ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝಗಮಗಿಸುವ ಬಿಳುಪಿಗಾಗಿ ಬಳಸಿ - ಬ್ರೈನ್‌ ವಾಷಿಂಗ್‌ ಪೌಡರ್‌!

By Staff
|
Google Oneindia Kannada News


ತಲೆಯಾಳಗಿನ ಮೆದುಳನ್ನು ತೊಳೆಯುವ ನಿಪುಣರು, ನಮ್ಮ ಸುತ್ತ ಮೊದಲಿನಿಂದಲೂ ಇದ್ದಾರೆ! ಅವರಿಗೆ ನೆರವಾಗಲು ಈಗ ಬ್ರೆೃನ್‌ ವಾಷಿಂಗ್‌ ಪೌಡರ್‌ ಬಂದಿದೆಯಂತೆ! ತಲೆ ಇರೋರು, ಈ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಕು! ಹೆಚ್ಚಿನ ವಿವರಗಳು; ವಿಚಿತ್ರಾನ್ನ 222ನೇ ಸಂಚಿಕೆಯಲ್ಲಿ...

  • ಶ್ರೀವತ್ಸ ಜೋಶಿ
Brainwashing : How effectively it washes the brains?ಸಫ‚್‌ರ್, ಏರಿಯಲ್‌, ನಿರ್ಮಾ, ಟೈಡ್‌ ಮುಂತಾದ ವಾಷಿಂಗ್‌ಪೌಡರ್‌ಗಳ ಬಗ್ಗೆ ಮಾತ್ರ ನೀವು ಇದುವರೆಗೆ ಕೇಳಿದ್ದಿರಬಹುದು. ಕೇಳಿರೋದು ಏನು, ಅವನ್ನೇ ನೀವು ದಿನಾ ಉಪಯೋಗಿಸುತ್ತಿರುವುದಿರಬಹುದು. ಅಮೆರಿಕಾದಲ್ಲಿ ದಿನಾ ಯಾರ್ರೀ ಬಟ್ಟೆ ಒಗೀತಾರೆ, ವೀಕೆಂಡಲ್ಲೇ ಎಲ್ಲ ಲಾಂಡ್ರಿ ಗೀಂಡ್ರೀ ಮಾಡೋದಲ್ವೇ ಅಂತೀರಾ? ಸರಿ, ಒಟ್ಟಿನಲ್ಲಿ ಯಾವಾಗಾದ್ರೂ ವಾಷಿಂಗ್‌ಪೌಡರ್‌ ಉಪಯೋಗಿಸ್ತೀರಿ ತಾನೆ? ಮತ್ತೆ ಅವುಗಳಿಂದಲೇ ನಿಮ್ಮ ಉಡುಪುಗಳಿಗೆ ಹಾಲಿನಂಥ ಬಿಳುಪು ಬರೋದಲ್ವೇ? ಲಲಿತಾ ಪವಾರ್‌ ಜಾಹೀರಾತಿನಲ್ಲಿ ಹೇಳಿದಂತೆ ‘ಧಾಗ್‌? ಢೂಂಡ್ತೆ ರೆಹೆ ಜಾವೋಗೆ!’ ಎನ್ನುವಂಥ ವಿಶ್ವಸನೀಯ ಒಗೆತದ ಆನಂದವನ್ನು ಕೊಡೋದು ಈ ವಾಷಿಂಗ್‌ಪೌಡರ್‌ಗಳೇ ಅಲ್ಲವೇ?

