• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೂತ್‌ಪೇಸ್ಟು ಇಚ್ಛಾಮರಣಿಯೆ? ಚಿರಂಜೀವಿಯೆ?

By Staff
|

ಈಚೀಚೆಗೆ ಕುಗ್ರಾಮಗಳಲ್ಲಿನ ಜನರು ಸಹಾ ಪೇಸ್ಟು ಸಹವಾಸಕ್ಕೆ ಬಿದ್ದು, ಹಲ್ಲು ತೋರಿಸುತ್ತಿದ್ದಾರೆ! ಮಣ್ಣುಮಸಿ ಜಾಗಕ್ಕೆ ಪೇಸ್ಟು ಬಂದು ಭದ್ರವಾಗಿ ಕುಳಿತಿದೆ! ಪೇಸ್ಟ್ ನ ಅಡ್ಡ ಮತ್ತು ಉದ್ದ ಪರಿಣಾಮಗಳ ಬಗ್ಗೆ ಚರ್ಚೆ ಇದ್ದದ್ದೆ. ಸದ್ಯಕ್ಕೆ ಪೇಸ್ಟುಗೆ ಸಂಬಂಧಿಸಿದ ಕೆಲ ಸ್ವಾರಸ್ಯಕರ ಸಂಗತಿಗಳು ನಿಮ್ಮ ಗಮನಕ್ಕೆ..

  • ಶ್ರೀವತ್ಸ ಜೋಶಿ

Is there an expiry date for toothpaste?ಮೊದಲಿಗೆ ಇಚ್ಛಾಮರಣಿಯ ವಿಲೇವಾರಿ ಮಾಡುವಾ. ಹಾಗೆಂದರೆ ಏನು, ಯಾರು, ಯಾಕೆ ಎಂಬುದರ ವಿಶ್ಲೇಷಣೆ ಕೈಗೆತ್ತಿಕೊಳ್ಳುವಾ.

ನಿಮಗೆ ಗೊತ್ತಿರಬಹುದು, ಮಹಾಭಾರತದ ಒಂದು ಪ್ರಮುಖ ಪಾತ್ರವಾಗಿದ್ದ ಭೀಷ್ಮಪಿತಾಮಹನಿಗೆ ಇಚ್ಛಾಮರಣದ ವರ(ಶಾಪ?) ಇತ್ತು. ತಾನು ಯಾವ ದಿನದಂದು ಸಾಯುತ್ತೇನೆಂಬುದನ್ನು ನಿರ್ಧರಿಸಿಕೊಳ್ಳುವ ಸ್ವಾತಂತ್ರ್ಯವಿತ್ತು. ಮಹಾಭಾರತ ಯುದ್ಧದ ಹತ್ತನೆಯ ದಿನ ಭೀಷ್ಮಸಂಹಾರಕ್ಕಾಗಿಯೇ ಶಿಖಂಡಿ ರೂಪದ ಅಂಬೆಯನ್ನು ಕೃಷ್ಣಾರ್ಜುನರು ಬಳಸಿಕೊಂಡಿದ್ದರಿಂದ ಭೀಷ್ಮ ಯುದ್ಧನಿವೃತ್ತನಾದ. ಆದರೆ ಆಗಿನ್ನೂ ದಕ್ಷಿಣಾಯಣ ನಡೆಯುತ್ತಿದ್ದರಿಂದ ಉತ್ತರಾಯಣ ಪುಣ್ಯಕಾಲ ಬರುವವರೆಗೆ ತಾನು ಹಾಗೇ ಇದ್ದು ಆಮೇಲೆ ಪ್ರಾಣತ್ಯಾಗ ಮಾಡುವುದಾಗಿ ಭೀಷ್ಮ ನಿರ್ಧರಿಸಿದ. ಆ ಪರಿಸ್ಥಿತಿಯಲ್ಲಿ ಯುದ್ಧಭೂಮಿಯಲ್ಲೇ ಅವನಿಗೆ ಮಲಗಲು ಶರಶಯ್ಯೆಯನ್ನು ನಿರ್ಮಿಸಿ, ಕುಡಿಯಲು ಗಂಗಾಜಲವನ್ನು ಒದಗಿಸಿ ಕೊಟ್ಟವನು ಮತ್ತಾರೂ ಅಲ್ಲ, ಮಧ್ಯಮಪಾಂಡವ ಅರ್ಜುನ!

