• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗದಗಲ ಜಾಲದಲಿ ಹಪ್ಪಳ ಮಾಡಿದ ಸಪ್ಪಳ

By Staff
|

ಹಲಸಿನ ಹಪ್ಪಳದ ಪರಿಚಯ ಅಷ್ಟಾಗಿರದ ನಮಗೆ (ಬೆಂಗಳೂರಿಗರಿಗೆ) ಅದನ್ನು ಮಾಡುವ ವಿಧಾನವಿವರಗಳೂ ಸೇರಿದಂತೆ ರುಚಿಯ ಕಲ್ಪನೆಯನ್ನೂ ಹತ್ತಿಸಿದ್ದೀರಿ. ಲೇಖನದ ಕೊನೆಯಲ್ಲಿ ಉಲ್ಲೇಖಿಸಿರುವ ‘ಎಲ್ಲವೂ ವಾಣಿಜ್ಯಮಯವಾಗಿದೆ...’ ಎಂಬ ನಿಮ್ಮ ಮಾತು ನನಗೂ ಅರ್ಥವಾಗುತ್ತದೆ, ಅದನ್ನು ನಾನೂ ಅನುಭವಿಸಿದ್ದೇನೆ.

- ಚಂದ್ರಶೇಖರ ಬಿ.ಎಚ್‌; ಬೆಂಗಳೂರು

*

ಈ ಬಾರಿ ನಿಮ್ಮ ವಿಚಿತ್ರಾನ್ನದ ಬದಲು, ಹಲಸಿನ ಹಪ್ಪಳವನ್ನು ಬಡಿಸಿದ್ದೀರಿ. ಸೊಗಸಾಗಿದೆ. ಬಾಲ್ಯದ ನೆನಪುಗಳು ಕಣ್ಣ ಮುಂದೆ ಹಾದು ಹೊದವು. ಹಪ್ಪಳದ ಹಿಟ್ಟು, ಒಣಗಿಸಿದ ಹಪ್ಪಳಕ್ಕಿಂತ ರುಚಿ ಎಂಬುದು ನನ್ನ ಅಭಿಪ್ರಾಯ.

- ಶರತ್‌ ನೊಣಬೂರು; ಬೆಂಗಳೂರು

*

ಈ ಸಂಚಿಕೆಯು ನಮ್ಮನ್ನು ದಶಕಗಳಷ್ಟು ಹಿಂದಕ್ಕೆ ಕರೆದೊಯ್ದಿತು. ಅರ್ಧಾಂಶ ಹಿಟ್ಟು ಎಲೆಯಲ್ಲೇ ಉಳಿದರೂ ಲೆಕ್ಕಿಸದೆ ದಿನದ ಮೊಟ್ಟಮೊದಲ ಹಸಿಹಪ್ಪಳ ತಿಂದ ಕೀರ್ತಿಗೆ ಪಾತ್ರರಾಗಲು ಪ್ರಯತ್ನಿಸುತ್ತಿದ್ದುದು, ಎಲೆಯನ್ನು ಹರಿಯದೆಯೇ ಹಪ್ಪಳವನ್ನು ಬೇರ್ಪಡಿಸುವ ಕೌಶಲ ತೋರುತ್ತಿದ್ದುದು, ಹಪ್ಪಳ ಕಾರ್ಯಕ್ರಮದ ಉಪ ಉತ್ಪನ್ನವಾದ ಮಸಾಲೆ ಈರುಳ್ಳಿ ಬೆರೆಸಿ ಒಗ್ಗರಣೆ ಕೊಟ್ಟ ಹಪ್ಪಳದ ಹಿಟ್ಟಿನಲ್ಲಿ ತೆಂಗಿನೆಣ್ಣೆಯ ಬಾವಿ ನಿರ್ಮಿಸಿ ಒಂದೇ ಬೆರಳಿನಿಂದ ಹಿಟ್ಟನ್ನು ಎಣ್ಣೆಯಲ್ಲಿ ಮುಳುಗಿಸಿ ಚಪ್ಪರಿಸುತ್ತಿದ್ದುದು ಮುಂತಾದವು ನೆನಪಾದವು.

