• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊರ್ಟರಿಕೊ ಪಂಚತಾರಾ ಹೊಟೆಲಲ್ಲಿ ‘ಕೊಕಿ’ ಕಪ್ಪೆಯ ಜೋಗುಳ!

By Staff
|

ಪೊರ್ಟರಿಕೊ ಮೊದಲಿಂದಲೂ ಸ್ಪೈನ್‌ ದೇಶದ ವಸಾಹತ್ತಾಗಿದ್ದದ್ದು 1898ರ ನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ವಶಕ್ಕೆ ಬಂತು. ಈಗ ಅಲ್ಲಿ ಅಮೆರಿಕದ ಐಷಾರಾಮಿ ಜಗಮಗ ಜೀವನಶೈಲಿ ಮತ್ತು ಕೆರಿಬಿಯನ್‌/ಸ್ಪಾನಿಶ್‌ ಸಂಸ್ಕೃತಿಗಳ ಮುಖಾಮುಖಿ ಮತ್ತು ಸಂಗಮ ಸ್ಪಷ್ಟವಾಗಿ ಗೋಚರಿಸುತ್ತದೆ. ಕಾರುಗಳು, ವಾಲ್‌ಮಾರ್ಟ್‌-ಜೆಸಿಪೆನ್ನಿ-ಸಿಯರ್ಸ್‌ನಂಥ ಮಳಿಗೆಗಳು, ಸರ್ವವ್ಯಾಪಿ ಮೆಕ್‌ಡೊನಾಲ್ಡ್‌-ಸಬ್‌ವೇ-ಪಿಜಾಹಟ್‌ಗಳು ಇದೂ ಅಮೆರಿಕವೇ ಎಂದೆಣಿಸುವಂತೆ ಮಾಡಿದರೆ, ಎಲ್ಲೆಲ್ಲೂ ಸ್ಪಾನಿಶ್‌ ಬೋರ್ಡ್‌ಗಳು, ಸ್ಪಾನಿಶ್‌ ಜನಸಂಪರ್ಕ ಭಾಷೆ, ಅಷ್ಟೇನೂ ಠಾಕುಠೀಕು ನಯನಾಜೂಕು ಇಲ್ಲದ ಪಟ್ಟಣಪ್ರದೇಶ ಇವನ್ನೆಲ್ಲ ಗಮನಿಸಿದರೆ ಇದ್ಯಾವುದೋ ಬೇರೆ ದೇಶ ಎಂದು ಕ್ಷಣಮಾತ್ರದಲ್ಲಿ ಗೊತ್ತಾಗುತ್ತದೆ. ಅಮೆರಿಕದಲ್ಲಿ ’ಕೌಂಟಿ’ಗಳಿದ್ದರೆ ಅಲ್ಲಿ ‘ಮುನಿಸಿಪಾಲಿಟಿ’ಗಳಿರುವುದು. ಅಮೆರಿಕದಲ್ಲಿ ‘ಹಾರ್ನ್‌ರಹಿತ’ ಟ್ರಾಫಿಕ್‌ ಆದರೆ ಅಲ್ಲಿ ಸ-ಶಬ್ದ, ಸ-ಧೂಮ, ಸ-ಧಾವಂತ ಟ್ರಾಫಿ‚ಕ್‌.