ಮಾರ್ಕೆಟಲ್ಲಿ ಸಿಗುವ ವಿವಿಧ ಬ್ರಾಂಡ್‌ಗಳ ವಾಷಿಂಗ್‌ಪೌಡರ್‌ಗಳು ನಿಮ್ಮ brand loyaltyಯನ್ನನುಸರಿಸಿ ನಿಮ್ಮ ಫ‚ೇವರಿಟ್‌ ಆಗಿರಬಹುದು. ಆದರೆ ಇವತ್ತು ಒಂದು ಹೊಸ ನಮೂನೆಯ ವಾಷಿಂಗ್‌ಪೌಡರನ್ನು ನಿಮಗೆ ಪರಿಚಯಿಸಬೇಕು. ಅರೆರೆ! ಈ ಆಸಾಮಿ ಎಲ್ಲಾಬಿಟ್ಟು ಯಾವಾಗ ಪೌಡರು-ಸೋಪು-ಪೇಸ್ಟು ಮಾರುವ ಸೇಲ್ಸ್‌ಮನ್‌ ಆದ, ಇದೇನಾದರೂ ‘ಆ್ಯಮ್‌ವೇ’ ಪ್ರೊಡಕ್ಟ್‌ ಇರಬಹುದೇ ಅಂತ ಆಶ್ಚರ್ಯಪಡಬೇಡಿ. ನಾನು ಈ ಹೊಸ ವಾಷಿಂಗ್‌ಪೌಡರನ್ನು ನಿಮಗೆ ಮಾರಲು ಯತ್ನಿಸುತ್ತಿಲ್ಲ, ಉಪಯೋಗಿಸಲು ಶಿಫಾರಿಸುತ್ತಿಲ್ಲ; ಇದು ನಿಮಗೆ ಕೂಡ ಗೊತ್ತಿದೆಯಾ ಅಂತ ಮಾತ್ರ ವಿಚಾರ ವಿನಿಮಯಿಸುತ್ತಿದ್ದೇನೆ.

ಇದರ ಹೆಸರು ಬ್ರೈನ್‌ ವಾಷಿಂಗ್‌ ಪೌಡರ್‌ ಎಂದು. ನಿಮಗೆ ಗೊತ್ತಿರುವ ಇತರ ವಾಷಿಂಗ್‌ಪೌಡರ್‌ಗಳಿಗಿಂತ ಇದು ಹೇಗೆ ಭಿನ್ನ ಅಂದರೆ, ಬಟ್ಟೆಗಳನ್ನು ಥಳಥಳಗೊಳಿಸುವುದಕ್ಕಿಂತಲೂ ಹೆಚ್ಚಾಗಿ ಇದು ನಿಮ್ಮ ತಲೆಬುರುಡೆಯಾಳಗಿನ ಮಿದುಳನ್ನು (ಇದ್ದರೆ) ಚಕಾಚಕ್‌ ಹೊಳೆಯುವಂತೆ ಮಾಡುತ್ತದೆ. ಅಂದರೆ, ಇದನ್ನು ‘‘ಬ್ರೈನ್‌ ವಾಷಿಂಗ್‌ಪೌಡರ್‌’’ ಎನ್ನುವ ಬದಲು ‘‘ಬ್ರೈನ್‌ವಾಷಿಂಗ್‌ ಪೌಡರ್‌’’ (ಪದಗಳ ವಿಂಗಡಣೆಯನ್ನು ಗಮನಿಸಿ) ಎಂದು ಕರೆಯುವುದೇ ಒಳ್ಳೆಯದು!

ಮಾರುಕಟ್ಟೆಗೆ ಬಿಡುಗಡೆಯಾದ ಹೊಸ ವಾಷಿಂಗ್‌ಪೌಡರ್‌ ಆದರೆ ಅದರ ಜಾಹೀರಾತುಗಳು ಟಿವಿಯಲ್ಲಿ ಬರಬೇಕಿತ್ತಲ್ಲ ಎಂದು ನಿಮ್ಮ ಬ್ರೈನ್‌ನಲ್ಲಿ ಈಗಾಗಲೇ ಒಂದು ಸಂದೇಹ ಉದ್ಭವಿಸಿರಬಹುದು. ಅಫ‚್‌ಕೋರ್ಸ್‌, ಟಿವಿಯಲ್ಲಿ ಜಾಹೀರಾತು ಯಾವತ್ತೋ ಬಂದಿದೆ! ನೀವದನ್ನು ನೋಡಿಯೂ ಇದ್ದೀರಿ! ಯಾವುದು ಗೊತ್ತಾ ಆ ಜಾಹೀರಾತು? ರಮಾನಂದ್‌ ಸಾಗರ್‌ ನಿರ್ದೇಶನದ ಟಿವಿ ಸೀರಿಯಲ್‌ ರಾಮಾಯಣವನ್ನು ನೋಡುತ್ತಿದ್ದ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ.