ಆ ರೀತಿ ಊರ್ಧ್ವಮುಖಿ ಬಾಣಗಳ ಮಂಚದ ಮೇಲೆ ಅಂಗಾತ ಮಲಗಿದ ಭೀಷ್ಮನ ಚಿತ್ರವನ್ನು ನಾವೆಲ್ಲ ಚಂದಮಾಮದಲ್ಲಿ, ಕಥೆಪುಸ್ತಕಗಳಲ್ಲಿ, ಟಿವಿ ಧಾರಾವಾಹಿಯಲ್ಲಿ ನೋಡಿದ್ದೇವೆ. ನಾವು ಹತ್ತಿಯ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದರೂ ಸುಖ ಸಿಗದೆ ಹೊರಳಾಡುತ್ತಿರಬೇಕಾದರೆ, ಚುಚ್ಚುತ್ತಿರುವ ಬಾಣಗಳ ಹಾಸಿಗೆಯ ಮೇಲೆ ಭೀಷ್ಮ ಅದುಹೇಗೆ ಸುಖವಾಗಿದ್ದನೋ ಎಂದು ಆಶ್ಚರ್ಯಪಟ್ಟಿದ್ದೇವೆ. ಆದರೆ ಅದಕ್ಕಿಂತ ಹೆಚ್ಚಿನ ಆಶ್ಚರ್ಯ ಈ ಟೂತ್‌ಪೇಸ್ಟ್ ಟಿಪ್ಪಣಿಯಲ್ಲಿ ಭೀಷ್ಮನ ಪ್ರಸ್ತಾಪ ಯಾಕೆ ಎಂದು ಈಗ ನಿಮಗಾಗಿರಬಹುದು.

ಒಂದು ಕೆಲ್ಸ ಮಾಡಿ; ನೆಕ್ಸ್ಟ್‌ಟೈಮ್ ನೀವು ಹಲ್ಲುಜ್ಜುವುದಕ್ಕೆ ರೆಡಿಯಾಗುವಾಗ ಸೂಕ್ಷ್ಮವಾಗಿ ಗಮನಿಸಿ. ಟೂತ್‌ಬ್ರಷ್ ಮೇಲೆ ಮುಕ್ಕಾಲಿಂಚಿನಷ್ಟು ಟೂತ್‌ಪೇಸ್ಟ್ (ಕೋಲ್ಗೇಟ್, ಪೆಪ್ಸೊಡೆಂಟ್, ಕ್ಲೋಸ್‌ಅಪ್, ವಜ್ರದಂತಿ... ಯಾವುದೇ ಬ್ರಾಂಡ್‌ನದಿರಲಿ) ಹಚ್ಚಿಕೊಂಡಾಗ ಅದು ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಭೀಷ್ಮಪಿತಾಮಹನಂತೆಯೇ ಕಂಡುಬಂದು ನಿಮ್ಮ ಮುಖದಲ್ಲೊಂದು ಕೋಲ್ಗೇಟ್ ನಗು ಬರದಿದ್ದರೆ ಆಗ ಕೇಳಿ!

ಸೋ, ಟೂತ್‌ಪೇಸ್ಟನ್ನು ಇಚ್ಛಾಮರಣಿ ಭೀಷ್ಮನೊಂದಿಗೆ ನಾನು ತಳುಕುಹಾಕಿದ್ದು ಅದೇ ಕಾರಣಕ್ಕೆ. ಹಾಗಾದರೆ ಚಿರಂಜೀವಿಯ ಸಂಗತಿಯೇನು ಎಂದಿರಾ? ಸ್ವಲ್ಪ ತಾಳಿ, ವಿವರಿಸುತ್ತೇನೆ.