ಕೊನೇ ಗಳಿಗೆಯಲ್ಲಿ ನಿರ್ಧಾರವಾದ ಪ್ರವಾಸ ನನ್ನದು ಎಂದೆನಲ್ಲ? ವಾಷಿಂಗ್ಟನ್‌ನಿಂದ ಸಾನ್‌ಹ್ವಾನ್‌ಗೆ ನೇರಪ್ರಯಾಣದ ವಿಮಾನದಲ್ಲೇನೋ ನನಗೆ ಸೀಟ್‌ ಸಿಕ್ಕಿತು, ಆದರೆ ಅಲ್ಲಿ ಉಳಿದುಕೊಳ್ಳಲು ಹೊಟೆಲ್‌ ನಮ್ಮ ಕಂಪೆನಿಯ ಪ್ರಿಫ‚ರೆನ್ಸ್‌ ಲಿಸ್ಟ್‌ನಲ್ಲಿದ್ದದ್ದು ಯಾವುದೂ ಸಿಗಲಿಲ್ಲ. ಜನವರಿ-ಫೆಬ್ರವರಿ ಸೀಸನ್‌ನಲ್ಲಿ ಪೊರ್ಟರಿಕೊದಲ್ಲಿ ಪ್ರವಾಸಿಗರ ಸಂಖ್ಯೆ ತುಂಬ ಹೆಚ್ಚಿರುತ್ತದೆ. ಹಿಮಪಾತ/ಚಳಿಗಾಲವನ್ನು ತಪ್ಪಿಸಲು ಸೆಖೆದಾಹಿ ಉತ್ತರಅಮೆರಿಕನ್ನರು ಪೊರ್ಟರಿಕೊದಂಥ ಪ್ರದೇಶಗಳಿಗೆ ಲಗ್ಗೆಯಿಡುತ್ತಾರೆ. ಸಣ್ಣದೊಡ್ಡ ಹೊಟೆಲ್‌ಗಳೆಲ್ಲ ಫುಲ್‌ ಬುಕ್‌ ಆಗಿರುತ್ತವೆ.

ಈ ಅಂಶವನ್ನು ಶುಕ್ರವಾರ ಸಂಜೆ ಆಫೀಸ್‌ ಬಿಡುವ ಮೊದಲೇ ಮ್ಯಾನೇಜರ್‌ ಗಮನಕ್ಕೆ ತಂದಿದ್ದೆನಾದ್ದರಿಂದ ಮತ್ತು You can stay at any hotel, I will approve the expenses ಎಂಬ ವಾಗ್ದಾನವೂ ಸಿಕ್ಕಿದ್ದರಿಂದ ನಾನು ಮ್ಯಾರಿಯಟ್‌ ಬೀಚ್‌ರೆಸಾರ್ಟ್‌ ಹೊಟೆಲಲ್ಲಿ ನಾಲ್ಕು ರಾತ್ರಿಗಳ ವಸತಿಗೆ ರೂಮ್‌ ಬುಕ್‌ ಮಾಡಿದೆ. ಸಮುದ್ರತೀರದಲ್ಲಿ ಪಂಚತಾರಾ ಹೊಟೆಲ್‌ ಅದು. ನನ್ನದು ಹದಿನಾಲ್ಕನೆಯ ಮಹಡಿಯಲ್ಲಿ ಬೀಚ್‌-ಫ‚ೇಸಿಂಗ್‌ ರೂಮ್‌! ರೂಮ್‌ನ ಬಾಲ್ಕನಿಯಲ್ಲಿ ನಿಂತರೆ 150 ಅಡಿಗಳ ದೂರದಲ್ಲಿ ಕಡಲಕಿನಾರೆ. ಮಡದಿ-ಮಗನನ್ನು ವಾಷಿಂಗ್ಟನ್‌ನಲ್ಲಿ ಬಿಟ್ಟು ನಾನು ಪೊರ್ಟರಿಕೊದಲ್ಲಿ ‘ ಸಾಗರ್‌ ಕಿನಾರೆ... ದಿಲ್‌ ಯೆ ಪುಕಾರೆ...’! ಆ ವಾರವೇ ಹುಣ್ಣಿಮೆಯೂ ಬಂದದ್ದರಿಂದ ಸಮುದ್ರರಾಜನ ಉನ್ಮಾದವೈಭವ ಬೇರೆ!