- ಚಿದಂಬರ ಕಾಕತ್ಕರ್‌; ಮಂಗಳೂರು

*

ನಿಮ್ಮ ಲೇಖನ ಓದಿದ ಮೇಲೆ ಹಲಸಿನ ಹಪ್ಪಳದ ರುಚಿ ನೋಡಬೇಕು ಅನ್ನಿಸುತಿದೆ. ಬಯಲುಸೀಮೆಯ ನಮಗೆ ಗೊತ್ತಿರುವುದೆಲ್ಲ ಉದ್ದಿನ ಹಪ್ಪಳ, ಅಕ್ಕಿ ಹಪ್ಪಳ ಅಥವಾ ಹುರುಳಿ ಹಪ್ಪಳ (ಅದು ತುಂಬಾ ಅಪರೂಪ). ಮಧ್ಯಾಹ್ನದ ಊಟದ ವೇಳೆಯಲ್ಲಿ ನಿಮ್ಮ ಲೇಖನ ಓದಿ, ಜೊತೆಗೆ ತಿನ್ನಲು ಹಪ್ಪಳ ಇದ್ದಿದ್ದರೆ.... ಅಂತ ಅನ್ನಿಸ್ತಾ ಇದೆ. (ಅನಿಸುತಿದೆ ಯಾಕೋ ಇಂದು... ಹಪ್ಪಳವ ತಿನಬೇಕೆಂದು...?) ಇವತ್ತೇ ಸುಪರ್‌ಮಾರ್ಕೆಟ್‌ನಲ್ಲಿ ಹಲಸಿನಹಪ್ಪಳ ಸಿಕ್ಕುತ್ತಾ ಅಂತ ಟ್ರೈ ಮಾಡ್ತೀನಿ.

- ಜಯಲಕ್ಷ್ಮಿ; ಬೆಂಗಳೂರು

*

ಬಹಳ ದಿನಗಳ ನಂತರ ವಿಚಿತ್ರಾನ್ನ ಓದಲು ಸಮಯ ಸಿಕ್ಕಿತು. ಅಂಕಣದ ಪುಟ ತೆರೆದು ನೋಡಿದರೆ ಅಲ್ಲಿದ್ದದ್ದು ಮತ್ತು ನನ್ನ ಕೈಲಿದ್ದದ್ದು ಒಂದೇ! ಹಲಸಿನ ಹಪ್ಪಳ!! ಹಾಗಾಗಿ ಹಪ್ಪಳ ಮೆಲ್ಲುತ್ತ ನಿಮ್ಮ ಅಂಕಣ ಓದುತ್ತ ಸ್ವತಹ ನನ್ನ ಬಾಲ್ಯಕಾಲಕ್ಕೆ ನಮ್ಮಜ್ಜಿಯ ಮನೆಗೆ ಹೋದ ಹಾಗೆ ಆಯಿತು. ನಾವೂ ಕೂಡ ಆಗ ಬೇಸಿಗೆಯಲ್ಲಿ ಹಪ್ಪಳ ಮಾಡುತಿದ್ದೆವು. ಆದರೆ ಅಜ್ಜಿ ಮನೆಯಲ್ಲಿ ಮಾಡುತಿದ್ದುದ್ದು ಹುರುಳಿ ಹಪ್ಪಳ, ರಾಗಿ ಹಪ್ಪಳ ಮುಂತಾದವು ಅಷ್ಟೆ.