ಆ ಧಾರಾವಾಹಿಯಲ್ಲೇ ಗೂನು ಬೆನ್ನಿನ ಮುದುಕಿ ಮಾಡೆಲ್‌ ಒಬ್ಬಳು ರಾಣಿ ವೇಷದ ಇನ್ನೊಬ್ಬ ಮಾಡೆಲ್‌ ಜತೆ ಸಂಭಾಷಿಸುತ್ತಿದ್ದಳಲ್ಲ? ಬ್ರೈನ್‌ವಾಷಿಂಗ್‌ ಪೌಡರ್‌ನ ಅತ್ಯಂತ ಪರಿಣಾಮಕಾರಿ ಜಾಹೀರಾತು ಅದು! ರಾಮಾಯಣದಲ್ಲಿ ಗೂನುಬೆನ್ನಿನ ಮುದುಕಿ ಮಂಥರೆ ತನ್ನ ರಾಣಿ ಕೈಕೇಯಿಯ ಬ್ರೈನನ್ನು ವಾಷಿಸಲು ಉಪಯೋಗಿಸಿದಷ್ಟು ಬ್ರೈನ್‌ವಾಷಿಂಗ್‌ ಪೌಡರನ್ನು ಬೇರಾರೂ ಇದುವರೆಗೆ ಉಪಯೋಗಿಸಿದ ದಾಖಲೆಯಿಲ್ಲ!

ಟಿವಿ ರಾಮಾಯಣದ ನಂತರ ಬಂದ ಟಿವಿ ಮಹಾಭಾರತದಲ್ಲೂ ಬ್ರೈನ್‌ವಾಷಿಂಗ್‌ ಪೌಡರ್‌ನ ಜಾಹೀರಾತುಗಳು ಬರುತ್ತಿದ್ದುವು. ಆಗ ಗೂನುಬೆನ್ನಿನ ಮುದುಕಿಯ ಬದಲಿಗೆ, ಕುಂಟುತ್ತ ನಡೆಯುವ ಚಾಲಾಕಿನ ಗಂಡಸು ಇದಕ್ಕೆ ರೂಪದರ್ಶಿಯಾಗಿದ್ದ. ಅಲ್ಲಿ ಸಿಕ್ಕಾಪಟ್ಟೆ ಬ್ರೈನ್‌ವಾಷಿಂಗ್‌ ಪೌಡರ್‌ ಬಳಸಿದವ ಶಕುನಿ. ವಾಷಿಸಿದ್ದು ಅವನ ಸೋದರಳಿಯ ದುರ್ಯೋಧನನ ಬ್ರೈನನ್ನು. ಈ ಪೌಡರ್‌ನ ಪ್ರಭಾವ ಸಕ್ಕತ್ತಾಗಿದೆ ಎಂದುಕೊಂಡ ಸಾಕ್ಷಾತ್‌ ಶ್ರೀಕೃಷ್ಣ ಪರಮಾತ್ಮ ಸಹ ಸುಮಾರು ನಾಲ್ಕೈದು ಟೇಬಲ್‌ ಸ್ಪೂನ್‌ಗಳಷ್ಟು ಬ್ರೈನ್‌ವಾಷಿಂಗ್‌ಪೌಡರನ್ನು ಕರ್ಣನ ಬ್ರೈನಿನ ಮೇಲೆ ಪ್ರಯೋಗಿಸಲು ಯತ್ನಿಸಿದ, ಆದರೆ ಕರ್ಣನ ಬ್ರೈನಿನ ಸ್ವಾಮಿನಿಷ್ಠೆ ಎಂಬ ಕಲೆಗಳನ್ನು ತೊಳೆಯಲು ಅದು ಎಲ್ಲೂ ಸಾಕಾಗಲಿಲ್ಲ, ಶ್ರೀಕೃಷ್ಣ ತನ್ನ ಪ್ರಯತ್ನವನ್ನು ಬಿಟ್ಟುಬಿಟ್ಟ.

ಸರಿ, ತಮಾಷೆಮಾತು ಬಿಟ್ಹಾಕಿ ಈಗ brainwashing ಎಂದರೇನು, ಆ ಪದ ಹೇಗೆ ಹುಟ್ಟಿಕೊಂಡಿತು, ನಿಜವಾಗಿಯೂ ಅಂಥದೊಂದು ಪ್ರಕ್ರಿಯೆ ಇದೆಯೇ, ಅದರ ಹಿಂದಿನ ವೈಜ್ಞಾನಿಕ/ಮಾನಸಿಕ/ಮಾನವಿಕ ತಥ್ಯಗಳೇನು ಇತ್ಯಾದಿಯನ್ನೆಲ್ಲ ಸ್ವಲ್ಪ ತಿಳಿದುಕೊಳ್ಳೋಣವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X