ಹಗಲಿಡೀ ಅಲ್ಲಿನ ಆಫಿ‚ೕಸಿನಲ್ಲಿ ಕೆಲಸ, ರಾತ್ರಿಯ ಊಟವನ್ನೂ ಅಲ್ಲೇ ಎಲ್ಲಾದರೂ ಮುಗಿಸಿಕೊಂಡು ಮಲಗಲಿಕ್ಕೆ ಮಾತ್ರ ಬೀಚ್‌ರೆಸಾರ್ಟ್‌ಗೆ. ಮೊದಲರಾತ್ರಿ (ಅಂದರೆ ನನ್ನ ಪೊರ್ಟರಿಕೊ ವಾಸ್ತವ್ಯದ ಮೊದಲರಾತ್ರಿ!) ಹಾಸಿಗೆಗುರುಳಿ ಇನ್ನೇನು ನಿದ್ರಾದೇವಿಯ ವಶವಾಗುವುದೆನ್ನುವಾಗಲೇ ‘ಯಾಕೋ ನಮ್ಮ ಹಳ್ಳಿಯಲ್ಲಿ ಮಳೆಗಾಲದ ದಿನಗಳಲ್ಲಿ ಬೆಚ್ಚಗೆ ಹೊದಿಕೆಯಡಿ ಮಲಗಿದಂತಿದೆಯಲ್ಲಾ...’ ಎಂದು ಏಕ್‌ದಂ ಅನಿಸತೊಡಗಿತು ನನಗೆ. ಕಾರಣವೇನಿರಬಹುದು ಎಂದು ಫಕ್ಕನೆ ಹೊಳೆಯಲಿಲ್ಲ. ನಿದ್ದೆ ಬಂತು. ಮಾರನೆದಿನ ಬೆಳಿಗ್ಗೆ ಎದ್ದು ಸ್ನಾನಾದಿ ಮುಗಿಸಿ ಮತ್ತೆ ಆಫಿ‚ೕಸ್‌ ಕೆಲಸ. ಮೊದಲರಾತ್ರಿಯ ಅನುಭವ ಮರೆತುಹೋಗುವಷ್ಟು ಕೆಲಸ.

ಎರಡನೆ ರಾತ್ರಿಯೂ ಹೊಟೆಲಲ್ಲಿ ಅದೇ ಅನುಭವ! ಪಶ್ಚಿಮಘಟ್ಟದ ತಪ್ಪಲಿನ ನಮ್ಮೂರಿಗೂ ಈ ಪೊರ್ಟರಿಕೊ ದ್ವೀಪಕ್ಕೂ ಏನು ಸಾಮ್ಯ ಎಂದು ಎಷ್ಟೇ ಯೋಚಿಸಿದರೂ ಏನೂ ಹೊಳೆಯಲಿಲ್ಲ. ರಾತ್ರಿ ಮಲಗಿದಾಗಿನ ನೀರವತೆಯಲ್ಲೂ ಏನೊ ಒಂದು ಸ್ಪೆಶಲ್‌ ಅನುಭವ ಮಾತ್ರ ಡಿಟ್ಟೊ ಅದೇ. ಕೊನೆಗೂ ಒಗಟು ಒಡೆಯಿತು - ಅದು ಕಪ್ಪೆಗಳ ಲಯಬದ್ಧ ಕೂಗು! ಓಹ್‌, ಫ‚ೈವ್‌ಸ್ಟಾರ್‌ ಹೊಟೆಲಲ್ಲಿ ನನ್ನ ರೂಮಲ್ಲೇನೂ ಕಪ್ಪೆ ಸೇರಿಕೊಂಡಿರಲಿಲ್ಲ ಬಿಡಿ, ಆದರೆ ಕಡಲತಡಿಯ ಆ ರೆಸಾರ್ಟ್‌ಹೊಟೆಲ್‌ನಲ್ಲಿ ರಾತ್ರೆಯಿಡೀ ಮಂಡೂಕ ಮಾಧುರ್ಯವು ನಮ್ಮೂರಲ್ಲಿ ಮಳೆಗಾಲದಲ್ಲಿ ಕಪ್ಪೆ, ಏಡಿ, ಇತರ ಹುಳಹುಪ್ಪಟೆಗಳ ಮೊರೆತದಂತೆಯೇ ಬಹಳ ಇಂಪಾಗಿ ಕೇಳಿಬರುತ್ತಿತ್ತು. ಅದೇ ನನ್ನನ್ನು ಪೊರ್ಟರಿಕೊ ರೆಸಾರ್ಟ್‌ಹೊಟೆಲ್‌ನ ಹಾಸಿಗೆಯಲ್ಲಿರುವಾಗಲೇ ಮನೋವೇಗದಲ್ಲಿ ಮಳೆಗಾಲದ ನಮ್ಮೂರಿಗೆ ಕರೆದೊಯ್ದಿತ್ತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more