- ಗಿರೀಶ್‌ ಸಾಹುಕಾರ್‌; ಚಿಕಾಗೊ

*

ನಿಮ್ಮ ಹಪ್ಪಳಪುರಾಣ ನನ್ನನ್ನು ನೇರ 35-40 ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ದಿದೆ. ಪ್ರತಿ ವಾಕ್ಯವನ್ನೂ ನನ್ನದೇ ಸ್ವಂತ ಅನುಭವದಂತೆ ‘ಹಪ್ಪಳಿಸಿ’ ಆನಂದಿಸಿದ್ದೇನೆ. ಮನೆಯವರ ಜೊತೆಗೆ ಬಿಸಿಬಿಸಿಯಾಗಿ ಚರ್ಚಿಸಿ ಖುಷಿಪಟ್ಟಿದ್ದೇನೆ. ಅತ್ಯಂತ ಹಾರ್ದಿಕ ಅಭಿನಂದನೆಗಳು. ಮತ್ತೂ ಮತ್ತೂ ಮಣ್ಣಿನವಾಸನೆಯಿಂದ ತುಂಬಿದ ಈ ರೀತಿಯ ಅಂಕಣಗಳನ್ನು ಬರೆಯುತ್ತಲೇ ಇರಿ ಎಂದು ಹಾರೈಸುವ,

-- ಸಂಧ್ಯಾ ದಿವೇಕರ್‌; ತುಮಕೂರು

*

ಹಲಸಿನ ಹಪ್ಪಳದ ತಯಾರಿಯ ಸಂಭ್ರಮವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೀರ. ನಮ್ಮ ಕಡೆ ಹಲಸಿನಹಪ್ಪಳ ಮಾಡೋಲ್ಲ ಆದ್ರೆ ಈ ಸಾರಿ ಟ್ರೈ ಮಾಡ್ಬೇಕು ಅನ್ನಿಸ್ತಾ ಇದೆ ನಿಮ್ಮ ವಿವರವಾದ ಲೇಖನವನ್ನು ಓದಿ!

- ರಾ-ಧಿಕಾ ಎಂ ಜಿ; ಬೆಂಗಳೂರು

*

ನಾನೂ ಒಬ್ಬ ಹಲಸಿನ ಹಪ್ಪಳದ ಫ‚ಾ್ಯನು. ಅದನ್ನು ಹೇಗೆ ಮಾಡುತ್ತಾರೆಂಬ ಬಗ್ಗೆ ಖಚಿತವಾಗಿ ಗೊತ್ತಿರಲಿಲ್ಲ. ನಿಮ್ಮ ಲೇಖನ ಓದಿದ ಮೇಲೆ, ಚಿತ್ರ ಕಣ್ಮುಂದೆ ಬಂತು. ಇಂಥಾ ಸ್ವಾನುಭವದ ವರದಿಯಾಂದಿಗೆ ಓದಿಕೊಂಡು ಗ್ರಹಿಸಿ ಬರೆದ ಲೇಖನಗಳು ಸ್ಪ-ರ್ಧಿಸಲಾರವು (ಇದು ನನ್ನ ಅನುಭವ ಕೂಡ).

- ಮೈ ಶ್ರೀ ನಟರಾಜ್‌; ಪೊಟೊಮಿಕ್‌, ಮೇರಿಲ್ಯಾಂಡ್‌

*

ಹಪ್ಪಳ ವಿಚಿತ್ರಾನ್ನ ಲೇಖನವನ್ನು ಓದಿದೆ. ಸ್ವಾದಿಷ್ಟವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ ಬಿಡಿ. ಅಮ್ಮನಿಗೆ ಕೂಡ ಲೇಖನದ ಯುಆರೆಲ್‌ ಕಳಿಸಿದ್ದೆವು. ನಿಮ್ಮ ಮತ್ತು ನಮ್ಮ ಹಪ್ಪಳತಯಾರಿಯ ಕ್ರಮದಲ್ಲಿ ಕೆಲವು ವ್ಯತ್ಯಾಸಗಳನ್ನು ಗುರುತಿಸಿ ಅಮ್ಮ ಆಶ್ಚರ್ಯಪಡುತ್ತಿದ್ದಳು.