ಕೆಲ ವರ್ಷಗಳ ಹಿಂದಿನವರೆಗೂ ಟೂತ್‌ಪೇಸ್ಟ್‌ನ ಪ್ಯಾಕೆಟ್ ಮೇಲಾಗಲೀ ಟ್ಯೂಬ್ ಮೇಲಾಗಲೀ Expiry Date ಹಾಕುವ ಕ್ರಮವಿರಲಿಲ್ಲ (ಇಲ್ಲಿ ಅಮೆರಿಕದಲ್ಲಂತೂ ಇರಲಿಲ್ಲ). ಹೆಚ್ಚಾಗಿ ಆಹಾರಪದಾರ್ಥಗಳ ಮೇಲೆ, ಔಷಧಿಗಳ ಮೇಲೆ ಎಕ್ಸ್‌ಪೈರಿ ಡೇಟ್ ಇದ್ದೇ ಇರುತ್ತದಲ್ಲ? ಈ ಟೂತ್‌ಪೇಸ್ಟಾದರೋ ಇತ್ತ ಔಷಧಿಯೂ ಅಲ್ಲ, ಅತ್ತ ಆಹಾರವೂ ಅಲ್ಲ ಎಂಬಂತೆ ಉಭಯವರ್ಗದ್ದಾದ್ದರಿಂದ ಅದಕ್ಕೆ ಎಕ್ಸ್‌ಪೈರಿ ಡೇಟ್ ಇರುತ್ತಿರಲಿಲ್ಲ.

ತೀರಾ ಆರೋಗ್ಯಕಾಳಜಿಯ ಕೆಲವರು ಈಬಗ್ಗೆ ದಂತವೈದ್ಯರನ್ನು, ಆರೋಗ್ಯಸಲಹೆ ಅಂಕಣಕಾರರನ್ನು, ರೇಡಿಯೊ/ಟಿವಿ ಕಾರ್ಯಕ್ರಮ ನಿರ್ವಾಹಕರನ್ನು, ಕೊನೆಗೆ ಟೂತ್‌ಪೇಸ್ಟ್ ಉತ್ಪಾದಕ ಉದ್ಯಮದವರನ್ನೇ ಕೇಳಿದ್ದುಂಟು. ಅವರೆಲ್ಲರಿಂದ ಬರುತ್ತಿದ್ದ ಉತ್ತರವೆಂದರೆ ಟೂತ್‌ಪೇಸ್ಟ್ expire ಆಗೋದಿಲ್ಲ, ಅದು eternal (ಸಾವಿಲ್ಲದ್ದು) ಎಂದು. ಹಾಗೆ ನೋಡಿದರೆ ಇದೊಂದು ನಿಜವಾಗಿಯೂ ಆಶ್ಚರ್ಯಕರ ಸಂಗತಿಯೇ! ಮಿನರಲ್ ವಾಟರ್ ಬಾಟಲ್ ಮೇಲೆ ಎಕ್ಸ್‌ಪೈರಿ ಡೇಟ್ ಇರುತ್ತೆ, ಅಗ್ನಿಶಾಮಕ ಅನಿಲ ತುಂಬಿದ ಕೆಂಪುಡಬ್ಬಿಯ ಮೇಲೆ ಎಕ್ಸ್‌ಪೈರಿ ಡೇಟ್ ಇರುತ್ತೆ, ಸೋರ್ ಕ್ರೀಮ್ ಎಂಬ ಹುಳಿಮೊಸರಿನ ಡಬ್ಬದ ಮೇಲೆ ಎಕ್ಸ್‌ಪೈರಿ ಡೇಟ್ ಅಥವಾ ಬೆಸ್ಟ್ ಬಿಫೋರ್ ಎಂದಿರುತ್ತೆ, ಆದರೆ ದಿನಾಬೆಳಿಗ್ಗೆ ಎದ್ದಕೂಡಲೆ ಮೊದಲಿಗೆ ನಮ್ಮ ಬಾಯಿಗೆ ಪ್ರವೇಶ ಪಡೆಯುವ ಟೂತ್‌ಪೇಸ್ಟು ಹಾಳಾಗುವುದೆಂದೇ ಇಲ್ಲವೇ?

ನಿತ್ಯಜೀವನದ ಸುಂದರ ಅಚ್ಚರಿಗಳ ಕುರಿತ ಒಂದು ಪುಸ್ತಕ Imponderables ದಲ್ಲಿ ಲೇಖಕ ಡೇವಿಡ್ ಫೆಲ್ಡ್‌ಮನ್ ಈ ಬಗ್ಗೆ ಹೇಳಿಕೊಂಡಿರುವ ಸ್ವಾನುಭವ ವ್ಯಾಖ್ಯಾನ ಚೆನ್ನಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more