮಾಣದಲ್ಲಿ ‘ಎ’ ಜೀವಸತ್ವ ಅಥವಾ ಕೆರೊಟಿನ್‌ನ ಸೇವನೆಯೂ ಒಳ್ಳೆಯದಲ್ಲ. ಕಣ್ಣುಗಳಿಗೆ ನೆರವಾಗುವುದರ ಬದಲು ಅದು ಇಡೀ ದೇಹಾರೋಗ್ಯಕ್ಕೇ ಮಾರಕವಾಗಬಹುದು. ರಕ್ತದಲ್ಲಿ ಕೆರೊಟಿನ್‌ ಅಂಶ ಹೆಚ್ಚಾದರೆ ಕಣ್ಣೂ ಸೇರಿದಂತೆ ದೇಹವಿಡೀ ಹಳದಿಯಾಗಬಹುದು! ಹಾಗಾಗಿ ಮಕ್ಕಳಿಗೆ ಕ್ಯಾರೆಟ್‌ ತಿನ್ನಿಸಬೇಕು ಹೌದು, ಆದರೆ ಅದನ್ನೇ ಅಲ್ಲ. ಎಲ್ಲ ವಿಧದ ತರಕಾರಿ ಹಣ್ಣುಹಂಪಲುಗಳನ್ನೂ ಆಹಾರದಲ್ಲಿ ಸೇರಿಸುವ ಪ್ರಯತ್ನವಿರಬೇಕು ಎನ್ನುತ್ತಾರೆ ಆಹಾರ/ಆರೋಗ್ಯ ತಜ್ಞರು.

ಅಂದಹಾಗೆ ನೀವು ವಿಧವಿಧ ರೀತಿಯ ವಸ್ತುಸಂಗ್ರಹಾಲಯಗಳನ್ನು ನೋಡಿದ್ದಿರಬಹುದು. ಗುಜರಿ ಸಾಮಾನುಗಳದೇ ಮ್ಯೂಸಿಯಂಗಳು ಇರುವುದೂ ಉಂಟು - ಅಂಥವಕ್ಕೂ ನೀವು ಕಾಲಿಟ್ಟದ್ದೂ ಇರಬಹುದು. ಆದರೆ ‘ಗಜ್ಜರಿ’ ಮ್ಯೂಸಿಯಂ ಬಗ್ಗೆ ಕೇಳಿದ್ದೀರಾ? ಅಂತರ್ಜಾಲದ ಮಾಹಿತಿಹೆದ್ದಾರಿಯಲ್ಲಿ ಸಾಗುವಾಗ ನಿಮಗೆ www.carrotmuseum.co.uk ಕಂಡುಬಂದರೆ (ಕ್ಯಾರೆಟ್‌ ತಿಂದೋ ತಿನ್ನದೆಯೋ ಅಂತೂ ನಿಮ್ಮ ದೃಷ್ಟಿಸೌಷ್ಠವ ಚೆನ್ನಾಗಿದೆಯೆಂದು ಊಹಿಸಿ) ನೀವು ಆ ಮ್ಯೂಸಿಯಂನೊಳಗೆ ಹೊಕ್ಕು ನೋಡಲೇಬೇಕು! ಯಕ್ಕಶ್ಚಿತ್‌ ಕ್ಯಾರೆಟ್‌ನಂಥ ಸಾಮಾನ್ಯ ತರಕಾರಿಗೂ ಒಂದು ಪ್ರತ್ಯೇಕವಾದ ಮಾಹಿತಿಮ್ಯೂಸಿಯಂ ಸ್ಥಾಪಿಸಿ ಅದರಲ್ಲಿ ವಿವಿಧ ಮಹಡಿಗಳ ವಿವಿಧ ಕೋಣೆಗಳನ್ನು ಕ್ಯಾರೆಟ್‌ ಕಣಜಗಳನ್ನಾಗಿಸಿದವರ ‘ತಲೆ’ಗೆ ತಲೆದೂಗಲೇಬೇಕು!

ಕ್ಯಾರೆಟ್‌ಮ್ಯೂಸಿಯಂನಲ್ಲಿ ನಿಮಗೆ ಕ್ರಿಸ್ತಪೂರ್ವ ಎರಡನೆ ಶತಮಾನದಿಂದಲೂ ಕ್ಯಾರೆಟ್‌ ಚರಿತ್ರೆ, ಅಲ್ಲಿಂದ ಇಂದಿನವರೆಗೂ ಕ್ಯಾರೆಟ್‌ ನಡೆದುಬಂದ ದಾರಿ, ಪ್ರಪಂಚದಾದ್ಯಂತ ವಿವಿಧೆಡೆಗಳಲ್ಲಿ ನಡೆಯುವ ಕ್ಯಾರೆಟ್‌ ಫೆಸ್ಟಿವಲ್ಸ್‌, ಕಲೆ-ಸಾಹಿತ್ಯ-ವಿಜ್ಞಾನ-ವೈದ್ಯಕೀಯದಲ್ಲಿ ಕ್ಯಾರೆಟ್‌ ಮಾಹಿತಿ, ಕ್ಯಾರೆಟ್‌ ವ್ಯವಸಾಯಕ್ಕೆ ಮಾರ್ಗದರ್ಶಿ ಸೂತ್ರಗಳ ಕೈಪಿಡಿ, ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳ ಪಟ್ಟಿ, ಕ್ಯಾರೆಟ್‌ನಿಂದ ಮಾಡಿದ ಸಂಗೀತವಾದ್ಯಗಳು, ಕ್ಯಾರೆಟ್‌ ಚಿತ್ರಗಳು, ಜೋಕ್‌ಗಳು, ಜಾಣ್ಮೆಲೆಕ್ಕಗಳು - ಎಲ್ಲ ಸಿಗುತ್ತವೆ. ಜತೆಯಲ್ಲೇ 24 ಕ್ಯಾರೆಟ್‌ (ಅಂದರೆ ಶುದ್ಧಬಂಗಾರ!) ರೆಸಿಪಿಗಳೂ!

ತಾಳಿ, ಕ್ಯಾರೆಟ್‌ ರೆಸಿಪಿ ಎಂದಾಕ್ಷಣ ಕ್ಯಾರೆಟ್‌ ಹಲ್ವಾ ನೆನಪಾಗಿ ನಿಮ್ಮ ಬಾಯಲ್ಲೂ ನೀರೂರಿತಲ್ಲವೇ? ಇವತ್ತೇ ಮಾರ್ಕೆಟ್‌ಗೆ ಹೋಗಿ ಮೊಲದಮರಿಯಂತೆ ನೀವೂ ಕೇಳಿ, ‘‘ಕ್ಯಾರೆಟ್‌ ಹೈ ಕ್ಯಾ?’’

ಹೌದು ಅಥವಾ ಇಲ್ಲ ಎಂಬ ಅಂಗಡಿಯವ್ನ ಉತ್ತರಕ್ಕೂ ಕಾಯದೆ ಕೇಳಿಬಿಡಿ ‘‘ಕ್ಯಾರೆಟ್‌ ಕಾ ಕ್ಯಾ ರೇಟ್‌ ಹೈ?’’

- srivathsajoshi@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more