- ವಸಂತ್‌ ಕಜೆ; ಯುನೈಟೆಡ್‌ ಕಿಂಗ್‌ಡಮ್‌

*

ವಿಚಿತ್ರಾನ್ನ ಅಂಕಣದ ಓದುಗರಾ-ದ ತಿರುಮಲೇಶ್‌ ಮತ್ತು ವಸಂತ್‌ ಅವರಿಬ್ಬರ ಅಮ್ಮ ನಾನು. ನಿಮ್ಮ ಲೇಖನಗಳನ್ನು ನಾನೂ ದಟ್ಸ್‌ಕನ್ನಡದಲ್ಲಿ ಅಥವಾ ವಿಜಯಕರ್ನಾಟಕದಲ್ಲಿ ಓದುತ್ತಿರುತ್ತೇನೆ.

ನಾನು 1973ರ ಸುಮಾರಿಗೆ ಪದವಿಪೂರ್ವ ಶಿಕ್ಷಣ ಪಡೆದು ಹಳ್ಳಿಯ ಮನೆಯ ಗೃಹಿಣಿಯಾಗಿ ಇರುವಾಕೆ. ಈಗ ನನ್ನ ಮಕ್ಕಳಿಬ್ಬರೂ ವಿದೇಶಕ್ಕೆ ಹೋಗುವಾಗ ಅವರ ಗಣಕಯಂತ್ರವನ್ನು ನಮ್ಮ ಮನೆಗೆ ತಂದು, ನನಗೆ ಅವರೊಡನೆ ಸಂಪರ್ಕ ಸಾ-ಧಿಸುವಷ್ಟು ಅದರ ಪರಿಚಯ ಮಾಡಿಸಿ ಹೋಗಿದ್ದಾರೆ. ನಾನು ನಮ್ಮ ಹವ್ಯಕಭಾಷೆಯ ಶಬ್ದಗಳನ್ನೇ ಇಂಗ್ಲಿಷ್‌ ಅಕ್ಷರಗಳಲ್ಲಿ ಕೀಲಿಮಣೆಯ ಮೇಲೆ ಮೂಡಿಸಿ ನನ್ನ ಮಕ್ಕಳೊಡನೆ ನನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ. ಹಪ್ಪಳದ ಬಗೆಗಿನ ಲೇಖನವನ್ನು ಓದಿದೆ. ಛೆ! ನಾನೂ ಬರೆಯಬಾರದಿತ್ತೇ ಅಂದುಕೊಂಡೆ. ನನ್ನ ಸಣ್ಣ ಮಗ ವಸಂತ ಸಣ್ಣವನಿದ್ದಾಗ ತುಂಟ, ನಾವು ಹಪ್ಪಳ ಹಾಕುತ್ತಿದ್ದಾಗ ಅಲ್ಲೇ ಸುಳಿದಾಡಿ ಕೆಲವು ಹಪ್ಪಳಗಳಲ್ಲಿ ಅವನ ಕಾಲಿನ ಅಚ್ಚು ಮೂಡಿಸಿ ನನ್ನ ಕೋಪಕ್ಕೆ ಕಾರಣನಾದದ್ದನ್ನು ನೆನಪಿಸಿದಿರಿ. ಮೊನ್ನೆ ನಾನು ಹಾಗೂ ನನ್ನವರು ಎರಡು ಹಲಸಿನಕಾಯಿಗಳ ಹಪ್ಪಳ ಮಾಡಿದ್ದೆವು. ಮಕ್ಕಳ ಗೈರುಹಾಜರಿನಿಂದಾಗಿ ತಿನ್ನುವ ಬಾಯಿ ಕಡಿಮೆ ತಾನೆ?

- ಜಯಲಕ್ಷ್ಮಿ ಆರ್‌ ಭಟ್‌; ಕಜೆ (ಬಂಟ್ವಾಳ ತಾ। ದ.ಕ)

*

Very tasty episode. Believe it or not - My whole family loves halasina happala. Last week when it was over everyones face became small. We get it From Kundapura where My Brothers friend lives. I had this question why they have lines on them? Today I got answer for that also. None of other happals match the taste of Halasina happla. When we called India also to get them the answer was june nantara Siguttade.

- Shruti Satish; New Jersey

*

After a long break (could not read your articles for 4 to 5 months), I relished the taste of Vichitranna with Halasina happala.

- Mallika Rajiv; North Carolina

*

Halasina happaLa article was karram kurram. Nicely written. Read it to my brother who is spending his vacation with me. He made me fry some on kenDa. Kids of today have no much interest in eating halasina happaLa or for that matter any of the old kurukulu tindis (both my girls are an exception, ha ha ha).

To drive away crows we used to collect stray crow feathers and insert them in a mound of cow dung. Well did not bother to find the logic behind such things. When we are young, it is as if the elders are scholars. Yes, it was pure fun and joy making halasina happaLa. We used to devote three days for making happaLas. In the meantime the ladies of the house would cook on rotation basis. Day used to start early at 4.00 a.m. I still remember my grandma singing krishna moorthy kaNna mundE nintidantide and uTT re krishna sakaaNi jalle (Konkani) in those dawn hours. Now I have restricted myself to storing halasina toLe in brine solution and making of halasina chips. No happaLa activity.

By the way, its raining here in Bangalore and let me fry some halasina happaLa (bought ones) Now!

- Malathi Shenoy; Bangalore

*

We used to prepare halasina happaLa mainly for consumption in rainy season. Few years back we had a bumper crop of jackfruits. So we prepared more happaLa. After distributing them amongst our relatives and friends, we had surplus. So I thought of selling them. Initially there was no good response. But what has happend now is, we get booking one year in advance! Many times it is not possible to supply to all the needies. If one new customer takes this year it is 100% sure that hell place order for next year. But we prepare not more than 5000 a year. If you want samples, mail me - I shall send some to you.

- Gajanana Vaze; Bangalore

*

Vichitranna "halasinakai happala" dashte sakhat tasty ittu. It so happened Id saved it in hard disk on Saturday and thought of reading it on Monday at office. It is published in Sunday VK too, isn’t it? I read at home 3-4 times. Read the soft copy too this morning. After reading, I relished a fried "halasinakai happala" and 2 burnt ones on gas burner at home on Sunday evening. You made me go back to my childhood (with the help of time machine?) when I used to go to my grannys house in summer and as uve rightly said, the households with "happala" preparation would have festive look. Just like you, even Id relish the "half-onagida" happala which makes me drool now too. Id even relish the "happalada hittu" too and many a time suffered from stomach ache, which has a mention in your article.

Earlier, theyd prepare happalas on banana leaves but because of some "roga" for the banana plantation, started preparing happalas on plastic covers. Id not relish the ones prepared on plastic covers much like the ones prepared on leaves. Im ready to compromise with them also now, but no. Where are the days? Nobody prepares happalas at home in my native. I think those days are slipped out of my palms and wonder whether theyd come back and if I wish so, itd be nothing but my sheer foolishness! Ive told one of my aunts that we shall go to our native in summer and prepare happalas together, following all the due procedures. People at my native scoff at me saying nobody in villages likes to take all those pains to prepare happalas.

Yes. Happalas are sold in a shop called "Vijaya Narasimha" at Shringeri. But can seldom be comparable to the ones prepared at home. Summane naalige chapalakke ashte. Ive brought 2-3 "kattu"s of happalas. Each & every line made me reminisce my childhood summer vacations and thanks for helping me go back to retro. I wonder how you can talk on any subject - from "Enilla" to "Coqui" to Happalas! Kudos to you.

- Jyothi Kadladi; Bangalore

***

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more